X

ಮೀನು ತಿಂದ ಶಿವಭಕ್ತ ರಾಹುಲ್ ಗಾಂಧಿಯ ಅಸಲಿ ವರಸೆ ಬಯಲು!! ಜನಿವಾರಧಾರಿಯ ಕೈಲಾಸ ಯಾತ್ರೆಗೇಕೆ ಕಗ್ಗಂಟು??

ಹಿಂದೂಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೊನೆಗೂ ತಾನೊಬ್ಬ ಜನಿವಾರಧಾರಿ ಬ್ರಾಹ್ಮಣ ಎನ್ನುತ್ತಾ, ತಾನೊಬ್ಬ ಅಪ್ಪಟ ಶಿವಭಕ್ತನೆಂದು ಹೇಳಿಕೊಂಡು ಹೊಸ ನಾಟಕವನ್ನೇ ಆಡಿದ್ದ ರಾಹುಲ್ ಗಾಂಧಿಯವರ ಅಸಲಿ ವರಸೆ ಇದೀಗ ಬಟಾಬಯಲಾಗಿದೆ!! 

ಗುಜರಾತ್ ವಿಧಾನ ಸಭಾ ಚುನಾವಣೆ ಪ್ರಚಾರದಿಂದಲೂ ಸಾಕಷ್ಟು ಬಾರಿ ಹಿಂದು ದೇವಾಲಯಗಳಿಗೆ ಭೇಟಿ ನೀಡಿ ಸುದ್ದಿಯಾಗುತ್ತಲೇ ಇರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟೆಂಪಲ್ ರನ್ ಕಾರ್ಯವನ್ನು ಕರ್ನಾಟಕದಲ್ಲೂ ಮುಂದುವರಿಸಿದ್ದಲ್ಲದೇ ತಾನೊಬ್ಬ ಶಿವಭಕ್ತನೆಂದು ತೋರ್ಪಡಿಸಿಕೊಳ್ಳಲು ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳುವುದಾಗಿ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಆದರೆ ತಾನು ಘೋಷಿಸಿದ್ದ ಮಾನಸ ಸರೋವರ ಯಾತ್ರೆ ಇದೀಗ ಕಗ್ಗಂಟಾಗಿಯೇ ಉಳಿದು ಹೋಗಿದೆ!!

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹಿಂದೂಗಳ ಮತ ಸೆಳೆಯಲು ಜನಿವಾರಿಧಾರಿ ಬ್ರಾಹ್ಮಣ ನೆಂದು ನಾಟಕವಾಡುತ್ತಾ, ಮಾನಸ ಸರೋವರ ಯಾತ್ರೆ ಮಾಡುತ್ತೇನೆಂದು ಘಂಟಾಘೋಷವಾಗಿ ಬೊಬ್ಬಿಡುತ್ತಿದ್ದ ರಾಹುಲ್ ಗಾಂಧಿಯವರ ಅಸಲಿ ಕಹಾನಿ ಇದೀಗ ಹೊರಬಿದ್ದಿದೆ. ಕರ್ನಾಟಕ ಚುನಾವಣೆ ಮುಗಿದು ಒಂದೂವರೆ ತಿಂಗಳಾಗುತ್ತಿದ್ದರೂ ರಾಹುಲ್ ಗಾಂದಿಯವರ ಮಾನಸ ಸರೋವರ ಯಾತ್ರೆಯ ಬಯಕೆ ಕೈಗೂಡಿಲ್ಲ. ಬದಲಾಗಿ ಅದು ಕಗ್ಗಂಟಾಗಿಯೇ ಉಳಿದು ಹೋಗಿದೆ!!

ಅಷ್ಟು ಮಾತ್ರವಲ್ಲದೇ, ಕೈಲಾಸ ಮಾನಸ ಸರೋವರಕ್ಕೆ ತೆರಳಲು ರಾಹುಲ್ ಅವರು ವಿದೇಶಾಂಗ ಸಚಿವಾಲಯದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದ್ದರೆ, ಈ ಸಂಬಂಧ ರಾಹುಲ್ ಅವರಿಂದ ಅಧಿಕೃತ ಅರ್ಜಿಯೇ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಷ್ಟಕ್ಕೂ ರಾಹುಲ್ ಗಾಂಧಿಯವರು ಮಾನಸ ಸರೋವರ ಯಾತ್ರೆ ಬಯಕೆ ಯಾಕೆ ಗೊತ್ತೇ??

ಕರ್ನಾಟಕ ವಿಧಾನಸಭೆ ಚುನಾವಣೆ ರ್ಯಾಲಿ’ಯ ವೇಳೆ, ಸಾಕಷ್ಟು ಬಾರಿ ಹಿಂದೂ ದೇವಾಲಯಗಳಿಗೆ ಬೇಟಿ ನೀಡುವ ಮೂಲಕ ಸುದ್ದಿಯಾಗುತ್ತಿದ್ದ ರಾಹುಲ್ ಗಾಂಧಿ ಅವರು, ತಾವು ಚಲಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ಕೆಲಕಾಲ ಆತಂಕ ಎದುರಿಸಿದ್ದ ಆ ಸಂದರ್ಭದಲ್ಲಿ, ತನ್ನ ಮನದಲ್ಲಿ ಬಂದ ಇಚ್ಛೆಯಂತೆ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಾಗಿ ರಾಹುಲ್ ತಿಳಿಸಿದ್ದರು.

ಹೌದು… ‘ಎರಡು ಮೂರು ದಿನಗಳ ಹಿಂದಷ್ಟೇ ನಾವು ಕರ್ನಾಟಕದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. 8000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ತಾಂತ್ರಿಕ ದೋಷದಿಂದ ವಿಮಾನ ನೆಲದತ್ತ ಧಾವಿಸತೊಡಗಿತು. ‘ಕಥೆ ಮುಗೀತು’ ಎಂದೇ ನಾನು ಭಾವಿಸಿದೆ!! ಅದೃಷ್ಟವಶಾತ್ ಏನೂ ಅಪಾಯ ಸಂಭವಿಸಿಲ್ಲ. ಆ ಕ್ಷಣವೇ ನನ್ನ ಮನಸ್ಸಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಬೇಕೆಂಬ ಯೋಚನೆ ಬಂತು. ಇದು ನನ್ನ ಹೃದಯದಿಂದ ಮೂಡಿದ ಬಯಕೆ. ಅದನ್ನೇ ನಿಮ್ಮೆದುರು ಹೇಳಿಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದ್ದರು!!

ಆದರೆ ರಾಹುಲ್ ಗಾಂಧಿ ಘೋಷಿಸಿದ್ದ ಮಾನಸ ಸರೋವರ ಯಾತ್ರೆ ಕಗ್ಗಂಟಾಗಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಕೇಂದ್ರದ ಸರಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದೆ!! ಆದರೆ, ವಿದೇಶಾಂಗ ಸಚಿವಾಲಯ ರಾಹುಲ್ ಅವರಿಂದ ಯಾವುದೇ ಅರ್ಜಿ ಬಂದಿಲ್ಲ ಎಂದು ತಿಳಿಸಿರುವ ಮೂಲಕ ರಾಹುಲ್ ಗಾಂಧಿಯವರ ಶಿವಭಕ್ತನ ನಾಟಕಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ.

ಯಾತ್ರೆಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ಗಡುವು ಮಾರ್ಚ್ 23!!

ಮಿತಿ ಮೀರಿದ ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ಮುಳುಗಿರುವ ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷವಾಗಿದೆ ಎಂಬ ಗಂಭೀರ ಆಪಾದನೆಯನ್ನು ತಳ್ಳಿಹಾಕುವ ನಿಟ್ಟಿನಲ್ಲಿ, ರಾಹುಲ್ ಗಾಂಧಿಯವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಸುದ್ದಿಯಾಗುತ್ತಲೇ ಇದ್ದರು!! ಅಷ್ಟೇ ಅಲ್ಲದೇ, ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿದ್ದ ಕರ್ನಾಟಕದಲ್ಲಿ ಲಿಂಗಾಯುತ ಸಮುದಾಯದೊಂದಿಗೆ ಗುರುತಿಸಿಕೊಂಡಿರುವ ಸಾಕಷ್ಟು ಮಠಗಳಿಗೆ ರಾಹುಲ್ ಭೇಟಿ ನೀಡಿ ತಾನೊಬ್ಬ ಶಿವಭಕ್ತ ಎನ್ನುವುದನ್ನು ನಿರೂಪಿಸಿ ಬಿಟ್ಟಿದ್ದರು!!

ಹಾಗಾಗಿ ಮಾನಸ ಸರೋವರ ಯಾತ್ರೆಯ ನಾಟಕವಾಡಿರುವ ರಾಹುಲ್ ಗಾಂಧಿಯವರು ಘೋಷಣೆ ಮಾಡಿ ಒಂದೂವರೆ ತಿಂಗಳಾದರೂ ರಾಹುಲ್ ಯಾತ್ರೆ ಬಯಕೆ ಕೈಗೂಡಿಲ್ಲ. ವಿಶೇಷ ಎಂದರೆ, ಕೈಲಾಶ ಮಾನಸ ಸರೋವರ ಯಾತ್ರೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವು ಮಾರ್ಚ್ 23ಕ್ಕೇ ಮುಗಿದು ಹೋಗಿದೆ. ಆದರೆ ಆ ಯಾತ್ರೆ ಕೈಗೊಳ್ಳುವ ಕುರಿತು ರಾಹುಲ್ ಘೋಷಣೆ ಮಾಡಿದ್ದು ಏಪ್ರಿಲ್ 30ರಂದು!! ಆದಾಗ್ಯೂ ಸಂಸದ ಎಂಬ ಕಾರಣಕ್ಕೆ ವಿದೇಶಾಂಗ ಸಚಿವಾಲಯದಿಂದ ವಿಶೇಷ ಅನುಮತಿ ಸಿಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಜೂನ್‍ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನಡೆಯುವ ಯಾತ್ರೆ ಇದಾಗಿದ್ದು, ಜೂನ್ 8 ರಿಂದ ಈ ವರ್ಷದ ಯಾತ್ರೆ ಪ್ರಾರಂಭವಾಗಿದ್ದು, ಚೀನಾ ಭೂಭಾಗದಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವವರು ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ!! ಒಟ್ಟಿನಲ್ಲಿ, ಹಿಂದೂಗಳ ಮತವೊಲೈಕೆಗೆ ನಾಟಕವಾಡಿ, ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುತ್ತೇನೆಂದು ಘೋಷಣೆ ಮಾಡಿ ಶಿವಭಕ್ತನೆಂದು ನಾಟಕವಾಡಿದ್ದ ರಾಹುಲ್ ಗಾಂಧಿಯವರ ಅಸಲಿ ರೂಪ ಕೊನೆಗೂ ಈ ಮೂಲಕ ಬಯಲಾಗಿದೆ.

ಮೂಲ:
http://www.kannadaprabha.com/

– ಅಲೋಖಾ

Editor Postcard Kannada:
Related Post