X

ಜಗತ್ತಿನೆಲ್ಲೆಡೆ ಚಿತ್ರ ಹಿಂಸೆಗೊಳಗಾದ ಹಿಂದೂಗಳೇ ಭಾರತದಲ್ಲಿ ಆಶ್ರಯಪಡೆದುಕೊಳ್ಳಿ!! ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ!!

ಹಿಂದೂ ಧರ್ಮವು ಒಂದು ಕಾಲದಲ್ಲಿ ಜಗತ್ತಿನೆಲ್ಲೆಡೆ ವ್ಯಾಪಿಸಿತ್ತು. ಆದರೆ ಪರಕೀಯರ ದಾಳಿಯಿಂದ ಹಿಂದೂಗಳು ದೌರ್ಜನ್ಯಕ್ಕೀಡಾಗುತ್ತಿದ್ದು, ಅವರ ಮೇಲೆ ಮತಾಂತರದ ಷಡ್ಯಂತ್ರ ವಿಪರೀತವಾಗಿ ನಡೆಯುತ್ತಿದೆ. ಮುಖ್ಯವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ ಮುಂತಾದ ದೇಶಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ, ಕೊಲೆ ನಡೆಯುತ್ತಿದ್ದು, ಹಿಂದೂ ದೇಗುಲಗಳನ್ನು ನೆಲಸಮ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ಹಿಂದೂಗಳಿಗೆ ಆಶ್ರಯ ನೀಡಬೇಕಿತ್ತು. ಆದರೆ ನಮ್ಮ ದೇಶವನ್ನು ಅರುವತ್ತು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದ ಕಾರಣ ಭಾರತದಲ್ಲಿನ ಹಿಂದೂಗಳನ್ನೇ ಮರೆತಿದ್ದಲ್ಲದೆ, ಜಗತ್ತಿನಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳಿಗೆ ನೆರವಿಗೆ ಬರಲಿಲ್ಲ.

ಮೋದಿಯವರು ಪ್ರಧಾನಿ ಆಗುತ್ತಿದ್ದಂತೆ ಜಗತ್ತಿನೆಲ್ಲೆಡೆ ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡಲು ಮನಸ್ಸು ಮಾಡಿದ್ದರು. ಇದೀಗ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಜಗತ್ತಿನೆಲ್ಲೆಡೆ ನರಳುವ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎಂದು ತಿಳಿಸಿರುವುದರಿಂದ ಜಗತ್ತಿನಾದ್ಯಂತ ಇರುವ ಹಿಂದೂಗಳು ಒಗ್ಗಟ್ಟಾಗುವ ನಿರ್ಧಾರಕ್ಕೆ ಬಲ ಬಂದಿದೆ.

ತ್ರಿಪುರಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮೋಹನ್ ಭಾಗವತ್ ನೀಡಿರುವ ಹೇಳಿಕೆಯಿಂದ ಇಡೀ ಜಗತ್ತೇ ಭಾರತವನ್ನು ತದೇಕಚಿತ್ತದಿಂದ ಗಮನಿಸುವಂತಾಗಿದೆ.

ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಜೀ ಭಾಗವತ್ ಅವರು ಜಗತ್ತಿನೆಲ್ಲೆಡೆ ದೌರ್ಜನ್ಯ ಕ್ಕೊಳಗಾದ ಹಿಂದೂಗಳಿಗೆ ಭಾರತ ಆಶ್ರಯ ನೀಡಬೇಕು ಎಂದು ಕರೆ ನೀಡಿದ್ದಾರೆ. ಭಾರತದವು ಹಿಂದೂಗಳ ಪುಣ್ಯಭೂಮಿಯಾಗಿದ್ದು, ಅವರಿಗೆ ಆಶ್ರಯವನ್ನು ಭಾರತವೇ ನೀಡಬೇಕು ಎಂದು ತ್ರಿಪುರಾದ ಅಗರ್ತಲಾದಲ್ಲಿ ನಡೆದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ.

ಜಗತ್ತಿನ ಯಾವುದೇ ಮೂಲೆಯಲ್ಲೂ ಚಿತ್ರಹಿಂಸೆಗೊಳಗಾದ ಹಿಂದೂಗಳು ಭಾರತಕ್ಕೆ ಬಂದು ಆಶ್ರಯ ಪಡೆದುಕೊಳ್ಳಿ. ಹಿಂದೂಗಳಿಗೆ ಸತ್ಯದ ಮೇಲೆ ನಂಬಿಕೆ ಇದ್ದು, ಜಗತ್ತು ಶಕ್ತಿಗೆ ಗೌರವ ಕೊಡುತ್ತದೆ. ಸಂಘನೆಯಲ್ಲಿ ಶಕ್ತಿ ಇದೆ. ಸಂಘಟಿತರಾಗಿರುವುದು ಪ್ರಕೃತಿ ನಿಯಮವಾಗಿದೆ ಎಂದು ಮೋಹನ್ ಕರೆ ನೀಡಿದ್ದಾರೆ.

ಹಿಂದುತ್ವವು ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಇಂದು ಜರ್ಜರಿತ ಪಾಶ್ಚಿಮಾತ್ಯ ಜಗತ್ತು ಭಾರತದ ಹಿಂದು ಧರ್ಮ ಹಾಗೂ ತತ್ವಶಾಶ್ತ್ರದ ಬಗ್ಗೆ ಆಸಕ್ತಿ ಹೊಂದಿದೆ. ಯಾಕೆಂದರೆ ಇದು ಸನಾತನ ಧರ್ಮದೊಂದಿಗೆ ಬೆಸೆದುಕೊಂಡಿದೆ. ಪಶ್ವಿಮ ಜಗತ್ತು ಶಾಪ ಮುಕ್ತವಾಗಲು ಬಯಸಿದೆ. ಆದ್ದರಿಂದ ಅವರ ನಿರೀಕ್ಷೆಗಳನ್ನು ಈಡೇರಿಸುವುದು ಇಂದಿನ ಅಗತ್ಯ ಎಂದು ಮೋಹನ್ ವಿವರಸಿದರು.

ತ್ರಿಪುರಾದ ನಾಲ್ಕು ದಿನಗಳ ಭೇಟಿಯ ಅಂಗವಾಗಿ ಅಗರ್ತಲಾದ ವಿವೇಕಾನಂದ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊಮ್ಮಾತ್ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಅಲ್ಲಿ ಸಂತರು, ಶ್ರದ್ಧಾಳುಗಳು ಸಭೆಯಲ್ಲಿ ಸೇರಿದ್ದರು. ಹಿಂದೂಗಳು ದುಷ್ಟಶಕ್ತಿಗಳ ವಿರುದ್ಧವಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದ್ದಾರೆ.

ಮೋಹನ್ ಭಾಗತವತ್ ಪ್ರಕಾರ, ಅಪಘಾನಿಸ್ತಾನದಿಂದ ಬರ್ಮಾದವರೆಗೂ ಹಿಂದೂಗಳಿಗೆ ಅನುಯಾಯಿಗಳಿದ್ದರು. ಹಿಂದೂಗಳನ್ನು ಮತಾಂತರ ನಡೆಸುತ್ತಿದೆ. ಆದರೆ ಹಿಂದೂಗಳಿಂದ ಇತರ ಮತಗಳಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಭಾಗವತ್ ವಿವರಿಸಿದರು.

ಬಹಮತೀಯ ಮತ್ತು ಬಹುಸಂಸ್ಕøತಿಯುಳ್ಳ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಅವರವರ ಮಾತೃಧರ್ಮವನ್ನು ಅನುಸರಿಸುವ ಹಕ್ಕಿದೆ. ಹಿಂದೂಗಳು ಆರೆಸೆಸ್ಸಿನ ಶಾಖೆಗಳ ಮುಖಾಂತರ ಸೂಕ್ತ ತರಬೇತಿ ಪಡೆದು ಒಗ್ಗಟ್ಟಿನಿಂದ ಭಾರತ ನಿರ್ಮಾಣ ಮತ್ತು ಆತ್ಮವಿಕಾಸಕ್ಕಾಗಿ ಪ್ರಯತ್ನಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಚೇಕಿತಾನ

Editor Postcard Kannada:
Related Post