X

ಮತ್ತೊಮ್ಮೆ ಭಾರತೀಯರ ರಕ್ಷಣೆಗೆ ಧಾವಿಸಿದ ಸುಷ್ಮಾ ಸ್ವರಾಜ್!! ಚೀನಾದಲ್ಲಿ ಸಿಲುಕಿದ್ದ 20 ಭಾರತೀಯರೂ ಸೇಫ್!!

ದೇಶದ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಹೊರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಸದಾ ಸಿದ್ಧರಾಗಿರುತ್ತಾರೆ!! ಯಾವುದೇ ಸಮಯದಲ್ಲಾದ್ರೂ ಭಾರತೀಯರ ಅಳಲು ಆಲಿಸಿ ಸಹಾಯ ಮಾಡುವ ಕರುಣಾ ಹೃದಯಿಯಾಗಿ ಖ್ಯಾತಿ ಪಡೆದಿದ್ದಾರೆ!! ಅದೆಷ್ಟೋ ಜೀವಗಳನ್ನು ಕಾಪಾಡಿದ ಸುಷ್ಮಾಜೀ ಇದೀಗ ಮತ್ತೊಮ್ಮೆ ವಿದೇಶದಲ್ಲಿರುವ ಭಾರತೀಯರನ್ನು ರಕ್ಷಿಸಿ ಪ್ರಶಂಸೆಗೆ ಒಳಗಾಗಿದ್ದಾರೆ!!

ಚೀನಾದಲ್ಲಿ ಸಿಲುಕಿದ್ದ 20 ಭಾರತೀಯರನ್ನು ರಕ್ಷಿಸಿದ ಸುಷ್ಮಾ ಜೀ!!

ಗ್ರೂಪ್ ವೀಸಾವನ್ನು ಕಳೆದುಕೊಂಡು ಚೀನಾದಲ್ಲಿ ತೊಂದರೆಗೆ ಸಿಲುಕಿಕೊಂಡಿರುವ 20 ಮಂದಿ ಭಾರತೀಯರ ನೆರವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ!! ಕೌಟಿಲ್ಯ ಬನ್ಸಾಲ್ ಎಂಬುವವರು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ!! ಆ ಕ್ಷಣದಲ್ಲಿಯೇ ಸುಷ್ಮಾ ಜೀ ಭಾರತೀಯರ ರಕ್ಷಣೆಗೆ ಮುಂದಾಗಿದ್ದಾರೆ!! 20 ಮಂದಿಯ ತಂಡದಲ್ಲಿ 11 ತಿಂಗಳ ಮಗು ಇದ್ದು ಹೀಗಾಗಿ ತುರ್ತು ಸಹಾಯದ ಅವಶ್ಯಕತೆ ಇದೆ ಎಂದು ಬೇಡಿಕೊಂಡಿದ್ದಾರೆ!! ತಕ್ಷಣವೇ ಸುಷ್ಮಾಜೀ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿ ತಂಡಕ್ಕೆ ಸಹಾಯ ಮಾಡಿದ್ದಾರೆ!! 11 ವರ್ಷದ ಮಗನ ವೀಸಾ ಡ್ಯಾಮೇಕ್ ಆದ ಪರಿಣಾಮ ಟೊರೆಂಟೋದಲ್ಲಿ ಸಂಕಷ್ಟಕ್ಕೀಡಾದ ತಂದೆಯ ಸಹಾಯಕ್ಕೂ ಇವರು ಧಾವಿಸಿ ಅವರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ!! ಭಾರತೀಯರೂ ಎಲ್ಲೇ ಸಂಕಷ್ಟಕ್ಕೀಡಾದರೂ ಸುಷ್ಮಾ ಸ್ವರಾಜ್ ಅವರು ಧಾವಿಸಿ ಅವರನ್ನು ರಕ್ಷಣೆ ಮಾಡುತ್ತಾರೆ!!

ಇದೇ ಮೊದಲ್ಲದೆ ಹೈದರ್ಬಾದ್‍ನ ಮಹಿಳೆಯನ್ನು ಸೌದಿ ಅರೇಬಿಯಾಕ್ಕೆ ಸಾಗಿಸುವ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿಸಿ ಭಾರತಕ್ಕೆ ಮರಳಿ ಕರೆತರಲಾಗಿತ್ತು!! ಅಝರ್ ಎಂಬ ಮಧ್ಯವರ್ತಿ ಉದ್ಯೋಗದ ಜೊತೆಗೆ ಒಳ್ಳೆಯ ಸಂಬಳ ನೀಡುತ್ತೇನೆ ಎಂದು ಸುಳ್ಳು ಭರವಸೆಯನ್ನು ನೀಡಿ ಆಕೆಯನ್ನು ಸೌದಿಗೆ ಕರೆದೊಯ್ಯುತ್ತಿದ್ದ !! ದಮ್ಮಾದ್ ತಲುಪಿದ ನಂತರ ಮಹಿಳೆಯನ್ನು ಬಲವಂತಾಗಿ ಮನೆಗೆಲಸದವಳನ್ನಾಗಿ ಮಾಡಲಾಯಿತು!! ಒಳ್ಳೆಯ ಕೆಲಸ ಹಾಗೂ ಸಂಬಳ ನೀಡುವುದಾಗಿ ಹೇಳಿ ಕರೆದೊಯ್ದ ನಂತರ ಅಲ್ಲಿ ಮನೆಗೆಲಸ ಮಾಡಲು ಒತ್ತಾಯಿಸಿದ್ದು ತದನಂತರ ಮೂರು ಮನೆಗಳಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಿದ್ದ!! ಇದಷ್ಟೇ ಅಲ್ಲದೆ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಆಕೆಯನ್ನು ತುಂಬ ಕೆಟ್ಟದಾಗಿ ನಡೆಸಿಕೊಳ್ಳಲಾಗಿದ್ದು ಮಹಿಳೆ ತನ್ನ ಕುಟುಂಬಕ್ಕೆ ಪತ್ರ ಬರೆದು ಅಲ್ಲಿನ ವಾಸ್ತವಿಕತೆಯ ಬಗ್ಗೆ ವಿವರಿಸಿದ್ದಳು!!

ಇದರ ಪ್ರತಿಯಾಗಿ ಕುಟುಂಬಸ್ಥರು ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಭಾರತೀಯ ದೂತವಾಸಕ್ಕೆ ಪತ್ರ ಬರೆದು ಅವರ ಸಹಾಯ ಕೇಳಿದ್ದರು!! ವಿಷಯ ತಿಳಿಯುತ್ತಿದ್ದಂತೆಯೇ ಸುಷ್ಮಾ ಸ್ವರಾಜ್ ಆಕೆಯನ್ನು ರಕ್ಷಣೆಯನ್ನು ಮಾಡಲು ಧಾವಿದ್ದು ಎಲ್ಲರಿಂದಲೂ ಪ್ರಶಂಸೆಗೊಳಪಟ್ಟಿದ್ದರು!!

ಇಂತಹ ಅನೇಕ ಉದಾಹರಣೆಗಳು ಇವೆ!! ಭಾರತೀಯರ ರಕ್ಷಣೆಗೆ ಕೂಡಲೇ ಸ್ಪಂದಿಸುವ ಮೋದಿ ಸರಕಾರದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅದೆಷ್ಟೋ ಭಾರತೀಯ ಪ್ರಜೆಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ..! ಆಫ್ರಿಕಾದಲ್ಲಿ ಅಪಾಯದಲ್ಲಿದ್ದ ಭಾರತೀಯರನ್ನು ರಕ್ಷಿಸುವ ಮೂಲಕ ದೇಶದ ಪ್ರಜೆಗಳ ಸಹಾಯಕ್ಕೆ ಧಾವಿಸಿದ್ದರು.! ಪಶ್ಚಿಮ ಆಫ್ರಿಕಾದ ಬೆನಿನ್ ಕರಾವಳಿಯಿಂದ ಫೆಬ್ರವರಿ 1ರಂದು ಒಂದು ಹಡಗು ನಾಪತ್ತೆಯಾಗಿತ್ತು. ಈ ಹಡಗಿನಲ್ಲಿ ಸುಮಾರು 22 ಭಾರತೀಯರು ಇದ್ದರು. 13,500 ಟನ್ ಗ್ಯಾಸೋಲಿನ್ ಹೊಂದಿದ್ದ ಆಫ್ರಿಕಾದ ಹಡಗನ್ನು ಅಪಹರಣಕಾರರು ಬಂಧಿಸಿದ್ದರು. ಈ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವ ಹೊಂದಿತ್ತು. ಮೊದಲು ಹಡಗು ಅಪಹರಣವಾದ ಬಗ್ಗೆ ಸಂಶಯವಿದ್ದರೂ, ಕೊನೆಗೆ ಹಡಗು ಅಪಹರಣವಾದ ವಿಚಾರ ದೃಢಪಟ್ಟಿತ್ತು. ಹಡಗನ್ನು ಮತ್ತು ಹಡಗಿನಲ್ಲಿದ್ದ ಜನರನ್ನು ಪತ್ತೆಹಚ್ಚುವಂತೆ ಹಡಗು ಮಾಲೀಕರು ಮುಂಬೈನ ನೌಕಾ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆಗೂ ದೂರು ನೀಡಿದ್ದು ಕೂಡಲೇ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಶೋಧ ಕಾರ್ಯ ಆರಂಭಿಸಿತ್ತು.

ಕಳೆದ ಬಾರಿ ಯೆಮನ್ ದೇಶದಲ್ಲಿ ಉಗ್ರರ ದಾಳಿ ನಡೆದಾಗ ಅಲ್ಲಿ ಸಿಲುಕಿಕೊಂಡಂತಹ ಭಾರತೀಯ ಮೂಲದ ನರ್ಸ್ ಗಳನ್ನು ಸುಷ್ಮಾ ಸ್ವರಾಜ್ ರವರ ನಿರ್ದೇಶನದಂತೆ ರಕ್ಷಿಸಲಾಗಿತ್ತು. ಯಾವುದೇ ದೇಶದಲ್ಲಿ ವಾಸವಿರುವ ಭಾರತೀಯರಿಗೆ ತೊಂದರೆಯಾದಾಗ ತಕ್ಷಣ ಸ್ಪಂದಿಸುವ ಸುಷ್ಮಾ ಸ್ವರಾಜ್ ತಮ್ಮ ಕರ್ತವ್ಯದಲ್ಲಿ ಸಮರ್ಥವಾಗಿ ನೆರವಾಗುತ್ತಿದ್ದಾರೆ..! ಅದೇ ರೀತಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಸಂಕಷ್ಟದಲ್ಲಿದ್ದ ಇಪ್ಪತ್ತ ಎರಡು ಭಾರತೀಯರ ರಕ್ಷಣೆಯಲ್ಲೂ ಸುಷ್ಮಾ ಸ್ವರಾಜ್ ಮಹತ್ತರವಾದ ಪಾತ್ರ ವಹಿಸಿದ್ದರು. ಭಾರತೀಯರ ಪಾಲಿಗೆ ಮಾತ್ರವಲ್ಲದೆ ವಿದೇಶಿಗರ ನೆರವಿಗೂ ಸ್ಪಂಧಿಸುವ ಸುಷ್ಮಾ ಕಾರ್ಯ ವೈಖರಿಯನ್ನು ಅನೇಕ ದೇಶದ ಮುಖಂಡರೂ ಶ್ಲಾಘಿಸಿದ್ದರು..!

ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶಿಗರೂ ಕೂಡ ತಮ್ಮ ಸಹಾಯಕ್ಕೆ ಸುಷ್ಮಾ ಸ್ವರಾಜ್ ರನ್ನು ಮನವಿ ಮಾಡುತ್ತಿದ್ದು ಎಲ್ಲರ ಪಾಲಿಗೂ ಧಾವಿಸುತ್ತಿದ್ದಾರೆ. ಭಾರತ ಪಾಕಿಸ್ತಾನದ ಸಂಬಂಧ ಹದಗೆಟ್ಟಿದ್ದರೂ ,ನೆರವಿಗಾಗಿ ಕೋರಿ ಅನೇಕ ಪಾಕಿಸ್ತಾನಿಯರು ಸುಷ್ಮಾಗೆ ಟ್ವಿಟ್ ಮಾಡುತ್ತಾರೆ!!

ದೇಶದ ಜನರ ರಕ್ಷಣೆ ಯಾವ ರೀತಿ ಮೋದಿ ಸರಕಾರ ಮಾಡುತ್ತಿದೆಯೋ ಅದೇ ರೀತಿ ವಿದೇಶದಲ್ಲಿರುವ ನಮ್ಮ ಭಾರತೀಯರ ರಕ್ಷಣೆ ಕೂಡಾ ಅಷ್ಟೇ ಕಾಳಜಿಯಿಂದ ಮಾಡುತ್ತಿದೆ!! ಮೋದಿಜೀ ಯಾವಾಗ ಅಧಿಕಾರ ಗದ್ದುಗೆಯನ್ನು ಏರಿದರೋ ಅಂದಿನಿಂದ ಪ್ರತೀಯೊಂದು ಕ್ಷೇತ್ರಕ್ಕೂ ಯಾರು ಅರ್ಹರು ಎಂಬುವುದನ್ನು ಮೋದಿಜೀ ಆಯ್ಕೆ ಮಾಡಿದ್ದು ಅದೆಲ್ಲಾ ಸಫಲತೆಯನ್ನು ಕಾಣುತ್ತಿದೆ!!

source :news13.in

– ಪವಿತ್ರ

Editor Postcard Kannada:
Related Post