X
    Categories: ದೇಶ

ರಾಷ್ಟ್ರಗೀತೆ ಅಂದರೆ ಕಾಂಗ್ರೆಸ್‌ಗೇಕೆ ದ್ವೇಷ?

ಕಾಂಗ್ರೆಸ್‌ಗೆ ಈ ದೇಶಕ್ಕೆ ಸಂಬಂಧಿಸಿದಂತೆ ಇರೋ ರಾಷ್ಟ್ರಗೀತೆ ಆಗಿರಬಹುದು, ವಂದೇ ಮಾತರಂ ಆಗಿರಬಹು, ರಾಷ್ಟ್ರ ಭಕ್ತಿಗೆ ಧ್ಯೋತಕವಾಗೋ ಎಲ್ಲಾ ವಿಷಯಗಳ ಮೇಲೆಯೂ ಒಂದು ರೀತಿಯ ತಾತ್ಸಾರ ಮನೋಭಾವ.

ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ‌ದಲ್ಲಿ ಸಂವಿಧಾನ‌ಕ್ಕೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮ ಒಂದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಂದೇ ಮಾತರಂ ಹಾಡದಂತೆ ಹೇಳಿದ್ದು, ವಂದೇ ಮಾತರಂ‌ಗೆ ವಿರೋಧ ವ್ಯಕ್ತಪಡಿಸಿದ್ದು ನಿಮಗೆ ಗೊತ್ತೇ ಇದೆ. ಹಾಗೆಯೇ ಮಧ್ಯಪ್ರದೇಶ‌ದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಎಂಬ ನಾಟಕದಲ್ಲಿಯೂ ರಾಷ್ಟ್ರಗೀತೆ ಬದಲಿಗೆ ಇನ್ಯಾವುದೋ ಹಾಡು ಹಾಕಿದ್ದು, ಆ ಹಾಡಿಗೆ ಒಂದಷ್ಟು ಸಮಯ ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ಸಹಿತ ಎಲ್ಲರೂ ಸ್ತಬ್ಧ‌ರಾಗಿ ನಿಂತಿದ್ದು, ಆಮೇಲೆ ವಾಸ್ತವಕ್ಕೆ ಬಂದು ನಮ್ಮ ರಾಷ್ಟ್ರಗೀತೆ ಇದಲ್ಲ ಎಂದು ಗೋಚರವಾಗಿದ್ದು ನಾವೆಲ್ಲರೂ ಮಾಧ್ಯಮ‌ಗಳ ಮೂಲಕ ತಿಳಿದಿರಬಹುದು.

ಇಂತದ್ದೇ ಒಂದು ಪ್ರಮಾದ ಕಾಂಗ್ರೆಸ್ ಪಕ್ಷದ ನಾಯಕನೊಬ್ಬನಿಂದ ಮತ್ತೆ ನಡೆದಿದೆ. ಬಿಹಾರದ ವಿಧಾನಸಭೆಯೊಳಗೆ ಚಳಿಗಾಲದ ಅಧಿವೇಶನ ಉದ್ಘಾಟನೆ ಸೋಮವಾರ‌ವಷ್ಟೇ ನಡೆದಿತ್ತು. ಈ ವೇಳೆ ಅರಾರಿಯಾ ವಿಧಾನಸಭಾ ಕ್ಷೇತ್ರ‌ವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನ ಅವಿದುರ್ ರೆಹಮಾನ್ ಎಂಬಾತ, ಎದ್ದು ನಿಲ್ಲದೆ ರಾಷ್ಟ್ರಗೀತೆ‌ಗೆ ಅವಮಾನ ಮಾಡಿದ್ದಾರೆ. ಕಾಲು ನೋವಿನ ಕಾರಣ ತಾನು ಎದ್ದು ನಿಲ್ಲಲಾಗಲಿಲ್ಲ ಎಂದು ಸಮಜಾಯಿಷಿ ಸಹ ನೀಡಿದ್ದರು. ಆದರೆ ಅದೇ ಕಲಾಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲು 2 ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಇತರ ಸದಸ್ಯರ ಜೊತೆಗೆ ಈತನೂ ಎದ್ದು ನಿಂತಿರುವುದು ಕಂಡು ಬಂತು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ರಾಷ್ಟ್ರಗೀತೆ‌ಗೆ ನಿಲ್ಲಲಾಗದ ಆ ವ್ಯಕ್ತಿಗೆ ಅದು ಹೇಗೆ ಕಾಲು ನೋವು ಅಷ್ಟು ಬೇಗನೆ ವಾಸಿಯಾಯಿತು. ಈ ನಡೆಯನ್ನು ಉದ್ದೇಶಪೂರ್ವಕವಾಗಿ ನಡೆಸಿದಂತಿದೆ ಎಂದೂ ಹೇಳಿದರು. ಈ ರೀತಿ ನಾಟಕ ಮಾಡಿರುವ ಶಾಸಕನ ವಿರುದ್ಧ ದೇಶದ್ರೋಹದ ಆರೋಪ ಹೊರಿಸಬೇಕು ಎಂದು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿತು. ಈ ಹಿಂದೆಯೂ ಬಿಹಾರ ವಿಧಾನಸಭೆಯಲ್ಲಿ ಇಂತದ್ದೇ ಪ್ರಕರಣ ನಡೆದಿದ್ದು, ಜುಲೈ ತಿಂಗಳಲ್ಲಿ ಆರ್‌ಜೆಡಿ ಶಾಸಕ ಸೌದ್ ಆಲಂ ಎಂಬವರು ವಂದೇಮಾತರಂಗೆ ಎದ್ದು ನಿಲ್ಲಲು ನಿರಾಕರಿಸಿ, ಭಾರತ ಹಿಂದೂ ರಾಷ್ಟ್ರ ಅಲ್ಲ ಎಂದು ಹೇಳುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಾಂಗ್ರೆಸ್‌ನ ಇಂತಹ ದೇಶದ್ರೋಹಿ ಕೃತ್ಯಗಳನ್ನು ಗಮನಿಸುವಾಗ, ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನಿಜವಾಗಿಯೂ ಈ ದೇಶಕ್ಕೆ ಬೇಕಾಗಿ ಹೋರಾಟ ನಡೆಸಿತ್ತೇ? ಎನ್ನುವ ಸಂದೇಹ ಕಾಡದಿರದು. ಒಟ್ಟಿನಲ್ಲಿ ಈ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಸದಸ್ಯರ ಇಂತಹ ನಡೆ ಕಾಂಗ್ರೆಸ್ ಮುಕ್ತ ಭಾರತಕ್ಕೂ ದಾರಿಯಾದೀತು ಎನ್ನುವುದರಲ್ಲಿ ಸಂಶಯವಿಲ್ಲ.

Post Card Balaga:
Related Post