X

ಮೋದಿ ವಿರೋಧಿಗಳಿಗೆ ಕಪಾಳ ಮೋಕ್ಷ ಮಾಡಿದ ಮೋದಿ ಪತ್ನಿ.! ಜಶೋಧಾ ಬೆನ್ ಬಂಗಾರದ ಮಾತಿಗೆ ಉರಿಸಿಕೊಂಡ ಮೋದಿ ವಿರೋಧಿಗಳು! 

ಕೆಲವರು ಅಂತಾರೆ, “ಮೋದಿ ಹೆಂಡತಿಯನ್ನು ಬಿಟ್ಟವರು. ಅವರಿಗೆ ಮಹಿಳೆಯರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಹೆಂಡತಿಯನ್ನು ಸಾಕಲಾಗದ ಈ ಮನುಷ್ಯ ದೇಶವನ್ನೇನು ಸಾಕುತ್ತಾನೆ” ಎಂದು. ಮತ್ತೆ ಕೆಲವರು ಹೇಳುತ್ತಾರೆ, “ಮೋದಿಗೆ ಮದುವೆ ಆಗಿಲ್ಲ. ಅವರಿಗೇನು ಗೊತ್ತು ಕುಟುಂಬದ ಕಷ್ಟ ಸುಖ ಎಲ್ಲ” ಎಂದು. ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದಾಳಿಯಲ್ಲಿ ಸುಕಾಸುಮ್ಮನೆ ಅವರ ಪತ್ನಿಯನ್ನು ಎಳೆದು ತಂದು ತೀಟೆ ತೀರಿಸಿಕೊಳ್ಳುತ್ತಾರೆ. ದೇಶದ ಅಭಿವೃದ್ಧಿಯ ವಿಚಾರದಲ್ಲಿ, ದೇಶದ ಭದ್ರತೆಯ ವಿಚಾರದಲ್ಲಿ, ದೇಶದ ಗೌರವದ ವಿಚಾರದಲ್ಲಿ, ದೇಶದ ಆರ್ಥಿಕ ಪರಿಸ್ಥಿತಿಯ ವಿಚಾರದಲ್ಲಿ ಹೀಗೆ ಯಾವ ವಿಚಾರದಲ್ಲೂ ಪ್ರಧಾನಿ ಮೋದಿಯವರನ್ನು ನಿಂದಿಸಲಾಗದ ಕೆಲ ಮೋದಿ ವಿರೋಧಿ ನಾಯಕರು ಅವರ ಹೆಂಡತಿ ಹಾಗೂ ಕುಟುಂಬದ ಬಗ್ಗೆ ಮಾತನಾಡುತ್ತಾ ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. 

ಆದರೆ ಇದೀಗ ಆ ಎಲ್ಲಾ ಪ್ರಹಾರಗಳಿಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ದಾಮೋದರ್ ದಾಸ್ ಮೋದಿ ಅವರ ಪತ್ನಿ ಜಶೋಧಾ ಬೆನ್ ಸ್ವತಃ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ. ಮೋದಿ ಪತ್ನಿ ನೀಡಿರುವ ಈ ಹೇಳಿಕೆಗೆ ಮೋದಿ ವಿರೋಧಿ ಲೋಕವೇ ಅಲ್ಲೋಲ ಕಲ್ಲೋಲವೇ ಆಗಿ ಹೋಗಿದೆ. ಹಿಂದಿನಿಂದಲೂ ಪ್ರಧಾನಿ ಮೋದಿಯವರ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿಕೊಂಡಿದ್ದ ಅವರ ಪತ್ನಿ ಜಶೋಧ ಬೆನ್ ಇದೀಗ ಮತ್ತೆ ಮೋದಿ ಮೇಲಿನ ಅಭಿಮಾನ, ಗೌರವ ಹಾಗೂ ನಿಸ್ವಾರ್ಥ ಪ್ರೀತಿಯನ್ನು ಹೊರಹಾಕಿದ್ದಾರೆ.

ಮೋದಿ ನನ್ನ ರಾಮ-ಜಶೋಧಾ ಬೆನ್..

ಇತ್ತೀಚೆಗೆ ಕೆಲ ರಾಜಕೀಯ ನಾಯಕರು ಪೃಧಾನಿ ಮೋದಿ ಬಗ್ಗೆ ಕಟುವಾಗಿ ಮಾತನಾಡಿದ್ದರು. ಬಿಡಿ, ಮೋದಿ ಈ ದೇಶದ ಪ್ರಧಾನ ಮಂತ್ರಿಯಾದಾಗನಿಂದ ಅವರ ಪತ್ನಿಯ ವಿಚಾರವೇ ಪ್ರಮುಖ ಹೈಲೆಟ್ ಆಗಿತ್ತು. ಆದರೆ ಇದೀಗ ಗುಜರಾತ್‍ನ ಮಾಜಿ ಮುಖ್ಯಮಂತ್ರಿಯೋರ್ವರಿಂದಲೇ ಮೋದಿ ಹೆಂಡತಿ ಬಗ್ಗೆ ಧ್ವನಿ ಕೇಳಿ ಬಂದಿತ್ತು. ಗುಜರಾತಿನ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಮಧ್ಯಪ್ರದೇಶದ ರಾಜ್ಯಪಾಲೆಯಾಗಿರುವ ಆನಂದಿಬೆನ್ ಮೋದಿಯವರ ವಿವಾಹದ ಬಗ್ಗೆ ಮಾತನಾಡಿದ್ದರು. “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವಿವಾಹಿತರು. ಅವರಿಗೇನು ಗೊತ್ತು ಕುಟುಂಬದ ಗೋಜುಗಳು” ಎಂದು ಹೇಳಿಕೆ ನೀಡಿದ್ದರು. ತಮಾಷೆಗಾಗಿ ಈ ಮಾತನ್ನು ಹೇಳಿದ್ದರೋ ಇಲ್ವೋ ಗೊತ್ತಿಲ್ಲ. ಆದರೆ ಈ ಮಾತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ನಿ ಜಶೋಧಾ ಬೆನ್‍ಗೆ ಸರಿ ಕಾಣಲಿಲ್ಲ. 

ಈ ಬಗ್ಗೆ ಮಾಧ್ಯಮ ಮಿತ್ರರಲ್ಲಿ ಹೇಳಿಕೆ ನೀಡಿದ್ದ ಜಶೋಧಾ ಬೆನ್, “ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿವಾಹದ ಬಗ್ಗೆ ಸುಳ್ಳು ಹೇಳಿಕೆ ನೀಡೋದು ಬೇಸರವಾಗುತ್ತಿದೆ. ಮೋದಿಯವರು ತನಗೆ ಮದುವೆ ಆಗಿದೆಯೆಂದು ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ನೀಡಿದ್ದ ನಾಮಪತ್ರದಲ್ಲಿಯೇ ಉಲ್ಲೇಖಿಸಿದ್ದರು. ಆದರೆ ಈ ಬಗ್ಗೆ ಕೆಲವರು ಹೀಗೆ ಹೇಳುತ್ತಿರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇಷ್ಟೇ ಹೇಳಿದ್ದರೆ ವಿರೋಧಿಗಳು ಮತ್ತೆ ಈ ವಿಚಾರವನ್ನು ಡಂಗುರ ಬಾರಿಸುತ್ತಿದ್ದರೋ ಏನೋ. ಆದರೆ ಜಶೋಧಾ ಬೆನ್ ಮತ್ತೊಂದು ಹೇಳಿಕೆಯನ್ನು ನೀಡಿದ್ದರು. ಅದು ಪ್ರತಿಯೋರ್ವ ಮೋದಿ ಅಭಿಮಾನಿಗೆ ಹೃದಯ ಮುಟ್ಟುವಂತಿತ್ತು. “ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನನಗೆ ರಾಮನಿದ್ದಂತೆ. ಅವರು ನನ್ನ ಪಾಲಿನ ಶ್ರೀರಾಮ” ಎಂದು ಹೇಳಿದ್ದರು. ಇದು ಮೋದಿ ಮೇಲಿನ ನಿಸ್ವಾರ್ಥ ಪ್ರೀತಿ ಹಾಗೂ ಗೌರವವನ್ನು ಬಿಂಬಿಸಿದ್ದರೆ, ಮೋದಿ ವಿರೋಧಿಗಳಿಗೆ ಬಾಣ ಬಿಟ್ಟ ಹಾಗೆ ಆಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಡೆದದ್ದು ಬಾಲ್ಯ ವಿವಾಹ. ಆ ಸಮಯದಲ್ಲಿ ಮದುವೆ ಅಂದರೆ ಏನು ಎಂದು ಅವರಿಗೆ ಗೊತ್ತಿರಲಿಕ್ಕೂ ಸಾಧ್ಯವಿಲ್ಲ. ನಂತರ ಬುದ್ಧಿ ಬೆಳೆಯುತ್ತಲೇ ಅವರು ಪೂಜೆ, ಧ್ಯಾನ, ಆಧ್ಯಾತ್ಮ ಎಂದೆಲ್ಲಾ ಹಿಮಾಲಯಕ್ಕೆ ತೆರಳಿ ಕಾಲ ಕಳೆಯುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿಯೂ ಕೆಲಸ ಮಾಡಿದ್ದರು. ನಂತರ ಗೊತ್ತೇ ಇದೆ. ಭಾರತೀಯ ಜನತಾ ಪಕ್ಷದ ನಾಯಕನಾಗಿ ಬೆಳೆದು 4 ಬಾರಿ ಗುಜರಾತಿನ ಮುಖ್ಯಮಂತ್ರಿಯಾಗಿ ಇದೀಗ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಮಧ್ಯೆ ಅವರು ಕುಟುಂಬಕ್ಕೆಂದು ಸಮಯ ಕೊಟ್ಟಿದ್ದೇ ಕಡಿಮೆ. ದೇಶ ದೇಶ ಎಂದು ದೇಶ ಸೇವೆ ಮಾಡಿದ್ದೇ ಹೆಚ್ಚು. 

ಆದರೆ ಮೋದಿಯನ್ನು ವಿರೋಧಿಸುವವರಿಗೆ ಪ್ರಮುಖ ಅಸ್ತ್ರಗಳು ಸಿಗಲಿಲ್ಲ ಎನ್ನುವಾಗ ಅವರ ಹೆಂಡತಿಯ ವಿಚಾರವಾಗಿ ಹೀಗಳೆದು, ಅದನ್ನೇ ತಿವಿಯುತ್ತಿರುತ್ತಾರೆ. ಇದೀಗ ಮೋದಿ ಪತ್ನಿ ನೀಡಿದ್ದ ಹೇಳಿಕೆ ಮೋದಿಯವರ ವಿವಾಹ ಹಾಗೂ ಪತ್ನಿಯ ವಿಚಾರವನ್ನು ಕೆದಕಿ ಮಾತನಾಡುತ್ತಿರುವವರಿಗೆ ಕಪಾಳ ಮೋಕ್ಷ ಮಾಡಿದಂತಿದೆ.

-ಸುನಿಲ್ ಪಣಪಿಲ

Editor Postcard Kannada:
Related Post