X

5.6 ಲಕ್ಷ ಭಾರತೀಯ ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು ನಿಜ ಎಂದು ಒಪ್ಪಿಕೊಂಡ ಜುಕರ್‌ಬರ್ಗ್‌!! ಮೋದಿ ವಿರೋಧಿಗಳಿಗೆ ನಡುಕ ಯಾಕೆ??

ಬ್ಯಾಲಟ್ ಪೇಪರಿಗಿಂತ, ಇವಿಎಂಗಿಂತಲೂ ಚುನಾವಣಾ ಪ್ರಚಾರಗಳಲ್ಲಿ ರಾಜಕಾರಣಿಗಳು ಮಾಡುವ ಹರಿತವಾದ ಮಾತುಗಳಿಗಿಂತ ಸೋಷಿಯಲ್ ಮೀಡಿಯಾದಲ್ಲಿ ಚುನಾವಣೆಯ ಯುದ್ಧ ನಡೆಯುತ್ತಿದೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿಯೇ ಚುನಾವಣೆಯನ್ನು ಗೆಲ್ಲಲಾಗುತ್ತಿದೆ ಎಂಬಿತ್ಯಾದಿ ಕುತಂತ್ರಗಳ ಹಿಂದೆ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಕೈವಾಡವಿದೆ ಎನ್ನುವ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಫೇಸ್‍ಬುಕ್ ಮಾಹಿತಿ ಸೋರಿಕೆ ಹಗರಣ ನಡೆದಿರುವುದು ಸತ್ಯ ಎನ್ನುವುದು ಇದೀಗ ಬಯಲಾಗಿದೆ!!

ಈಗಾಗಲೇ ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ಯಾವುದೇ ಸಂಪರ್ಕ ಇಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಾ ಬಂದಿದ್ದರೂ ಕೂಡ ಕೇಂಬ್ರಿಡ್ಜ್ ಅನಾಲಿಟಿಕಾದ ಸಿಇಒ ಆಗಿದ್ದ ಅಲೆಕ್ಸಾಂಡರ್ ನಿಕ್ಸನ್ ಅವರು ಕಚೇರಿಯಲ್ಲಿ ಕಾಂಗ್ರೆಸ್‍ನ ಚಿಹ್ನೆ ಇರುವ ಫೋಟೋ ಒಂದನ್ನು ಬಹಿರಂಗ ಪಡಿಸಿದ್ದು ಗೊತ್ತೇ ಇದೆ!! ಅಷ್ಟು ಮಾತ್ರವಲ್ಲದೇ ಅದರಲ್ಲಿ ಕಾಂಗ್ರೆಸ್ ಎಂದು ಇಂಗ್ಲಿಷ್‍ನಲ್ಲಿ ದೊಡ್ಡ ಅಕ್ಷರದಲ್ಲಿ ಬರೆಯಲಾಗಿದ್ದು, ಇದುವರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‍ರ ಚುನಾವಣೆಯಲ್ಲಿ ಮಾತ್ರ ಭಾಗಿ ಎಂದು ಹೇಳಿಕೊಂಡಿದ್ದ ಸಂಸ್ಥೆಯ ದ್ವಂದ್ವತೆಯೂ ಬಯಲಾಗಿತ್ತು!!!

ಆದರೆ ಇದೀಗ ಫೇಸ್‍ಬುಕ್ ಮಾಹಿತಿ ಸೋರಿಕೆ ಹಗರಣದ ಕುರಿತು ಕೊನೆಗೂ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‍ಬರ್ಗ್ ಅಧಿಕೃತ ಅಂಕಿಅಂಶ ಒದಗಿಸಿದ್ದು, ಜಗತ್ತಿನಾದ್ಯಂತ ಒಟ್ಟಾರೆ 8.7 ಕೋಟಿ ಜನರ ಮಾಹಿತಿ ಸೋರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ. ಇದರಲ್ಲಿ ಭಾರತದ 5.6 ಲಕ್ಷ ಫೇಸ್‍ಬುಕ್ ಬಳಕೆದಾರರ ಮಾಹಿತಿಯೂ ಸೇರಿದೆ ಎಂದು ಫೇಸ್‍ಬುಕ್ ಕಂಪನಿಯ ಭಾರತದ ವಕ್ತಾರರು ಹೇಳಿದ್ದಾರೆ.

ಅಮೆರಿಕ ಚುನಾವಣೆ ಗಳಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊಂದಿರುವ ಕೇಂಬ್ರಿಡ್ಜ್ ಅನಾಲಿಟಿಕಾಗೆ ಭಾರತದಲ್ಲಿ ಕಾಂಗ್ರೆಸ್ ಗ್ರಾಹಕನಾಗಿತ್ತು ಎಂಬುದು ಈಗಾಗಲೇ ಬಹಿರಂಗ ಗೊಂಡಿರುವ ಬೆನ್ನಲ್ಲೇ, ಭಾರತದಲ್ಲಿ ಸಂಸ್ಥೆ ಕೆಲಸ ಮಾಡಿರುವ ಚುನಾವಣೆಗಳ ಬಗ್ಗೆ ಸಮಗ್ರ ವಿವರಗಳನ್ನು ಸಂಸ್ಥೆಯ ಮಾಜಿ ಕೆಲಸಗಾರ ಕ್ರಿಸ್ಟೋಫರ್ ವೈಲೀ ಹೇಳಿದ್ದಾರೆ. ಸಂಸ್ಥೆ ಕೆಲಸ ಮಾಡಿದ ಎಲ್ಲ ಚುನಾವಣೆಗಳ ವಿವರವನ್ನು ಟ್ವಿಟರ್ ನಲ್ಲಿ ಬಹಿರಂಗ ಗೊಳಿಸಿರುವ ವೈಲೀ, ಭಾರತದಲ್ಲಿ ಎಸ್ ಸಿ ಎಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದರು!! ಅಲ್ಲದೇ ಕಾಂಗ್ರೆಸ್ ಚುನಾವಣೆ ಗೆಲ್ಲಬೇಕು ಎಂದು ಮಾಡುತ್ತಿರುವ ಕುತಂತ್ರದ ಆಟಗಳು ಒಂದೊಂದಾಗಿಯೇ ತೆರೆಮೇಲೆ ಬೀಳುತ್ತಿದ್ದು, ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಮಾಹಿತಿಯೂ ಈಗಾಲೇ ಬಿಡುಗಡೆಯಾಗಿದೆ!!

ಇದೀಗ ಭಾರತದ ಸುಮಾರು 5.6 ಲಕ್ಷ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಕದ್ದಿದೆ ಎಂಬುದಾಗಿ ಫೇಸ್ ಬುಕ್ ಸಂಸ್ಥೆ ಹೇಳಿದೆ. ಅಲ್ಲದೇ ಭಾರತ ಸರ್ಕಾರ ಕಳುಹಿಸಿರುವ ನೋಟಿಸ್ ಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್, “ದಿಸ್ ಇಸ್ ಮೈಜಿಟಲ್ ಲೈಫ್” ಎಂಬ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡವರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದಿದೆ.

ಭಾರತದಲ್ಲಿ 335 ಫೇಸ್‍ಬುಕ್ ಬಳಕೆದಾರರು ಮಾಹಿತಿ ಸೋರಿಕೆಗೆ ಕಾರಣವಾದ ಆ್ಯಪ್ ಅನ್ನು ಇನ್‍ಸ್ಟಾಲ್ ಮಾಡಿಕೊಂಡಿದ್ದು, ಅವರ ಮಾಹಿತಿ ನೇರವಾಗಿ ಸೋರಿಕೆಯಾಗಿದೆ. ಇನ್ನು ಇವರಿಗೆ 5,62,120 ಸ್ನೇಹಿತರಿದ್ದು, ಅವರ ಮಾಹಿತಿಯೂ ಸೋರಿಕೆಯಾಗಿರಬಹುದು. ಅಲ್ಲಿಗೆ ಭಾರತದಲ್ಲಿ ಒಟ್ಟಾರೆ 5,62,455 ಜನರು ಮಾಹಿತಿ ಸೋರಿಕೆ ಹಗರಣದ ಸಂತ್ರಸ್ತರಾಗಿರುವ ಸಾಧ್ಯತೆಯಿದೆ ಎಂದು ಭಾರತದ ಫೇಸ್‍ಬುಕ್ ವಕ್ತಾರರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಭಾರತೀಯ ಬಳಕೆದಾರರೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲ ಫೇಸ್‍ಬುಕ್ ಬಳಕೆದಾರರಲ್ಲಿ ಯಾರ್ಯಾರ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿಯಿದೆಯೋ ಅವರೆಲ್ಲರ ಖಾತೆಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಅಷ್ಟೇ ಅಲ್ಲದೇ, ಇದೀಗ ಫೇಸ್ ಬುಕ್‍ನ ಮೆಸೆಂಜರ್ ಆ್ಯಪ್‍ನಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ನಡೆಸುವ ಸಂಭಾಷಣೆಯನ್ನು ಕೂಡ ಫೇಸ್‍ಬುಕ್ ಕಂಪನಿ ಸ್ಕ್ಯಾನ್ ಮಾಡುತ್ತದೆ ಎಂಬ ಸಂಗತಿಯು ಹೊರಬಿದ್ದಿದೆ. ಇದು ಇತ್ತೀಚೆಗಷ್ಟೇ ಮಾಹಿತಿ ಸೋರಿಕೆ ಹಗರಣದಿಂದ ವಿವಾದಕ್ಕೀಡಾಗಿರುವ ಕಂಪನಿಯ ಬಗ್ಗೆ ಇನ್ನಷ್ಟು ಜನಾಕ್ರೋಶ ಹುಟ್ಟಿಸುವ ಸಾಧ್ಯತೆಯಿದೆ. ಇನ್ನು, ಕೇಂಬ್ರಿಡ್ಜ್ ವಿವಿಯ ಮನಃಶಾಸ್ತ್ರ ಪೆÇ್ರಫೆಸರ್ ಅಲೆಕ್ಸಾಂಡರ್ ಕೊಗನ್ ಮಾನಸಿಕ ಸ್ಥಿತಿಯ ಅಧ್ಯಯನಕ್ಕೆ ಫೇಸ್ ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡಿದ್ದರು. ನಂತರ ಆಪ್ ಮೂಲಕ ಇತರ ಬಳಕೆದಾರರ ಮಾಹಿತಿಯನ್ನು ಕದಿಯಲಾಗಿತ್ತು. ಆದರೆ ಈ ಆಪ್ ಅನ್ನು ಫೇಸ್ ಬುಕ್ 2015ರ ಡಿಸೆಂಬರ್ ನಲ್ಲಿ ರದ್ದುಪಡಿಸಿತ್ತು.

ಇವಿಷ್ಟೇ ಅಲ್ಲದೇ, ದತ್ತಾಂಶ ಸೋರಿಕೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಫೇಸ್ ಬುಕ್‍ಗೆ ನೋಟಿಸ್ ಜಾರಿ ಮಾಡಿ ವಿವರ ಕೇಳಿತ್ತು. ವಿವರ ಸಲ್ಲಿಸಲು ಫೇಸ್ ಬುಕ್ ಗೆ ಏಪ್ರಿಲ್ 7 ಕೊನೆಯ ದಿನವಾಗಿದ್ದು, ಗುರುವಾರ ಫೇಸ್ ಬುಕ್ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡಿದೆ. ಅದರಲ್ಲಿ ಆಪ್ ಇನ್ ಸ್ಟಾಲ್ ಮಾಡಿಕೊಂಡ ಭಾರತೀಯರು 335 ಮತ್ತು ಒಟ್ಟಾರೆಯಾಗಿ 5,62,000 ಜನರ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿತ್ತು.

ಇನ್ನು, ಫೇಸ್ ಬುಕ್‍ನ ಮೆಸೆಂಜರ್ ಆ್ಯಪ್‍ನಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ನಡೆಸುವ ಸಂಭಾಷಣೆಯನ್ನು ಕೂಡ ಫೇಸ್ ಬುಕ್ ಕಂಪನಿ ಸ್ಕ್ಯಾನ್ ಮಾಡುತ್ತದೆ ಎಂಬ ಸಂಗತಿ ಹೊರಬಿದ್ದಿದೆ. ಇದು ಇತ್ತೀಚೆಗಷ್ಟೇ ಮಾಹಿತಿ ಸೋರಿಕೆ ಹಗರಣದಿಂದ ವಿವಾದಕ್ಕೀಡಾಗಿರುವ ಕಂಪನಿಯ ಬಗ್ಗೆ ಇನ್ನಷ್ಟು ಜನಾಕ್ರೋಶ ಹುಟ್ಟಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ
ಅಮೆರಿಕದಲ್ಲಿ 3.7 ಕೋಟಿ ಜನರ ದತ್ತಾಂಶ ಸೋರಿಕೆಯಾಗಿದೆ ಎಂದು ಫೇಸ್ ಬುಕ್ ಹೇಳಿಕೊಂಡಿದೆ. ಹಾಗಾಗಿ ಫಿಲಿಪ್ಪೀನ್ಸ್ ನ 1.75 ಕೋಟಿ ಬಳಕೆದಾರರು, ಇಂಡೋನೇಷ್ಯಾದ 1.1 ಕೋಟಿ ಜನರು, ವಿಯೆಟ್ನಾಂನ 4,27,000 ಮಂದಿಯ ದತ್ತಾಂಶ ಇದೀಗ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ!!

ಮೂಲ:
http://indianexpress.com/article/technology/social/facebook-cambridge-analytica-scandal-over-5-6-lakh-people-impacted-in-india-5124543/

http://news13.in/archives/100206

 

– ಅಲೋಖಾ

Editor Postcard Kannada:
Related Post