X

ಸ್ಪೀಕರ್ ಮೇಲೆ ಪೇಪರ್ ಎಸೆದು ಅವಮಾನಿಸಿದ ಕಾಂಗ್ರೆಸ್

ಕಾಂಗ್ರೆಸ್ ಪಕ್ಷದವರಿಗೆ ಎಲ್ಲಿ ಹೇಗೆ ನಡೆದುಕೊಳ್ಳಬೇಕು, ಯಾರಿಗೆ ಹೇಗೆ ಗೌರವ ನೀಡಬೇಕು ಎನ್ನುವುದರ ಪರಿವೆಯೇ ಇಲ್ಲ ಎನ್ನುವುದು, ಅವರ ವರ್ತನೆಯಲ್ಲೇ ತಿಳಿಯುತ್ತದೆ. ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಸೇರಿ ಸದನದಲ್ಲಿ ನಾಚಿಗೇಡಿನ ವರ್ತನೆಯೊಂದನ್ನು ತೋರಿ ಮತ್ತೆ ಸಾರ್ವಜನಿಕ ವಲಯದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಸದನದಲ್ಲಿ ‌ಸ್ಪೀಕರ್ ಅವರ ಮೇಲೆ ಪೇಪರ್ ಎಸೆದು ವಿಪಕ್ಷಗಳು ತಮ್ಮ ಮಾನವನ್ನು ತಾವೇ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಕಲಾ ಆರಂಭವಾದ ಕೂಡಲೇ ಗದ್ದಲಗಳೂ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಸ್ಪೀಕರ್ ಮೇಲೆ ಪೇಪರ್ ಎಸೆದು ತಮ್ಮ ನೀಚತನವನ್ನು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸಿಗರ ಈ ಅಶಿಸ್ತನ್ನು ಗಮನಿಸಿದ ಸ್ಪೀಕರ್‌ ಅವರು ಕಲಾಪವನ್ನು ಮುಂದೂಡುವಂತಾಯಿತು.

ನೀತಿ ನಿಯಮಗಳನುಸಾರವೇ ರಾಹುಲ್ ಗಾಂಧಿ ಅವರನ್ನು ಸದನದಿಂದ ವಜಾ ಮಾಡಿದ್ದರೂ, ವಿಪಕ್ಷಗಳು ಮಾತ್ರ ಸಂಸತ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಜೊತೆಗೆ ಆಡಳಿತಾರೂಢ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಇದೊಂದು ಆಘಾತಕಾರಿ ಮತ್ತು ಅಮಾನವೀಯ ಘಟನೆಯಾಗಿದ್ದು, ಎಲ್ಲಿ, ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಾಂಗ್ರೆಸಿಗರು ಇನ್ನೂ ಅರಿಯದೇ ಇರುವುದು, ಅವರ ಬುದ್ಧಿ ಯಾವ ಮಟ್ಟ ಇದ್ದು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ. ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಅವಮಾನವಾಗುವಂತಹ ಕೆಲಸವನ್ನು ಮಾಡಿದ್ದು, ರಾಹುಲ್ ಗಾಂಧಿಗೆ ಮಾತ್ರ ಪ್ರತ್ಯೇಕ ನೀತಿ ಬಯಸುತ್ತಿದ್ದಾರೆ ಎನ್ನುವುದು ಹಾಸ್ಯಾಸ್ಪದ. ಇಂತಹ ಕಾಂಗ್ರೆಸಿಗರು ಪ್ರಜಾಪ್ರಭುತ್ವದ ಬಗ್ಗೆ ಪಾಠ ಮಾಡುವ ಯಾವ ನೈತಿಕತೆ ಹೊಂದಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆ.

Post Card Balaga:
Related Post