X

ಈ ಸಮಾಜವಾದಿ ನಾಯಕನಿಗೆ ಶ್ರೀರಾಮ ಮಂದಿರ ನಿಷ್ಪ್ರಯೋಜಕವಂತೆ

ಪ್ರಧಾನಿ ಮೋದಿ ವಿರೋಧಿಗಳಿಗೆ, ಬಿಜೆಪಿ ವಿರೋಧಿಗಳಿಗೆ ಮತ್ತು ಭಾರತ ವಿರೋಧಿಗಳಿಗೆ ಅಯೋಧ್ಯೆಯ ನೂತನ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದು ನುಂಗಲಾರದ ತುತ್ತಾಗಿದೆ ಎನ್ನುವುದಕ್ಕೆ ಅದನ್ನು ವಿರೋಧಿಸಿ ನೀಡುವ ಸಾಕಷ್ಟು ಹೇಳಿಕೆಗಳೇ ಸಾಕ್ಷ್ಯ ನೀಡುತ್ತವೆ.

ಬಹಳ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಮತ್ತು ಇನ್ನಿತರ ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ಶ್ರೀರಾಮ ಮಂದಿರ ಮೈಯೆಲ್ಲಾ ಉರಿ ಹುಟ್ಟಿಸಿದೆ ಎನ್ನುವುದು ಸುಳ್ಳಲ್ಲ. ಇದಕ್ಕೆ ದೊಡ್ಡ ಉದಾಹರಣೆ ಅವರಿಗೆ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ನೀಡಲಾಗಿದ್ದರೂ, ಅದಕ್ಕೆ ಹೋಗದೆ ರಾಮ ಮಂದಿರವನ್ನು, ಅದರ ನಿರ್ಮಾಣಕ್ಕೆ ಟೊಂಕ ಕಟ್ಟಿ ಪ್ರಯತ್ನ ನಡೆಸಿದ ಬಿಜೆಪಿ, ಪ್ರಧಾನಿ ಮೋದಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ಕಾಂಗ್ರೆಸ್ ಮತ್ತು ಇನ್ನಿತರ ವಿರೋಧ ಪಕ್ಷಗಳು, ವಿರೋಧಿಗಳು ತಮ್ಮ ಹೀನ ಮನಸ್ಥಿತಿ ಪ್ರದರ್ಶನ ಮಾಡಿದ್ದು.

ಇದೀಗ ರಾಮ ಮಂದಿರಕ್ಕೆ ಸಂಬಂಧಿಸಿದ ಹಾಗೆ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರ ನಿಷ್ಪ್ರಯೋಜಕ ಎನ್ನುವ ಮೂಲಕ ಅವರಿಗೆ ರಾಮ ಮಂದಿರ ನಿರ್ಮಾಣ, ಪ್ರಧಾನಿ ಮೋದಿ, ಬಿಜೆಪಿ ಮೇಲಿನ ಅಸಮಾಧಾನ ಹೊರಹಾಕಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಈ ದೇವಾಲಯವನ್ನು ನಮ್ಮ ದೇಶದ ದೇವಾಲಯದ ಹಾಗೆ ನಿರ್ಮಾಣ ಮಾಡಿಲ್ಲ. ರಾಮ ಮಂದಿರ ನಿರ್ಮಾಣ ವಾಸ್ತು ಪ್ರಕಾರ ಆಗಿಲ್ಲ. ನಾನು ಪ್ರತಿದಿನ ರಾಮನನ್ನು ಆರಾಧನೆ ಮಾಡುತ್ತೇನೆ. ಕೆಲವರು ರಾಮ ನವಮಿ ದಿನವನ್ನು ಪೇಟೆಂಟ್ ಮಾಡಿದ್ದಾರೆ. ಆದರೆ ಅಯೋಧ್ಯೆಯಲ್ಲಿನ ಈ ರಾಮ ಮಂದಿರ ಪ್ರಯೋಜನಕ್ಕೆ ಬಾರದ್ದು ಎಂದು ಅವರು ಹೇಳಿ ವಿವಾದ ಸೃಷ್ಟಿ ಮಾಡಿದ್ದಾರೆ.

ಇವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಇವರಿಗೆ ಛೀಮಾರಿ ಹಾಕಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಈ ಹೇಳಿಕೆ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇವರು ರಾಜಕೀಯಕ್ಕಾಗಿ ಜನರ ನಂಬಿಕೆಗಳ ಮೇಲೆ ಆಟವಾಡುತ್ತಿದ್ದಾರೆ‌. ಅವರು ರಾಮ ಮಂದಿರವನ್ನು ಯಾವಾಗಲೂ ವಿರೋಧ ಮಾಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

Post Card Balaga:
Related Post