X

ಸರ್ಜಿಕಲ್ ಸ್ಟ್ರೈಕ್ ಸುಳ್ಳೆಂದವರ ಮುಖಕ್ಕಾಯ್ತು ಮಂಗಳಾರತಿ!! ಭಾರತ-ಪಾಕ್ ನಿಯಂತ್ರಣ ರೇಖೆಯ ಬಳಿ ಸರ್ಜಿಕಲ್ ಸ್ಟ್ರೈಕ್ ನಡೆದ ವಿಡಿಯೋ ಚಿತ್ರೀಕರಣದ ತುಣುಕು ಲಭ್ಯ!!

ಮಾಜಿ ಕೇಂದ್ರ ಸಚಿವ ಅರುಣ್ ಶೌರಿಯವರು, ಮೋದಿ ಸರಕಾರ ಭಾರತ-ಪಾಕ್ ನಿಯಂತ್ರಣ ರೇಖೆಯ ಬಳಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಸುಳ್ಳೆಂದು ವಾದಿಸುತ್ತಾ “ಫರ್ಜಿಕಲ್ (ನಕಲಿ) ಸ್ಟ್ರೈಕ್” ಎಂದು ಟೀಕಿಸಿದ ಬಳಿಕ ಸರ್ಜಿಕಲ್ ಸ್ಟ್ರೈಕ್ ನಿಜಕ್ಕೂ ನಡೆದಿವೆ ಎಂದು ತೋರಿಸುವ ವಿಡಿಯೋ ತುಣುಕೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಅಲ್ಲಿಗೆ ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಸುಳ್ಳೆಂದು ವಾದಿಸಿದವರ ಮುಖಕ್ಕೆ ಮಂಗಳಾರತಿಯಾಗಿದೆ. ಇನ್ನು ಸರ್ಜಿಕಲ್ ಸ್ಟ್ರೈಕ್ ನಡೆದದ್ದಕ್ಕೆ ಸಾಕ್ಷಿ ಏನಿದೆ ಎಂದು ಗಂಟಲು ಹರಿಯುತ್ತಿದ್ದವರೆಲ್ಲರ ಬಾಯಿಗೆ ಬೀಗ ಜಡಿದಿದೆ.

ಮಾಧ್ಯಮಗಳಿಗೆ ದೊರಕಿದ ಈ ವೀಡಿಯೊ ತುಣುಕು ಮತ್ತು ಛಾಯಾಚಿತ್ರಗಳು ಲೈನ್ ಆಫ್ ಕಂಟ್ರೋಲ್ ನಲ್ಲಿ ವಾಸ್ತವವಾಗಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎನ್ನುವುದನ್ನು ತೋರಿಸುತ್ತಿವೆ. ಸೈಫುದ್ದೀನ್ ಸೋಜ್ ನ ಪುಸ್ತಕ “ಕಶ್ಮೀರ್: ಗ್ಲಿಮ್ಪ್ಸ್ ಆಫ್ ಹಿಸ್ಟರಿ” ಬಿಡುಗಡೆ ಸಮಾರಂಭದಲ್ಲಿ ಅರುಣ್ ಶೌರಿ “ಇಲ್ಲಿ ಸರಕಾರವೆ ಇಲ್ಲ, ಕಾಶ್ಮೀರ, ಪಾಕಿಸ್ತಾನ ಮತ್ತು ಬ್ಯಾಂಕ್ ಗಳ ಬಗ್ಗೆ ಸರಿಯಾದ ನೀತಿ ಇಲ್ಲ, ಇಲ್ಲಿ ಒಂದು ಹಿಂದೂ ಮತ್ತು ಮುಸ್ಲಿಮರನ್ನು ಒಡೆಯುವ ಉಪಾಯದ ಕುದುರೆಯೊಂದಿದೆ” ಎಂದು ಮೋದಿ ಸರಕಾರವನ್ನು ಟೀಕಿಸಿದ್ದರು.

ಶೌರಿಯ ಈ ಹೇಳಿಕೆಯ ಕೆಲವೆ ಸಮಯದ ನಂತರ ಭಾರತೀಯ ಸೇನೆಯ ವಿಶೇಷ ಪಡೆಗಳ ಕೆಚ್ಚೆದೆಯ ಸೈನಿಕರು LoC ಅನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಛಾಯಾಚಿತ್ರಗಳು ಮತ್ತು ಎಂಟು ನಿಮಿಷದ ವೀಡಿಯೋ ಒಂದು, ಪಾಕಿಸ್ತಾನದ ಗುರಿಗಳನ್ನು ನಾಶಪಡಿಸಿದ್ದನ್ನು ತೋರಿಸುವ ವೀಡಿಯೋ ಲಭ್ಯವಾಗಿದೆ. ಮಾಧ್ಯಮದ ಜೊತೆ ಮಾತನಾಡುತ್ತಾ, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಡಿ.ಹೂಡಾ ಈ ಕಾರ್ಯಾಚರಣೆಯನ್ನು ಭಾರತೀಯ ಸೈನ್ಯದ ಉತ್ತರ ಕಮಾಂಡಿನ ಆಯಕಟ್ಟಿನ ಪ್ರಧಾನ ಕಚೇರಿಯಾದ ಉಧಮ್ ಪುರದ ನಿಯಂತ್ರಣಾ ಕೊಠಡಿಯಿಂದ ಮೇಲ್ವಿಚಾರಣೆ ಮಾಡಲಾಗಿದೆಯೆಂದು ತಿಳಿಸಿದರು.

ಪಾಕಿಸ್ತಾನದ ಸೇನಾ ನೆಲೆಗಳ ಹತ್ತಿರದಲ್ಲಿಯೇ ಉಗ್ರರ ಶಿಬಿರಗಳು ನೆಲೆಗೊಂಡಿದ್ದರಿಂದ ಭಾರತೀಯ ಸೇನಾ ತಂಡ ಪ್ರಮುಖ ಸವಾಲು ಎದುರಿಸಿತ್ತು. ಸರ್ಜಿಕಲ್ ಸ್ಟ್ರೈಕ್ ನ ಪ್ರತಿಕ್ಷಣದ “ಫೀಡ್ ದೆಹಲಿಗೆ” ಹೋಗುತ್ತಿತ್ತು. ನಾಶ ಮಾಡಬೇಕಾಗಿದ್ದ ಎಲ್ಲಾ ಗುರಿಗಳನ್ನು ಸಫಲತಾಪೂರ್ವಕವಾಗಿ ಧ್ವಂಸ ಮಾಡಿದ್ದೆವು. ಇಡೀ ಕಾರ್ಯಾಚರಣೆಯು ಆರು ಗಂಟೆಗಳ ಕಾಲ ನಡೆಯಿತು. ಮೊದಲ ಗುರಿಯನ್ನು ಮಧ್ಯ ರಾತ್ರಿಯಲ್ಲಿ ಧ್ವಂಸ ಮಾಡಿದರೆ ಕೊನೆಯ ಗುರಿ ನಾಶವಾಗುವಾಗ ಬೆಳಿಗ್ಗೆ 6-6.15 ಗಂಟೆಯಾಗಿತ್ತು ಎಂದು ಹೂಡಾ ಮಾಧ್ಯಮಕ್ಕೆ ತಿಳಿಸಿದರು.

ಇದುವರೆಗೂ ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದವರು ಈಗ ತಮ್ಮ ಹೇಳಿಕೆಗಳನ್ನು ತಿರುವಿ ಹಾಕಿ, ಸರ್ಜಿಕಲ್ ಸ್ಟ್ರೈಕ್ ನಡೆದಿದೆ, ಇಲ್ಲ ಅಂತ ನಾವು ಹೇಳುತ್ತಿಲ್ಲ, ಆದರೆ ಸ್ಟ್ರೈಕ್ ನಡೆದ ಬಳಿಕವೂ ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ ಎಂದು ಪಿಟೀಲು ಕುಯ್ಯುತ್ತಿದ್ದಾರೆ. ಮೋದಿ ಸರಕಾರ ಕಾಶ್ಮೀರ ವಿಷಯದಲ್ಲಿ ಗಂಭೀರವಾಗಿದೆ ಎನ್ನುವುದನ್ನು ಪಿಡಿಪಿ ಜೊತೆ ಮೈತ್ರಿ ತೊರೆದು ತೋರಿಸಿಕೊಟ್ಟಿದೆ. ಮೈತ್ರಿ ಮುರಿದ ಮರು ಘಳಿಗೆಯಿಂದಲೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರರನ್ನು ಬೆನ್ನಟ್ಟುತ್ತಿದೆ. ಶೀಘ್ರವೆ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ, ನೋಡುತ್ತಿರಿ. ಏಕೆಂದರೆ ಇದು ಕೇವಲ ಟ್ರೇಲರ್.. ಪಿಕ್ಚರ್ ಇನ್ನೂ ಬಾಕಿ ಇದೆ…

-ಶಾರ್ವರಿ

Editor Postcard Kannada:
Related Post