X

ದಿಢೀರ್ ಫೇಸ್‌ಬುಕ್‌ ಲೈವ್ ನಲ್ಲಿ ಕಾಣಿಸಿಕೊಂಡ ಯಶ್ ನಿಂದ ಸ್ಫೋಟಕ ಮಾಹಿತಿ.! ರಾಜಕೀಯದ ಬಗ್ಗೆ ಯಶ್ ಏನಂದರು ಗೊತ್ತಾ.?!

ಕನ್ನಡ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದ ನಟ ಯಶ್ , ಕೇವಲ ಸಿನಿಮಾಗಳಲ್ಲಿ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲೂ ಜನರ ಪಾಲಿಗೆ ನೆರವಾಗುವ ಸಹಾಯದ ಮನಸ್ಥಿತಿ ಹೊಂದಿದ್ದಾರೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ತನ್ನದೇ ಶೈಲಿಯಲ್ಲಿ ಸಮಾಜ ಸೇವೆ ಮಾಡಿಕೊಂಡು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್ ಮೇಲೆ ಭಾರೀ ಆರೋಪವೊಂದು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ತಾನು ವಾಸಿಸುತ್ತಿರುವ ಬಾಡಿಗೆ ಮನೆಯ ಬಾಡಿಗೆ ನೀಡಲಿಲ್ಲ ಎಂಬ ಆರೋಪವನ್ನು ಮನೆಯ ಮಾಲಿಕ ಮಾಡಿದ್ದಾರೆ.!

ಈ ವಿವಾರವಾಗಿ ಇಂದು ಜನರ ಮುಂದೆ ಫೇಸ್‌ಬುಕ್‌ ಲೈವ್ ನಲ್ಲಿ ಕಾಣಿಸಿಕೊಂಡ ನಟ ಯಶ್ ತನ್ನ ಮೇಲಿರುವ ಎಲ್ಲಾ ಆರೋಪಗಳಿಗೂ ಸಮರ್ಥ ಉತ್ತರ ನೀಡಿ, ರಾಜ್ಯದ ಜನರ ಮನಸ್ಸಲ್ಲಿರುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ.!

ಕ್ಷುಲ್ಲಕ ಕಾರಣಕ್ಕಾಗಿ ಆರೋಪ..!

ಯಶ್ ಕುಟುಂಬ ವಾಸಿಸುವ ಮನೆಯ ಮಾಲಿಕರ ಜೊತೆ ಕೆಲ ಸಮಯದ ಹಿಂದೆ ಸಣ್ಣ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ ಇವರಿಬ್ಬರ ಮಧ್ಯೆ ಸಣ್ಣ ಬಿರುಕು ಉಂಟಾಗಿತ್ತು. ಆದರೂ ಮನೆಯ ಬಾಡಿಗೆಯನ್ನು ತಿಂಗಳು ತಿಂಗಳು ಸರಿಯಾಗಿ ಮಾಲಿಕರ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಅದರ ದಾಖಲೆಗಳು ಯಶ್ ಬಳಿ ಇವೆ. ಇದನ್ನು ಈಗಾಗಲೇ ಫೇಸ್‌ಬುಕ್‌ ಲೈವ್ ನಲ್ಲಿ ಹಂಚಿಕೊಂಡ ಯಶ್ ತಾನು ನೀಡಿರುವ ಹಣವನ್ನು ತೋರಿಸಿದ್ದಾರೆ. ನಲವತ್ತು ಸಾವಿರ ಬಾಡಿಗೆ ಹಣ ಪಾವತಿಸಲು ಬಾಕಿ ಇದೆ ಎಂದು ಈಗಾಗಲೇ ಆರೋಪಿಸಿರುವ ಮನೆ ಮಾಲಿಕ , ಯಶ್ ಇಮೇಜ್ ಗೆ ಧಕ್ಕೆ ಉಂಟಾಗುವಂತೆ ಮಾಡಿದ್ದರು. ಅದಕ್ಕಾಗಿಯೇ ಇಂದು ಎಲ್ಲಾ ಗೊಂದಲಗಳಿಗೂ ತೆರೆ ಎಳೆದ ಯಶ್ , ತನ್ನ ಮೇಲಿರುವ ಆರೋಪ ಎಷ್ಟರ ಮಟ್ಟಿಗೆ ಸತ್ಯ, ಸುಳ್ಳು ಎಂಬುವುದನ್ನು ರಾಜ್ಯದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ.!

ರಾಜಕೀಯದಲ್ಲಿ ಆಸಕ್ತಿ..!

ಯಶ್ ಫೇಸ್‌ಬುಕ್‌ ಲೈವ್ ಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಫೇಸ್‌ಬುಕ್‌ ನಲ್ಲಿ ಕಮೆಂಟ್ಸ್ ಹಾಕಲು ಶುರು ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಯಶ್ ಮುಂದಿಟ್ಟಿದ್ದಾರೆ. ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಯಶ್ ಜನರ ಮನಸ್ಸಲ್ಲಿರುವ ಗೊಂದಲ ನಿವಾರಿಸಿದ್ದಾರೆ. ಈ ಮಧ್ಯೆ ಕೆಲವರು ಯಶ್ ಮಾಡಿರುವ ಜನಪರ ಕಾರ್ಯಗಳಿಂದ ರಾಜಕೀಯಕ್ಕೆ ಬರಬಹುದೇ ? ಎಂದು ಪ್ರಶ್ನಿಸಿದರು. ಆದರೆ ಯಶ್ ನೀಡಿರುವ ಉತ್ತರದಿಂದಾಗಿ ರಾಜಕೀಯ ವಿಚಾರವಾಗಿಯೂ ಯಶ್ ನಿರ್ಧಾರ ಸ್ಪಷ್ಟವಾಯಿತು. ತಾನು ಯಾವುದೇ ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಂಡಿಲ್ಲ, ನನ್ನ ಯೋಜನೆಯೇ ಬೇರೆ , ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುವುದೇ ನನ್ನ ಗುರಿ. ಇದಕ್ಕೆ ಯಾವುದೇ ರಾಜಕೀಯ ನಾಯಕರು ಬೆಂಬಲ ನೀಡಿದರೂ , ಅವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಯಶ್ ಸ್ಪಷ್ಟಪಡಿಸಿದರು.

https://m.facebook.com/story.php?story_fbid=2291921764368555&id=1579757015585037

ಈ ಹಿಂದೆ ತನ್ನ ಸ್ವಂತ ಖರ್ಚಿನಿಂದ ತಳ್ಳೂರು ಕೆರೆ ಸ್ವಚ್ಚತೆ ಮಾಡಿದ್ದ ಯಶ್, ಇನ್ನೂ ಹಲವಾರು ಕೆರೆ ಹಾಗೂ ಇತರ ಯೋಜನೆಯನ್ನು ರೂಪಿಸಿದ್ದಾರೆ. ಆದ್ದರಿಂದಲೇ ರಾಜಕೀಯ ಸೇರುವ ಬಗ್ಗೆಯೂ ಸ್ಪಷ್ಟತೆ ನೀಡಿ ರಾಜ್ಯದ ಜನರ ಗೊಂದಲಕ್ಕೆ ವಿರಾಮ ಹಾಕಿದರು.! ಯಶ್ ಫೇಸ್‌ಬುಕ್‌ ಲೈವ್ ಬಂದಿದ್ದರಿಂದ ಎಲ್ಲಾ ಊಹಾ ಪೋಹಗಳಿಗೂ ತೆರೆ ಎಳೆದಂತಾಯಿತು.!

–ಅರ್ಜುನ್

 

Editor Postcard Kannada:
Related Post