X

10 ನೇ ಜನಪಥ್ ಬಂಗಲೆಯಿಂದ ಸೋನಿಯಾ ಗಾಂಧಿಯನ್ನು ಈಗಲೇ ಹೊರ ಹಾಕಬೇಕಿದೆ!! ಪ್ರಧಾನಿ ಮೋದಿಯ ರಂಗ ಪ್ರವೇಶವಾಗ ಬೇಕಿದೆ! ಯಾಕೆ ಗೊತ್ತಾ?!

ನಮ್ಮ ದೇಶದಲ್ಲೊಂದು ರಾಜ ಮನೆತನವಿದೆ! ಅದು ಅಂತಿಂತಹ ರಾಜ ಮನೆತನವಲ್ಲ! ಬದಲಿಗೆ, ೧೯೪೭ ರಿಂದ ಭಾರತದ ರಾಜಕೀಯ ಗದ್ದುಗೆಯಲ್ಲಿರುವಂತಹ ರಾಜ ಮನೆತನ!! ಭಾರತದಲ್ಲಿರುವುದು ಪ್ರಜಾಪ್ರಭುತ್ವವಾದರೂ ಸಹ, ಉಹೂಂ! ಈ ಮನೆತನಕ್ಕದು ಅನ್ವಯಿಸುವುದೇ ಇಲ್ಲ! ಬಿಡಿ!! ಈ ಮನೆತನಕ್ಕೆ ಅದ್ಯಾವ ಕಾನೂನು ಕಟ್ಟಳೆಗಳಿಲ್ಲವೇ ಇಲ್ಲ! ಅಂತಹ ರಾಜಮನೆತನವೊಂದು ಕಳೆದ ಏಳು ದಶಕಗಳಿಂದಲೂ ಸಹ ಭಾರತವನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಗಿಳಿಸಿ ಬಿಟ್ಟಿದೆ! ಓಹ್ ! ಬಿಡಿ! ನೆಹರೂ ಮನೆತನಕ್ಕೆ ದೇಶವನ್ನು ಲೂಟಿ ಹೊಡೆಯಿರಿ ಎಂದು ಸ್ವತಃ ಅನುವು ಮಾಡಿಕೊಟ್ಟಿದ್ದೂ ನಾವೇ ಅಲ್ಲವೇ?!

ಅಚ್ಚರಿಯೇನೆಂದರೆ, ಅದೆಷ್ಟೋ ಸಹಸ್ರ ಕೋಟಿ ರೂ ಗಳನ್ನು ಲೂಟಿ ಹೊಡೆದರೂ ಸಹ ನೆಹರೂ ಮನೆತನಕ್ಕೆ ಎಂಟು ನಿಮಿಷಗಳಲ್ಲಿ ಜಾಮೀನು ಸಿಗುತ್ತದೆ! ಆದರೆ, ಅದೇ ಸಣ್ಣ ಕಳ್ಳತನ ಮಾಡಿದ ಸಾಮಾನ್ಯ ಮನುಷ್ಯನಿಗೆ ಎಂಟು ತಿಂಗಳಾದರೂ ಸಹ ಜಾಮೀನು ಸಿಗುವುದೇ ಇಲ್ಲ! ಯಾವುದೇ ರಾಜಕೀಯ ಚುನಾವಣೆಗಳನ್ನು ಎದುರಿಸದ, ಸರಕಾರೀ ಹುದ್ದೆಯಲ್ಲಿಯೂ ಇರದ ರಾಬರ್ಟ್ ವಾದ್ರಾನಿಗೆ ಕೇವಲ, ನೆಹರೂ ಮನೆತನದ ಅಳಿಯನೆಂಬ ಕಾರಣಕ್ಕೆ ವಿಮಾನ ನಿಲ್ದಾಣಗಳಲ್ಲಿ ವಿಐಪಿ ಪಾಸ್ ಸಿಗುತ್ತದೆ! ರಾಬರ್ಟ್ ವಾದ್ರಾ ಅದೆಷ್ಟೋ ಹಗರಣಗಳಲ್ಲಿ, ಅಕ್ರಮ ವ್ಯವಹಾರಗಳ ಆರೋಪದ ಮೇಲೆ ಪೋಲಿಸರ ಅತಿಥಿಯಾಗಿದ್ದರೂ ಸಹ, ಅವನೊಬ್ಬ ಈ ದೇಶದ ವಿಐಪಿ! ಅದೇ ಸಚ್ಚಾರಿತ್ಯ್ರದ ವ್ಯಕ್ತಿಯೊಬ್ಬನನ್ನು ವಿಮಾನ ನಿಲ್ದಾಣಗಳಲ್ಲಿ ಬಾರಿ ಬಾರಿಗೂ ಪರೀಕ್ಷಿಸಲಾಗುತ್ತದೆ!! ಒಂದಲ್ಲ, ಎರಡು ಗಂಟೆಯಾದರೂ ಆತ ಸರತಿಯಲ್ಲಿ ನಿಲ್ಲುತ್ತಾನೆ!

ವಾಸ್ತವವಾಗಿ, ಈ ನೆಹರೂ ಮನೆತನದವರು ತಮ್ಮ ತಾ ಈ ದೇಶದ ರಾಜ ಮನೆತನದವರೆಂದಯ ಸ್ವತಃ ಘೋಷಿಸಿಕೊಂಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ?! ಅರ್ಹತೆಯಿಲ್ಲದಂತಹದ್ದನ್ನೂ ಸಹ ಗಳಿಸಿಕೊಂಡು ಅನುಭವಿಸುವ ಕಲೆ ಬಹುಷಃ ನೆಹರೂ ಮನೆತನದವರಿಗೆ ಮಾತ್ರ ಸಿದ್ಧಿಸಿದ್ದಷ್ಟೇ! ಈ ದೇಶದ
ಅತ್ಯುನ್ನತ ಸೌಲಭ್ಯಗಳೂ ಸಹ ಇದೇ ನೆಹರೂ ಮನೆತನದವರು ಅನುಭವಿಸುತ್ತಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದೇನೋ?! ಆದರದು ವಾಸ್ತವ!
ಇಟಲಿಯಿಂದ ಬಳುಕುತ್ತ ಬಂದಳಲ್ಲವಾ ಸೋನಿಯಾ ಗಾಂಧಿ?! ಆಕೆ ವಾಸವಾಗಿರುವ ಬಂಗಲೆಯೊಂದು ನಮ್ಮ ದೇಶದ ಪ್ರಧಾನಿ ವಾಸ ಮಾಡುವ ಬಂಗಲೆಗಿಂತ ದೊಡ್ಡದಾಗಿದೆ! ೧೦ ಜನಪಥ್ ಬಂಗಲೆ ಯೊಂದು ಉಳಿದೆಲ್ಲ ಜನಪಥ ನಿವಾಸಗಳಿಗಿಂತ ಬೃಹತ್ತಾಗಿದೆ ಮತ್ತು, ಇದೇ ನೆಹರೂ ಕುಟುಂಬ ದಶಕಗಳಿಂದಲೂ ಸಹ ಆ ಬಂಗಲೆಯಲ್ಲಿಯೇ ವಾಸಿಸುತ್ತಿದೆ!

ಯಾವತ್ತು, ನೆಹರೂ ವನ್ನು ಚುನಾವಣೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸೋಲಿಸಿದರೋ, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರಿಯವರಿಗೆ ಮೊದಲ ಬಾರಿ ೧೦ ನೇ ಜನಪಥ ಬಂಗಲೆಯನ್ನು ನೀಡಲಾಯಿತು! ತದನಂತರ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ೧೦ ನೇ ಜನಪಥ್ ಬಂಗಲೆಯನ್ನು ನೀಡಲಾದರೂ ಸಹ, ರಾಜೀವ್ ಗಾಂಧಿ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಉಳಿಯಲು ನಿರ್ಧರಿಸಿದರಷ್ಟೇ!! ಈ ಹತ್ತನೇ ಜನಪಥ್
ಬಂಗಲೆಯನ್ನು ಪಕ್ಷದ ಕೆಲಸಗಳಿಗಾಗಿ, ಮತ್ತು ಸಭೆಗಳಿಗಾಗಿ ಬಳಸಲಾಯಿತು! ಆದರೆ, ಅವತ್ತಿನಿಂದ ೧೦ ಜನಪಥ್ ಬಂಗಲೆ ಯೊಂದು ರಾಜೀವ್ ಗಾಂಧಿ ಹೆಸರಲ್ಲೇ ಉಳಿಯಿತು! ರಾಜೀವ್ ಗಾಂಧಿಯ ಹತ್ಯೆಯ ನಂತರ ಬಂದದ್ದು, ವಿ ಪಿ ಸಿಂಗ್ ಸರಕಾರವಾದರೂ ಸಹ, ೧೦ ನೇ ಜನಪಥ್ ಬಂಗಲೆಯನ್ನು ರಾಜೀವ್ ಗಾಂಧಿಯ ಹೆಸರಿನಲ್ಲೇ ಉಳಿಸಿ, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಬಂಗಲೆಯನ್ನು ಪ್ರಧಾನ ಮಂತ್ರಿಯ ವೃತ್ತಿಪರ ನಿವಾಸವನ್ನಾಗಿ ಪರಿವರ್ತಿಸಲಾಯಿತು!

ಆದರೆ, ೧೦ ನೇ ಜನಪಥ ಬಂಗಲೆಯಿರುವುದು ಕೇವಲ ಪ್ರಧಾನಿಗೆ ಮಾತ್ರವೇ! ಸೋನಿಯಾ ಗಾಂಧಿಗೆ ಅದನ್ನು ಯಾವ ಲೆಕ್ಕದಲ್ಲಿಯೂ ಬಳಸಲು ಅರ್ಹತರಯೇ ಇಲ್ಲವಾದರೂ ಸಹ, ಅದೆಷ್ಟೋ ದಶಕಗಳಿಂದ ಅದೇ ಬಂಗಲೆಯಲ್ಲಿ ವಾಸವಿರುವ ಆಕೆಗೆ ಯಾರೂ ಸಹ ಪ್ರಶ್ನಿಸಲೂ ಇಲ್ಲವೆನ್ನುವುದು ದುರಂತವೋ ಅಥವಾ, ಭಾರತದ ರಾಜಕಾರಣಿಗಳು ತೋರಿದ ಉದಾರತೆಯೋ! ಆದರೆ, ಸೋನಿಯಾ ಗಾಂಧಿ ಮಾತ್ರ ಆ ಬಂಗಲೆಯನ್ನು ಬಿಟ್ಟು ಹೊರಡಲಿಲ್ಲ! ಅದರಲ್ಲೂ ಸಹ, ರಾಜೀವ್ ಗಾಂಧಿ ಹೆಸರಿನಲ್ಲಿಯೇ ಉಳಿದಿದ್ದ ಬಂಗಲೆಯೊಂದನ್ನು ಆಕ್ರಮಿಸಿಕೊಳ್ಳುವುದಕ್ಕೆ ಸಿಕ್ಕ ಸಮರ್ಥನೆಯೂ ಅಷ್ಟೇ ಬಲವಾಗಿತ್ತು! ಯಾವ ಆಂತರಿಕ ಚುನಾವಣೆಯೂ ಇಲ್ಲದೇ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನೇರಿದ ನಂತಹ ಪತಿಯ ಹೆಸರು ಹೇಳುತ್ತಲೇ ಜನಪಥ್ ಬಂಗಲೆಯಲ್ಲಿ ಉಳಿದಳು ಮಹಾತಾಯಿ!

The 10 JP was first given to Late Prime Minister Sri Lal Bahadur Shastri after he succeeded Jawaharlal Nehru. It was during the time when Rajiv Gandhi was the Prime Minister he allocated the 10 Janpath for him. But he chose to stay in 7 Race Course Road (Lok Kalyan Marg). The 10 JP was used by Rajiv Gandhi for his party work and it remained in his name. But after Rajiv Gandhi’s death and V P Singh government came to power, the 7 RCR was made the official residence of the Prime Minister.

ಸೋನಿಯಾ ಳನ್ನಂತೂ ಬಿಡಿ! ಏನೋ ಒಬ್ಬಂಟಿ ಹೆಣ್ಣು ಮಗಳು! ಅದೂ ಪರದೇಶದವಳು! ಎಂಬೆಲ್ಲ ಉದಾರತೆ ಯಿಂದ ಬಂಗಲೆಯಲ್ಲಿ ಜಾಗ ಕೊಟ್ಟಿರಬಹುದು! ಆದರೆ, ೨೦೦೪ ರಲ್ಲಿ ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಆಯ್ಕೆಯಾದಾಗ ಆತನಿಗೂ ಸಹ ಒಬ್ಬ ಸಂಸದನಿಗಿಂತ ಹೆಚ್ಚಿನದೇ ಕಿಮ್ಮತ್ತಿಮ ಬಂಗಲೆಯನ್ನು ನೀಡಲಾಯಿತು! ಯಾಕೆ?! ಕೇವಲ ರಾಹುಲ್ ಮತ್ತು ಸೋನಿಯಾ ಗಾಂಧಿಗಷ್ಟೇ ಬಂಗಲೆ ನೀಡಲಿಲ್ಲ! ಬದಲಾಗಿ, ದೆಹಲಿಯ ಹೃದಯ ಭಾಗದಲ್ಲಿ ರುವ ಸರಕಾರದ ಉನ್ನತ ಹುದ್ದೆಗಳಲ್ಲಿರುವವಗೆ ಮಾತ್ರವೇ ಇರುವಂತಹ ಬಂಗಲೆಯ ಸೌಲಭ್ಯವನ್ನು, ಕೇವಲ ಸೋನಿಯಾಳ ಮಗಳು ಮತ್ತು ಅಳಿಯ ನೆಂಬ ಕಾರಣಕ್ಕೆ , ಪ್ರಿಯಾಂಕ ಮತ್ತು ರಾಬರ್ಟ್ ವಾದ್ರಾನಿಗೆ ನೀಡಲಾಯಿತು?! ಯಾವ ಪುರುಷಾರ್ಥಕ್ಕೆ ಸ್ವಾಮಿ?! ಇದನ್ನಷ್ಟೂ ನೀಡಿದ್ದು ಬೇರಾವ ದೇಶದ ಸರಕಾರವಲ್ಲ! ಬದಲಿಗೆ, ನಮ್ಮದೇ ಭಾರತ ಸರಕಾರ! ಅದರಲ್ಲೂ, ಕಾಂಗ್ರೆಸ್ ಸರಕಾರವೊಂದು ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ!!

These Bungalows have more than 6-7 rooms, conference and meeting halls, gym and recreational facilities, huge lawn and parking for multiple cars. The Bungalows also have servants, maids, cooks and gardeners who are all paid by government. The rent of these houses is over 5 lakh and apart from rent the maintenance cost itself crosses over 20-30 lakh every year.

ವಿಚಾರವಿಷ್ಟೇ! ಈ ಬಂಗಲೆಗಳ ಬಾಡಿಗೆಯನ್ನು ಕಟ್ಟುವುದು ಅಲ್ಲಿ ಉಳಿಯುವ ರಾಜಕಾರಣಿಗಳಲ್ಲ! ಬದಲಿಗೆ, ಜನರ ತೆರಿಗೆಯ ಹಣದ ಮೂಲಕ !! ಈ ಬಂಗಲೆಗಳು ಸಾಮಾನ್ಯವಾದದ್ದಲ್ಲ! ಬದಲಿಗೆ ಐಷಾರಾಮಿ ಬಂಗಲೆಗಳು! ೬ – ೭ ಶಯನಗೃಹಗಳು! ಸಭಾಂಗಣಗಳು, ಜಿಮ್ ಮತ್ತು ಮನೋರಂಜನೆಯ ಸೌಕರ್ಯಗಳು, ಬೃಹತ್ತಾದ ಲಾನು, ಮತ್ತು ಅದೆಷ್ಟೋ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ! ಬಂಗಲೆಗಳಲ್ಲಿ ಕೆಲಸ ಮಾಡುವ ಮಾಲಿಯಿಂದ ಹಿಡಿದು, ಬಾಣಸಿಗನವರೆಗೂ ಸಹ ಸರಕಾರವೇ ಸಂಬಳವನ್ನು ಭರಿಸುತ್ತವೆ! ಈ ಪ್ರತೀ ಬಂಗಲೆಯ ಬಾಡಿಗೆ ಐದು ಲಕ್ಷಕ್ಕಿಂತ್ ಹೆಚ್ಚು ಮತ್ತು, ವರ್ಷದ ನಿರ್ವಹಣಾ ವೆಚ್ಚವೊಂದು ೨೦ – ೩೦ ಲಕ್ಷಕ್ಕೂ ಜಾಸ್ತಿ !!

ಹಾಗಿದ್ದಾಗ ಕಲ್ಪಿಸಿಕೊಳ್ಳಿ!! ಇಂತಹ ವಿಐಪಿ ಗಳ ಖರ್ಚು ಭರಿಸುವುದಕ್ಕೆ ಪ್ರಜೆಗಳ ತೆರಿಗೆ ಹಣವೊಂದು ಎಷ್ಟು ಖರ್ಚಾಗುತ್ತಿರಬಹುದು?!

ಅಕಸ್ಮಾತ್, ಈ ಕಾಂಗ್ರೆಸ್ ಸರಕಾರದ ಬೇಕಾ ಬಿಟ್ಟಿ ವ್ಯವಹಾರವೊಂದು ಇಲ್ಲಿಗೇ ಮುಗಿಯಿತೆಂದು ಕೊಂಡರೆ, ನಿಮ್ಮ ಊಹೆ ತಪ್ಪು! ಹಿಂದೆ, ಹತ್ತು ವರ್ಷಗಳ ಕಾಂಗ್ರೆಸ್ ನ ಆಡಳಿತಾವಧಿಯಲ್ಲಿ ರಾಬರ್ಟ್ ವಾದ್ರಾನ ತಾಯಿಯಾದ ಮೌರೀನ್ ವಾದ್ರಾಳಿಗೂ ಸಹ ಬಂಗಲೆಯನ್ನು ನೀಡಿದ್ದ ಸರಕಾರ, ಆಕೆಗೆ ಗುಪ್ತವಾಗಿ ಭದ್ರತೆಯನ್ನೂ ಒದಗಿಸಿತ್ತು! ಆಕೆ ಯಾವ ದಿಕ್ಕಿನಲ್ಲಿ ನೋಡಿದರೂ ರಾಜಕೀಯಕ್ಕೆ ಸಂಬಂಧಿಸಿದವಳಲ್ಲ! ಅದರಲ್ಲಿಯೂ, ಆಕೆಯ ಬಂಗಲೆಯ ಬಾಡಿಗೆಯನ್ನು ಸರಕಾರವೇ ಭರಿಸಿತ್ತು! ಕೇವಲ, ಆಕೆ ಕಾಂಗ್ರೆಸ್ ಗೆ ಹತ್ತಿರವಾದಂತಹ ವ್ಯಕ್ತಿ ಎಂಬ ಉದ್ದೇಶ ಮಾತ್ರಕ್ಕೇ ಆಕೆಗೆ ಸಕಲ ಸರಕಾರೀ ಸೌಲಭ್ಯವನ್ನು ನೀಡಲಾಗಿತ್ತು! ದಶಕಗಳ ಕಾಲ, ಗುಟ್ಟಾಗಿಯೇ ಆಕೆಯನ್ನು ಸಲಹಿದ್ದ ಕಾಂಗ್ರೆಸ್ ಸರಕಾರದ ಈ ಹುಚ್ಚಾಟ ಇವತ್ತು ಎಷ್ಟು ಜನರಿಗೆ ಗೊತ್ತಿದೆ?! ಯಾವಾಗ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿತೋ, ಇಂತಹ ಅದೆಷ್ಟೋ ಜನರನ್ನು ಬಂಗಲೆಯಿಂದ ಹೊರ ಹಾಕಲಾಗಿತ್ತು!

ಆದರೆ, ಇವತ್ತಿನ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಅದೇ! ೧೦ ನೇ ಜನಪಥ್ ನಿವಾಸದಲ್ಲಿ ಇನ್ನೂ ಸಹ ಸೋನಿಯಾ ಗಾಂಧಿ ವಾಸ ಮಾಡುತ್ತಿರುವುದ್ಯಾಕೆ?! ಆಕೆ ಈಗ ರಾಷ್ಟ್ರೀಯ ಪಕ್ಷದ ಅಧ್ಯಕ್ಷೆಯೂ ಅಲ್ಲ! ಅಷ್ಟಾದರೂ, ಸರಕಾರೀ ಬಂಗಲೆ ಯಾಕೆ?!

ಉಳಿದ ೫೪೨ ಸಂಸತ್ ಸದಸ್ಯರಿಗೆ ನೀಡಲಾಗಿರುವ ಬಂಗಲೆಯೊಂದನ್ನು ಆಕೆಗೆ ನೀಡಬಹುದೇ ವಿನಃ ಒಬ್ಬ ಪ್ರಧಾನಿ ವಾಸಿಸುವ ಬಂಗಲೆಯಲ್ಲವೇ ಅಲ್ಲ! ಕೇವಲ ಇದಷ್ಟೇ ಅಲ್ಲ! ಸರ್ವೋಚ್ಛ ನ್ಯಾಯಾಲಯವೊಂದು ಕಾಂಗ್ರೆಸ್ ಕಚೇರಿಗೆ ಹೊಸ ಭೂಮಿಯನ್ನು ಘೋಷಿಸಿದ ನಂತರ, ಅಕ್ಬರ್ ರಸ್ತೆಯಲ್ಲಿರುವ ತನ್ನ ಹೆಚ್ಚುವರಿ ಕಚೇರಿಯನ್ನು ಆರು ವರ್ಷದ ಹಿಂದೆಯೇ ಬಿಟ್ಟು ಕೊಡಬೇಕಿತ್ತು ಕಾಂಗ್ರೆಸ್! ಉಹೂಂ! ಇವತ್ತಿಗೂ, ಅಕ್ಬರ್ ರಸ್ತೆಯಲ್ಲಿರುವ ಬಂಗಲೆಯೂ ಸಹ ಇನ್ನೂ ಕಾಂಗ್ರೆಸ್ ನ ಅಧೀನದಲ್ಲಿದೆ! ಆರು ವರ್ಷಗಳಾದರೂ ಸಹ ಕಚೇರಿಯನ್ನು ಬಿಟ್ಟು ಹೋಗದ ಕಾಂಗ್ರೆಸ್, ಇವತ್ತು ಆ ಬಂಗಲೆಯನ್ನೂ ತನ್ನ ಸುಪರ್ದಿಗೆ ಶಾಶ್ವತವಾಗಿ ತೆಗೆದುಕೊಳ್ಳುವ ಹುನ್ನಾರ ನಡೆಸಿದೆ ಯಷ್ಟೇ!!

ಇದು ಕೇವಲ ಉದಾಹರಣೆಯಷ್ಟೇ!! ಹೇಗೆ, ಸ್ವಘೋಷಿತ ರಾಜ ಮನೆತನವೊಂದು ಸರಕಾರೀ ಸೌಲಭ್ಯಗಳನ್ನು ತಮ್ಮ ವೈಯುಕ್ತಿಕವಾದ ಕೆಲಸಕ್ಕೆ
ಬಳಸುತ್ತಿದ್ದಾರೆ ಎಂಬುದಷ್ಟೇ!! ಕಲ್ಪಿಸಿಕೊಳ್ಳಿ! ಕೇವಲ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯರಾಗಿದ್ದಾರೆಂಬ ಮಾತ್ರಕ್ಕೆ ಅರ್ಹತೆಗಿಂತ ಹೆಚ್ಚಿಗೆಯಾದ ಸೌಲಭ್ಯಗಳನ್ನು
ನೀಡುತ್ತಿದ್ದಾರೆಂದರೆ ಇನ್ನು, ಅದೆಷ್ಟು ಆಟವಾಡಿರಬಹುದು?!

ಇನ್ನಾದರೂ ಸರ್ವೋಚ್ಛ ನ್ಯಾಯಾಲಯ ಸ್ವತಃ ಕಾನೂನು ಪಾಲಿಸಬೇಕಿದೆ! ಪ್ರಧಾನಿ ಮೋದಿಯ ಗೃಹ ಪ್ರವೇಶವಾಗ ಬೇಕಿದೆ!! ಅರ್ಹತೆಗೂ ಮೀರಿದ್ದನ್ನು ನೀಡಿದರೆ, ಅದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಮೋಸವಷ್ಟೇ !

– ಪೃಥು ಅಗ್ನಿಹೋತ್ರಿ

Editor Postcard Kannada:
Related Post