X

ರಾಷ್ಟ್ರ ಮಂದಿರ ರಾಮ ಮಂದಿರ ಲೋಕಾರ್ಪಣೆ: 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ

ಬಹುಕೋಟಿ ಭಕ್ತರು ಕಾತರದಿಂದ ಕಾಣುತ್ತಿರುವ ಅಯೋಧ್ಯೆಯ ಶ್ರೀರಾಮ ಮಂದಿರ ದೇಶಕ್ಕೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿದೆ. ಜನವರಿ 22 ರಂದು ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಹತ್ವದ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದೆ.

ಈ ಭವ್ಯ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವದಾದ್ಯಂತ ಹತ್ತು ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.

ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಮನೆಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಲಿದ್ದಾರೆ. ಆಹ್ವಾನ ಪತ್ರಿಕೆಯೊಂದಿಗೆ ಶ್ರೀರಾಮನ ಚಿತ್ರವನ್ನು ನೀಡಲಾಗುತ್ತದೆ ಎಂದು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಾಣಿಕೆ ಸಂಗ್ರಹ ಮಾಡುವುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ. ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ, ಮಡಿದ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ ಎಂದು ಹೇಳಿದೆ. ಅವರಿಗೆ ಜನವರಿ 27 ರಿಂದ ಫೆಬ್ರವರಿ 22 ರ ವರೆಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದೆ.‌

ಹಾಗೆಯೇ ಈ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ರಾಮ ಭಕ್ತರು ಭಾಗವಹಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ದೇಗುಲಗಳಲ್ಲಿ ‌ವಿಶೇಷ ಪ್ರಾರ್ಥನೆ, ರಾಮ ನಾಮ ಜಪ, ಭಜನೆ ಇತ್ಯಾದಿಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಶಕ್ತಿ ತುಂಬುವ ಹಾಗೆಯೂ ಟ್ರಸ್ಟ್ ಈಗಾಗಲೇ ಮಾಹಿತಿ ನೀಡಿದೆ. ಮನವಿ ಮಾಡಿದೆ. ಅಲ್ಲದೆ ನಂತರ ತಮಗೆ ಅನುಕೂಲ ಒದಗಿಸಿದ ಸಮಯದಲ್ಲಿ ಅಯೋಧ್ಯೆಯ ಭವ್ಯ ಮಂದಿರಕ್ಕೆ ಭೇಟಿ ನೀಡುವ ಹಾಗೆಯೂ ಟ್ರಸ್ಟ್ ಭಕ್ತರಲ್ಲಿ ಕೋರಿಕೊಂಡಿದೆ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಭವ್ಯ ರಾಮ ಮಂದಿರದಲ್ಲಿ ಸ್ವರ್ಣ ಖಚಿತ ಸಿಂಹಾಸನದಲ್ಲಿ ಪ್ರಭು ಶ್ರೀರಾಮನನ್ನು ಕೂರಿಸಲಾಗುತ್ತದೆ. ಹಾಗೆಯೇ, ದೇಗುಲದ ಮೂರನೆಯ ಮಹಡಿಯ ಎಲ್ಲಾ ಬಾಗಿಲುಗಳಿಗೂ ಚಿನ್ನದ ಬಣ್ಣ ಲೇಪನ ಮಾಡಲಾಗುತ್ತದೆ. ಈಗಾಗಲೇ ಈ ಕಾರ್ಯದಲ್ಲಿ ಕುಶಲ ಕರ್ಮಿಗಳು ತೊಡಗಿಕೊಂಡಿದ್ದು, ಆ ಮೂಲಕ ದೇಗುಲಕ್ಕೆ ಮತ್ತಷ್ಟು ವೈಭವ ತಂದು ಕೊಡುವ ಕಾರ್ಯಗಳು ನಡೆಯುತ್ತಿವೆ ಎಂದು ಟ್ರಸ್ಟ್ ಹೇಳಿದೆ.

Post Card Balaga:
Related Post