X

ಕನ್ನಡಿಗರಿಗೆ ಇಲ್ಲವಾದ “ಇಂದಿರಾ ಕ್ಯಾಂಟೀನ್”!! ಸಿದ್ದರಾಮಯ್ಯ ಸರ್ಕಾರದ ಅಸಲಿ ಕನ್ನಡ ಪ್ರೇಮ ಬಟಾ ಬಯಲು ಮಾಡಿದ್ದಾದರೂ ಯಾರು ಗೊತ್ತೇ??

ತಮಿಳುನಾಡಿನ “ಅಮ್ಮ ಕ್ಯಾಂಟೀನ್” ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಸಿದ್ದರಾಮಯ್ಯ ಸರ್ಕಾರ, ಕರ್ನಾಟಕದಲ್ಲಿ ನೆಹರು ಮನೆತನವನ್ನು ಇನ್ನಷ್ಟು ಆಕರ್ಷಿಸಲು “ಇಂದಿರಾ ಕ್ಯಾಂಟೀನ್” ಎನ್ನುವ ಹೆಸರನ್ನು ಇಟ್ಟು, ಬಡ ಮಕ್ಕಳ ಅನ್ನ ಕಸಿದುಕೊಂಡಿರುವ ಇವರು ಕರ್ನಾಟಕದಲ್ಲಿರುವ ಕನ್ನಡಿಗರಿಗೇ ಮೋಸ ಮಾಡ ಹೊರಟಿದ್ದಾರೆ. ಅಷ್ಟೇ ಅಲ್ಲದೇ, ಕನ್ನಡ ಪ್ರೇಮ, ಅಸ್ಮಿತೆ, ಕನ್ನಡಿಗರು ಎಂದೆಲ್ಲ ಬಡಾಯಿ ಕೊಚ್ಚುತ್ತಿರುವ ಸಿದ್ದರಾಮಯ್ಯನವರ ಅಸಲಿ ಕನ್ನಡ ಪ್ರೇಮ ಇದೀಗ ಬಟಾಬಯಲಾಗಿದೆ!!

ಹೌದು… ಈಗಾಗಲೇ ನೆಹರು ಮನೆತನವನ್ನು ಇನ್ನಷ್ಟು ಆಕರ್ಷಿಸಲು, ಸಿದ್ದರಾಮಯ್ಯ ಸರಕಾರ ಇಂದಿರಾ ಕ್ಯಾಂಟೀನ್ ಎಂದೆಲ್ಲ ಹೆಸರಿಟ್ಟು ಮಕ್ಕಳ ಅನ್ನ ಕಸಿದುಕೊಂಡು ‘ಬೆಂಗಳೂರಿಗರಿಗೆ’ ಅನ್ನದಾನ ಮಾಡ್ತೇನೆಂದ ಸಿದ್ಧರಾಮಯ್ಯ ಸರ್ಕಾರವು ‘ನೂರು ವರುಷ ಹಳೆಯದಾಗಿದ್ದ ಮರಗಳನ್ನೆಲ್ಲ ಕಡಿಸಿ ಇಂದಿರಾ ಕ್ಯಾಂಟೀನ್ ಮಾಡಿದ್ದೇ ಮಾಡಿದ್ದು!! ಆದರೆ ತಾನೊಬ್ಬ ಕನ್ನಡ ಪ್ರೇಮಿ ಎಂದು ಡಂಗೂರ ಸಾರಿದ್ದ ಸಿದ್ದರಾಮಯ್ಯ ಸರ್ಕಾರ ದೆಹಲಿಯ ಎರಡು ಖಾಸಗಿ ಕಂಪೆನಿಗಳಿಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ನೀಡುವ ಮೂಲಕ ತನ್ನ ಅಸಲಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

ಕರ್ನಾಟಕದ ಕ್ಯಾಂಟೀನ್ ಗೆ ಕನ್ನಡತಿಯೇ ಅಲ್ಲದ ಇಂದಿರಾ ಹೆಸರಿಟ್ಟಿದ್ದಲ್ಲದೇ, ಗುತ್ತಿಗೆಯನ್ನೂ ಹೊರರಾಜ್ಯದವರಿಗೆ ನೀಡಲಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಗಂಭೀರವಾಗಿಯೇ ಅನ್ನದಾನವನ್ನು ಪರಿಗಣಿಸಿ ಅದೆಷ್ಟೋ ಬಡವರಿಗೆ ‘ಅಮ್ಮ’ ನಾಗಿದ್ದ ‘ಜಯಲಲಿತಾ’ ರವರು ‘ಅಮ್ಮ ಕ್ಯಾಂಟೀನ್’ ಪ್ರಾರಂಭ ಮಾಡಿದ್ದನ್ನೇ ನಕಲು ಮಾಡಿದ ಸಿದ್ಧರಾಮಯ್ಯನವರು ಚುನಾವಣೆಯ ಹಿತ ದೃಷ್ಟಿಯಿಂದ ಈ ಕ್ಯಾಂಟೀನ್ ಅನ್ನು ತೆರೆದರೇ ಹೊರತು ಜನಗಳ ಕಷ್ಟಕ್ಕಲ್ಲ ಅನ್ನೋದನ್ನು ಸಾಬೀತು ಪಡಿಸಿದ್ದಾರೆ!!

ಈಗಾಗಲೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಸಿದ್ದರಾಮಯ್ಯ ಸರ್ಕಾರ ತಮಿಳುನಾಡಿನಿಂದಲೇ ಸಾಮಗ್ರಿಗಳನ್ನು ತರಿಸಿಕೊಂಡು ಕ್ಯಾಂಟೀನ್ ನಿರ್ಮಾಣ ಮಾಡಿತ್ತು!! ಆದರೆ ಇದೀಗ ಇಡ್ಲಿ ಸಾಂಭಾರ್ ಮಾಡಲು ಬಾರಾದ ದಿಲ್ಲಿ ಕಂಪೆನಿಗಳಿಗೆ ಗುತ್ತಿಗೆ ನೀಡಿದ್ದಾರೆ ಎಂದರೆ ಏನರ್ಥ!! ಈಗಾಗಲೇ ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗುತ್ತಿರುವ ರಾಜ್ಯದಲ್ಲಿ, ತಮ್ಮ ರಾಜ್ಯದ ಕನ್ನಡಿಗರಿಗೆ ಟೆಂಡರ್ ನೀಡುವ ಬದಲು ಹೊರರಾಜ್ಯದವರಿಗೆ ಟೆಂಡರ್ ನೀಡಿದ್ದಾರೆ ಎಂದರೆ ಇವರಿಗೆ ಅದೇನು ಹೇಳಬೇಕೋ ನಾ ಕಾಣೆ!!

ಹೋಟೆಲ್ ಉದ್ಯಮದಲ್ಲಿ ಇಡೀ ಪ್ರಪಂಚದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎನ್ನುವ ವಿಚಾರ ಈಡೀ ಪ್ರಪಂಚಕ್ಕೆ ಗೊತ್ತಿರುವ ವಿಚಾರ!! ಇದಕ್ಕೆ ಒಂದು ಒಳ್ಳೆಯ ನಿದರ್ಶನ ಎಂದರೆ, ಎತ್ತ ಹೋದರತ್ತ ಉಡುಪಿ ಹೋಟೆಲ್ ಕಾಣಸಿಗುವುದು!! ಹಾಗಿದ್ದರೂ ಕೂಡ ನಮ್ಮ ಸಿದ್ದರಾಮಯ್ಯ ಸರ್ಕಾರ ದಿಲ್ಲಿ ಮೂಲದ ಚೆಫ್ ಟಾಲ್ ಹಾಸ್ಪಿಟಾಲಿಟಿ (ಪ್ರೈ) ಲಿಮಿಟೆಡ್ ಹಾಗೂ ರಿವಾರ್ಡ್ ಎಂಬ ಎರಡು ಸಂಸ್ಥೆಗಳು ಗುತ್ತಿಗೆ ಗಿಟ್ಟಿಸಿಕೊಂಡಿರುವುದನ್ನು ನೋಡಿದರೆ ಹಲವಾರು ಸಂದೇಹಗಳನ್ನು ಇದು ಹುಟ್ಟು ಹಾಕಿದೆ.

ಇಡ್ಲಿ ಸಾಂಬಾರ್ ಬಾರದ ರಾಜ್ಯಕ್ಕೆ ಕರ್ನಾಟಕದ ಟೆಂಡರ್ ನೀಡಲಾಗಿದೆ ಎಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ವಿಚಾರವೇ ಸರಿ!!! ಇನ್ನು, ಈ ಟೆಂಡರ್ ಮೂಲಕ ದೆಹಲಿ ಮೂಲದ ಕಂಪೆನಿಗಳಿಗೆ ಇಂದಿರಾ ಕ್ಯಾಂಟೀನ್ ನ ಗುತ್ತಿಗೆ ನೀಡಲಾಗಿದೆ ಎಂದು ಸ್ವತಃ ನಗರಾಭಿವೃದ್ಧಿ ಮತ್ತು ಹಜ್ ಮಂತ್ರಿ ರೋಷನ್ ಬೇಗ್ ಅವರೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದು, ತನ್ನ ಸರ್ಕಾರದ ಕನ್ನಡ ಪ್ರೇಮವನ್ನೇ ಬಟಾ ಬಯಲು ಮಾಡಿರುವುದು ಹೆಮ್ಮೆಯ ವಿಚಾರ!!

 

ಲಭ್ಯವಿರುವ ಮಾಹಿತಿಯ ಪ್ರಕಾರ ಆಹಾರ ತಯಾರಿಕೆ ಮತ್ತು ವಿತರಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತಿರುವ ದಿಲ್ಲಿ ಮೂಲದ ಚೆಫ್ ಟಾಲ್ ಹಾಸ್ಪಿಟಾಲಿಟಿ (ಪ್ರೈ) ಲಿಮಿಟೆಡ್ ಹಾಗೂ ರಿವಾರ್ಡ್ ಎಂಬ ಕಂಪೆನಿಗಳಿಗೆ ವಹಿಸಲಾಗಿದೆ!!! ಮೈಸೂರಿನಲ್ಲಿ ಸರ್ಕಾರಿ ಸ್ವಾಮ್ಯದ ಸಿಎಫ್ ಟಿ ಆರ್ ಐ ಇದ್ದರೂ ಸಹ, ಯಾವುದೇ ಜವಾಬ್ದಾರಿಯನ್ನೂ ನೀಡದೇ, ಖಾಸಗಿ ಕಂಪೆನಿಗಳನ್ನು ತಂದಿದ್ದಾದರೂ ಏಕೆ ಎನ್ನುವ ಪ್ರಶ್ನೆ ಏಳುವಂತೆ ಮಾಡಿದೆ!! ಆದರೆ ತನ್ನ ಹೈಕಮಾಂಡ್ ಅನ್ನು ನೆಚ್ಚಿಸಲು ಹೋಗಿ ಕನ್ನಡಿಗರಿಗೆ ಅನ್ಯಾಯ ಎಸಗುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಸಿದ್ದರಾಮಯ್ಯ ಸರ್ಕಾರವೇ ಹೇಳಬೇಕಾಗಿದೆ!!

ಕರ್ನಾಟಕ ಕನ್ನಡ ತಾಯಿ ಭುವನೇಶ್ವರಿ ಎಂದು ಬಡಾಯಿ ಕೊಚ್ಚುವ ಸಿದ್ದರಾಮಯ್ಯ ಸರ್ಕಾರಕ್ಕೆ ಅದೆಷ್ಟೋ ಕನ್ನಡಿಗರು ನಿರುದ್ಯೋಗಿಗಳಾಗಿ ತಿರುಗುತ್ತಿರುವ ವಿಚಾರ ಗೊತ್ತಿದ್ದರೂ ಕೂಡ ತನ್ನ ನಾಡಿನ ಜನತೆಗೆ, ಕನ್ನಡಿಗರಿಗೆ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಿ ಈ ಗುತ್ತಿಗೆಯನ್ನು ನೀಡುವ ಬದಲು ಕರ್ನಾಟಕದ ತಿನಿಸುಗಳ ಬಗ್ಗೆ ಗೊತ್ತೇ ಇಲ್ಲದ ದಿಲ್ಲಿವಾಲಾಗಳಿಗೆ ಗುತ್ತಿಗೆಯನ್ನೂ ನೀಡಿರುವುದನ್ನು ನೊಡಿದರೆ ಸಾಕಷ್ಟು ಅನುಮಾನಗಳು ಕೂಡ ಎಡೆ ಮಾಡಿಕೊಡುತ್ತಿವೆ!!

ಈಗಾಗಲೇ ಕಳಪೆಮಟ್ಟದ ಆಹಾರ ಪೂರೈಕೆಯಿಂದಲೇ ಸುದ್ದಿಯಾಗಿದ್ದ “ಇಂದಿರಾ ಕ್ಯಾಂಟೀನ್”, ತನ್ನ 168 ಇಂದಿರಾ ಕ್ಯಾಂಟೀನ್ ಗಳಿಗೆ ಮೂರು ಕೋಟಿ ರೂಪಾಯಿಗಳಷ್ಟು ಪ್ರತಿ ತಿಂಗಳು ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿರುವ ಸರ್ಕಾರ, ನಿಜಕ್ಕೂ ಕೂಡ ಇಷ್ಟು ದೊಡ್ಡ ಮೊತ್ತವನ್ನು ಬರೀ ಕ್ಯಾಂಟೀನ್ ಗಾಗಿಯೇ ಖರ್ಚು ಮಾಡುತ್ತಿದೆಯಾ ಎನ್ನುವ ಪ್ರಶ್ನೆ ತಲೆಎತ್ತಿದೆ!! ಯಾಕೆಂದರೆ, ಕೆಲ ಕ್ಯಾಂಟೀನ್ ಗಳು ಮಧ್ಯಾಹ್ನವೇ ಮುಚ್ಚುತ್ತಿರುವಾಗ ಅದ್ಯಾವ ರೀತಿ ಸರ್ಕಾರ ಖರ್ಚು ಮಾಡುತ್ತಿದೆ ಎನ್ನುವ ಗುಮಾನಿ ಹುಟ್ಟಿಕೊಳ್ಳುತ್ತಿದೆ.

ಇಡ್ಲಿ ಸಾಂಬಾರ್ ಮಾಡೋಕೆ ಗೊತ್ತಿಲ್ಲದವರಿಗೆ, ಕರ್ನಾಟಕದ ಇಂದಿರಾ ಕ್ಯಾಂಟೀನ್ ಅನ್ನು ಗುತ್ತಿಗೆ ಕೊಟ್ಟಿದ್ದಾರೂ ಯಾಕೆ?? ಇದರ ಹಿಂದಿರುವ ಒಳಾರ್ಥವಾದರೂ ಏನು ಎಂಬುವುದೇ ಯಾರಿಗೂ ಗೊತ್ತಾಗುತ್ತಿಲ್ಲ!! ಆದರೆ ಅದೆಷ್ಟೋ ಹಗರಣಗಳ ಮೂಲಕ, ಕರ್ನಾಟಕವನ್ನೇ ಮೂಲೆಗುಂಪು ಮಾಡಿರುವ ಸಿದ್ದರಾಮಯ್ಯ ಸರ್ಕಾರ, ಕನ್ನಡಿಗರಿಗೆ ಅದ್ಯಾವ ರೀತಿಯಲ್ಲಿ ಅನ್ಯಾಯವನ್ನೇಸುತ್ತಾರೋ ಗೊತ್ತಿಲ್ಲ!! ಆದರೆ, ಇನ್ನೂ ಸಹ ಕಾಂಗ್ರೆಸ್ಸನ್ನು ನೆಚ್ಚಿಕೊಂಡು ಕೂತಿರುವ ಕನ್ನಡಿಗರಿಗೆ ಈ ವಿಚಾರ ಇನ್ನು ಕೂಡ ಅರ್ಥವಾಗುತ್ತಿಲ್ಲ ಅನ್ನುವುದೇ ದೊಡ್ಡ ವಿಪರ್ಯಾಸ!!

ಕೃಪೆ: ಹೊಸದಿಗಂತ

– ಅಲೋಖಾ

Editor Postcard Kannada:
Related Post