X

ಸರ್ವ ಕ್ಷೇತ್ರವನ್ನೂ ಒಗ್ಗೂಡಿಸಿದ ರಾಜ್ಯ ಬಜೆಟ್: ಕಾಂಗ್ರೆಸ್‌ನಿಂದ ಜನರ ಕಿವಿಗೆ ಹೂ!

ಮೊನ್ನೆ ಮೊನ್ನೆಯಷ್ಟೇ ಜನಸ್ನೇಹಿ ಬಜೆಟ್ ಮಂಡಿಸುವ ಮೂಲಕ ದೇಶವಾಸಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿತ್ತು. ಇಂದು ರಾಜ್ಯದ ಜನರಿಗೆ ಅನುಕೂಲವಾಗುವಂತೆ ಜನನುರಾಗಿ ಬಜೆಟ್ ಅನ್ನು ಮಂಡಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಹೋಗುತಿದೆ ಹಳೆ ಕಾಲ, ಬರುತಿದೆ ಹೊಸ ಕಾಲ ಎನ್ನುತ್ತಲೇ ಬಜೆಟ್ ಮಂಡನೆ ಆರಂಭಿಸಿದ ಸಿ ಎಂ ಬೊಮ್ಮಾಯಿ, ರೈತಸ್ನೇಹಿ ಗ್ರೀನ್ ಬಜೆಟ್ ಮೂಲಕ ಸರ್ಕಾರ ರೈತರ ಜೊತೆಗಿದೆ ಎನ್ನುವುದನ್ನು ತೋರಿಸಿ ಕೊಟ್ಟಿದೆ. ಶೂನ್ಯ ಬಡ್ಡಿ ದರದಲ್ಲಿ ರಾಜ್ಯದ ರೈತರಿಗೆ ಐದು ಲಕ್ಷ ರೂ. ಸಾಲ ಸೌಲಭ್ಯ, ಮೂವತ್ತು ಲಕ್ಷಕ್ಕಿಂತ ಹೆಚ್ಚು ರೈತರಿಗೆ ಇಪ್ಪತ್ತೈದು ಕೋಟಿ ರೂ. ಸಾಲ ವಿತರಣೆಗೆ ಕ್ರಮ, ರೈತಸಿರಿ, ಭೂ ಸಿರಿ ಯೋಜನೆಯಡಿ ಪ್ರೋತ್ಸಾಹ ಧನ ಘೋಷಣೆ, ಹದಿನಾಲ್ಕು ಲಕ್ಷಕ್ಕೂ ಅಧಿಕ ರೈತರ ಖಾತೆಗೆ ಪರಿಹಾರ ಧನ ನೀಡುವುದಾಗಿ ಈ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿಕೊಂಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವ ಸರ್ಕಾರ, ಬಜೆಟ್‌ನಲ್ಲಿ ಹಲವು ವಿದ್ಯಾರ್ಥಿಸ್ನೇಹಿ ಯೋಜನೆಗಳನ್ನು ಮೀಸಲಿರಿಸಿದೆ. ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಉಚಿತ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೈಟೆಕ್ ಕ್ರಾಂತಿ ಮಾಡಲು ಮುಂದಾಗಿದ್ದು, ಗ್ರಂಥಾಲಯ ರೀಡಿಂಗ್ ಕಾರ್ನರ್ ಸ್ಥಾಪನೆಗೆ ಮುಂದಾಗಿದೆ.

೨೯೦ ಸಂಚಾರಿ ಪಶು ಚಿಕಿತ್ಸಾಲಯ ಆರಂಭ, ಮೀನುಗಾರಿಕೆಗೆ ಉತ್ತೇಜನ, ಫುಡ್ ಪಾರ್ಕ್ ಆರಂಭ, ಮಹಿಳೆಯರಿಗಾಗಿ ಸುರಕ್ಷಿತ ಶಿ ಟಾಯ್ಲೆಟ್‌ಗಳ ನಿರ್ಮಾಣ, ಬೆಂಗಳೂರಿನ ಸಂಚಾರ ದಟ್ಟಣೆ ಹೆಚ್ಚಾಗಿರುವ ೭೫ ಜಂಕ್ಷನ್ ಗಳ ಅಭಿವೃದ್ಧಿಗೆ ೧೫೦ ಕೋಟಿ ರೂ. ಮೀಸಲು, ೨೪೩ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು ೨೭ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳಕ್ಕೆ ಕ್ರಮ, ಆರೋಗ್ಯ ಕ್ಷೇತ್ರಕ್ಕೆ ೧೨೫ ಕೋಟಿ ರೂ. ಮೀಸಲು, ಶಾಲಾ ಮಕ್ಕಳನ್ನು ಕರೆದೊಯ್ಯಲು ಮಕ್ಕಳ ಬಸ್ ಆರಂಭ, ಸುಮಾರು ಅರುವತ್ತೊಂಬತ್ತು ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ೭೦ ಕೋಟಿ ಸಾಲ ಮಂಜೂರಿಗೆ ಕ್ರಮ, ರಾಜ್ಯದಲ್ಲಿ ಸಾವಿರದ ಕನ್ನೂರ ಮೂವತ್ತು ಹೆಚ್ಚುವರಿ ಶಾಲಾ ಕೊಠಡಿಗಳ ಸ್ಥಾಪನೆ, ರೋಗಿಗಳ ದಾಖಲೆ ಡಿಜಿಟಲೀಕರಣ, ಸರ್ಕಾರಿ ಮಹಿಳಾ ಕಾಲೇಜುಗಳಲ್ಲಿ ಯೋಗ, ಶಿರಸಿಯಲ್ಲಿ ರಾಜ್ಯದ ಮೊದಲ ಪರಿಸರ ವಿಜ್ಞಾನ ವಿವಿ ಆರಂಭ, ಸಾವಿರ ಕೋಟಿ ರೂ. ಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಾನಪದ ಹಬ್ಬ, ಕಳಸಾ ಬಂಡೂರಿ ನಾಲೆ ವಿಸ್ತರಣೆ ‌ಗೆ ಸಾವಿರ ಕೋಟಿ ರೂ. ಮೀಸಲು, ಗ್ರಾಮ ಪಂಚಾಯತಿ ಗಳಿಗೆ ಅರವತ್ತು ಲಕ್ಷ ರೂ. ಗಳ ವರೆಗೆ ಅನುದಾನ ನೀಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.

ಹಾಗೆಯೇ ಪದವಿ ಪಡೆದು ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಕರಿಗೆ ಯುವ ಸ್ನೇಹಿ ಯೋಜನೆಯಡಿ ಎರಡು ಸಾವಿರ ರೂ. ಆರ್ಥಿಕ ನೆರವು, ನಮ್ಮ ನೆಲೆ ಹೊಸ ಯೋಜನೆ ಘೋಷಣೆ, ಕನ್ನಡ ಮೀಡಿಯಂ ಮಕ್ಕಳಿಗಾಗಿ ಹಳ್ಳಿ ಮುತ್ತು ಯೋಜನೆ, ಐದು ವಿಮಾನ ನಿಲ್ದಾಣಗಳ ಸ್ಥಾಪನೆ, ಚರ್ಮ ಗಂ ಟು ರೋಗ ತಡೆಗೆ ಒಂದು ಕೋಟಿ ಜಾನುವಾರುಗಳಿಗೆ ಲಸಿಕೆ, ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲಾಂಟ್ ‌ಗೆ ಏಳು ಕೋಟಿ ರೂ. ಘೋಷಣೆ, ರಾಜ್ಯದಲ್ಲಿ ಹತ್ತೊಂಬತ್ತು ಕಾರ್ಮಿಕ ವಿಮಾ ಆಸ್ಪತ್ರೆ ಆರಂಭ, ರೈಲ್ವೆ ಅಭಿವೃದ್ಧಿಗೆ ಸಾವಿರದ ಐನೂರ ಮೂವತ್ತೇಳು ಕೋಟಿ ರೂ. ಘೋಷಣೆ, ಶಂಕರ್ ನಾಗ್ ಹೆಸರಲ್ಲಿ ಆಟೋ ನಿಲ್ದಾಣ ನಿರ್ಮಾಣ, ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ ಮುನ್ನೂರಿಪ್ಪತ್ತು ಕೋಟಿ ರೂ. ಘೋಷಣೆ, ಹನಿ ನೀರಾವರಿಗೆ ೨೯೦೦ ಕೋಟಿ ರೂ. ಮೀಸಲು, ಟ್ರಾಫಿಕ್ ನಿಯಂತ್ರಣಕ್ಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಗೆ ಕ್ರಮ, ನಗು ಮಗು ವಾಹನಕ್ಕೆ ೧೨.೫ ಕೋ. ರೂ. ಮೀಸಲು, ವನ್ಯ ಪ್ರಾಣಿಗಳಿಂದ ಪ್ರಾಣ ಹಾನಿಗೆ ಹದಿನೈದು ಲಕ್ಷ ರೂ. ಪರಿಹಾರ, ಅಸಂಘಟಿತ ಕಾರ್ಮಿಕರಿಗೆ ೪ ಲಕ್ಷ ರೂ. ವಿಮೆ, ಕೊಡಗಿನ ರಸ್ತೆ ಅಭಿವೃದ್ಧಿ ‌ಗೆ ವಿಶೇಷ ಪ್ಯಾಕೇಜ್, ಕೆ ಎಸ್‌ ಆರ್ ಟಿ ಸಿ ಸಿಬ್ಬಂದಿ ‌ಗೆ ಒಂದು ಕೋಟಿ ರೂ. ಅಪಘಾತ ವಿಮೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಮೊದಲಾದವುಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

ಜನರಿಗೆ ಹೊರೆ ಕಾಗದ ಸಮತೋಲಿತ ಬಜೆಟ್ ಅನ್ನು ರಾಜ್ಯ ಸರ್ಕಾರ ಮಂಡನೆ ಮಾಡಿದ್ದು, ಆ ಮೂಲಕ ರಾಜ್ಯದ ಅಭಿವೃದ್ಧಿಯ ಭರವಸೆ ಮೂಡಿಸಿದೆ.

Post Card Balaga:
Related Post