X

ಮೌನ ಮುರಿದ ಆರ್ ಬಿ ಐ ಗವರ್ನರ್!! ನೀಲಕಂಠನಿಗೆ ಹೋಲಿಸಿದ ಆರ್ಥಿಕ ತಜ್ಞನ ಗುಟ್ಟೇನು ಗೊತ್ತಾ??

ಹೌದು…. ಈಗಾಗಲೇ ದೇಶದಲ್ಲಿ ನಡೆದ ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ದೇಶಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿದ್ದರೂ ಕೂಡ, ಇಷ್ಟು ದಿನ ಸುಮ್ಮನಿದ್ದ ಆರ್ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ!! ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲೇ ಬೆಚ್ಚಿ ಬೀಳಿಸಿದ್ದ ಬಹುಕೋಟಿ ಪಂಜಾಬ್ ನ್ಯಾಷನಲ್ ಹಗರಣ ಹೊರಬಿದ್ದ ಒಂದು ತಿಂಗಳ ನಂತರ ಈ ಹಗರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಲೋಪವೇನೂ ಇಲ್ಲ ಎಂದೂ ಪ್ರತಿಪಾದಿಸಿದ್ದಾರೆ!!

ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ದೇಶವು ನಾನಾ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿರುವ ಜೊತೆಗೆ ಆರ್ಥಿಕವಾಗಿ ಸದೃಢ ರಾಷ್ಟ್ರವಾಗುವಲ್ಲಿ ದಾಪುಗಾಲು ಇಡುತ್ತಿರುವ ವಿಚಾರವೂ ತಿಳಿದೇ ಇದೆ!! ಅಷ್ಟೇ ಅಲ್ಲದೇ, ಕಾಳಧನಿಕರ ಪಾಲಿಗೆ ರಾತ್ರೋ ರಾತ್ರಿ ನೋಟು ನಿಷೇಧಿಸಿ, ಕಪ್ಪುಕುಳಗಳನ್ನು ನಿರ್ಮೂಲನೆ ಮಾಡುವ ಮೂಲಕ ಭ್ರಷ್ಟಚಾರದ ವಿರುದ್ಧ ಸಮರ ಸಾರಿದ್ದರು. ಹಾಗಾಗಿ ಅದೇಷ್ಟೋ ವಂಚನೆಗಳು, ಹಗರಣಗಳು ಬಯಲಾಗುತ್ತಲೇ ಇದ್ದು, ಭ್ರಷ್ಟಚಾರ ಮುಕ್ತ ಭಾರತವನ್ನಾಗಿ ಮಾಡಲು ಹೊರಟ್ಟಿದ್ದಂತೂ ಅಕ್ಷರಶಃ ನಿಜ.

ಹಾಗಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳೆಲ್ಲವೂ ನರೇಂದ್ರ ಮೋದಿಯ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಒಂದೊಂದೇ ಹೊರಬೀಳುತ್ತಿದ್ದು, ಅವುಗಳಲ್ಲಿ ಬಹುಕೋಟಿ ಬ್ಯಾಂಕ್ ಹಗರಣಗಳು ಒಂದಾಗಿವೆ ಎನ್ನುವ ವಿಚಾರ ತಿಳಿದೇ ಇದೆ!! ದೇಶಾದ್ಯಂತ ಬ್ಯಾಂಕ್ ವಂಚನೆ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಸುಮ್ಮನಿದ್ದ ಆರ್ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ಮೌನ ಮುರಿದಿದ್ದು, ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಮುರಿಯಲು ಆರ್ ಬಿಐ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.

ಬ್ಯಾಂಕಿಂಗ್ ವಂಚನೆಗಳ ವಿರುದ್ದ ತೀವ್ರ ನೋವು ವ್ಯಕ್ತಪಡಿಸಿರುವ ಆರ್ ಬಿ ಐ ಗವರ್ನರ್ ಊರ್ಜಿತ್ ಪಟೇಲ್ ಅವರು, ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ಸಲುವಾಗಿ ಆರ್ ಬಿ ಐ ನೀಲಕಂಠನಂತೆ ವಿಷ ಕುಡಿಯಲೂ ಸಿದ್ದವಾಗಿದೆ ಎಂದು ಹೇಳಿದ್ದಾರಲ್ಲದೇ ಈ ಬಗ್ಗೆ ಎಂದಿಗೂ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ, ಪ್ರತಿ ಘಟನೆಯಿಂದಲೂ ಉತ್ತಮವಾಗಿ ಹೊರಬರಲು ಪ್ರಯತ್ತಿಸುತ್ತೇವೆ ಎಂದಿದ್ದಾರೆ.

ಅಷ್ಟೇ ಅಲ್ಲದೇ, ಡೈಮಂಡ್ ಉದ್ಯಮಿ ನೀರವ್ ಮೋದಿಯ 12,967 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮೌನ ಮುರಿದಿರುವ ಅವರು, “ಬ್ಯಾಂಕಿಂಗ್ ವಂಚನೆ, ಅವ್ಯವಹಾರಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಾವು ತೀವ್ರವಾದ ನೋವು, ಕೋಪ ಮತ್ತು ಆಕ್ರೋಶವನ್ನು ಹೊಂದಿದ್ದೇವೆ ಎಂಬುವುದನ್ನು ತಿಳಿಸುವುದಕ್ಕಾಗಿ ಇಂದು ಮಾತಾನಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಹಗರಣಕ್ಕೆ ಕೇವಲ ಭಾರತೀಯ ರಿಸರ್ವ್ ಬ್ಯಾಂಕ್ ನ್ನು ಹೊಣೆ ಮಾಡುವುದು ಸರಿಯಲ್ಲ ಆರ್ ಬಿ ಐ ಮತ್ತು ಹಣಕಾಸು ಸಚಿವಾಲಯದ ದ್ವಿ ನಿಯಂತ್ರಣ ಇರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಹೆಚ್ಚಿನ ಹಿಡಿತ ಸಾಧಿಸುವ ಅಧಿಕಾರ ಇರುವುದಿಲ್ಲ. ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಹಗರಣಗಳನ್ನು ತಡೆಯುವಲ್ಲಿ ಆರ್ ಬಿ ಐ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿಲ್ಲ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿ, ತನಿಖೆ ಮತ್ತು ದಂಡಗಳಿಂದಾಗಿ ಭವಿಷ್ಯದಲ್ಲಿ ಇಂತಹ ವಂಚನೆಗಳು ನಡೆಯದಂತೆ ಭಯಹುಟ್ಟಿಸಬಹುದು ಎಂದು ಹೇಳಿದ್ದಾರೆ.

ಕೆಲವು ಸಾಲಕೊಡುವವರ ನೆರವಿನಿಂದ ಉದ್ಯಮ ಸಮುದಾಯದ ಕೆಲವರು ನಮ್ಮ ದೇಶದ ಭವಿಷ್ಯವನ್ನು ಲೂಟಿ ಮಾಡುತ್ತಿದ್ದಾರೆ. ಈ ಅಪವಿತ್ರ ಹೊಂದಾಣಿಕೆಯನ್ನು ಮುರಿಯಲು ಆರ್ ಬಿ ಐ ಗರಿಷ್ಟ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ. ದೇಶದ ಸಾಲ ವ್ಯವಸ್ಥೆಯನ್ನು ಶುದ್ಧೀಕರಿಸಲು ಆರ್ ಬಿ ಐ ಕ್ರಮ ಕೈಗೊಂಡಿದೆಯಲ್ಲದೇ ಈ ಅಮೃತ ಮಥನ ಕಾರ್ಯದಲ್ಲಿ ರಾಕ್ಷಸರ ಪಕ್ಷ ವಹಿಸುವ ಬದಲು ದೇವತೆಗಳ ಪಕ್ಷ ವಹಿಸಿ ಎಂದು ಅವರು ಸೂಚ್ಯವಾಗಿ ಬ್ಯಾಂಕ್‍ಗಳಿಗೆ ಹಾಗೂ ಪ್ರವರ್ತಕರಿಗೆ ಕಿವಿಮಾತು ಹೇಳಿದ್ದಾರೆ!!

ಆರ್ ಬಿಐ ನೀಲಕಂಠ ಇದ್ದ ಹಾಗೆ!! ವಿಷ ಸೇವಿಸಿದರೂ, ಎಷ್ಟೇ ದೋಷಾರೋಪಗಳನ್ನು ಎದುರಿಸಿದರೂ ಪ್ರತಿ ಸಲವೂ ಹೆಚ್ಚೆಚ್ಚು ಸಾಮಥ್ರ್ಯದೊಂದಿಗೆ ಹೊರಹೊಮ್ಮುತ್ತದೆ. ಯಶಸ್ಸಿಗೆ ಹಲವು ಪಾಲುದಾರರಿರುತ್ತಾರೆ, ವೈಫಲ್ಯಕ್ಕೆ ಯಾರೂ ಇರುವುದಿಲ್ಲ. ಈಗ ಹಗರಣದ ಹಿನ್ನಲೆಯಲ್ಲಿ ಪರಸ್ಪರ ದೋಷಾರೋಪ ನಡೆಯುತ್ತಿದೆ. ಎಲ್ಲಕ್ಕೂ ಭಾರತೀಯ ರಿಸರ್ವ್ ಬ್ಯಾಂಕೇ ಹೊಣೆ ಎಂಬಂತೆ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳಿಂದ ಬ್ಯಾಂಕಿಂಗ್ ವಲಯದಲ್ಲಿ ಮತ್ತೆ ವಂಚನೆ ಪ್ರಕರಣಗಳು ನಡೆಯದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚಿಂತಸಬೇಕಾದ ಮೂಲಭೂತ ವಿಷಯಗಳಿಂದ ದೂರಸರಿಯುವಂತಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳು ಮೋದಿ ಸರ್ಕಾರದ ದಿಟ್ಟ ನಿಲುವಿನಿಂದಾಗಿ ಒಂದೊಂದೇ ಪ್ರಕರಣಗಳು ಹೊರ ಬೀಳುತ್ತಿರುವುದು ಮಾತ್ರ ಅಕ್ಷರಶಃ ನಿಜ. ಆದರೆ ಈ ಬಗ್ಗೆ ಯಾರೂ ಕೂಡ ಪ್ರಶ್ನಿಸಿದೇ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ಊರ್ಜಿತ್ ಪಟೇಲ್ ಅವರನ್ನು ಬುದ್ದಿಜೀವಿಗಳು ತೇಜೋವಧೆ ಮಾಡುತ್ತಿದ್ದಾರಲ್ಲದೇ, ತನ್ನ ಸರ್ಕಾರದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ!! ಒಟ್ಟಿನಲ್ಲಿ ಬ್ಯಾಂಕ್ ಗಳ ಅಸಮರ್ಪಕ ಸಂಪರ್ಕಗಳನ್ನು ಮುರಿಯಲು ಆರ್ ಬಿಐ ಕಾರ್ಯಪ್ರವೃತ್ತವಾಗಿದ್ದು, ಪ್ರಸ್ತುತ ಬ್ಯಾಂಕಿಂಗ್ ವಂಚನೆ ಪ್ರಕರಣದ ವಿಷವನ್ನು ನೀಲಕಂಠನಂತೆ ಕೇಂದ್ರೀಯ ಬ್ಯಾಂಕ್ ಅರಗಿಸಿಕೊಳ್ಳುತ್ತಿದೆ.

– ಅಲೋಖಾ

 

Editor Postcard Kannada:
Related Post