X

ಉತ್ತರಪ್ರದೇಶದಲ್ಲಿ ಸಂಚಲನ!! ಹಿಂದೂಗಳ ಮಂದಿರ ಕೆಡವಿ ಕಟ್ಟಿದ ಪ್ರಮುಖ ಒಂಭತ್ತು ಮಂದಿರಗಳು ಮತ್ತೆ ಹಿಂದುಗಳ ಸುಪರ್ದಿಗೆ?!

ಅಚ್ಚರಿಯದೇ!! ಶಿಯಾ ಸೆಂಟ್ರಲ್ ಬೋರ್ಡ್ ನ ಅಧ್ಯಕ್ಷರಾಗಿರುವ ವಾಸಿಮ್ ರಿಜ್ವಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (AIMPLB) ಗೆ ಹಿಂದೂ ಮಂದಿರಗಳನ್ನು ನಾಶ ಮಾಡಿ ಕಟ್ಟಿದಂತಹ ಒಂಭತ್ತು ಮಸೀದಿಗಳನ್ನು ಮತ್ತೆ ಮರಳಿ ಹಿಂದೂಗಳಿಗೆ ನೀಡಿಬಿಡಿ ಎಂದು ಪತ್ರ ಬರೆದಿದ್ದಾರೆ! ವಾಸೀನ್ ರಿಜ್ವಿ ಬರೆದಂತಹ ಪತ್ರದಲ್ಲಿ ಹಿಂದೂಗಳ ಮೂಲ ಭೂಮಿಯನ್ನು ಹಿಂದೂಗಳಿಗೇ ಹಿಂತಿರುಗಿಸಿ ಎಂದು ವಿನಂತಿಸಿದ್ದಾರೆ!

ಮೊಘಲರ ಆಳ್ವಿಕೆಯ ಕಾಲದಲ್ಲಿ, ನಾಶಪಡಿಸಲಾಗಿದ್ದ ಪ್ರಮುಖ ದೇವಾಲಯಗಳ ಪಟ್ಟಿ ತಯಾರಿಸಿರುವ ವಾಸೀಮ್ ರಿಜ್ವಿ, ಅಯೋಧ್ಯಾದ ಬಾಬ್ರಿ ಮಸೀದಿ, ಮಥುರಾದ ಕೇಶವ್ ದೇವ್ ದೇವಾಲಯ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ, ಜಾನ್ಪುರ್ ದ ಅಟಲ್ ದೇವ್ ದೇವಸ್ಥಾನ, ಗುಜರಾತ್ ಬಾಟ್ನಾದ ರುದ್ರ ಮಹಾಲಯ ದೇವಸ್ಥಾನ, ಗುಜರಾತಿನ ಅಹ್ಮದಾಬಾದಿನ ಭದ್ರಕಾಳಿ ದೇವಸ್ಥಾನ, ಪಾಂಡುವಾ ಪಶ್ಚಿಮ ಬಂಗಾಳ ದ ಅದಿನಾ ಮಸೀದಿ, ಮಧ್ಯಪ್ರದೇಶ ವಿದಿಶಾದ ವಿಜಯ ದೇವಸ್ಥಾನ, ಮತ್ತು ದೆಹಲಿಯ ಕುವುತುಲ್ ಇಸ್ಲಾಮ್ ಕುತುಬ್ ಮಿನಾರ್ ಮಸೀದಿ ಯನ್ನು ಪಟ್ಟಿ ಒಳಗೊಂಡಿದೆ.

ಅದಲ್ಲದೇ, ಭಾರತದಲ್ಲಿನ ಐತಿಹಾಸಿಕ ಮಸೀದಿಗಳೆಲ್ಲವೂ ಸಹ ಹಿಂದೂ ದೇವಾಲಯಗಳನ್ನು ನಾಶ ಪಡಿಸಿಯೇ ಕಟ್ಟಿದ್ದಾಗಿರುವುದರಿಂದ, ನ್ಯಾಯಯುತವಾಗಿ ಅದನ್ನು ಹಿಂದೂಗಳಿಗೆ ಹಿಂತಿರುಗಿಸಬೇಕಾಗಿದೆ ಎಂದಿರುವ ರಿಜ್ವಿಯ ಹೇಳಿಕೆಯಿಂದ ಇನ್ನೆಷ್ಟು ಜನ ಸುನ್ನಿ ಮುಸಲ್ಮಾನರು ಮುರಕೊಂಡು ಬಿದ್ದು ಫತ್ವಾ ಹಾಕುತ್ತಾರೋ ಗೊತ್ತಿಲ್ಲ ಬಿಡಿ!

“ನಾನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ಒಂಭತ್ತು ಪ್ರಮುಖ ಮಸೀದಿಗಳನ್ನು ಮತ್ತೆ ಹಿಂದೂಗಳಿಗೆ ಹಿಂತಿರುಗಿಸುವಂತೆ ಕೇಳಿದ್ದೇನೆ! ಅದಲ್ಲದೇ, ಹಿಂದೂಗಳ ದೇವಸ್ಥಾನಗಳ ಮೇಲೆ ಕಟ್ಟಿದ ಮಸೀದಿಯು ಹೇಗೆ ನ್ಯಾಯಯುತವಾಗಿ ಕಟ್ಟಿದಂತಹ ಮಸೀದಿಯಾಗುತ್ತದೆ ಎಂಬ ಪೃಶ್ನೆಗೆ ಉತ್ತರಿಸುವಂತೆ ಹೇಳಿದ್ದೇನೆ” ಎಂದಿರುವ ರಿಜ್ವಿ ಯ ವಿರುದ್ಧ ಈಗಾಗಲೇ ಸಾಕಷ್ಟು ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸುನ್ನಿ ಮುಸಲ್ಮಾನರ
ಪ್ರತಿನಿಧಿಯಾಗಿ ನಿಂತಿರುವ ಓವೈಸಿ ಬೊಬ್ಬಿರಿಯಲು ಪ್ರಾರಂಭಿಸಿದ್ದಾನೆ! ಪಾಪ! ಹತ್ತು ನಿಮಿಷ ಪೋಲಿಸರಿಗೆ ಸುಮ್ಮನಿರಲು ಹೇಳಿ, ಹಿಂದೂಗಳನ್ನು ಹೇಳ
ಹೆಸರಿಲ್ಲದಂತೆ ಮಾಡುತ್ತೇನೆ ಎಂದ ಓವೈಸಿ ಈಗೇನಾದರೂ ಹಿಂದುಗಳ ಮಾರಣಹೋಮಕ್ಕೆ ತಯಾರಾದರೆ, ಹಿಂದೂಗಳ ಪರವಾಗಿ ಶಿಯಾಗಳು ನಿಲ್ಲುವ ಪರಿಸ್ಥಿತಿ ಇರುವಾಗ ಅರಚುವುದಲ್ಲದೇ ಇನ್ನೇನು ಮಾಡಿಯಾನು ಹೇಳಿ?!

Speaking to ANI, Rizvi said “I sent have a proposal to All India Muslim Personal Law Board stating nine mosques, as historians claim, were built by Mughal rulers after demolishing Hindu temples. I raised a question that if mosque is built at such a spot and elsewhere too, will it be a legal structure?”

ಬರೋಬ್ಬರಿ ೫೦೦ ವರುಷಗಳ ಕಾಲವಾಳಿದ , ಮೊಘಲರು ಅದೆಷ್ಟೋ ಸಾವಿರ ಹಿಂದೂ ದೇವಾಲಯಗಳನ್ನು ನಾಶ ಪಡಿಸಿದ್ದಾರೆ ಎಂಬುವ ಸತ್ಯವನ್ನು ಸ್ವತಃ ಮೊಘಲರ ಇತಿಹಾಸವೇ ಹೇಳುತ್ತದೆ. ಬಿಡಿ!! ಕೇವಲ ದೇವಸ್ಥಾನಗಳನ್ನು ನಾಶ ಪಡಿಸಿದ್ದಲ್ಲ! ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಿದ ಮೊಘಲ ಆಡಳಿತದ ಅದೆಷ್ಟೋ ಮಸೀದಿಗಳ ಚಪ್ಪಡಿ ಕಲ್ಲುಗಳು ಇವತ್ತಿಗೂ ಕೂಡ ಹಿಂದೂ ದೇವ ದೇವತೆಗಳನ್ನು ಹೊಂದಿದೆ! ಇಡೀ ಭಾರತವನ್ನು ಇಸ್ಲಾಮೀಕರಣ ಮಾಡುವ ಹುಚ್ಚಿಟ್ಟುಕೊಂಡೇ ಬಂದ ಮುಸಲ್ಮಾನರ ಆಕ್ರಮಣದಿಂದ ನಾಶವಷ್ಟೇ ಆಯಿತು ಬಿಟ್ಟರೆ, ಯಾವುದೂ ಸೃಷ್ಟಿಯಾಗಲಿಲ್ಲ! ಇಡೀ ಭಾರತ ಯಾವಾಗ ಇಸ್ಲಾಮೀಕರಣದ ದುರುದ್ದೇಶಕ್ಕೆ ಬಲಿಯಾಗುತ್ತ ಹೋಯಿತೋ, ತನ್ನ ವೈಭೋಗವನ್ನೇ ಶಾಶ್ವತವಾಗಿ ಕಳೆದುಕೊಂಡಿತು!!

ವರದಿಯ ಪ್ರಕಾರ, ಮೊಘಲರ ಆಳ್ವಿಕೆಯಲ್ಲಿ ಪ್ರಮುಖವಾಗಿದ್ದ ೪೦,೦೦೦ ದೇವಾಲಯಗಳನ್ನು ನಾಶ ಪಡಿಸಲಾಗಿದೆ!! ಅದರ, ಮೇಲೆ ಮಸೀದಿಯನ್ನೂ ಕಟ್ಟಲಾಗಿದೆ!! ಪಾಕಿಸ್ಥಾನದ ಇಭ್ಬಾಗವಾದಾಗಲೇ , ಕಾಂಗ್ರೆಸ್ ಮನಸ್ಸು ಮಾಡಿದ್ದಿದ್ದರೆ ಮತ್ತೆ ಅದಷ್ಟೂ ದೇವಾಲಯಗಳನ್ನು ಮತ್ತೆ ಹಿಂದೂಗಳಿಗೆ ಮೃಳಿ ಕೊಡುವಂತಹ ಎಲ್ಲ ಅವಕಾಶಗಳು ಇದ್ದರೂ ಸಹ, ಕಡೆಗಣಿಸಿದ್ದಲ್ಲದೇ, ನಂತರ ಬಂದಂತಹ ಅಷ್ಟೂ ಕಾಂಗ್ರೆಸ್ ನಾಯಕರಿಗೆ ಹಿಂದೂಗಳ ಹೆಣದ ಮೇಲೆ ಸರಾಕರ ನಡೆಸುವ ಬಯಕೆ ಇದ್ದದ್ದೇ ವಿನಃ ನ್ಯಾಯ ಕೊಡಿಸಬೇಕೆಂಬ ಇರಾದೆಯಲ್ಲ! ಇಚ್ಛಾ ಶಕ್ತಿಯಂತೂ ಮೊದಲೇ ಇಲ್ಲ ಬಿಡಿ!!‌

ಇವತ್ತಿಗೂ ಕೂಡ ಯಾವುದೇ ಪಠ್ಯಪುಸ್ತಕದಲ್ಲಿ ಇತಿಹಾಸದ ವಾಸ್ತವವನ್ನು ತಿಳಿಸದೆ, ಕೇವಲ ಮೊಘಲರನ್ನು ಹೊಗಳಿಯೇ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಮಾಡುತ್ತಿರುವ ಹಿಂದೂ ವಿರೋಧಿ ಶಿಕ್ಷಣವೊಂದು ಭಾರತದಲ್ಲಿ ಮಾನಸಿಕವಾಗಿ ಹಿಂದೂಗಳು ಮುಸಲ್ಮಾನರಾಗುವ ಪರಿಸ್ಥಿತಿ ಇದೆಯೆಂದರೆ, ಊಹಿಸಿಕೊಳ್ಳಿ! ಅದೆಷ್ಟು ಸುಳ್ಳುಗಳನ್ನು ತುಂಬಿರಬಹುದು ಇತಿಹಾಸದಲ್ಲಿ?! ಅದೆಷ್ಟು ತೆರನಾಗಿ ಹಿಂದೂ ವಿರೋಧಿ ಕಥೆಗಳನ್ನು ಸೃಷ್ಟಿಸಿರಬಹುದು?! ಹಿಂದೂ ರಾಜರೆಲ್ಲ ಕೊಲೆಗಡುಕರಾಗಿದ್ದರು, ಮೊಘಲ ರಾಜರು ಅದನ್ನು ವಿರೋಧಿಸಿದಾಗ ಯುದ್ಧವಾಗಿ ಮೊಘಲರನ್ನು ಹಿಂದೂ ರಾಜರುಗಳು ಹಿಂಸಿಸಿದರು ಎನ್ನುವ ಮಟ್ಟಕ್ಕೂ ಸಹ ಇಳಿದ ಕಾಂಗ್ರೆಸ್ ಸರಕಾರದ ಆಡಳಿತ ಮತ್ತು ಜಾತ್ಯಾತೀತವಾದಿಗಳು ಹೆಣ್ಣುಮಕ್ಕಳ ಮೇಲೆ ನಡೆದಿದ್ದು ಬಲಾತ್ಕಾರವಲ್ಲ, ಬದಲಿಗೆ ಹೆಂಡತಿಯನ್ನಾಗಿ ಮಾಡಿಕೊಂಡು ಬೇರೆ ಗಂಡಸರಿಂದ ಕಾಪಾಡಿದ್ದು ಎಂದೆನ್ನುವಷ್ಟು ಕುಲಗೆಟ್ಟು ಹೋಗಿರುವ ನಮ್ಮದೇ ಜನಗಳ ಮಧ್ಯೆ ಶಿಯಾ ಬೋರ್ಡ್ ನ ರಿಜ್ವಿ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಪ್ರಶಂಸನೀಯವೇ!! ಶಿಯಾ ಮುಸಲ್ಮಾನರೇ ಸ್ವತಃ ಸುನ್ನಿಗಳ ಕ್ರೌರ್ಯಕ್ಕೆ ತಿರುಗಿ
ಬಿದ್ದಿರುವಾಗ, ಇನ್ನೂ ಕೆಲ ಜಾತ್ಯಾತೀತ ನಾಯಕರು ಮುಸಲ್ಮಾನರ ತುಷ್ಟೀಕರಣ ಮಾಡುತ್ತಿರುವುದು ದುರಂತವಲ್ಲದೇ ಮತ್ತಿನ್ನೇನು?!

ಇಂತಹುದೇ ಕಾರಣಗಳಿಗೆ ಇವತ್ತು ಅದೆಷ್ಟೋ ದಶಕಗಳಾದರೂ ಇನ್ನೂ ಸಹ ಅಯೋಧ್ಯಾ ವಿವಾದವೊಂದು ವಿವಾದವಾಗಿಯೇ ಉಳಿದುಕೊಂಡಿರುವುದಷ್ಟೇ! ಪ್ರತೀ ವರ್ಷವೂ ಸಂಬಂಧಪಟ್ಟ ವಾದ ವಿವಾದಗಳು ನಡೆದರೂ, ನ್ಯಾಯಾಲಯವೂ ಅವರಿವರ ಅಹವಾಲನ್ನು ಕೇಳಿದರೂ, ಉಹೂಂ! ಅದಿನ್ನೂ ಪರಿಹಾರವಾಗಿಲ್ಲ! ಹಿಂದೂಗಳಿಗೆ ಸೇರಿದ ರಾಮಮಂದಿರದ ಜಾಗವನ್ನು ತೆಗೆದುಕೊಳ್ಳುವುದಕ್ಕೆ ಹಿಂದೂಸ್ಥಾನದಲ್ಲಿಯೇ ಅಸಾಧ್ಯವೆನ್ನುವ ಹಾಗಿರುವಾಗ, ಇನ್ನು ಉಳಿದದ್ದು ಸಾಧ್ಯವೇ!? ಅದರಲ್ಲೂ ಸಹ, ಕಾಂಗ್ರೆಸ್ ಯಾವಾಗಲೂ ಸಹ ಇದು ವಿವಾದದ ತಾಣವಾಗಿರಲಿ ಎಂದೇ ಬಯಸಿತ್ತು ಬಿಡಿ! ಅದಕ್ಕೇ,ಇಷ್ಟು ವರ್ಷಗಳೂ ಕೂಡ ಕೇವಲ ಪ್ರಚಾರದ ಭಾಗವಾಗಿ ಮಾತ್ರ ರಾಮ ಮಂದಿರದ ವಿವಾದವೊಂದು ಚರ್ಚೆಯಾಗತೊಡಗಿತೇ ವಿನಃ ಪರಿಹಾರವೆನ್ನುವುದೂ ಸಿಗಲಿಲ್ಲ! ಬಿಡಿ! ಮೋದಿ ಸರಕಾರ ಭಾರತದ ಆಡಳಿತ ಗದ್ದುಗೆ ಏರಿದಾಗ ಯೋಗಿ ಆದಿತ್ಯನಾಥ್, ಡಾ. ಸುಬ್ರಹ್ಮಣಿಯನ್ ಸ್ವಾಮಿ ಮತ್ತು, ಶ್ರೀ ರವಿ ಶಂಕರ್ ಈ ವಿವಾದಕ್ಕೆ ಅಂತ್ಯ ಹಾಡಲು ಪ್ರಯತ್ನಿಸುತ್ತಿದ್ದಾರಷ್ಟೇ! ಅದರಲ್ಲೂ, ಈ ತಿಂಗಳಿನಿಂದ ಮತ್ತೆ ಪ್ರಾರಂಭವಾಗಲಿರುವ ಅಯೋಧ್ಯಾ ರಾಮಮಂದಿರದ ವಾದ ಪ್ರತಿವಾದಗಳನ್ನು ಆಲಿಸಲಿರುವ ನ್ಯಾಯಾಲಯ ಬಹುಷಃ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ತೀರ್ಪು ನೀಡಬಹುದಾದ ಎಲ್ಲ ಸಾಧ್ಯತೆಗಳಿವೆ!

ದುರಂತವೇನೆಂದರೆ, ಎರಡು ತಿಂಗಳ ಹಿಂದಷ್ಟೇ, ಇನ್ನೇನು ರಾಮ ಮಂದಿರದ ತೀರ್ಪು ನೀಡುತ್ತದೆ ನ್ಯಾಯಾಲಯ ಎಂದಾಗ, ಮತ್ತಿದೇ ಎಐಎಮ್ ಐ ಎಮ್ ಮತ್ತು ಕಾಂಗ್ರೆಸ್ ನಾಯಕರು ತೀರ್ಪನ್ನು ೨೦೧೯ ಕ್ಕೆ ನೀಡಲಾಗುವುದಿಲ್ಲವೇ ಎಂದು ಕೇಳಿದ್ದರು! ಅಂದರೆ, ಕೇಂದ್ರದ ಭವಿಷ್ಯವನ್ನು ನಿರ್ಧರಿಸುವ ಮತ್ತದೇ ಚುನಾವಣೆಗೆ ದಾಳವಾಗಿ ಉಪಯೋಗಿಸಲು ಮಾತ್ರವೇ ಬೇಕಿದ್ದದ್ದು ರಾಮ ಮಂದಿರ ಮಾತ್ರವೇ ಹೊರತು ಹಿಂದೂಗಳ ಧಾರ್ಮಿಕ ಭಾವನೆಗೆ
ಯಾವುದೇ ಬೆಲೆಯನ್ನೂ ತೆರದ ಕಾಂಗ್ರೆಸ್ ಗೂ ಸಹ ಶಿಯಾ ಬೋರ್ಡ್ ನ ನಿರ್ಧಾರ ಧೃತಿಗೆಡಿಸಿದೆ!!

Rizvi’s remarks supporting Ram Temple and 9 other temples has irked the Muslim board and cleric Mufti Mukarram said the proposal is against the Indian Constitution. “A temple should remain a temple and a mosque should remain a mosque,” he stated.

ಇವತ್ತೂ, ರಿಜ್ವಿ ಹೇಳುತ್ತಿರುವುದು ಅದನ್ನೇ! ಮಸೀದಿ ಮಸೀದಿಯಾಗುಳಿಯಬೇಕು! ದೇವಸ್ಥಾನ ದೇವಸ್ಥಾನವಾಗಿಯೇ ಉಳಿಯಬೇಕು ಎಂದು! ದೇವಸ್ಥಾನಗಳ ಮೇಲೆ ಮಸೀದಿಯನ್ನು ಕಟ್ಟಿ, ನಂತರ ಅದನ್ನ ನಮ್ಮ ಆಸ್ತಿ ಎಂದು ಮುಸಲ್ಮಾನರು ಹೇಳಿದರೆ ಅದು ಸಂವಿಧಾನ ಬದ್ಧವಲ್ಲ ಎಂದು ಹೇಳಿರುವ ರಿಜ್ವಿ, ಪ್ರಮುಖ ದೇವಾಲಯಗಳನ್ನು ಹಿಂದೂಗಳಿಗೆ ವಾಪಾಸು ಬಿಟ್ಟುಕೊಡಿ, ವಿವಾದ ತಣ್ಣಗಾಗುತ್ತದೆ ಎಂದು ಹೇಳಿದ್ದಾರೆ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post