X

ನಲಪಾಡ್ ಗೆ ಕೊನೆಗೂ ಸಿಗಲಿಲ್ಲ ಮುಕ್ತಿ.! ಏನಾಯ್ತು ಇಂದಿನ ಜಾಮೀನು ಆದೇಶ?!

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗುಂಡಾ ನಲಪಾಡ್ ನ ಗೂಂಡಾಗಿರಿ ಪ್ರಕರಣ ಇಂದು ನ್ಯಾಯಾಲಯದ ಆದೇಶದಂತೆ ಅಂತ್ಯ ಕಂಡಿದೆ. ಕಳೆದ ಕೆಲವು ದಿನಗಳ ಹಿಂದೆ ವಿದ್ವತ್ ಎಂಬ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್‍ನ ಹಣೆಬರಹವನ್ನು ಇಂದು ನ್ಯಾಯಾಲಯ ಆಲಿಸಿ ಮಹತ್ವದ ತೀರ್ಪು ನೀಡಿದ್ದು, ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿದಿದೆ.

ಎಲ್ಲಾ ಆರೋಪಿಗಳ ಅರ್ಜಿ ವಿಚಾರಣೆ..!

ಗೂಂಡಾ ನಲಪಾಡ್ ಮಾತ್ರವಲ್ಲದೆ ಆತನ ಜೊತೆಗಿದ್ದ 6 ಮಂದಿ ಗೂಂಡಾ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿದ್ದು 9 ಕಡೆ ಮೂಲೆಗಳು ಮುರಿದಿದೆ. ತುಟಿ ಬಿಚ್ಚಲಾಗುತ್ತಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯೂ ಆಗಿರಲಿಲ್ಲ. ಹೀಗಾಗಿ ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಪರಮೇಶ್ವರ್ ನೇತೃತ್ವದ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹ್ಯಾರಿಸ್ ಮಗ ನಲಪಾಡ್ ಓರ್ವ ಪ್ರಭಾವಿ ವ್ಯಕ್ತಿ ಹಾಗೂ ಕಾಂಗ್ರೆಸ್ ಶಾಸಕ. ಹೀಗಾಗಿ ಜಾಮೀನು ನೀಡಿದರೆ ಸಾಕ್ಷ್ಯ ನಾಶದ ಸಂಭವವೂ ಇದೆ. ಮಾತ್ರವಲ್ಲದೆ ಹಲ್ಲೆಗೊಳಗಾದ ವಿದ್ವತ್ ಇನ್ನೂ ಪೊಲೀಸರ ಮುಂದೆ ಹೇಳಿಕೆ ನೀಡದಿರುವುದು. ಈ ಮೂಲಕ ನಲಪಾಡ್ ಸೇರಿ ಉಳಿದ 6 ಮಂದಿಗೂ ಜೈಲು ಶಿಕ್ಷೆಯನ್ನು ನ್ಯಾಯಾಲಯ ಖಾಯಂಗೊಳಿಸಿದೆ.

ಮೇಲ್ಮನವಿಗೆ ನಿರ್ಧಾರ…

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್ ಸಹಿತ 7 ಮಂದಿಯ ಜಾಮೀನು ಅರ್ಜಿ 63ನೇ ಸೆಷನ್ ನ್ಯಾಯಾಲಯ ಬಿಡುಗಡೆಗೊಳ್ಳುತ್ತಿದ್ದಂತೆ ನಲಪಾಡ್ ಪರ ವಕೀಲರು ಹೈಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಇದೇ ಬರುವ ಸೋಮವಾರ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿ ಅಲ್ಲಿ ಜಾಮೀನು ನೀಡುವಂತೆ ಕೋರಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಅಷ್ಟರಲ್ಲೂ ವಿದ್ವತ್ ಆಸ್ಪತ್ರೆಯಿಂದ ಬಿಡುಗಡೆ ಹೊಂದದಿದ್ದರೆ ಮತ್ತೆ ಜೈಲುವಾಸ ಖಾಯಂಗೊಳಿಸುವ ಸಾಧ್ಯತೆಯೂ ಇದೆ ಎಂದು ಎನ್ನಲಾಗುತ್ತಿದೆ.

ದುಃಖದಿಂದಲೇ ಹೊರ ನಡೆದ ನಲಪಾಡ್..!

ನ್ಯಾಯಾಧೀಶರು ನ್ಯಾಯಾಲಯ ಪ್ರವೇಶಿಸುವ ಮೊದಲೇ ಜೈಲಿನಲ್ಲಿ ಟಿವಿ ಮುಂದೆ ಕುಳಿತಿದ್ದ ಗೂಂಡಾ ನಲಪಾಡ್‍ಗೆ ಭಾರೀ ನಿರಾಶೆಯೇ ಆಗಿತ್ತು. ನ್ಯಾಯಾಧೀಶರು ತೀರ್ಪನ್ನು ಓದುತ್ತಿದ್ದು, ವ್ಯತಿರಿಕ್ತವಾದ ತೀರ್ಪು ಬರುತ್ತಿದ್ದಂತೆ ನಲಪಾಡ್ ಗಳಗಳನೆ ಅಳಲು ಶುರು ಮಾಡಿದ್ದಾನೆ. ಜೈಲಿನಲ್ಲಿಯೇ ಗಳಗಳನೆ ಅಳಲು ಶುರು ಮಾಡಿದ ನಲಪಾಡ್ ಇನ್ನು ಮುಂದೆಯೂ ತಾನು ಇದೇ ಜೈಲಿನಲ್ಲಿ ಕೊಳೆಯಬೇಕಲ್ವೇ ಎಂದು ಕಣ್ಣೀರು ಒರೆಸಿಕೊಂಡು ಹಿಂದಿರುಗಿದ್ದಾನೆ ಎಂದು ಜೈಲಿನ ಮೂಲಗಳು ಹೇಳಿವೆ.

ಹೊರ ಬರುವುದಾಗಿ ತಂದೆ ಬಳಿ ಹೇಳಿಕೊಂಡಿದ್ದ ನಲಪಾಡ್..!

ಇಷ್ಟು ದಿನ ಜೈಲಿನಲ್ಲೇ ಕೂತು ಪೋಲೀಸರ ಅತಿಥಿಯಾಗಿರುವ ನಲಪಾಡ್ ಪ್ರತೀ ಬಾರಿಯ ವಿಚಾರಣೆಯ ವೇಳೆಯಲ್ಲೂ ತನಗೆ ಜಾಮೀನು ಸಿಗುವುದಾಗಿ ಖುಷಿಯಿಂದಲೇ ಇರುತ್ತಿದ್ದ. ಆದರೆ ನಲಪಾಡ್ ಗೆ ನಿರಾಸೆಗಳೇ ಎದುರಾಗುತ್ತಿತ್ತು. ನಿನ್ನೆಯೂ ತಂದೆ ಹ್ಯಾರಿಸ್ ನಲಪಾಡ್ ಗೆ ಜೈಲಿನಿಂದಲೇ ಕರೆಮಾಡಿದ್ದ ಮಹಮ್ಮದ್ ನಲಪಾಡ್ , ನಾಳೆ ಕೋರ್ಟ್ ನಲ್ಲಿ ನನಗೆ ಖಂಡಿತ ಜಾಮೀನು ಸಿಗುತ್ತದೆ, ನಾಳೆಯಿಂದ ತಾನು ಹೊರ ಬರುವುದಾಗಿ ಬಹಳ ಖುಷಿಯಿಂದಲೇ ಹೇಳಿಕೊಂಡಿದ್ದ. ಆದರೆ ಇದೀಗ ವಿಚಾರಣೆ ನಡೆಸಿದ ಕೋರ್ಟ್ ನಲಪಾಡ್ ಗೆ ಬಿಗ್ ಶಾಕ್ ನೀಡಿದೆ.

ಮತ್ತೆ ವಿಚಾರಣೆಗೈದ ಕೋರ್ಟ್..!

ಸತತ ಮೂರನೇ ಬಾರಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಆರೋಪಿ ನಲಪಾಡ್ ಗೆ ಮತ್ತೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿದೆ. ಇಂದು ನಲಪಾಡ್ ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ , ನಲಪಾಡ್ ಗೆ ಸದ್ಯ ಯಾವುದೇ ಕಾರಣಕ್ಕೂ ಜಾಮೀನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಇನ್ನೂ ೧೪ ದಿನಗಳ ಕಾಲ ಪೋಲಿಸರ ವಶದಲ್ಲಿಯೇ ಇರಬೇಕೆಂದು ತೀರ್ಪು ನೀಡಿ , ನಲಪಾಡ್ ನನ್ನು ಮತ್ತೆ ಜೈಲಿಗೆ ಕಳುಹಿಸಿದ್ದಾರೆ.

ಮತ್ತೆ ನಲಪಾಡ್ ಗೆ ಜೈಲೂಟ ಫಿಕ್ಸ್..!

ಕಳೆದ ಎರಡು ವಾರದಿಂದ ಭಾರೀ ಕುತೂಹಲಗಳನ್ನೇ ಸೃಷ್ಟಿಸಿದ್ದ ಗೂಂಡಾ ನಲಪಾಡ್‍ನ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಇಂದು 63ನೇ ಸೆಷನ್ ನ್ಯಾಯಾಲಯ ಇಂದು ಮಹತ್ವದ ತೀರ್ಪನ್ನು ನೀಡಿದ್ದು, ಗೂಂಡಾ ನಲಪಾಡ್‍ಗೆ ಜೈಲು ಶಿಕ್ಷೆ ಖಾಯಂಗೊಳಿಸಿದೆ. ಕಳೆದ ಎರಡು ಬಾರಿ ಜಾಮೀನು ಅರ್ಜಿಯನ್ನು ಪರಿಶೀಲಿಸಿದ 63ನೇ ಸೆಷನ್ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಇಂದು ಕೋರ್ಟ್ ಆದೇಶವನ್ನು ಘೋಷಿಸಿದೆ. ಈ ಮೂಲಕ ಅನ್ಯಾಯಕ್ಕೆ ಯಾವುದೇ ಜಾಗವಿಲ್ಲ ಎಂಬ ನ್ಯಾಯವನ್ನು ಕೋರ್ಟ್ ನೀಡಿದೆ. ಶಾಸಕರ ಮಗನೇ ಇರಲಿ ಅಥವಾ ಇನ್ಯಾರೇ ಇರಲಿ ತಪ್ಪು ತಪ್ಪೇ ಎಂಬ ತತ್ವವನ್ನು ಕೋರ್ಟ್ ಜಗತ್ತಿನ ಮುಂದಿಟ್ಟಿದೆ. ಈ ಮೂಲಕ ನ್ಯಾಯಾಲಯದ ಮೇಲೆ ಜನತೆಗೆ ಮತ್ತಷ್ಟು ನಂಬಿಕೆ ಬರುವಂತೆ ಮಾಡಿದೆ.

ನಲಪಾಡ್ ಪರ ವಕೀಲರ ವಾದವೇನು..?

ಈ ಹಿಂದೆ ಕೋರ್ಟ್ ಗೆ ವಿಚಾರಣೆಗೆಂದು ಆಗಮಿಸಿದ ನಲಪಾಡ್ ಗೆ ಹೇಗಾದರೂ ಜಾಮೀನು ಒದಗಿಸಲೇ ಬೇಕೆಂದು ಪ್ರಯತ್ನಿಸಿದ್ದ ನಲಪಾಡ್ ಪರ ವಕೀಲರಾದ ಟಾಮೀ ಕೋರ್ಟ್ ನಲ್ಲಿ ನಲಪಾಡ್ ನಿರಪರಾಧಿ ಎಂದು ಬಿಂಬಿಸಲು ಯತ್ನಿಸಿದ್ದರು. “ಮಹಮ್ಮದ್ ಮತ್ತು ಆತನ ಸ್ನೇಹಿತರಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ! ಉದ್ವೇಗದಿಂದ ಹೊಡೆದಾಡಿಕೊಂಡಿದ್ದಾರೆ ಅಷ್ಟೆ! ಮುಂಚೆ ೩೦೭ ಸೆಕ್ಷನ್ ಕೂಡ ಇರಲಿಲ್ಲ, ಈಗ ಒತ್ತಡಕ್ಕೆ ಮಣಿದು ವಿದ್ವತ್ ನ ಪರವಾಗಿರುವವರು ಕೇಸು ದಾಖಲಿಸಿದ್ದಾರೆ! ಚುನಾವಣೆ ಸಮಯವಾಗಿತುವುದರಿಂದ ಎಲ್ಲರೂ ಸಹ ಈ ಚಿಕ್ಕ ಪ್ರಕರಣಕ್ಕೆ ವಿವಾದ ಸೃಷ್ಟಿಸಲು ಹೈಪ್ ನೀಡುತ್ತಿದ್ದಾರೆ ಅಷ್ಟೆ! ಮಹಮ್ಮದ್ ಬಿಯರ್ ಬಾಟಲಿನಿಂದ ಹೊಡೆದೇ ಇಲ್ಲ ಎನ್ನುತ್ತಿರುವ ಟಾಮಿಗೆ ಬಹುಷಃ ವಿದ್ವತ್ ನ ತಲೆ ಮೇಲೆ ಒಡೆದ ಗಾಜಿನ ಚೂರುಗಳು ಸಿಕ್ಕಿರುವುದು ಭ್ರಮೆಯಲ್ಲಿಯೇ ಹಾಗಾದರೆ?! ಕೇವಲ ಉದ್ವೇಗ ಮಾತ್ರಕ್ಕೆ ಹೊಡೆದಾಡಿಕೊಂಡಿದ್ದಕ್ಕೇ ಪಕ್ಕೆಲುಬು ಮುರಿದು ಸಾವು ಬದುಕಿನ ಮಧ್ಯೆ ಹೋರಾಡುವಂತಾಗುತ್ತದೆಂದರೆ, ಇನ್ನು ಗಂಭೀರವಾಗಿಯೇ ಜಗಳಕ್ಕಿಳಿದರೆ ಕೊಲೆಯೇ ಪಕ್ಕಾ ಬಿಡಿ! ಅದಲ್ಲದೇ, ಆರೊಪಿಗಳು ವಿದ್ವತ್ ನನ್ನು ಆಸ್ಪತ್ರೆಯ ತನಕ ಹುಡುಕಿ ಕೊಂಡು ಬಂದು ಮತ್ತೆ ಹಲ್ಲೆ ಮಾಡಕು ಯತ್ನಿಸಿದ್ದನ್ನೂ ಅಲ್ಲಗಳೆದ ಟಾಮಿ, ಕೇವಲ್ ವಿದ್ವತ್ ಆರೋಗ್ಯವನ್ನು ವಿಚಾರಿಸಲು ಹೋಗಿದ್ದರು ಎನ್ನುತ್ತಿದ್ದಾರಲ್ಲ? ಅಷ್ಟು ಕಾಳಜಿ ಇದ್ದಿದ್ದರೆ, ವಿದ್ವತ್ ನ ಮೇಲೆ ಹಲ್ಲೆಯೇ ಆಗುತ್ತಿರಲಿಲ್ಲ ಅಲ್ಲವೇ?! ಅದೂ ಬಿಡಿ! ಯಾವ ರೀತಿಯಾಗಿ ಆರೋಗ್ಯ ವಿಚಾರಿಸಲು ಹೋಗಿದ್ದರು ಸ್ವಾಮಿ?! ನಿಮಗೆ ಗೊತ್ತಿದೆಯಲ್ಲವೇ? ಸಾಮಾನ್ಯವಾಗಿ ರೌಡಿಗಳು ಹೇಗೆ ಆರೋಗ್ಯ ವಿಚಾರಿಸುತ್ತಾರ ಎಂದು?!

ಕಳೆದ ಕೆಲ ದಿನಗಳಿಂದ ಕೂತೂಹಲಕ್ಕೀಡಾದ ನಲಪಾಡ್ ವಿಚಾರಕ್ಕೆ ಕೋರ್ಟ್ ಮತ್ತೆ ತೆರೆ ಎಳೆದಿದೆ. ಒಟ್ಟಾರೆ ಆರೋಪಿಗಳು ಯಾರೇ ಆಗಲಿ ತಪ್ಪು ತಪ್ಪೇ ಎನ್ನುವ ಆದೇಶವನ್ನು ಕೋರ್ಟ್ ನೀಡಿದ್ದು ಪ್ರಭಾವಿ ವ್ಯಕ್ತಿಗಳ ಅಪರಾಧ ಲೋಕಕ್ಕೆ ಭಾರೀ ಎಚ್ಚರಿಕೆ ನೀಡಿದಂತಾಗಿದೆ. ಈ ಮೂಲಕ ತಾನು ಅಧಿಕಾರದಲ್ಲಿದ್ದೇನೆ ಎಂಬ ದರ್ಪವನ್ನು ಮೆರೆಯುವ ಅಹಂಕಾರಿಗಳಿಗೆ ಪಾಠವನ್ನೇ ಕೋರ್ಟ್ ಕಳಿಸಿದಂತಾಗಿದೆ.

–ಅರ್ಜುನ್

 

Editor Postcard Kannada:
Related Post