X

ಭಾರತದ ಪುರಾತನ ಶಿಕ್ಷಣ ಪದ್ಧತಿಗೆ ಜಾಗತಿಕ ಸಮಸ್ಯೆ ಬಗೆಹರಿಸುವ ಶಕ್ತಿ ಇದೆ!! ಟಿಬೆಟಿಯನ್ ಬೌದ್ಧ ಧರ್ಮ ಗುರುವಿನಿಂದ ಹೆಗ್ಗಳಿಕೆಯ ಮಾತು!!

ಭಾರತ ದೇಶವು ಕಲೆ ಸಂಸ್ಕøತಿಗಳ ನೆಲೆ ಬೀಡಾಗಿದ್ದು, ಅದೆಷ್ಟೋ ವಿದೇಶಿಯರು ಭಾರತೀಯ ಸಂಸ್ಕøತಿಗೆ ಮನಸೋತು ಹಿಂದೂ ಧರ್ಮವನ್ನು ಅಪ್ಪಿಕೊಂಡಿರುವ ವಿಚಾರ ತಿಳಿದೇ ಇದೆ!! ಅಷ್ಟೇ ಅಲ್ಲದೇ ಭಾರತೀಯ ಸಂಸ್ಕøತಿಗೆ ಇಡೀ ವಿಶ್ವವೇ ತಲೆದೂಗುತ್ತಿದೆಯಲ್ಲದೇ ದೇಶದ ಪುರಾತನ ಶಿಕ್ಷಣ ಪದ್ಧತಿಗೆ ಜಾಗತಿಕ ಸಮಸ್ಯೆ ಬಗೆಹರಿಸುವ ಶಕ್ತಿ ಇದೆ ಎನ್ನುವ ವಿಚಾರವನ್ನು ಇದೀಗ ವಿದೇಶಿಯರೊಬ್ಬರು ಹೇಳಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ!!!

ಹಿಂದೂಸ್ತಾನದ ಪುಣ್ಯ ನೆಲೆಯಲ್ಲಿರುವ ಸಂಸ್ಕೃತಿ, ಆಚಾರ, ವಿಚಾರಗಳು ಸೇರಿದಂತೆ ಜ್ಞಾನ ಸಂಪತ್ತು ಹೇರಳವಾಗಿದ್ದು, ಪಾರಮಾರ್ಥಿಕ ಕ್ಷೇತ್ರದಲ್ಲಿ ಭಾರತವು ವಿಶ್ವಗುರುವಾಗಿರುವುದರ ಜೊತೆಗೆ, ಲೌಕಿಕವಾದ ವೈಜ್ಞಾನಿಕ ಕ್ಷೇತ್ರದಲ್ಲೂ ಅಪಾರವಾದ ಸಾಧನೆಯನ್ನು ಮಾಡಿತ್ತು. ಪ್ರಾಚೀನ ಋಷಿಮುನಿಗಳು ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಮನಸ್ಸನ್ನು ಹರಿಸಿ, ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ್ದರು. ಅವರ ಆಶ್ರಮಗಳೇ ಅವರ ಪ್ರಯೋಗಾಲಯಗಳಾಗಿದ್ದವು. ಆತ್ಮಜ್ಞಾನದ ಸಾಧನೆಯ ಹಾದಿಯಲ್ಲೇ ಅವರು ಯೋಗಸಿದ್ಧಿಯಿಂದ ಅನೇಕ ಭೌತಿಕ ಸತ್ಯಗಳನ್ನು ಕಂಡುಕೊಂಡರು. ಅದರಿಂದಲೇ, ಇಂದು ಪ್ರಮುಖವೆಂದು ತಿಳಿದಿರುವ ಅನೇಕ ಸಿದ್ದಾಂತಗಳನ್ನೂ ವೈಜ್ಞಾನಿಕ ಪರಿಕಲ್ಪನೆಗಳನ್ನೂ ಅವರು ಅಂದೇ ಮಂಡಿಸಿದ್ದರು.

ಆದರೆ ಇದೀಗ ಇತಿಹಾಸದ ಆರಂಭದ ದಿನಗಳಿಂದಲೇ ಭಾರತದ ಮೇಲೆ, ಭಾರತೀಯತೆಯ ಮೇಲೆ ಹಲವರು ದುಷ್ಟರು ದಾಳಿ ಮಾಡಿದರೂ ನಮ್ಮ ಖ್ಯಾತಿಯನ್ನು, ಸತ್ವಯುತ ವಿಚಾರ, ನಡೆ-ನುಡಿಯನ್ನು ಯಾರಿಂದಲೂ ಅಲ್ಲಾಡಿಸಲು ಆಗಿಲ್ಲ. ಇಂತಹ ಶ್ರೀಮಂತ ಸಂಸ್ಕೃತಿಯ ಹೆಗ್ಗಳಿಕೆಗೆ ಮುಕುಟವಿಟ್ಟಂತೆ ಟಿಬೆಟಿಯನ್ ಬೌದ್ಧ ಧರ್ಮ ಗುರು ದಲಾಯಿ ಲಾಮಾ ಮಾತನಾಡಿದ್ದು, ಭಾರತದ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಪುರಾತನ ಶಿಕ್ಷಣ ಪದ್ಧತಿಯ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಪುರಾತನ ಭಾರತೀಯ ಶಿಕ್ಷಣದ ಹೆಗ್ಗಳಿ ಬಗ್ಗೆ ಉಲ್ಲೇಖಿಸಿದ್ದಾರೆ.

ಹಿಂದಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಅಸ್ತಿತ್ವದಲ್ಲಿದ್ದ ಗುರುಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಪರಂಪರೆಯಾಗಿದ್ದರಿಂದ ಶಿಕ್ಷಣದ ಗುಣಮಟ್ಟವು ಉಚ್ಚ ಮಟ್ಟದ್ದಾಗಿತ್ತು. ‘ಸಮಾಜದ ಅವಶ್ಯಕತೆಯಂತೆ ಯೋಗ್ಯ ನಾಗರಿಕರನ್ನು ಸಿದ್ಧಗೊಳಿಸುವುದೇ ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿತ್ತು!! ಆದುದರಿಂದಲೇ ಶಿಕ್ಷಣವು ಮುಗಿದ ನಂತರ ಶಿಕ್ಷಣ ಸಂಸ್ಥೆಗಳು ಪದವಿ ಪ್ರದಾನ ಸಮಾರಂಭಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಯೋಗ್ಯತೆಯಂತೆ ಅವರ ವರ್ಣ ಹಾಗೂ ವ್ಯವಸಾಯವನ್ನು ನಿರ್ಧರಿಸುತ್ತಿದ್ದರು. ಇದಲ್ಲದೆ ಕುಟುಂಬದಲ್ಲಿಯೇ ಪರಂಪರಾಗತ ವ್ಯವಸಾಯದ ಶಿಕ್ಷಣ ದೊರೆಯುತ್ತಿತ್ತು.

ಅಷ್ಟೇ ಅಲ್ಲದೇ ಮೊದಲು ಶಾಲೆಯಲ್ಲಿ ಧರ್ಮಶಾಸ್ತ್ರ, ವಿಧಿ, ಜ್ಯೋತಿಷ್ಯಶಾಸ್ತ್ರದಂತಹ ಸರ್ವಾಂಗೀಣ ವ್ಯಾವಹಾರಿಕ ಜ್ಞಾನವನ್ನು ನೀಡಲಾಗುತ್ತಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯೊಂದಿಗೆ ಅವರಲ್ಲಿ ಶಿಕ್ಷಣದ ನಂತರ ಓರ್ವ ಉತ್ತಮ ನಾಗರಿಕನಾಗುವ ಕ್ಷಮತೆಯನ್ನು ವೃದ್ಧಿಸುವಲ್ಲಿ ವಿಶೇಷ ಗಮನವನ್ನು ನೀಡಲಾಗುತ್ತಿತ್ತು. ಇದಕ್ಕಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಿವಾಸದ ಸೌಲಭ್ಯವೂ ಇರುತ್ತಿದ್ದವು ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿದಿದ್ದೇವೆ!!

ಆದರೆ ಇದೀಗ ಟಿಬೆಟಿಯನ್ ಬೌದ್ಧ ಧರ್ಮ ಗುರು ದಲಾಯಿ ಲಾಮಾ ಮಾತನಾಡಿ ಭಾರತದ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಪುರಾತನ ಶಿಕ್ಷಣ ಪದ್ಧತಿಯ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಜರೂರಾಗಿ ಭಾರತದ ಉನ್ನತ ಶಿಕ್ಷಣ ಪದ್ಧತಿಗೆ ಪುರಾತನ ಗುರುಕುಲ ಶಿಕ್ಷಣ ಪದ್ಧತಿಯ ಹಲವು ಅಂಶಗಳನ್ನು ಸೇರಿಸಬೇಕು. ಶೈಕ್ಷಣಿಕ ಪದ್ಧತಿಯ ಸುಧಾರಣೆಯ ಜತೆಗೆ ಜಾಗತಿಕ ತಾಪಮಾನ ಏರಿಕೆ ಹಾಗೂ ಯುದ್ಧಗಳ ವಿರುದ್ಧ ನಾವು ಮಾಡುತ್ತಿರುವ ಹೋರಾಟಕ್ಕೆ ಭಾರತದ ಪುರಾತನ ಶೈಕ್ಷಣಿಕ ಪದ್ಧತಿ ಸಹಕಾರಿಯಾಗುತ್ತದೆ ಎಂದು ದಲಾಯಿ ಹೇಳಿದ್ದಾರೆ.

ಜಾಗತಿಕ ಶಾಂತಿ ಮತ್ತು ಸೌಹಾರ್ದ ಸೃಷ್ಟಿಸುವಲ್ಲಿ ನೈತಿಕತೆ ಮತ್ತು ಸಂಸ್ಕೃತಿಯ ಪಾತ್ರ ಎಂಬ ಕುರಿತು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವ ಶಕ್ತಿ ಭಾರತದ ಪುರಾತನ ಶೈಕ್ಷಣಿಕ ಪದ್ಧತಿಗಿದೆ. ಅದರಲ್ಲಿ ಅಡಗಿರುವ ಮೌಲ್ಯಗಳಿಂದ ಹೀಗೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ವಿಪರ್ಯಾಸ ಎಂದರೆ, ಭಾರತೀಯ ಇತಿಹಾಸವನ್ನು ಗಮನಿಸಿದಾಗ ಪ್ರಾಚೀನ ಕಾಲದಿಂದಲೂ, ಅಂದರೆ ವೇದಗಳ ಕಾಲದಿಂದಲೂ ಅನಂತರ ಹರಪ್ಪ, ಮೊಹೆಂಜೊದಾರೋ ಕಾಲದ ಸಿಂಧೂ ಸರಸ್ವತಿ ನಾಗರಿಕತೆಯ ಕಾಲದಿಂದ ಮೊಘಲರ ಆಕ್ರಮಣದ ಕಾಲದವರೆಗೆ ವೈಜ್ಞಾನಿಕ ಅನ್ವೇಷಣೆಗಳು ನಿರಂತರವಾಗಿ ನಡೆಯುತ್ತಾ ಬಂದಿವೆ. ಆದರೆ ದುರಂತವೆಂದರೆ ತಾಳೆಗರಿಗಳಲ್ಲಿದ್ದ ಈ ಅಪಾರವಾದ ಜ್ಞಾನವು ಶತ್ರುಗಳ ದಾಳಿಯಿಂದ ಹಾಗೂ ಪ್ರಾಚೀನ ವಿಶ್ವವಿದ್ಯಾಲಯಗಳು ನಾಶವಾಗಿ ಹೋದಾಗ, ನಮ್ಮಲ್ಲಿದ್ದ ವೈಜ್ಞಾನಿಕ ಜ್ಞಾನಭಂಡಾರವೇ ಕಳೆದುಹೋಯಿತು. ಆದರೆ ಇತಿಹಾಸದ ಆರಂಭದ ದಿನಗಳಿಂದಲೇ ಭಾರತದ ಮೇಲೆ, ಭಾರತೀಯತೆಯ ಮೇಲೆ ಹಲವರು ದಾಳಿ ಮಾಡಿದರೂ ನಮ್ಮ ಖ್ಯಾತಿಯನ್ನು, ಸತ್ವಯುತ ವಿಚಾರ, ನಡೆ-ನುಡಿಯನ್ನು ಯಾರಿಂದಲೂ ಕದಡಿಸಲು ಆಗಿಲ್ಲ ಎನ್ನುವುದೇ ಹೆಮ್ಮೆಯ ವಿಚಾರ!!

ಮೂಲ: https://tulunadunews.com/tnn12217

– ಅಲೋಖಾ

Editor Postcard Kannada:
Related Post