X

ಶ್ರೀರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಇಲ್ಲ ಎಂದ ವಿರೋಧಿಗಳಿಗೆ ಯೋಗೀಜಿ ಏನಂದ್ರು ಗೊತ್ತಾ?

ಭಾರತದಲ್ಲಿ ಯಾವುದು ನಡೆಯುವುದು ಅಸಾಧ್ಯ ಅಥವಾ ಯಾವುದೇ ಕಿರಿಕಿರಿ, ದೊಂಬೀ, ಗಲಾಟೆಗಳಿಲ್ಲದೆ ಶ್ರೀರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಾರದು ಎಂದು ಕೆಲವು ದೇಶ‌ ವಿರೋಧಿ, ಶ್ರೀರಾಮ ವಿರೋಧಿ, ಹಿಂದೂ ವಿರೋಧಿ‌ಗಳು ಅಂದುಕೊಂಡಿದ್ದರೋ, ಅಂತಹ ರಾಮ ಮಂದಿರ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇಲ್ಲ ಎಂಬಂತೆ ನಿರ್ಮಾಣವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಭವ್ಯ ಮಂದಿರ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ.

ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಅಯೋಧ್ಯೆಯ ರಾಮ ಮಂದಿರದ ವಿಷಯವನ್ನು ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿತ್ತು. ಆದರೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳು ಪ್ರಭು ಶ್ರೀರಾಮನಿಗೆ ಆತನ ಜನ್ಮ ಸ್ಥಾನ ದೊರೆಯುವ ಹಾಗೆ ಮಾಡಿ, ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿತ್ತು. ಈಗ ಪ್ರಭು ಶ್ರೀ ರಾಮನಿಗೆ ಆತನ ಜನ್ಮಸ್ಥಾನದಲ್ಲಿಯೇ ಸುಂದರ ಮಂದಿರ ನಿರ್ಮಾಣವಾಗಿದೆ.

ಈಗ ಮತ್ತೆ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ರಾಮ ಮಂದಿರದ ಹೆಸರಿನಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರವನ್ನು ಜರೆಯಲು ಆರಂಭಿಸಿವೆ. ಈವರೆಗೆ ಶ್ರೀರಾಮ ಎಂಬ ವ್ಯಕ್ತಿ ಕಾಲ್ಪನಿಕ, ರಾಮಾಯಣ ಸುಳ್ಳು ಎನ್ನುತ್ತಿದ್ದ ಕಾಂಗ್ರೆಸಿಗರು, ಈಗ ತಮಗೆ ರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ದೊರೆತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಈ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಮಾತನಾಡಿದ್ದು, ಈ ವರೆಗೆ ಅಯೋಧ್ಯೆಗೆ‌ ಹೋಗಲು ಹಿಂದೇಟು ಹಾಕುತ್ತಿದ್ದವರು, ಈಗ ರಾಮ ಮಂದಿರದ ಉದ್ಘಾನೆಯ ಆಹ್ವಾನವನ್ನು ಬಯಸುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಜನವರಿ 22 ರಂದು ನಡೆಯುವ ರಾಮ ಎಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ದೂರುತ್ತಿದ್ದಾರೆ ಎಂದು ಯೋಗೀಜಿ ತಿಳಿಸಿದ್ದಾರೆ.

ಈ ಹಿಂದೆ ಅಯೋಧ್ಯೆಗೆ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಸಹ ಇರಲಿಲ್ಲ. ಆದರೆ ಸದ್ಯ ನಾಲ್ಕೂ ಕಡೆಯಿಂದ ಸಂಪರ್ಕ ವ್ಯವಸ್ಥೆ ಇದೆ. ಇದು ತ್ರೇತಾಯುಗವನ್ನು ನೆನಪಿಸುತ್ತದೆ. ಸಾವಿರಾರು ವರ್ಷಗೊಲ ಹಿಂದೆ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬಂದನು ಎಂದು ಇವರು ಹೇಳಿದ್ದಾರೆ.

Post Card Balaga:
Related Post