X
    Categories: ಅಂಕಣ

ಭಾರತೀಯ ಸೈನಿಕರ ದೇಶಪ್ರೇಮವನ್ನು ಪ್ರಶ್ನಿಸಿದ ದೇಶದ್ರೋಹಿಗಳಿವರು.! ಉಂಡ ಮನೆಗೆ ದ್ರೋಹ ಬಗೆದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮಹಾನ್ ವ್ಯಕ್ತಿಗಳು.!

೨೦೧೬ರ ಸೆಪ್ಟೆಂಬರ್ ೨೯ ರಂದು ಭಾರತೀಯ ದೇಶಪ್ರೇಮಿಗಳಿಗೆ ಮರೆಯಲಾಗದ ಒಂದು ದಿನ. ಯಾಕೆಂದರೆ ಭಾರತದ ವಿರುದ್ಧ ಪದೇ ಪದೇ ಕತ್ತಿಮಸೆಯುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಭಾರತ ತನ್ನ ಶಕ್ತಿ ಏನೆಂಬುದನ್ನ ಕಲಿಸಿದ ದಿನ. ಭಾರತದ ಗಡಿ ಪ್ರವೇಶಿಸಿ ವಾಯುನೆಲೆಯ ಮೇಲೆ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಬಲಿಪಡೆದುಕೊಂಡಿದ್ದ ಪಾಕ್ ಉಗ್ರರು ತಮ್ಮ ಅಂತ್ಯ ಕಾಲವನ್ನು ತಾವೇ ಬಳಿಗೆ ಕರೆಸಿಕೊಂಡ ದಿನವದು. ಅದು ಯಾರೂ ಊಹಿಸಿದ ರೀತಿಯಲ್ಲಿ ನಡೆದ ಘಟನೆ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಇಡೀ ಜಗತ್ತು ಭಾರತದತ್ತ ಆಶ್ಚರ್ಯದಿಂದ ನೋಡಿದ ದಿನ. ಭಾರತ ಯಾವುದೇ ರಾಷ್ಟ್ರಕ್ಕೂ ತೊಂದರೆ ಕೊಟ್ಟ ಉದಾಹರಣೆ ಇಲ್ಲ, ಆದರೆ ಭಾರತಕ್ಕೆ ತೊಂದರೆಯಾದಾಗ ಸುಮ್ಮನೆ ಕೂತ ಉದಾಹರಣೆಯೂ ಭಾರತದ ಇತಿಹಾದಲ್ಲೇ ಇಲ್ಲ. ಅದೇ ರೀತಿ ಭಾರತದ ತಾಳ್ಮೆ ಪರೀಕ್ಷಿಸುತ್ತಿದ್ದ ಪಾಕಿಸ್ತಾನದ ಉಗ್ರರನ್ನು ಸುಟ್ಟು ಬೂದಿ ಮಾಡಿದ ದಿನವೇ ಸಪ್ಟೆಂಬರ್ ೨೯.!

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ದಿನದಿಂದಲೇ ಉಗ್ರರನ್ನು ಮಟ್ಟ ಹಾಕುತ್ತಾ ಬಂದವರು, ಆದ್ದರಿಂದಲೇ ಗಡಿಯಲ್ಲಿ ನಿರಂತರ ಉಪಟಳ ನೀಡುತ್ತಿದ್ದ ಉಗ್ರರ ಅಟ್ಟಹಾಸ ಕಡಿಮೆಯಾಗುತ್ತಾ ಬಂದಿರುವುದು. ಆದರೂ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತ ಉಗ್ರ ಅಡಗುತಾಣಗಳನ್ನು ಧ್ವಂಸ ಮಾಡಿತ್ತು. ಭಾರತೀಯ ಸೇನೆ ನಡೆಸಿದ ಈ ದಾಳಿ ಜಗತ್ತಿಗೆ ಭಾರತದ ಸೇನೆಯ ಶಕ್ತಿ ಪ್ರದರ್ಶನವಾಗಿತ್ತು. ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆಯನ್ನು ಜಗತ್ತು ಪ್ರಶಂಸಿಸಿದರೆ ಇತ್ತ ಭಾರತದಲ್ಲಿದ್ದ ದೇಶದ್ರೋಹಿಗಳು ಮಾತ್ರ ಅನುಮಾನ ವ್ಯಕ್ತಪಡಿಸಿ ನಮ್ಮ ಸೈನಿಕರ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದರು. ಇದೊಂದೇ ಘಟನೆ ದೇಶಪ್ರೇಮಿಗಳು ಯಾರು ಮತ್ತು ದೇಶದ್ರೋಹಿಗಳು ಯಾರು ಎಂಬುವುದನ್ನು ಸ್ಪಷ್ಟಗೊಳಿಸಿತ್ತು. ಭಾರತೀಯ ಸೈನಿಕರ ಶಕ್ತಿ ಸಾಮಾರ್ಥ್ಯವನ್ನು ಪ್ರಶ್ನಿಸಿದ ಆ ಮಹಾನ್‌ಭಾವರು ಯಾರೆಂದು ಸ್ವಲ್ಪ ಓದಿ ನೋಡಿ..!

ಸರ್ಜಿಕಲ್ ಸ್ಟ್ರೈಕ್ ಏನು ಭಾರೀ ದೊಡ್ಡ ಸಾಧನೆಯಲ್ಲ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭಾರತೀಯ ಸೈನಿಕರು ಹೋಗಿ ದಾಳಿ ನಡೆಸಿಲ್ಲ. ನಮ್ಮ ಸೈನಿಕರು ದೇಶಕ್ಕಾಗಿ ಹೋರಾಡುತ್ತಿದ್ದಾರೆ, ಆದರೆ ಕೇಂದ್ರ ಸರಕಾರ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದೇ ಸುಳ್ಳು, ಒಂದು ವೇಳೆ ನಡೆದಿದ್ದರೂ ಕೂಡ ಭಾರೀ ಸಾಹಸ ಅಲ್ಲ ಎಂದಿದ್ದರು ಜೆಡಿಎಸ್ ವರಿಷ್ಟ ಎಚ್ ಡಿ ದೇವೇಗೌಡರು.  ದೇವೇಗೌಡರು ರಾಜಕೀಯದಲ್ಲಿ ಹೆಚ್ಚು ಅನುಭವ ಉಳ್ಳವರು, ಆದರೆ ತಮ್ಮ ತೀಟೆ ತೀರಿಸಿಕೊಳ್ಳಲು ತಮ್ಮ ಜೀವವನ್ನೇ ಒತ್ತೆಯಿಟ್ಟು ಎದುರಾಳಿಗಳ ಗುಂಡಿಗೆ ಎದೆಕೊಟ್ಟು ದೇಶ ಕಾಯುವ ಸೈನಿಕರ ಮೇಲೆ ಸಂಶಯ ವ್ಯಕ್ತಪಡಿಸಿದ್ದು ಮಾತ್ರ ಖೇದಕರವಾದ ಸಂಗತಿಯೇ ಸರಿ.!

ಸರ್ಜಿಕಲ್ ಸ್ಟ್ರೈಕ್ ಹಿಂದೆಯೂ ನಡೆದಿತ್ತು. ಉಗ್ರರ ಹುಟ್ಟಡಗಿಸಲು ಇಂಥ ದಾಳಿಗಳು ನಡೆಯುತ್ತಲೇ ಇರುತ್ತದೆ ಎಂದು ಜನರಲ್ ಬಿಕ್ರಂ ಸಿಂಗ್ ಸಹ ಖಚಿತ ಪಡಿಸಿದ್ದರು. ಆದರೆ ಕಾಂಗ್ರೆಸ್‌ನ ಪಿ ಚಿದಂಬರ್ ಅವರು ಸೇನೆಯ ಮಾತಿಗೆ ಸಂಶಯ ವ್ಯಕ್ತಪಡಿಸಿದ್ದಲ್ಲದೆ, ಸೇನಾ ಮುಖ್ಯಸ್ಥರು ಹೇಳುವ ಮಾತು ನಂಬಿಕೆಗೆ ದೂರವಾದದ್ದು, ಆದ್ದರಿಂದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಂಬಿಕೆ ಇಲ್ಲ ಎಂದಿದ್ದರು. ಬಿಜೆಪಿ ರಾಜಕೀಯಕ್ಕಾಗಿ ಸೇನೆಯನ್ನು ಮಾಡುತ್ತಿದೆ ಎಂದು ಬೇಕಾಬಿಟ್ಟಿ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ಗೆ ಕೇವಲ ಬಿಜೆಪಿಯನ್ನು ದೂರುವುದಷ್ಟೇ ತಿಳಿದಿದೆ ವಿನಃ ಮತ್ತೇನೂ ಅಲ್ಲ. ಯಾಕೆಂದರೆ ಭಾರತೀಯ ಸೈನಿಕರ ಮೇಲೆ ನಂಬಿಕೆ ಇಲ್ಲ ಎಂದಾದರೆ ಇವರು ಭಾರತದಲ್ಲಿರುವುದೇ ದೌರ್ಬಾಗ್ಯದ ಸಂಗತಿ.!

ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬುದು ಬಿಜೆಪಿ ನಡೆಸುತ್ತಿರುವ ರಾಜಕೀಯ ಗಾಳ ಅಷ್ಟೇ, ಇಂತಹ ದಾಳಿ ಅನೇಕ ಬಾರಿ ನಡೆದಿದೆ ಎಂಬೂದು ಸತ್ಯಕ್ಕೆ ದೂರವಾಗಿದೆ, ನಮಗೆ ದಾಳಿ ನಡೆಸಿರುವುದಕ್ಕೆ ಸಾಕ್ಷಿ ಬೇಕು ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ಹೇಳಿಕೊಂಡಿದ್ದರು. ಇಂತಹ ಹೇಳಿಕೆಗಳು ಕಾಂಗ್ರೆಸಿಗರಿಂದ ಮಾತ್ರ ಬರಲು ಸಾಧ್ಯ. ಯಾಕೆಂದರೆ ನರೇಂದ್ರ ಮೋದಿಯವರನ್ನು ದ್ವೇಷಿಸುವ ಭರದಲ್ಲಿ ಭಾರತೀಯ ಸೇನೆಯನ್ನೇ ಅವಮಾನಿಸುವುದು ನಮ್ಮ‌ ದುರಾದೃಷ್ಟ ಅಲ್ಲದೆ ಮತ್ತೇನೂ ಅಲ್ಲ. ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು ದೇಶ ಕಾಯುವ ಕೆಲಸ ಮಾಡುತ್ತಾರೆ. ಆದರೆ ಅಂತಹ ಸೈನಿಕರನ್ನೇ ಸಂಶಯದ ದೃಷ್ಟಿಯಿಂದ ಕಂಡರೆ ಮತ್ತಿನ್ಯಾರನ್ನೂ ಈ ಕಾಂಗ್ರೆಸಿಗರು ನಂಬಲು ಸಾಧ್ಯವಿಲ್ಲ.!

ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಕ್ಕೆ ಸಾಕ್ಷಿ ಬೇಕು ಎಂದು ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದ ಇನ್ನೋರ್ವ ಕಾಂಗ್ರೆಸ್ ಮುಖಂಡ ಸಂಜಯ್ ನಿರೂಪಮ್, ನಾನು ಸೈನಿಕರ ಮೇಲೆ ಸಂಶಯ ಪಡುತ್ತಿಲ್ಲ.‌ ದೇಶದ ಹಿತದೃಷ್ಟಿಯಿಂದ ವಿಡಿಯೋ ಬಿಡುಗಡೆ ಮಾಡುವ ಬಗ್ಗೆ ಮಾತನಾಡಿದ್ದೆ ಎಂದು ಹೇಳಿಕೊಂಡಿದ್ದರು. ‌ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದೇ ಆದರೆ ವಿಡಿಯೋ ಸಮೇತ ಸಾಬೀತು ಮಾಡಿ ಎನ್ನುವ ಮೂಲಕ ನಮ್ಮ ಸೈನಿಕರಿಗೆ ಭಾರೀ ಅವಮಾನ ಮಾಡಿದ್ದರು.  ಸಂಜಯ್ ನಿರೂಪಮ್ ಅವರ ಈ ಹೇಳಿಕೆಗೆ ದೇಶಾದ್ಯಂತ ಆಕ್ರೋಶವೂ ವ್ಯಕ್ತವಾಗಿತ್ತು.!

ಭಾರತೀಯ ಸೈನಿಕರು ತಮ್ಮ ಪ್ರಾಣ ಒತ್ತೆಇಟ್ಟು ದೇಶಕ್ಕಾಗಿ ಮಾಡಿದ ಸೇವೆಯನ್ನು ಅನುಮಾನದಿಂದ ನೋಡಿದರೆ ಈ‌ ಕಾಂಗ್ರೆಸಿಗರ ಮನಸ್ಥಿತಿ ಎಷ್ಟರ ಮಟ್ಟಿಗೆ ದೇಶವನ್ನು ವಿರೋಧಿಸುತ್ತದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಧಾನಿ ಮೋದಿ ಅವರ ಮೇಲಿರುವ ದ್ವೇಷವನ್ನು ಸೈನಿಕರ ಮೇಲೆ ತೋರಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ಗೊತ್ತಿದ್ದರೂ ಕೂಡ ತಮ್ಮ ತೀಟೆ ತೀರಿಸಿಕೊಳ್ಳಲು ಬೇಕಾಬಿಟ್ಟಿ ಹೇಳಿಕೆ ನೀಡಿ ತಮಗೆ ತಾವೇ ಪ್ರಚಾರ ಗಿಟ್ಟಿದಿಕೊಳ್ಳುವ ಪ್ರಯತ್ನ ನಡೆಸಿದ್ದರು ಅಷ್ಟೇ..!

source: kannada.oneindia.com

  • ಅರ್ಜುನ್
Editor Postcard Kannada:
Related Post