X
    Categories: ದೇಶ

ಅವ್ರು ಮಾಡಿದ್ರೆ ತಪ್ಪು.. ಮತ್ತೆ ಇವ್ರು ಮಾಡಿದ್ರೆ ಯಾಕೆ ವಿರೋಧಿಸಲ್ಲ? ಯಾಕಂದ್ರೆ…

ಹಿಂದೂಗಳು ಮೌನವಾಗಿ ಎಲ್ಲವನ್ನೂ ಸಹಿಸಿದಷ್ಟು, ಹಿಂದೂ ವಿರೋಧಿಗಳ ಅವಹೇಳನ ಹೆಚ್ಚಾಗುತ್ತಲೇ ಇರುತ್ತದೆ. ಇದೀಗ ಹಿಂದೂಗಳು ತಮಗಾಗುತ್ತಿರು ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಹಿಂದೂ ಧರ್ಮದ ಮೇಲೆ ಸವಾರಿ ಮಾಡುವವರನ್ನು ಪ್ರಶ್ನೆ ಮಾಡುವ, ಇಂದು ನೆರೆ ಮನೆಯಲ್ಲಿ ಉರಿಯುವ ಬೆಂಕಿ ನಾಳೆ ನಮ್ಮ ಮನೆಯನ್ನು ಸಹ ಸುಟ್ಟೀತು ಎನ್ನುವುದನ್ನು ಅರಿತು ಒಗ್ಗಟ್ಟಿನ ಸಮರ ನಡೆಸುವತ್ತ ಚಿತ್ತ ನೆಟ್ಟಿರುವುದು ಹರ್ಷದಾಯಕ.

ಅಂದ ಹಾಗೆ ಕಳೆದ ಮೂರು ದಿನಗಳಿಂದ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ಮತ್ತು ಅದರಲ್ಲಿ ದೀಪಿಕಾ ಪಡುಕೋಣೆ ತೊಟ್ಟ ಕೇಸರಿ ಬಣ್ಣದ ತುಂಡುಡುಗೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ವಿರೋಧ, ವಿವಾದ ಎದ್ದಿರುವುದು ಎಲ್ಲರಿಗೂ ಗೊತ್ತೇ ಇದೆ‌. ಇದರ ಬೆಳವಣಿಗೆ ಎಂಬಂತೆ ಶಾರುಖ್ ಖಾನ್ ಈ ರೀತಿ ಅಸಭ್ಯವಾಗಿ ಕೇಸರಿ ಬಣ್ಣದ ಬಟ್ಟೆ ತೊಡಿಸಿ ನೃತ್ಯ ಮಾಡಿಸಿರುವುದನ್ನು ವಿರೋಧ ಮಾಡುವವರಿಗೆ, ದೆ ದನಾ ದನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕತ್ರಿನಾಳನ್ನು ಕೇಸರಿ ಬಣ್ಣದ ಬಟ್ಟೆಯಲ್ಲಿ ನೃತ್ಯ ಮಾಡಿಸಿದ್ದು ಕಣ್ಣಿಗೆ ಬಿದ್ದಿರಲಿಲ್ಲವೇ. ಖಾನ್ ಮಾಡಿದರೆ ತಪ್ಪು ,ಅಕ್ಷಯ್ ಮಾಡಿದರೆ ಸರಿಯೇ ಎಂಬ ಪ್ರಶ್ನೆ‌ಗಳನ್ನೆತ್ತುತ್ತಿದ್ದಾರೆ.

ಆದರೆ ಈ ಪ್ರಶ್ನೆ ಮಾಡುವಂತಹ ಬುದ್ದಿಜೀವಿಗಳು ಯಾತಕ್ಕಾಗಿ ಶಾರುಖ್ ಖಾನ್ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎನ್ನುವುದರ ನಿಜವಾದ ಕಾರಣವನ್ನು ಅರ್ಥೈಸಿಕೊಳ್ಳಬೇಕಿದೆ. ಶಾರುಖ್ ಖಾನ್ ಸೂಚ್ಯವಾಗಿ ‘ಕೇಸರಿ ನಾಚಿಕೆ ಇಲ್ಲದ ಬಣ್ಣ’ ಎಂದು ಹಾಡಿನ ಮೂಲಕ ಹೇಳಿ, ತನ್ನೊಳಗಿನ ಹಿಂದೂ ಧರ್ಮದ ಮೇಲಿನ ದ್ವೇಷವನ್ನು ಬಹಳ ಸೂಕ್ಷ್ಮವಾಗಿ ಹೊರಹಾಕಿದ್ದಾನೆ ಎಂಬುದು ಕರಾಳ ಸತ್ಯ. ಇಲ್ಲಿ ಆತ ದೀಪಿಕಾಳನ್ನು ಬಳಸಿ, ಕೇಸರಿ ಬಣ್ಣದ ಬಟ್ಟೆ ತೊಡಿಸಿದ್ದರೆ ಮಾತ್ರ ವಿವಾದ ಏರ್ಪಡುತ್ತಿರಲಿಲ್ಲ‌. ಹಾಗೆಯೇ ಇನ್ಯಾವುದೋ ಬಣ್ಣದ ಬಟ್ಟೆ ಹಾಕಿಸಿ ದೀಪಿಕಾಳನ್ನು ಕುಣಿಸಿದ್ದರೂ ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೇಸರಿ ಬಣ್ಣದ ತುಂಡುಡುಗೆಯ‌ಲ್ಲಿ ದೀಪಿಕಾಳನ್ನು ಅಸಭ್ಯವಾಗಿ ಚಿತ್ರಿಸಿ, ಅದಕ್ಕೆ ಬೇಷರಂ ರಂಗ್ ಎಂದು ಹೇಳಿರುವುದಕ್ಕೆ ಜನರು ವಿರೋಧ ಮಾಡುತ್ತಿರುವುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಅಕ್ಷಯ್ ಕುಮಾರ್ ಕೇಸರಿ ಬಟ್ಟೆ ತೊಡಿಸಿ ಅದರಲ್ಲಿ ಸೂಚ್ಯವಾಗಿ ಯಾವುದೋ ಧರ್ಮ‌ವನ್ನು ಅವಹೇಳನ ಮಾಡಿರಲಿಲ್ಲ. ಆದರೆ ಶಾರುಖ್ ಹಾಗಲ್ಲ, ಬಹಳ ಸೂಚ್ಯವಾಗಿ ಹಿಂದೂ ಧರ್ಮದ ಮೇಲೆ ಸವಾರಿ ಮಾಡುವ ಕೆಲಸವನ್ನು, ಹಿಂದೂ ಧರ್ಮದ ಮೇಲಿನ ತನ್ನ ಕೀಳು ಮನಸ್ಥಿತಿಯನ್ನು ಈ ಹಾಡಿನ ಮೂಲಕ ಜಗಜ್ಜಾಹೀರು ಮಾಡಿದ್ದಾನೆ. ಆ ಮೂಲಕ ತಾನೇ ಸೃಷ್ಟಿ ಮಾಡಿದ ವಿವಾದದ ಸುಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾನೆ. ಅವನೇ ಮಾಡಿದ ತಪ್ಪಿಗೆ ಅವನು ಶಿಕ್ಷೆ ಅನುಭವಿಸುತ್ತಿದ್ದಾನೆ. ಆ ಮೂಲಕ ಇತರರಿಗೂ ಹೀಗೆಲ್ಲಾ ಬೇಕಾಬಿಟ್ಟಿ ವರ್ತಿಸಿದರೆ ಪರಿಣಾಮ ಹೇಗಿರುತ್ತದೆ ಎನ್ನುವುದಕ್ಕೆ ಬೇರೆಯವರಿಗೂ ಉದಾಹರಣೆ, ಪಾಠ ಎರಡೂ ಆಗಿದ್ದಾನೆ ಅಷ್ಟೇ.

ಇಲ್ಲಿ ಕೇವಲ ಕೇಸರಿ ಬಣ್ಣದ ಬಟ್ಟೆ ಪ್ರಶ್ನೆ‌ಯಾಗಿದೆ ಎಂದುಕೊಳ್ಳುವವರು, ನಿಜವಾದ ಸಮಸ್ಯೆ ಅದಲ್ಲ. ಆ ಬಣ್ಣಕ್ಕೆ ಯಾವ ಹಾಡನ್ನು ಬಳಕೆ ಮಾಡಲಾಗಿದೆ ಮತ್ತು ನಟಿಯನ್ನು ಆ ಬಣ್ಣದ ಬಟ್ಟೆಯಲ್ಲಿ ಎಷ್ಟು ಅಶ್ಲೀಲ‌ವಾಗಿ ತೋರಿಸಲಾಗಿದೆ ಎನ್ನುವುದಷ್ಟೆ. ಹಾಗಾಗಿ ಈ ಚಿತ್ರ‌ವನ್ನು ಬಹಿಷ್ಕರಿಸುವ ಮೂಲಕ ಒಂದು ಧರ್ಮದ ಮೇಲೆ ಇಂತಹ ಅಪಪ್ರಚಾರ ಮಾಡುವವರಿಗೆ ಎಚ್ಚರಿಕೆ ನೀಡಬೇಕು.

Post Card Balaga:
Related Post