X

ಸಿದ್ದರಾಮಯ್ಯ ವಿರುದ್ದ ತಿರುಗಿ ಬಿದ್ದ ಮಹಿಳಾ ಆಯೋಗ! ರಾಜ್ಯದಲ್ಲಿ ಮಹಿಳೆಯರಿಗಾದ ಅನ್ಯಾಯವೆಷ್ಟು ಗೊತ್ತಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ತನ್ನ ಕಡೇ ದಿನಗಳನ್ನು ಎನಿಸುತ್ತಿರುವಾಗಲೇ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದೆ. ಸಿನಿ ನಟರು,ಕ್ರಿಕೆಟ್ ತಾರೆಯರು, ಸಾಮಾಜಿಕ ಹೋರಾಟಗಾರರು ಎಂದೆಲ್ಲಾ ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಈಗ ರಾಜ್ಯ ಮಹಿಳಾ ಆಯೋಗದ ಸರದಿ.

ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಿಡಿದೆದ್ದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ಹಾಗೂ ಹಿಂಸಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ಮಹಿಳಾ ಆಯೋಗದ ಕಣ್ಣು ಕೆಂಪಗಾಗಿರಿಸಲು ಕಾರಣವಾಗಿದೆ. ಈ ಬಗ್ಗೆ ಆಕ್ರೋಷ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ತಿರುಗಿ ಬಿದ್ದಿವೆ.

ರಾಜ್ಯದಲ್ಲಿ ನಡೆದಿದೆ 7,523 ಕೊಲೆಗಳು..!

ಹೌದು. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಮಹಿಳೆಯರ ಕೊಲೆಯಾದ ಸಂಖ್ಯೆ ಬರೋಬ್ಬರಿ 7,523. ಇದು ರಾಜ್ಯದಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಬಹುದಾಗಿದೆ. ಈ ರೀತಿ ರಾಜ್ಯದಲ್ಲಿ ಮಹಿಳೆಯರ ಕೊಲೆಗಳು ಆಗುತ್ತಿದ್ದು, ಇದು ರಾಜ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಇಷ್ಟೊಂದು ಮಹಿಳೆಯರ ಕೊಲೆಗಳು ಆಗುತ್ತಿದ್ದು ಇದು ಕಾನೂನು ಸುವ್ಯವಸ್ಥೆಯ ಸಂಕೇತ ಎಂದು ಹೇಳಿರುವ ಮಹಿಳಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಕ್ಷ್ಯ ಸಮೇತ ಪ್ರಶ್ನಿಸಿದ್ದಾರೆ.

ಅತ್ಯಾಚಾರದ ಸಂಖ್ಯೆ 3857..!

ಇನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 3857 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹಲವಾರು ಅತ್ಯಾಚಾರ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಇದು ಕೂಡಾ ರಾಜ್ಯದಲ್ಲಿ ಮಹಿಳೆಯರಿಗೆ ಯಾವ ರೀತಿಯ ಭದ್ರತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡುತ್ತಿದ್ದಾರೆ ಎಂದು ಪ್ರಶ್ನಿಸಬಹುದಾಗಿದೆ.

ಇದು ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳಾದರೆ ರಾಜ್ಯದಲ್ಲಿ ಹಿಂಸೆಯ ಪ್ರಕರಣಗಳ ಪಟ್ಟಿ ಶಾಕ್ ಆಗುವಷ್ಟಿದೆ. ರಾಜ್ಯದಲ್ಲಿ ಬರೋಬ್ಬರಿ 24,751 ಮಹಿಳೆಯರ ಮೇಲಿನ ಹಿಂಸೆಯ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಅವಧಿಯ ದಾಖಲೆಗಳಮನ್ನು ತೆಗೆದು ನೋಡಿದರೆ ಇಷ್ಟು ಪ್ರಮಾಣದ ಹಿಂಸಾ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಕಿರುಕುಳ, ದೈಹಿಕ ಹಿಂಸೆ, ವರದಕ್ಷಿಣೆಗೆ ಕಿರುಕುಳ ಸಹಿತ ಇತರೆ ಹಿಂಸೆಯಿಂದ ಮಹಿಳೆಯರು ಕಂಗೆಟ್ಟಿ ಹೋಗಿದ್ದಾರೆ. ಇದು ರಾಜ್ಯದಲ್ಲೇ ಇತಿಹಾಸ ಸೃಷ್ಟಿಸುವಂತಹ ದಾಖಲೆಗಳಾಗಿವೆ.

ಮಹಿಳಾ ಅಧಿಕಾರಿಗಳಿಗೂ ಇಲ್ಲ ರಕ್ಷಣೆ..!

ಇನ್ನು ರಾಜ್ಯದಲ್ಲಿ ಕೇವಲ ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲದೆ ಸ್ವತಃ ಮಹಿಳಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ರಕ್ಷಣೆ ಇಲ್ಲ ಎನ್ನುವ ವಿಚಾರ ಬಯಲಾಗಿದೆ. ಮೇಲ್ನೋಟಕ್ಕೆ ನೋಡೋದಾದರೆ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಎಂಬುವುದು ಇಲ್ಲವೇ ಇಲ್ಲ. ಇದು ನಿನ್ನೆ ಮೊನ್ನೆಯ ವಿಚಾರವಲ್ಲ. ಐಎಎಸ್ ಅಧಿಕಾರಿಗಳಾದ ರಶ್ಮಿ, ರೋಹಿನಿ ಸಿಂಧೂರಿ, ಐಪಿಎಸ್ ಅಧಿಕಾರಿಗಳಾದ ರೂಪಾ ಸಹಿತ ಅನೇಕ ಅಧಿಕಾರಿಗಳು ಸರ್ಕಾರದ ಇಂತಹ ಮಹಿಳಾ ವಿರೋಧಿ ಧೋರಣೆಯಿಂದ ಕಂಗೆಟ್ಟು ಹೋಗಿದ್ದಾರೆ.

ಇದು ಕೇವಲ ಮಹಿಳಾ ಅಧಿಕಾರಿಗಳಿಗೆ ಮಾತ್ರವಲ್ಲದೆ ಮಹಿಳಾ ಜನಪ್ರತಿನಿದಿಗಳಿಗೂ ಕಾಂಗ್ರೆಸ್ ಸರ್ಕಾರದಿಂದ ಕಿರುಕುಳ ಎದುರಾಗಿತ್ತು. ಸ್ವತಃ ಕಾಂಗ್ರೆಸ್ ಜನಪ್ರತಿನಿದಿಗಳಿಗೂ ಈ ರೀತಿಯ ಹಿಂಸೆಗಳು ಎದುರಾಗಿತ್ತು. ಇತ್ತೀಚೆಗೆ ಮಂಗಳೂರಿನ ಮಹಿಳಾ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಎಂಬವರ ಮೇಲೆ ಮುಸಲ್ಮಾನ ಕಾಂಗ್ರೆಸ್ಸಿಗ ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಸ್ವತಃ ಕಾರ್ಪೊರೇಟರೇ ಕಾಂಗ್ರೆಸ್ ನಾಯಕಿಯಾಗಿದ್ದರೂ ಆಕೆಗೆ ನ್ಯಾಯ ಸಿಗಲೇ ಇಲ್ಲ. ಬದಲಾಗಿ ಆಕೆ ಮಾಧ್ಯಮಗಳಲ್ಲಿ ಮಾತನಾಡಿದ ಕಾರಣ ಆಕೆಗೆ ಪಕ್ಷದಿಂದ ಶೋಕಾಸ್ ನೋಟೀಸ್ ನೀಡಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಅಸಲಿ ಮುಖ ಎಂದು ಪರಿಗಣಿಸಬಹುದಾಗಿದೆ.

ಒಟ್ಟಾರೆ ಸ್ವತಃ ಕಾಂಗ್ರೆಸ್ ಪಕ್ಷದ ಮಹಿಳೆಯರಿಗೇ ರಕ್ಣೆ ನೀಡದ ಕಾಂಗ್ರೆಸ್ ಪಕ್ಷ ಇನ್ನು ಉಳಿದ ಯಾವ ಮಹಿಳೆಯರ ರಕ್ಷಣೆ ಹೇಗೆ ಮಾಡುತ್ತೆ ಎಂಬ ಪ್ರಶ್ನೆ ಎದುರಾಗಿದೆ. ಇದು ಮಹಿಳಾ ಆಯೋಗದ ಕಣ್ಣು ಕೆಂಪಗಾಗಿರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post