X

ಐದು ವರ್ಷಗಳ ಕಾಲ ದುರಾಡಾಳಿತ ನಡೆಸಿ ದಕ್ಷ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ಕೊಟ್ಟು ಕೋಟಿ ಕೋಟಿ ಲೂಟಿ ಹೊಡೆದ ನಂ1 ರಾಜ್ಯ ಕರ್ನಾಟಕ ಕಾಂಗ್ರೆಸ್!!

ಸ್ವಾತಂತ್ರ್ಯಾ ನಂತರ ಕಂಡು ಕೇಳರಿಯದ ರೀತಿಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸತತ ಐದು ವರ್ಷಗಳ ಕಾಲ ದುರಾಡಾಳಿತ ನಡೆಸಲಾಗಿದೆ. ಕೊಲೆ-ಸುಲಿಗೆ-ದರೋಡೆ-ಅತ್ಯಾಚಾರ-ಭ್ರಷ್ಟಾಚಾರ ಎಲ್ಲದರಲ್ಲೂ ಕರ್ನಾಟಕವೇ ನಂ1. ಈ ಹಿಂದೆ ಬಿಹಾರದಲ್ಲಿ ಈ ರೀತಿಯ ದುರಾಡಳಿತವಿದೆಯೆಂದು ಕೇಳುತ್ತಿದೆವು. ಆದರೀಗ ಬಿಹಾರವನ್ನೇ ಹಿಂದಿಕ್ಕಿ ದೇಶದಲ್ಲೇ ಅತಿ ಭ್ರಷ್ಟ ರಾಜ್ಯವೆಂಬ ಬಿರುದನ್ನು ಮುಡಿಗೇರಿಸಿಕೊಂಡಿದೆ ಕರ್ನಾಟಕ. ಇಷ್ಟಾಗಿಯೂ ತಮ್ಮದು ನಂ1 ಸರಕಾರವೆಂದು ತಮಗೇ ತಾವೇ ಕೊಚ್ಚಿಕೊಳ್ಳುತ್ತಿರಬೇಕಾದರೆ ಭಂಡತನವೂ ಯಾವ ರೀತಿಯದ್ದಾಗಿರಬೇಕು?

ಕನ್ನಡಿಗರಿಗೆ ತಾವು ಪ್ರಜಾಪ್ರಭುತ್ವ ರಾಜ್ಯದಲ್ಲಿದ್ದೇವೆಯೋ ಇಲ್ಲ ಯಾವುದೋ ಸರ್ವಾಧಿಕಾರಿ ಆಡಳಿತದ ರಾಜ್ಯದಲ್ಲಿದ್ದೇವೋ ಎಂದು ಅರ್ಥವಾಗದಷ್ಟು ಮಟ್ಟಕ್ಕೆ ನಿರಂಕುಶ ಪ್ರಭುತ್ವವನ್ನು ಕಳೆದ ಐದು ವರ್ಷಗಳಲ್ಲಿ ಕಾಣುವಂತಾಯಿತು. ಯಾವುದೋ ಇಸ್ಲಾಮಿಕ್ ಸ್ಟೇಟ್ ನ “ಕಾಫಿರರನ್ನು ಕೊಲ್ಲಿ” ಎನ್ನುವ ಧ್ಯೇಯವನ್ನು ಶಿರಾವಹಿಸಿ ಕರ್ನಾಟಕದಲ್ಲಿ ಪಾಲಿಸಲಾಯಿತು. ಒಂದರ ಹಿಂದೊಂದರಂತೆ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ ನಡೆಸಲಾಯಿತು. ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್, ಪರೇಶ್ ಮೆಸ್ತ, ರುದ್ರೇಶ್, ಪ್ರವೀಣ್ ಪೂಜಾರಿ, ರಾಜು ಮೈಸೂರು, ಕುಟ್ಟಪ್ಪ, ವಿಶ್ವನಾಥ್ ಹೀಗೆ ಒಂದೆರಡಲ್ಲ ಮೂವತ್ತು ಹಿಂದೂ ಕಾರ್ಯಕರ್ತರ ಬಲಿ ತೆಗೆದಿಕೊಂಡಿತು ಹಿಂದೂ ವಿರೋಧಿ ಸರಕಾರ.

ವೈಚಾರಿಕ ನೆಲೆಗಟ್ಟಿನಲ್ಲಿ ತನ್ನ ವಿರೋಧಿಗಳನ್ನು ಹಣಿಯಲಾಗದೆ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರಿಗೆ ಮಾನಸಿಕ-ದೈಹಿಕ ಹಿಂಸೆ ಕೊಡುವುದರಲ್ಲಿ ಎತ್ತಿದ “ಕೈ” ಸರಕಾರದ್ದು. ತಮಗೊಂದು ನ್ಯಾಯ ಇತರರಿಗೊಂದು ನ್ಯಾಯ. ತಾವು ದೇಶದ ಪ್ರಧಾನಮಂತ್ರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಅದು “ಅಭಿವ್ಯಕ್ತಿ” ಸ್ವ್ವಾತಂತ್ರ್ಯ ಆದರೆ ಸರಕಾರದ ನಡೆ ನುಡಿಗಳನ್ನು ಪ್ರಶ್ನಿಸಿದರೆ ಅದು ಅಪರಾಧ. ಅಂತಹವರ ಮೇಲೆ ಗೂಂಡಾ ಕಾಯ್ದೆ, ಸೈಬರ್ ಕ್ರೈಂ, ಇಲ್ಲಿವರೆಗೆ ಕೇಳೇ ಇರದ ಮಣ್ಣು-ಮಸಿ ಕಾಯ್ದೆಗಳೆಲ್ಲ ಹೇರಲಾಗುತ್ತದೆ. ತನ್ನ ವೈಚಾರಿಕ ಪ್ರತಿದ್ವಂದಿಯನ್ನು ಹಣಿಯಲು ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ ಎಂಬುದು ಮೋದಿ-ಶಾ, ಸಾಧ್ವಿ-ಕರ್ನಲ್ ವಿಚಾರದಲ್ಲಿ ನಾವೀವಾಗಲೇ ನೋಡಿಯಾಗಿದೆ.

ಇದೇ ಕಾಂಗ್ರೆಸ್ ತಮ್ಮದೇ ಆಳ್ವಿಕೆಯಲ್ಲಿ ನಡೆದ ದಕ್ಷ ಅಧಿಕಾರಿಗಳ ವರ್ಗಾವಣೆ ಬಗ್ಗೆ ಚಕಾರವೆತ್ತಲ್ಲ. ಡಿ.ಕೆ ರವಿಯ ರಹಸ್ಯ ಸಾವು, ಗಣಪತಿ ಆತ್ಮಹತ್ಯೆ ಇವೆಲ್ಲವೂ “ಸಹಜ ಸಾವು”. ಕಣ್ಣ ಮುಂದೆ ಪ್ರತ್ಯಕ್ಷ ಸಾಕ್ಷಿಗಳಿದ್ದಾಗ್ಯೂ ಜಾಣ ಕಿವಿಡು-ಕುರುಡು ಪ್ರದರ್ಶಿಸಿದ ಸರಕಾರ. ಪ್ರಾಮಾಣಿಕವಾಗಿ ಕೆಲಸ ಮಾಡಿದ ಅನುಪಮಾ ಶಣೈ, ಡಿ.ರೂಪಾ, ರಶ್ಮಿ ಮಹೇಶ್, ಸಿ.ಶಿಖಾ ನಂತಹವರಿಗೆ ಮಾನಸಿಕ ಕಿರುಕುಳ ಎತ್ತಂಗಡಿ ಭಾಗ್ಯ. ಕಲ್ಲಪ್ಪ ಹಂಡಿಬಾಗ್ ಮತ್ತು ಮಲ್ಲಿಕಾರ್ಜುನ ಬಂಡೆಯಂತಹವರಿಗೆ ಮರಣ ಭಾಗ್ಯ. ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳು ಉಸಿರಾಡಲೂ ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಕಳೆದ ಐದು ವರ್ಷಗಳಲ್ಲಿ. ಆದರೂ ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬತೆ “ಗಾಢ ನಿದ್ದೆಯಲ್ಲಿದೆ” ಸರಕಾರ!

ಇನ್ನು ಭ್ರಷ್ಟಾಚಾರದ ಬಗ್ಗೆ ಮಾತೆತ್ತುವುದೇ ಬೇಡ. ಬರೆದು ಬರೆದು ಕೈ ಸೋಲಬಹುದೇ ವಿನಹ ಭ್ರಷ್ಟಾಚಾರದ ಲೆಕ್ಕ ಮುಗಿಯಲಾರದು. ಹಗರಣಗಳ ಮೇಲೆ ಹಗರಣಗಳನ್ನು ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆದು, ಶಾಲೆಯ ಮಕ್ಕಳ ತಿನ್ನುವ ಅನ್ನಕ್ಕೂ ಕಲ್ಲು ಹಾಕಿದಂತಹ ಅಮಾನುಷ ಸರಕಾರ. “ಹಡೆದವ್ವನ ಶಾಪವನ್ನು” ಹೊತ್ತ ಸರಕಾರ. ಅಲ್ಪರಿಗೆ ಭಾಗ್ಯ ಕರುಣಿಸಿ ಬಹುಜನರಿಗೆ ಕಪ್ಪೆ ಚಿಪ್ಪು ಕೊಟ್ಟು ಜಾತಿ ಜಾತಿಗಳ ಮಧ್ಯೆ ತಂದಿಟ್ಟ ಒಡೆದು ಆಳುವ ನೀತಿಯ ಸರಕಾರ. ಸನಾತನ ಧರ್ಮದ ಬುಡಕ್ಕೇ ಕೊಡಲಿಯೇಟು ಕೊಟ್ಟು “ಪ್ರತ್ಯೇಕತೆಯ” ಬೀಜ ಬಿತ್ತಿದ ಸರಕಾರ. ತಪ್ಪುಗಳ ಮೇಲೆ ಪರದೆ ಎಳೆದು ಮತ್ತೊಂದಷ್ಟು ತಪ್ಪು ಮಾಡಿ ತಾವೇನೂ ತಪ್ಪೇ ಮಾಡಿಲ್ಲ ಎಂದು ಎದೆ ತಟ್ಟಿ ಹೇಳುವ ಲಜ್ಜೆಗೆಟ್ಟ ಸರಕಾರ.

ಇಂತಹ ದುರಾಡಳಿತ ಬೇಕಾ? ಶಾಲಾ ಮಕ್ಕಳ ಅನ್ನ ಕಿತ್ತುಕೊಳ್ಳುವ, ಹಿಂದೂಗಳಿಗೆ ಮರಣ ಭಾಗ್ಯ ಕರುಣಿಸುವ, ಜನರ ಮಧ್ಯೆ ಜಾತಿ ಬೇಧ ಮಾಡುವ, ಅಲ್ಪರನ್ನು ಓಲೈಸುವ ವೋಟ್ ಬ್ಯಾಂಕ್ ರಾಜಕಾರಣ ಮಾಡುವ, ಜನರ ದುಡ್ಡನ್ನು ಪೋಲು ಮಾಡಿ ಚಿನ್ನದ ತಟ್ಟೆಯಲ್ಲಿ ಉಣ್ಣುವ ಕೋಟಿ ಕೋಟಿ ಲೂಟಿ ಮಾಡುವ, ದಕ್ಷ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುವ, ಹೆತ್ತಬ್ಬೆಯ ಕರುಳ ಕುಡಿಯ ನಿರ್ಮಮಕಾರದಿಂದ ಚಿವುಟುವ, ತಲೆ ಮೇಲೆ ತಲೆ ಬಿದ್ದರೂ ಸದಾ ನಿದ್ದೆಯಲ್ಲಿರುವ ಇಂತಹ ಸರಕಾರ ಬೇಕಾ? ಆಲೋಚಿಸಿ ನೀವೇ ತೀರ್ಮಾನಿಸಿ….

-Sharvari

Editor Postcard Kannada:
Related Post