X

ಮೋದಿ ಗೂಗ್ಲಿಗೆ ಝಾಕಿರ್ ನಾಯಕ್ ನ ವಿಕೆಟ್ ಢಮಾರ್!! ಮೋದಿ ಭೇಟಿಯ ಕೆಲವೆ ದಿನಗಳ ಒಳಗೆ ಝಾಕಿರ್ ನಾಯಕ್ ನ ಮೇಲೆ ಹದ್ದಿನ ಕಣ್ಣಿಡಲು ಆದೇಶಿಸಿದ ಮಲೇಷಿಯಾ ಸರಕಾರ!!

ಮೋದಿ ಪ್ರಧಾನಮಂತ್ರಿ ಆದ ಮೇಲೆ ಮತಾಂಧರಿಗಂತೂ ಬುರೆ ದಿನ್ ಶುರು ಆಗಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ದೇಶದ ಒಳಗಿನ ಮತ್ತು ದೇಶದ ಹೊರಗಿದ್ದು ಕೊಂಡು ದೇಶವನ್ನು ನಿರ್ನಾಮ ಮಾಡುವ ದೇಶದ್ರೋಹಿಗಳ ಕತ್ತು ಹಿಸುಕುವ ಕಾರ್ಯದಲ್ಲಿ ನಿರತರಾಗಿದ್ದಾರೆ ಪ್ರಧಾನ ಸೇವಕ. ಝಾಕಿರ್ ನಾಯಕ್ ಎಂಬ ಮತಾಂಧ ಇಸ್ಲಾಮಿನ ಹೆಸರಿನಲ್ಲಿ ಮುಸ್ಲಿಮರ ಮನಸಿನಲ್ಲಿ ವಿಷ ಬೀಜ ಬಿತ್ತಿ ಅವರನ್ನು ಉಗ್ರರಾಗುವಂತೆ ಪ್ರೇರಿಪಿಸುತ್ತಿದ್ದ ಎನ್ನುವ ವಿಷಯ ಗೊತ್ತಾದ ಕೂಡಲೆ ಆತನ NGO ಮೇಲೆ ಪ್ರಹಾರ ಮಾಡಿಬಿಟ್ಟರು ಮೋದಿ. ಭಾರತಕ್ಕೆ ಬಂದರೆ ತನಗೆ ಉಳಿಗಾಲವಿಲ್ಲ ಎಂದರಿತ ಝಾಕಿರ್ ಮಲೇಷಿಯಾದಲ್ಲಿ ಇಲಿಯಂತೆ ಅಡಗಿ ಕೂತಿದ್ದಾನೆ. ಮೋದಿ ಅವರ ಮಲೇಷಿಯಾ ಭೇಟಿ ನಡೆದ ಕೆಲವೆ ದಿನಗಳ ಒಳಗಾಗಿ ಅಲ್ಲಿನ ಸರಕಾರ ಝಾಕಿರ್ ನ ಚಲನವಲನಗಳ ಮೇಲೆ ನಿಗಾ ಇಡಲು ತನ್ನ ಅಧಿಕಾರಿಗಳಿಗೆ ಸೂಚಿಸಿದೆ!!

ಇದು ಯಾವುದರ ಸಂಕೇತ? ದೇಶವನ್ನು ಛಿದ್ರ ಮಾಡುವ ಉಗ್ರರ ಮೇಲೆ ಮೋದಿ ಕಾಳಿಂಗ ಮರ್ದನ ಮಾಡುವ ಸಂಕೇತವೆ? ಮಲೇಷಿಯಾದ ಸರ್ಕಾರವು ಇಸ್ಲಾಮಿಕ್ ದ್ವೇಷ ಬೋಧಕ ಝಾಕಿರ್ ನಾಯಕ್ ಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಜಾರಿಗೊಳಿಸಿ, ತಮ್ಮ ನೆಲದ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಇಲ್ಲವಾದರೆ ಶಿಕ್ಷೆ ಎದುರಿಸಲು ತಯಾರಾಗಿರಬೇಕು ಎಂದು ತಾಕೀತು ಮಾಡಿದೆ ಎಂದು ‘ಮಲಯ್ ಮೈಲ್’ ವರದಿ ಮಾಡಿದೆ. ಝಾಕಿರ್ ನ ತೀವ್ರವಾದ ದ್ವೇಷ ಭಾಷಣಗಳ ವಿರುದ್ಧ ಮಲೇಷಿಯಾದಲ್ಲಿನ ಹಲವಾರು ಗುಂಪುಗಳು ಪ್ರತಿಭಟನೆ ನಡೆಸುತ್ತಿದ್ದು, ಇಸ್ಲಾಂ ಧರ್ಮವನ್ನು ಸಮರ್ಥಿಸದವರ ಸಂವೇದನೆಗಳನ್ನು ಆತನ ಭಾಷಣಗಳು ಖಂಡಿಸುತ್ತವೆ ಎಂದು ಆರೋಪ ಮಾಡಿದ್ದಾರೆ.

ಝಾಕಿರ್ ತನ್ನ ‘ಪೀಸ್ ಫೌಂಡೇಷನ್’ ಎನ್ನುವ ಸಂಸ್ಥೆಯ ಮೂಲಕ ಇಸ್ಲಾಮಿಕ್ ಶಿಕ್ಷಣದ ನೆಪದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದಾನೆ ಎಂದು ಭಾರತ ಸರಕಾರವು ಪದೆ ಪದೆ ಹೇಳುತ್ತಲೆ ಬಂದಿದೆ. ಭಾರತ ಸರಕಾರವು ಝಾಕಿರ್ ನಾಯಕ್ ನ ವಿರುದ್ದ ಭಯೋತ್ಪಾದನೆಗೆ ಉತ್ತೇಜನ ನೀಡುವ ಮತ್ತು ಆರ್ಥಿಕ ಅಕ್ರಮ ಎಸಗಿರುವ ಕಾರಣಗಳಿಗಾಗಿ ಕಾನೂನು ಕ್ರಮ ಜಾರಿಗೊಳಿಸಿದ್ದರೂ ಹಿಂದಿನ ಮಲೇಷಿಯಾ ಸರಕಾರವು ಆತನಿಗೆ ನಿರಾಶ್ರಿತನ ಪಟ್ಟ ಕೊಟ್ಟು ತನ್ನ ದೇಶದಲ್ಲಿ ಉಳಕೊಳ್ಳಲು ವ್ಯವಸ್ತೆ ಮಾಡಿತ್ತು. ಆದರೀಗ ಮಲೇಶಿಯಾದ ಹೊಸ ಪಕತನ್ ಹರಪಾನ್ ಆಡಳಿತವು ದ್ವೇಷ ಬೋಧಕನ ಮೇಲೆ ಕಠಿಣ ನಿಲುವನ್ನು ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. ಇದು ಖಂಡಿತವಾಗಿಯೂ ಮೋದಿ ಮಾಷ್ಟರ್ ಸ್ಟ್ರೋಕ್ ನ ಪರಿಣಾಮ. ಮಲೇಷಿಯಾದ ಈ ನಡೆ ಭಾರತದ ಸ್ನೇಹ ತನಗೆ ಎಷ್ಟು ಅವಶ್ಯಕ ಎನ್ನುವುದನ್ನು ತೋರಿಸಿಕೊಟ್ಟಿದೆ ಎನ್ನಬಹುದು.

ಮಲೇಷಿಯಾದ ಗೃಹ ಸಚಿವ ತನ್ ಶ್ರೀ ಮುಹಿದ್ದಿನ್ ಯಾಸ್ಸಿನ್ ಅವರು ಝಾಕಿರ್ ದೇಶದ ನಿಯಮಗಳಿಗೆ ಬದ್ಧನಾಗಿರಬೇಕು ಇಲ್ಲವೆ ಆಡಳಿತದಿಂದ ಕಟ್ಟುನಿಟ್ಟಿನ ಕ್ರಮವನ್ನು ಎದುರಿಸಲು ತಯಾರಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆತ ಈ ನೆಲದಲ್ಲಿ ಇರಬೇಕಾದರೆ ಇತರರಂತೆಯೆ ಈ ದೇಶದ ನಿಯಮಗಳನ್ನು ಪಾಲಿಸಬೇಕು ,ಧರ್ಮಕ್ಕೆ ಸಂಬಂಧಿಸಿದ್ದಿರಲಿ ಅಥವಾ ಇನ್ನಾವುದೆ ಅಪರಾಧವಿರಲಿ ಆತ ಭಾಗಿಯಾಗಿದ್ದಾನೆಂದು ಕಂಡು ಬಂದರೆ ಆತನ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಆಗಿ ಹೇಳಿದ್ದಾರೆ. ಅಲ್ಲಿಗೆ ಮೋದಿ ಪ್ಲಾನ್ ಸಕ್ಸಸ್!! ಮೋದಿ ಗೂಗ್ಲಿಗೆ ಝಾಕಿರ್ ವಿಕೆಟ್ ಢಮಾರ್!!

ಮಲೇಷಿಯಾದಲ್ಲಿ ಈಗ ತಮಗೆ ಅನುಕೂಲಕರವಾಗಿರುವ ಹೊಸ ಆಡಳಿತವಿರುವುದರಿಂದ, ನಾಯಕ್ ನನ್ನು ತಮಗೆ ಹಸ್ತಾಂತರಿಸುವಂತೆ ಮಲೇಷಿಯಾ ಸರಕಾರವನ್ನು ಭಾರತೀಯ ಏಜೆನ್ಸಿಗಳು ಕೇಳಿಕೊಳ್ಳುವ ಸಾಧ್ಯತೆ ಇದೆ. ಶೀಘ್ರದಲ್ಲೆ ಇದರ ಕುರಿತಾದ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಝಾಕಿರ್ ನನ್ನು ಗಡಿ ಪಾರು ಮಾಡಿ ಭಾರತಕ್ಕೆ ರವಾನಿಸಲು ಮಲೇಷಿಯಾ ಸರಕಾರ ಒಪ್ಪಿದರೆ ನಾಯಕ್ ತಿಹಾರ್ ಜೈಲಿನಲ್ಲಿ ಹಿಟ್ಟು ಬೀಸುವುದು ಖಚಿತ!!

-ಶಾರ್ವರಿ

Editor Postcard Kannada:
Related Post