X

ಭಗವಾ ರಾಜ್ಯದಲ್ಲಿ ಝಗಮಗಿಸಲಿದೆ ರಾಮನ ಅಯೋಧ್ಯೆ, ಯೋಗಿ ಸರಕಾರ ಅಯೋಧ್ಯೆಯ ಸೌಂದರ್ಯಕ್ಕಾಗಿ ಮೀಸಲಿಡಲಿದೆ ಹೆಚ್ಚುವರಿ ಅನುದಾನ!!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಆ ರಾಜ್ಯದ ಚುಕ್ಕಾಣಿಯನ್ನು ಯಾವಾಗ ಹಿಡಿದರೋ ಅಂದಿನಿಂದ ಇಡೀ ಉತ್ತರ ಪ್ರದೇಶವೇ ಬದಲಾಯಿತು!! ರೌಡಿಗಳ ಅಟ್ಟಹಾಸದಿಂದ ಮೆರೆಯುತ್ತಿದ್ದ ಉತ್ತರಪ್ರದೇಶವನ್ನು ಶಾಂತಿ ಧಾಮವನ್ನಾಗಿ ಪರಿವರ್ತಿಸಿರುವುದು ಯೋಗಿ ಆದಿತ್ಯನಾಥರು!! ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಬೃಹತ್ ಕಾರ್ಯವನ್ನು ಮಾಡಲು ಹೊರಟಿದ್ದಾರೆ!!

ದೇಶದ ಬೃಹತ್ ದೊಡ್ಡ ರಾಜ್ಯ, ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆ ಇರುವ ಸ್ಥಳ, ಕಾಶೀ ವಿಶ್ವನಾಥನ ಪುಣ್ಯ ಸನ್ನಿಧಿ ಇರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯ ಸ್ಥಾನವನ್ನು ಯೋಗಿ ಆದಿತ್ಯನಾಥರು ವಹಿಸಿಕೊಂಡ ನಂತರ ಮಹತ್ತರ ಬದಲಾವಣೆಗಳನ್ನು ತಂದಿದೆ. ರಾಜ್ಯದಲ್ಲಿ ಅಪರಾಧ ಲೋಕವನ್ನು ಮಟ್ಟ ಹಾಕುವ ಮೂಲಕ ಹೊಸ ಭರವಸೆಯನ್ನು ಮೂಡಿಸಿದೆ. ಇದೀಗ ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆ ಶ್ರೀರಾಮನ ತಾಣವನ್ನು ಪ್ರವಾಸಿಗರಿಗೆ ಆಕರ್ಷಿಸುವಂತೆ ಮಾಡಲು ಭರ್ಜರಿ ಕೊಡುಗೆಯನ್ನು ನೀಡುವ ಮೂಲಕ ಹೊಸ ನಿರೀಕ್ಷೆಯನ್ನು ಯೋಗಿ ಸರ್ಕಾರ ಹುಟ್ಟಿಸಿದೆ.

ಅಯೋಧ್ಯೆಯ ಅಭಿವೃದ್ದಿಗೆ 10.7 ಕೋಟಿ ಬಿಡುಗಡೆ!!

ಅಯೋಧ್ಯೆಯ ಕೆಲವು ಪ್ರಮುಖ ಸ್ಥಾನಗಳನ್ನು ಆಕರ್ಷಿಸುವಂತೆ ಮಾಡಲು ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಮತ್ತೆ 10.7 ಕೋಟಿ ರೂಪಾಯಿ ನೀಡಿದ್ದು ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುವುದು!! ಅಯೋಧ್ಯೆಯಲ್ಲಿರುವ ಸೀತಾ ಕುಂಡ, ವಿದ್ಯಾ ಕುಂಡ, ದಂಥವನ ಕುಂಡಗಳು ಸೇರಿ ಹಲವು ಪುರಾತನ ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಅಯೋಧ್ಯೆಯ ಅಭಿವೃದ್ಧಿ ಮತ್ತು ಸುಂದರಿಕರಣಗೊಳಿಸುವ ನೀತಿ ಯೋಗಿ ಆದಿತ್ಯನಾಥ ಅಧಿಕಾರಕ್ಕೆ ಬಂದಾಗಿನಿಂದಲು ಕ್ರಮ ಕೈಗೊಳ್ಳಲಾಗಿತ್ತು. ಅಯೋಧ್ಯೆಯಲ್ಲಿ ಮರ್ಯಾದಾ ಪುರುಷ ಶ್ರೀರಾಮನ ಬೃಹತ್ ಮೂರ್ತಿ ನಿರ್ಮಿಸಲು ಯೋಗಿ ನಿರ್ಧರಿಸಿದ್ದರು. ಪ್ರವಾಸೋಧ್ಯಮ ಇಲಾಖೆ ಮೂಲಕ ಧಾರ್ಮಿಕ ತಾಣಗಳನ್ನು ಇನ್ನಷ್ಟು ಆಕರ್ಷಣೆಗೊಳಿಸಿ, ಧಾರ್ಮಿಕ ಪ್ರವಾಸೋದ್ಯಕ್ಕೆ ಹೆಚ್ಚಿನ ಒತ್ತು ನೀಡಲು ಯೋಗಿ ಸರ್ಕಾರ ಪ್ರಯತ್ನಿಸುತ್ತಿದೆ. ಶ್ರೀರಾಮ ನವಮಿಯಂದು ಸಹಸ್ರ ಲಕ್ಷದೀಪ  ಕಾರ್ಯಕ್ರಮ ಆಯೋಜಿಸಿ ಇಡೀ ರಾಷ್ಟ್ರದ ಗಮನವನ್ನು ಯೋಗಿ ಸೆಳೆದಿದ್ದರು.

ಅದಲ್ಲದೆ ಈಗಾಗಲೇ ದೇಗುಲ ನಗರಿ ಅಯೋಧ್ಯಾದಲ್ಲಿ 100 ಮೀಟರ್ ಉದ್ದದ ರಾಮನ ಪ್ರತಿಮೆಯನ್ನು ನಿರ್ಮಿಸುವುದಾಗಿ  ಘೋಷಿಸಿರುವ ಉತ್ತರ ಪ್ರದೇಶ ಸರ್ಕಾರ, ನವ ಅಯೋಧ್ಯಾ ನಗರದ ನಿರ್ಮಾಣದ ಬಗ್ಗೆ ಚಿಂತನೆ ಕೂಡಾ ನಡೆಸಿತ್ತು. ಈಗಾಗಲೇ ಅಯೋಧ್ಯೆಯ ಸರಯೂ ನದಿಯ ತೀರದಲ್ಲಿ 100 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಾಣ ಮಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆ ರೂಪಿಸಿದ್ದಲ್ಲದೇ, ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು!!

ಅಷ್ಟೇ ಅಲ್ಲದೇ ನವ್ಯ ಅಯೋಧ್ಯೆ ಯೋಜನೆಯಡಿ ರಾಮನ ಪ್ರತಿಮೆ ನಿರ್ಮಾಣ ಮಾಡಲಾಗುವುದಾಗಿ ಕೂಡಾ ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ಅವನೀಶ್ ಅವಸ್ತಿ ತಿಳಿಸಿದ್ದು, ಈ ಯೋಜನೆಯ ವೆಚ್ಚ 330 ಕೋಟಿ ರೂಪಾಯಿಯಾಗಲಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಇದು ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ತಾಣವೂ ಆಗಲಿದೆ ಎಂದು ಅವಸ್ತಿ ಹೇಳಿದ್ದರು!! ಹಾಗಾಗಿ ರಾವಣ ಸಂಹಾರ ಹಾಗೂ ಲಂಕಾದಹನ ಮಾಡಿ ವಿಜಯಿಯಾಗಿ ರಾಮ ಬಂದಾಗ ಮಾಡಲಾದ ಪಟ್ಟಾಭಿಷೇಕದ ಮಾದರಿಯಲ್ಲಿಯೇ ರಾಮ್ ರಾಜ್ಯಾಭಿಷೇಕ ಯೋಜನೆಯನ್ನೂ ಜಾರಿಗೆ ತರಲು ಯೋಗಿ ಸರಕಾರ ಮುಂದಾಗಿತ್ತು!! ಅಲ್ಲದೇ, ಸರಯು ನದಿಯ ಬಲಭಾಗದಲ್ಲಿ ಈ ನವ ಅಯೋಧ್ಯಾ ನಗರ ತಲೆ ಎತ್ತಲಿದೆ. ಹಾಗಾಗಿ, ಅಯೋಧ್ಯಾ ಫೈಝಾಬಾದ್ ಡೆವಲಪ್ ಮೆಂಟ್ ಅಥಾರಿಟಿ ಪ್ರಸ್ತಾವಣೆಯನ್ನು ಸಿದ್ಧಪಡಿಸಿ ನೋಡಲ್ ಏಜೆನ್ಸಿಯ ಅನುಮೋದನೆ ಪಡೆದ ಬಳಿಕ ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ ಎನ್ನುವ ವಿಚಾರ ತಿಳಿದು ಬಂದಿದೆ!!

ಯೋಗಿ ಆದಿತ್ಯನಾಥ್ ರಂತಹ ಮುಖ್ಯಮಂತ್ರಿ ಪ್ರತಿಯೊಂದು ರಾಜ್ಯದಲ್ಲಿ ಏಕೆ ಇಲ್ಲ ಎನ್ನುವ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜಾರಿಗೆ ತಂದ ಪ್ರಮುಖ ಯೋಜನೆಗಳು, ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮನೆಮಾತಾಗಿದ್ದವು. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ  ಸಮಾಜದ ನೆಮ್ಮದಿ ಹಾಳು ಮಾಡುತ್ತಿರುವ ರೌಡಿಗಳು ಯೋಗಿ ಆದಿತ್ಯನಾಥರ ಕಾನೂನಿಗೆ ನಲುಗಿ ಹೋಗಿ ಎನ್‍ಕೌಂಟರ್ ಗೆ ಹೆದರಿ ಶರಣಾಗಲು ಮುಂದಾಗಿದ್ದಲ್ಲದೇ ಅದೆಷ್ಟೋ ರೌಡಿಗಳು ರೌಡಿ ಜೀವನಕ್ಕೆ ಗುಡ್ ಬೈ ಹೇಳಿ ತಮ್ಮ ನಿತ್ಯದ ಕಾರ್ಯಕಲಾಪದಲ್ಲಿ ತೊಡಗುತ್ತಿದ್ದಾರೆ! ಇದಕ್ಕೆಲ್ಲಾ ಕಾರಣ ಯೋಗಿ ಆದಿತ್ಯನಾಥರು!!

ಹೀಗೆ ಉತ್ತರಪ್ರದೇಶವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವುದೇ ಯೋಗಿ ಆದಿತ್ಯನಾಥರ ಕನಸಾಗಿದೆ!! ಇಂತಹ ಮುಖ್ಯಮಂತ್ರಿ ಪ್ರತೀ ರಾಜ್ಯದಲ್ಲೂ ಇದ್ದರೆ ಇಡೀ ಭಾರತ ರಾಮರಾಜ್ಯವಾಗುವುದಂತು ಖಂಡಿತ!! ಇನ್ನು ಮುಂದೆಯೂ ಇಂತಹವರನ್ನು ಗೆಲ್ಲಿಸಿದ್ದಲ್ಲಿ ಈ ದೇಶ ಸುಭೀಕ್ಷವಾಗಬಹುದು!!

source: zeenews

–  ಪವಿತ್ರ

Editor Postcard Kannada:
Related Post