X

ದೇವೇಗೌಡರು ಕಾಂಗ್ರೆಸ್ ಹಿಂದೆ ಬಿದ್ದ ಅಸಲಿ ಸತ್ಯವೇನು ಗೊತ್ತಾ?! ಕಾಂಗ್ರೆಸ್ಸೇ ಯಾಕೆ ಬೇಕಿತ್ತು?!

ಬಿಜೆಪಿ ನಾಯಕರು ಮಾತುಕತೆ ಆರಂಭಿಸುವ ಮೊದಲೇ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಪಕ್ಷದ ಮೈತ್ರಿ ಪ್ರಸ್ತಾಪವನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ಹಂತದ ರಾಜಕಾರಣಕ್ಕೆ ಮುಂದಡಿ ಇಟ್ಟಿದ್ದಾರೆ!!  ಇಷ್ಟು ದಿನಗಳ ಕಾಲ ಹಾವು ಮುಂಗುಸಿಯಂತಿದ್ದ ದೇವೇಗೌಡರು ಹಾಗೂ ಸಿದ್ದರಾಮಯ್ಯನವರು ಕೊನೆಗೂ ಕೈ ಕೈ ಮಿಲಾಯಿಸಿದ್ದಾರೆ!! ಅದಲ್ಲದೆ ಈಗಾಗಲೇ ಹಲವಾರು ಬಾರೀ ನಾವು ಯವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿಯಾಗಲ್ಲ ಎಂದಿದ್ದರು ಕುಮಾರ ಸ್ವಾಮಿ ಹಾಗೂ ದೇವೆಗೌಡರು!! ಅದಲ್ಲದೆ ನಮಗೆ ಸ್ಪಷ್ಟ ಬಹುಮತ ಬರುತ್ತದೆ ನಾವು ಯಾಕೆ ಸಿದ್ದರಾಮಯ್ಯನವರ ಜೊತೆ ಮೈತ್ರಿಯಾಗಬೇಕು ಅಂತಾ ಕೂಡ ಬೊಗಳೆ ಬಿಟ್ಟಿದ್ದರು!! ಎಲುವಿಲ್ಲದ ನಾಲಗೆ ಯಾವ ರೀತಿ ಬೇಕಾದರೂ ತಿರುತ್ತದೆ ಎಂಬುದಕ್ಕೆ ಇವರೇ ತಕ್ಕ ಸಾಕ್ಷಿ!!

‘ಅವರಪ್ಪಣಾನೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ಹೇಳಿದ್ದ ಸಿದ್ದರಾಮಯ್ಯ, ಈಗ ‘ಜೆ.ಡಿ.ಎಸ್. ಸರಕಾರ ರಚಿಸಲು ನಾವು ಬೇಷರತ್ ಬೆಂಬಲ ನೀಡುತ್ತಿದ್ದೇವೆ’ ಎಂದು ಖುದ್ದು ಕೈ ಕಟ್ಟಿ ನಿಂತು ಹೇಳುವಂತಾಗಿದೆ. ಈ ಮೂಲಕ ರಾಜಕೀಯದಲ್ಲಿ ಏನಾದರೂ ಆಗಬಹುದು ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ‘ ಖುದ್ದು ಸಿದ್ದರಾಮಯ್ಯ ಅವರೇ ದೇವೇಗೌಡರ ನಿವಾಸಕ್ಕೆ ಹೋಗಿ ಅನಂತರ ಕುಮಾರಸ್ವಾಮಿ ಜತೆ ರಾಜಭವನಕ್ಕೆ ಹೋಗುವಂತಾಗಿದ್ದು ವಿಪರ್ಯಾಸ. ಮೂಲತಃ ಜನತಾ ಪರಿವಾರದವರಾದರೂ ಜೆ.ಡಿ.ಎಸ್. ಬಿಟ್ಟ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಹಾಗೂ ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಕಠಿಣ ಟೀಕಾಸ್ತ್ರಗಳನ್ನು ಬಿಡುತ್ತಿದ್ದ ಸಿದ್ದರಾಮಯ್ಯ ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ನಿನ್ನೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕುಮಾರಸ್ವಾಮಿ ಹಾಗೂ ದೇವೇಗೌಡ ಯಾಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿದ್ದಾರೆ ಎಂದರೆ ಅದಕ್ಕೂ ಕೆಲ ನಿಗೂಢ ಕಾರಣಗಳಿವೆ!!

100ರ ಗಡಿ ದಾಟಿರುವ ಬಿಜೆಪಿ ಏನೇ ಆಗಿದ್ದರೂ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದು ದೇವೇಗೌಡರಿಗೆ ಚೆನ್ನಾಗಿ ಗೊತ್ತಿತ್ತು!! ಹೀಗಾಗಿ ಆ ಅವಕಾಶ ನೀಡಿದ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಳ್ಳುವುದು ಸುಲಭದ ಆಮಿಷವಾಗಿತ್ತು!! ಕಾಂಗ್ರೆಸ್ ಜೊತೆ ಮೈತ್ರಿಯಾದಲ್ಲಿ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಕುಮಾರಸ್ವಾಮಿಗೆ ಸ್ಪಷ್ಟವಾಗಿ ತಿಳಿದಿತ್ತು!!

ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದಲ್ಲಿ ರಾಷ್ಟ್ರಮಟ್ಟದಲ್ಲೂ ಕೋಮುವಾದಿ ಸ್ನೇಹಿ ಎಂಬ ಆರೋಪ ಎದುರಿಸಬೇಕಾಗಿತ್ತು!! ಕಾಂಗ್ರೆಸ್ ಜೊತೆ ಸೇರುವುದರಿಂದ ಜಾತ್ಯಾತೀತ ಎಂಬುವುದನ್ನು ನಿರೂಪಿಸಿದಂತಾಗುತ್ತದೆ!! ಜೆಡಿಎಸ್ ಹಾಗೂ ಕಾಂಗ್ರೆಸ್ ಮನಸ್ಥಿತಿ ಸ್ವಲ್ಪ ಮಟ್ಟಿಗೆ ಒಂದೇ ರೀತಿ ಇರುವುದು ಸ್ಪಲ್ಪ ಮಟ್ಟಿಗೆ ಇವರಿಗೆ ಪ್ಲಸ್ ಪಾಯಿಂಟ್ ಆದಂತಿದೆ!! ಯಾಕೆಂದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿಗಳು!! ಅದಕ್ಕಾಗಿ ಈ ಎರಡೂ ಪಕ್ಷಕ್ಕೆ ಬಿಜೆಪಿಯವರನ್ನು ಕಂಡರೆ ಅಷ್ಟಕ್ಕಷ್ಟೆ!!

ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎಗೆ ಪರ್ಯಾಯವಾಗಿ ಶಕ್ತಿಯೊಂದನ್ನು ಹುಟ್ಟು ಹಾಕುವಲ್ಲಿ ತಾವು ಪ್ರಮುಖ ಪಾತ್ರ ವಹಿಸಬಹುದು ಎಂಬ ಎಣಿಕೆ!!

ಪುತ್ರ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಯಾಗುವುದರಿಂದ ಉತ್ತಮ ಆಡಳಿತ ನೀಡುವ ಮೂಲಕ ಪಕ್ಷಕ್ಕೆ ಒಳ್ಳೆಯ ಇಮೇಜ್ ಸೃಷ್ಠಿಯಾಗಬಹುದು!! ಹಾಗೂ ಪಕ್ಷದ ಸಂಘಟನೆ ಬಲಗೊಳಿಸುವುದು ಎಂಬುವುದು ಅವರ ಆಲೋಚನೆ!!

ಬಿಜೆಪಿ ಜತೆ ಸೇರುತ್ತಾರೆ ಎಂಬ ಆಪಾದನೆಯಿಂದಲೇ ಈ ಚುನಾವಣೆಯಲ್ಲಿ ಮೊದಲು ಜೆಡಿಎಸ್ ಜತೆಗೂ ಇದ್ದ ಅಲ್ಪಸಂಖ್ಯಾತರು ದೂರ ಸರಿದಿದ್ದರು.. ಕೇವಲ ಒಕ್ಕಲಿಗ ಮತಗಳನ್ನಷ್ಟೇ ನೆಚ್ಚಿಕೊಂಡು ಚುನಾವಣೆ ಎದುರಿಸುವುದು ಕಷ್ಟ ಹೀಗಾಗಿ ಮುಂದಿನ ರಾಜಕಾರಣ ದೃಷ್ಟಿಯಿಂದ ಅಲ್ಪಸಂಖ್ಯಾತರೂ ಸೇರಿದಂತೆ ಇತರ ಸಣ್ಣ ಪುಟ್ಟ ಸಮುದಾಯಗಳ ವಿಶ್ವಾಸ ಗಳಿಸಬಹುದು ಎಂಬ ಲೆಕ್ಕಾಚಾರ!!

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲೇ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಪಕ್ಷಗಳು ಕೈಜೋಡಿಸಿ ಸರಕಾರ ರಚಿಸಲು ತಯಾರಿ ನಡೆಸುತ್ತಿದ್ದರೆ , ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದೆ. ಬಿಜೆಪಿ ಚಾಣಕ್ಯ ಅಮಿತ್ ಷಾ ಮಾಡಿರುವ ತಂತ್ರಕ್ಕೆ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಇದೀಗ ಏನೂ ಮಾಡಲಾಗದೆ , ತಮ್ಮ ಶಾಸಕರನ್ನು ಪಕ್ಕದ ರಾಜ್ಯಗಳಿಗೆ ರೆಸಾರ್ಟ್‍ನಲ್ಲಿ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಗಾಳ ಹಾಕುತ್ತಿದ್ದು ಸರಕಾರ ರಚನೆಗೆ ಬೇಕಾಗಿರುವ ಎಂಟು ಸ್ಥಾನಗಳನ್ನು ಪಡೆದುಕೊಳ್ಳಲು ತಂತ್ರ ರೂಪಿಸಿದೆ.!! ಒಂದು ವೇಳೆ ಬಿಜೆಪಿಯ ಆಪರೇಷನ್ ಕಮಲ ಸಕ್ಸಸ್ ಆದಲ್ಲಿ ಯಡಿಯೂರಪ್ಪನವರು ಅಧಿಕಾರದ ಗದ್ದಗೆಯನ್ನು ಏರಲಿದ್ದಾರೆ!! ತದ ನಂತರ ಕುಮಾರಸ್ವಾಮಿ ಚಪ್ಪೆ ಮೊರೆ ಹಾಕಿಕೊಂಡು ಮನೆಗೆ ಹೋಗುವ ಸ್ಥಿತಿ ತಲುಪುತ್ತದೆ!!

  • ಪವಿತ್ರ
Editor Postcard Kannada:
Related Post