X

ಭಾರತೀಯನಾದ ನಾನು ಅವಶ್ಯವಾಗಿ ಅದೆಷ್ಟೋ ವರ್ಷಗಳ ಹಿಂದೆಯೇ ಈ ಪ್ರಧಾನ ಮಂತ್ರಿಯ ಹೆಸರನ್ನು ಅಳಿಸಿ ಹಾಕಿದ್ದಿದ್ದರೆ ಇವತ್ತು ಭಾರತ ಈ ಸ್ಥಿತಿಗೆ ಬರುತ್ತಲೇ ಇರಲಿಲ್ಲ!!

ನನಗೆ ಬಹಳ ಬಾರಿ ಅನ್ನಿಸಿಬಿಟ್ಟಿದೆ! ಇಷ್ಟು ವರ್ಷದ ನನ್ನ ಇತಿಹಾಸದ ಅಧ್ಯಯನದಲ್ಲಿ ಬಹಳಷ್ಟು ಬಾರಿ ವಿಷಾದವೊಂದೇ ಉಳಿದುಬಿಟ್ಟಿದೆ ನನ್ನಲ್ಲಿ. ಕಾಂಗ್ರೆಸ್ಸೇತರರು, ಅದರಲ್ಲೂ ನೆಹರು ಮಾಡಿದ ಅದೆಷ್ಟೋ ‘ಸಿಲ್ಲಿ’ ಎನಿಸುವಂತಹ ನಿರ್ಧಾರಗಳಿದೆಯಲ್ಲ, ದೇಶಕ್ಕೆ ಬಹುದೊಡ್ಡ ಹೊಡೆತ ನೀಡಿದ್ದು ಸುಳ್ಳೇ?! ನೆಹರೂ ಹಾಗೂ ಬ್ರಿಟಿಷ್ ಸಿದ್ಧಾಂತಗಳು ಜೊತೆಗೂಡಿ ಭಾರತದ ಅಧಿಕಾರಕ್ಕೆ ಅಪಕ್ವವಾದ ಪಕ್ಷವೊಂದು ‘ಕಾಂಗ್ರೆಸ್’ ಎಂದು ಹೆಸರಿಸಿಕೊಂಡು ಅಧಿಕಾರಕ್ಕಿಳಿಯಿತಲ್ಲವಾ?! ಅವತ್ತೇ, ‘ದೇಶದ್ರೋಹಿ’ ಎಂಬ ಹಣೆಪಟ್ಟಿಯೂ ಅದಕ್ಕಂಟಿತು!

ಅದೆಷ್ಟು ಸಮಸ್ಯೆಗಳಿಲ್ಲ ಹೇಳಿ ನಮ್ಮ ಭಾರತದಲ್ಲಿ?! ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಅಭಧ್ರತೆ! ಇವು ಮೂರೂ ಸಹ ದೇಶವನ್ನೇ ಅಲುಗಾಡಿಸತೊಡಗಿದ್ದು
ಸತ್ಯವಲ್ಲವೇ?! ವಿಚಾರ ಮಾಡುತ್ತಾ ಹೋದಂತೆ ಈ ಮೂರೂ ಸಮಸ್ಯೆಗಳಿಗೆ ಮೂಲ ಕೇವಲ ‘ನೆಹರೂ’ ಎಂಬುದು ಮನದಟ್ಟಾಗುತ್ತದೆ!

ಕಳೆದ 20 – 30 ವರ್ಷಗಳಲ್ಲಿ ಭಾರತ ಅದೆಷ್ಟೇ ಮುಂದುವರೆದಿರಬಹುದು! ಆದರೆ, ಇಂತಹ ಶಾಶ್ವತವಾಗುಳಿದ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕುತ್ತಲೇ ಇಲ್ಲ ಎಂಬ ದುರಂತ ಪ್ರತಿ ಭಾರತೀಯನಿಗೆ ಅರಿವಾಗಲೇಬೇಕು! ಇವತ್ತು ಭಾರತದ ಕಾಶ್ಮೀರವಾಗಲಿ, ಪಾಕಿಸ್ಥಾನವಾಗಲಿ, ದೋಕ್ಲಾಂ ಗಡಿ ವಿಚಾರವಾಗಲಿ, ಚೀನಾವಾಗಲಿ, ದೇಶ ದ್ರೋಹಿ ಸಂಘಟನೆಯ ಸೃಷ್ಟಿಯ ಬಗೆಗಾಗಲಿ, ಭಯೋತ್ಪಾದನೆಯಾಗಲಿ, NSG ಯ ಸದಸ್ಯತ್ವದ ವಿಚಾರವಾಗಲಿ, ಇವೆಲ್ಲದಕ್ಕೂ   ಕಾರಣ ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರೂ!!

ಈ ಎಲ್ಲಾ ಸಮಸ್ಯೆಗಳೂ ಸಹ ಶುರುವಾಗಿದ್ದು 70 ವರ್ಷಗಳ ಹಿಂದೆಯಾದರೂ, ಇವತ್ತು ದೇಶಕ್ಕೆ ಪರಿಹರಿಸಲಾಗದ ಖಾಯಿಲೆಯಾಯಿತೆಂಬುದನ್ನೂ ನಾ
ಯೋಚಿಸಲಾಗದಷ್ಟು ಅಧೀರನಾಗುತ್ತೇನೆ ಒಮ್ಮೊಮ್ಮೆ! ಸ್ವತಂತ್ರ್ಯ ಸಿಕ್ಕ ಅದೆಷ್ಟೋ ದೇಶಗಳ ಮೊದಲ ಪ್ರಧಾನಿಯೆಲ್ಲರೂ ಸಹ ದೇಶದ ಔನ್ನತ್ಯಕ್ಕೆ ಪ್ರಯತ್ನಿಸುತ್ತಲೇ ಅಸುನೀಗಿದರು, ಆದರೆ ವೈಭವೋಪೇತವಾಗಿದ್ದ ಭಾರತ ಮಾತ್ರ ನೆಹರೂ ವಿನ ಸ್ವಾರ್ಥಕ್ಕೆ ಬಲಿಯಾಗಿ ಪ್ರತಿ ದಿನವೂ ಸಹ ಶತಮಾನಗಳಷ್ಟು ಹಿಂದೆ ಸರಿಯತೊಡಗಿತು! ತನ್ನ ಕುರ್ಚಿಯ ಭದ್ರತೆಗೆ ಪ್ರಾಮುಖ್ಯತೆ ಕೊಟ್ಟ ನೆಹರೂ ದೇಶದ ಭದ್ರತೆಯ ಕಡೆಗೆ ಗಮನ ಕೊಡದೇ ಹೋದದ್ದು ದುರಂತವೇ ಬಿಡಿ!

ಸ್ವಾತಂತ್ರ್ಯಾ ನಂತರ ದೇಶದಲ್ಲಿ ಪ್ರಧಾನ ಮಂತ್ರಿಯಿಂದಾಗಿ, ಹೊಸದಾಗಿ ರಚನೆಯಾಗಲಿರುವ ಸಂವಿಧಾನಕ್ಕೂ ಚರ್ಚೆಗಳಾಗಿತ್ತು. ಕಾಂಗ್ರೆಸ್ ‘ದೇಶಭಕ್ತ ನಾಯಕರು’ ಗಳನ್ನೆಲ್ಲ ಮೂಲೆಗುಂಪು ಮಾಡತೊಡಗಿದ್ದಕ್ಕೆ ಸರಿಯಾಗಿ ಮಹಾತ್ಮನೆಂಬುವವನು ಹತ್ಯೆಗೀಡಾಗುವುದಕ್ಕೂ ಸರಿಯಾಯಿತೆನ್ನಿ! ಅದನ್ನೂ ಬಳಸಿಕೊಂಡ ನೆಹರೂ ವಿನಾಯಕ ದಾಮೋದರ ಸಾವರ್ಕರ್ ರವರ ಹಿಂದೂ ಮಹಾಸಭಾದ ಮೇಲೆ ತಿರುಗಿಸಿದ! ಮುಗ್ಧ ಭಾರತೀಯರು ನಂಬಿದರು! ದೇಶಕ್ಕೋಸ್ಕರ ಪ್ರಾಣವನ್ನೇ ಸಮಿಧೆಯಾಗಿ ಧಗಧಗಿಸಿಬಿಟ್ಟಿದ್ದ ಕ್ರಾಂತಿಕಾರಿಗಳ ಮೇಲೆ, ಕಠೋರ ಭಾರತೀಯರ ಮೇಲೆ ಕಲ್ಲೆಸೆದರು! ದೇಶಭಕ್ತ ರಾಜಕೀಯ ಪಕ್ಷವೊಂದು ನೆಲಕಚ್ಚಿತು! ಕಾಂಗ್ರೆಸ್ ವಿರಾಜಿಸಿತು! ಸಹಸ್ರ ಹಿಂದೂಗಳ ದೇಶ ವಿಭಜನೆಯ ರಕ್ತಪಾತಗಳ ಮೇಲೆ ನಗುತ್ತಲೇ ಪ್ರಧಾನ ಮಂತ್ರಿಯಾಗಿ ನೆಹರೂ ಪ್ರಮಾಣ ವಚನ ಸ್ವೀಕರಿಸಿದ! ಅಲ್ಲಿಗೆ, ಭಾರತದ ಅಧಃಪತನವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು!

ಮುನ್ನುಡಿಯ ಮೊದಲ ಹೆಸರೇ ‘ನೆಹರೂ!’

ಹಾ! ತನ್ನ ಬುದ್ಧಿ ಪ್ರದರ್ಶನಕ್ಕಾಗಿ ‘Discovery of India’ ಎಂಬ ಕರಾಳ ಇತಿಹಾಸವನ್ನು ಬರೆದ ನೆಹರೂ ಭಾರತದ ಚಿತ್ರಣವನ್ನೇ ಬದಲಾಯಿಸಿದ ಬಿಡಿ!
ನಿಜವಾದ ಇತಿಹಾದವೆನ್ನುವುದು ಏನು ಎಂಬುದನ್ನೇ ಅರಿಯಲಾಗದ ತದನಂತರದ ಜನಾಂಗ ನೆಹರೂವಿನ ಮಿಥ್ಯವೊಂದನ್ನೇ ಸತ್ಯವಾಗಿ ಸ್ವೀಕರಿಸಿದ ಪರಿಣಾಮವಾಗಿ ‘ಭಾರತದ ಅವಹೇಳನವೊಂದು ಸದ್ದಿಲ್ಲದೇ ನಡೆಯಿತು’. ಇವತ್ತೂ ಸಹ, ಅದನ್ನೇ ಓದುವ ಒಂದಷ್ಟು ಭಾರತೀಯರಿಗೆ ಭಾರತಕ್ಕಿಂತ ಪರದೇಶಗಳೇ ಶ್ರೇಷ್ಟವೆನಿಸುವುದರಲ್ಲಿ ತಪ್ಪೇ ಇಲ್ಲ. ಎಡಪಂಥೀಯ ವಿಚಾರಗಳಿಗೆ ಪುಷ್ಠಿ ಕೊಡುವಂತಹ ನೆಹರೂ ವಿನ ಪುಸ್ತಕವೊಂದು ಇವತ್ತೂ ‘ತಿರುಚಿದ ಇತಿಹಾಸ’ವನ್ನೇ ಉಣಬಡಿಸುತ್ತಿರುವುದು!!

‘ಒಂದು ವರ್ಷಕ್ಕಾದರೆ ಅಕ್ಕಿಯನ್ನು ಬೆಳೆ! ಹತ್ತು ವರ್ಷಕ್ಕಾದರೆ ಗಿಡಗಳನ್ನು ನೆಡು, 100 ವರ್ಷಕ್ಕಾದರೆ ಮಕ್ಕಳಿಗೆ ಶಿಕ್ಷಣ ಕೊಡಿಸು’ ಎಂಬ ಸಿದ್ಧಾಂತಕ್ಕೆ ಸರಿಯಾಗಿ ಕಾಂಗ್ರೆಸ್ ನ ನಡೆಯೊಂದು ಈಗಾಗಲೇ ಎರಡು ಪೀಳಿಗೆಯನ್ನು ನಾಶಗೊಳಿಸಿ ಆಗಿದೆ!

ಆತನ ಸಿದ್ಧಾಂತಗಳನ್ನು ವಿಶ್ಲೇಷಿಸಿದಾಗ ನನಗರಿವಾಗಿದ್ದು ಭಯಾನಕ ಸತ್ಯಗಳಷ್ಟೇ! ಅಧಿಕಾರದ ಬದ್ಧತೆಯಾಗಲಿ, ದೂರದೃಷ್ಟಿಯಾಗಲಿ, ಜವಾಬ್ದಾರಿಯೂ ಇಲ್ಲದಂತಹ ನೆಹರೂ ವಿನ ಸಿದ್ಧಾಂತ ಭಾರತದ ವಿರೋಧವೇ ಇತ್ತು ಎಂಬುದಕೆ ಆತ ಯಾವಾಗ ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಕೊಡಲು ಒಪ್ಪಿಕೊಂಡನೋ, ಯಾವಾಗ ಕಾಶ್ಮೀರದ ವಿಚಾರವಾಗಿ ವಿಶ್ವ ಸಂಸ್ಥೆಯ ಬಾಗಿಲು ತಟ್ಟಿದನೋ, ಅವತ್ತೇ ಭಾರತ ಮುಗ್ಗರಿಸಿತು!!! ಅದೇ ಸರದಾರ್ ವಲ್ಲಭ್ ಭಾಯ್ ಪಟೇಲರು ನಿರ್ವಹಿಸಿದ ಹೈದರಾಬಾದ್ ವಿವಾದ ಶಾಂತವಾಗಿಯಯೇ ಸ್ತಬ್ಧವಾಯಿತು. ನೆಹರೂವಿನ ಮಧ್ಯಸ್ಥಿಕೆಯಾಗಿದ್ದರೆ ಬಹುಷಃ ಅದಿವತ್ತು ‘ನಿಜಾಮಸ್ಥಾನ’ ಆಗಿರುತ್ತಿತ್ತು ಅಷ್ಟೇ!

ಇವತ್ತು ಚೀನಾವೊಂದು ಅರುಣಾಚಲ ಪ್ರದೇಶದ ವಿಷಯವಾಗಿ ಧಮಕಿ ಹಾಕುತ್ತದೆ! ದೋಕ್ಲಾಂ ತನ್ನದೇ ಎಂದು ಹಕ್ಕು ಸಾಧಿಸುತ್ತದೆ! ಆದರೆ, ಇದೇ ಚೀನಾ ಮುಂಚೆ ಯಾವ ಸ್ಥಿತಿಯಲ್ಲಿತ್ತು ಗೊತ್ತೇ?! ಇದೇ 70 ವರ್ಷಗಳ ಹಿಂದೆ ಚೀನಾಕ್ಕೆ ತಿನ್ನಲೂ ಗತಿಯಿರಲಿಲ್ಲ! ಭಾರತದ ಮುಂದೆ ಮಂಡಿಯೂರಿ ಕುಳಿತಿತ್ತು ಚೀನಾ! ಅದೇ, 70 ವರ್ಷಗಳ ಹಿಂದಿನ ಭಾರತದಲ್ಲಿ ಸ್ವಾತಂತ್ರ್ಯಾನಂತರ ಒದಗುವ ಸಂವಿಧಾನ ಹಾಗೂ ಕಾನೂನಿನ ಸಮಸ್ಯೆ ಹೊರತು ಪಡಿಸಿ ಬೇರೆ ಯಾವ ಸಮಸ್ಯೆಗಳಿತ್ತು ಹೇಳಿ?!

‘ಎರಡನೇ ಮಹಾಯುದ್ಧದ ಸಂದರ್ಭದಲ್ಲಿಯೂ ನಮ್ಮದೇ ಸೈನ್ಯವನ್ನು ಬಳಸಿ ಬ್ರಿಟಿಷ್ ರನ್ನು ಎದುರಿಸಿದ್ದೆವು! ಪರಮಾಣು ಶಸ್ತ್ರಗಳ ಬಗೆಗೂ ನಮ್ಮಲ್ಲಿ ಹೋಮಿ
ಜಹಾಂಗೀರ್ ಬಾಬಾ ಹಾಗೂ ವಿಕ್ರಮ್ ಸಾರಾಭಾಯಿಯವರು ದಿಗ್ಗಜರೆನ್ನಿಸಿಕೊಂಡವರಿದ್ದರು! ಏನಾಯಿತು ಅದಕ್ಕೆಲ್ಲ?!

ಬಿಡಿ! ಇದೇ 50 ವರ್ಷಗಳ ಹಿಂದೆ ಜಾನ್ ಎಫ್ ಕೆನಡಿ ಭಾರತಕ್ಕೆ NSG ಸದಸ್ಯತ್ವದ ಪ್ರಸ್ತಾಪವನ್ನು ಮುಂದಿಟ್ಟಾಗ ನೆಹರೂ ಹೇಳಿದ‌್ದೇನು ಗೊತ್ತೇ?!

ನಮ್ಮದು ಶಾಂತಿಯನ್ನು ಪ್ರತಿಪಾದಿಸುವ ದೇಶವಾಗಿರುವುದರಿಂದ ಸೇನೆಯ ಅಗತ್ಯವೂ ಇಲ್ಲ, ಯಾವುದೇ NSG ಸದಸ್ಯತ್ವದ ಅಗತ್ಯವೂ ಇಲ್ಲ. ನಮಗೆ ಯಾವುದೇ ಶತ್ರುಗಳಿಲ್ಲ!’

ಇದೇ ನೆಹರು ದೇಶಕಂಡ ಅತ್ಯುನ್ನತ ವೀರ ಫೀಲ್ಡ್ ಮಾರ್ಷಲ್ ಕರಿಯಪ್ಪರಿಂದ ಹಿಡಿದು ಅದೆಷ್ಟೋ ಸೇನೆಯ ಅಧಿಕಾರಿಗಳನ್ನು ಸಾರ್ವಜನಿಕವಾಗಿಯೇ
ಅವಮಾನಿಸಿಬಿಟ್ಟರು! ಸೈನ್ಯದ ಅಧಿಕಾರಿಗಳು ಸದಸ್ಯತ್ವವನ್ನು ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದ್ದೇ ನೆಹರೂವಿಗೆ ಜಾಸ್ತಿಯಾಗಿತ್ತು! ಇದೇ ಸದವಕಾಶ ಎಂದುಕೊಂಡ ಚೀನಾ ಭಾರತದ ಬದಲು ನಾವು ಸದಸ್ಯತ್ವ ತೆಗೆದುಕೊಳ್ಳುತ್ತೇವೆ ಎಂದಾಗ ನೆಹರೂ ವಿರೋಧಿಸಲೇ ಇಲ್ಲ! ಆದರೆ, ಇವತ್ತು ಮೋದಿ ಅದೆಷ್ಟೇ ಪ್ರಯತ್ನ ಪಟ್ಟರೂ ಸದಸ್ಯತ್ವ ಸಿಗುತ್ತಲೇ ಇಲ್ಲ. ಭಾರತಕ್ಕೆ ಕೊಡಬೇಡಿ ಎಂದು ವಿರೋಧಿಸುತ್ತಿರುವುದು ಬೇರೆ ಯಾರೂ ಅಲ್ಲ, ‘ಚೀನಾ’!!! ಈಗ ಹೇಳಿ, ಯಾರನ್ನು ದೂಷಿಸಬೇಕಾಗಿದೆ ನಾವು?!

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸ್ವಲ್ಪ ಸಮಯದಲ್ಲಿಯೇ ನೇಪಾಳದ ಪ್ರಧಾನ ಮಂತ್ರಿ ಮಾತ್ರಿಕಾ ಪ್ರಸಾದ್ ಕೋಯಿರಾಲ ಭಾರತದ ಜೊತೆ ವಿಲೀನವಾಗುವ ಪ್ರಸ್ತಾಪ ಇಟ್ಟಿದ್ದರು! ಎಷ್ಟೇ ರಾಜಕೀಯ ಮುತ್ಸದ್ದಿಗಳು ಬುದ್ಧಿ ಹೇಳಿದರೂ, ನೆಹರೂವಿನ ‘ಪಾಕಿಸ್ಥಾನಿ’ ಬುದ್ಧಿಯೊಂದು ಒಪ್ಪಲೇ ಇಲ್ಲ! ಖಡಾಖಂಡಿತವಾಗಿ ಇಲ್ಲ ಎಂದು ತಿರಸ್ಕರಿಸಿದರು! ಬಿಡಿ! ಮೊದಲೇನೋ ತಪ್ಪಾಯಿತು! ಎರಡನೇ ಸಲವೂ, ಅಂದರೆ 1951 ರಲ್ಲಿ ನೇಪಾಳ ಮತ್ತೆ ವಿಲೀನಹೊಂದಲು ಬಯಸಿತು! ನೆಹರೂ ಅದನ್ನೂ ತಿರಸ್ಕರಿಸಿದರು! ಅರೇ! ಅಕಸ್ಮಾತ್ ನೇಪಾಳವೇನಾದರೂ ಭಾರತಕ್ಕೆ ವಿಲೀನವಾಗಿದ್ದಿದ್ದರೆ, ಚೀನಾದ ಹಿಡಿತ ನೇಪಾಳದ ಮೇಲೆ ತಪ್ಪುತ್ತಿತ್ತಲ್ಲದೇ, ಪಕ್ಕದಲ್ಲೇ ಇದ್ದ ಟಿಬೆಟ್ ಕೂಡ ಉಳಿದುಕೊಳ್ಳುತ್ತಿತ್ತು! ಚೀನಾಎ ಹಕ್ಕು ಸಾಧನೆಗೆ ಅವಕಾಶವೇ ಇಲ್ಲವಾದಂತಾಗುತ್ತಿತ್ತು! ಉಹೂಂ! ನೆಹರೂವಿಗೆ ‘ಶಾಂತಿ’ಯಾಗಿ ರಕ್ತಗೆಂಪಿನ ‘ಗುಲಾಬಿ’ಯೊಂದೇ ಬೇಕಾಗಿತ್ತು! ದೇಶವಲ್ಲ!

ಬಿಡಿ! 1951 ರಲ್ಲಿ ಸುಖಾ ಸುಮ್ಮನೆ ಅಲ್ಲಿನ ರಾಜ ತ್ರಿಭುವನ ವಿಲೀನವಾಗಲು ಕೇಳಿರಲಿಲ್ಲ! ನೇಪಾಳಕ್ಕೆ ಚೀನಾದ ಕಡೆಯಿಂದ, ಎಡಪಂಥೀರ ಕಡೆಯಿಂದ, ರಾಣಾ
ಪಂಗಡದ ಕಡೆಯಿಂದ ಎಂದೆಲ್ಲ ಏಳು ತೆರನಾದ ಅಪಾಯ ಒದಗಿದ್ದೇ ಭಾರತದ ಸಹಾಯ ಯಾಚಿಸಿದ್ದ ತ್ರಿಭುವನ!!! ವಿಷಯದ ಗಂಭೀರತೆ ಅರಿತಿದ್ದರೂ, ‘ಬೇರೆ
ದೇಶದ ಸಂಕಟ ನಮಗ್ಯಾಕೆ’ ಎಂದ ನೆಹರೂ ನನ್ನು ಭಾರತೀಯರು ಸಹಿಸಿಕೊಂಡಿದ್ದೇ ಅಪರಾಧವಾಗಿತ್ತು!!!

ನೆಹರೂ ವಿನ ಹುಚ್ಚಾಟದ ಪರಿಣಾಮಗಳು ಇಲ್ಲಿಗೇ ಮುಗಿದು ಹೋಗಿರಲಿಲ್ಲ ಎಂಬುದು ಯಾವಾಗ ಚೀನಾ ಟಿಬೆಟ್ ನ ಮೇಲೆ ದಾಳಿ ನಡೆಸಿ ಟಿಬೆಟ್ ನನ್ನು
ವಶಪಡಿಸಿಕೊಂಡಿತೋ, ಯಾವಾಗ ಅಲ್ಲಿನ ದಲಾಯ್ ಲಾಮಾರ ಜೊತೆಗೆ ಉಳಿದೆಲ್ಲ ಬೌದ್ಧೀಯರನ್ನು ಉಳಿದ ಶವಗಳ ಜೊತೆ ಗಡೀಪಾರು ಮಾಡಿತೋ, ನೆಹರೂವಿನ ರಕ್ತ ಕುದಿಯಲಿಲ್ಲ! ಟಿಬೆಟ್ ನನ್ನು ಸ್ವತಂತ್ರ್ಯಗೊಳಿಸಬೇಕು ಎನ್ನುವ ಆಲೋಚನೆಯೂ ಬರಲಿಲ್ಲ! ಬದಲಿಗೆ, ಬೌದ್ಧ ಧರ್ಮೀಯರ ಸ್ಥಿತಿ ಕಂಡು ಸಿಗರೇಟ್ ಹೊಗೆಯಲ್ಲಿ ಸುರುಳಿ ಬಿಡುತ್ತಲೇ ಹೇಳಿದ್ದ ನೆಹರೂ! ‘ಬೇಕಾದರೆ ನಿರಾಶ್ರಿತರ ಶಿಬಿರಗಳನ್ನು ತಯಾರಿಸಿ, ಉಳಿದುಕೊಳ್ಳಲಿ. ಆದರೆ, ಚೀನಾದ ಸ್ನೇಹವನ್ನು ನಾ ಕಳೆದುಕೊಳ್ಳಲಾರೆ.!!!’

ವ್ಹಾ! ಎಂತಹ ‘ಶಾಂತಿ ಪ್ರಿಯ ನೆಹರೂ’!!! ಎಂತಹ ರಾಜಕೀಯ ಮುತ್ಸದ್ದಿ ನೆಹರೂ!!! ಅದಾದ ಕೆಲವೇ ವರ್ಷಗಳಲಿ ಈಶಾನ್ಯ ಭಾರತದ ಭಾಗಗಳ ಮೇಲೂ ದಾಳಿ ಮಾಡಿದ ಚೀನಾ ಐದು ಕಿಮೀ ನಷ್ಟು ವಶಪಡಿಸಿಕೊಂಡಿತು! ಆಗಲೂ, ನೆಹರೂವಿನ ‘ಶಾಂತಿಗೆ ಭಂಗವಾಗಲಿಲ್ಲ! ‘5 ಕಿಮೀ ಅಷ್ಟೇ ತಾನೆ?!’ ಎಂದು ಕುಳಿತ ನೆಹರೂವಿಗೆ ಚೀನಾದ ಸ್ನೇಹವೇ ಮುಖ್ಯವಾಯಿತೇ ಹೊರತು ‘ಉಲ್ಲಂಘನೆ’ ಯಲ್ಲ! ಇವತ್ತೂ ಟಿಬೆಟ್ ನ ಹೆಸರೇ ಭೋಗೋಳ ನಕ್ಷೆಯಲ್ಲಿ ಅಳಿಸುವಂತಾಗಿ ಹೋಯ್ತು! ಕಾರಣ ಯಾರು?!

ಅಕಸ್ಮಾತ್, ಅವತ್ತು ನೆಹರೂ ಚೀನಾದ ವಿರುದ್ಧ ನಿಂತಿದ್ದರೆ, ಈಶಾನ್ಯ ಭಾರತ ಸುಭದ್ರವಾಗಿರುತ್ತಿತ್ತು. ಚೀನಾ ಆಕ್ರಮಿಸಿದ್ದ ಕಾಶ್ಮೀರದ ಭಾಗಗಳೂ ಭದ್ರವಾಗಿರುತ್ತಿತ್ತು!!

ಹೇಳಬೇಕೆಂದರೆ, ಪೂರ್ವದಲ್ಲಿ ಕಾಶ್ಮೀರದ ಭಾಗವನ್ನು ಚೀನಾ ಕಬಳಿಸಿದರೆ, ಪಶ್ಚಿಮದಲ್ಲಿ ಪಾಕಿಸ್ಥಾನ ತಲೆಯೆತ್ತಿತು! ಈಗ, ಅಮೇರಿಕಾದ ಹತ್ತಿರ ಭಾರತ-ಪಾಕಿಸ್ಥಾನದ ವಿವಾದಕ್ಕೆ ಅಂತ್ಯ ಹಾಡುವಂತೆ ಕೇಳುತ್ತಿದ್ದೇವೆ! ನಮ್ಮ ಅನಿವಾರ್ಯ ಸ್ಥಿತಿಗೆ ಯಾರು ಕಾರಣ?! ಪಾಕಿಸ್ಥಾನವನ್ನು ಬೆಳೆಯಲು ಬಿಟ್ಟು ನಗುತ್ತಲೇ ಭಾಯಿ-ಭಾಯಿ ಎಂದೆವು! ಇವತ್ತು, ದೈತ್ಯಾಕಾರ ರಾಕ್ಷಸನಾಗಿ ಬೆಳೆದ ಪಾಕಿಸ್ಥಾನವೊಂದನ್ನು ಮಟ್ಟ ಹಾಕಲೂ ಸಾಧ್ಯವಾಗದ ಸ್ಥಿತಿ ಭಾರತದ 21 ನೇ ಶತಮಾನದ ದುರಂತವಲ್ಲದೇ ಮತ್ತೇನು?!

ಹೇಳದೇ ಉಳಿಯಲು ಸಾಧ್ಯವೇ ಇಲ್ಲ!!

ಭಾರತ ದೇಶಕ್ಕೆ ಪ್ರಧಾನ ಮಂತ್ರಿಯ ರೂಪದಲ್ಲಿ ಬಂದೊದಗಿದ ದುರಂತ ‘ನೆಹರೂ’ ಅಷ್ಟೇ! ಜಗತ್ತಿನ ಬೇರಾವ ರಾಷ್ಟ್ರಗಳಿಗೆ ‘ ನೆಹರೂ’ ವಿನಂತಹ ದೇಶದ್ರೋಹಿ
ಪ್ರಧಾನ ಮಂತ್ರಿ ಸಿಗಬಾರದು ಎಂದು ಹೇಳುವಾಗಲೆಲ್ಲ ನನ್ನ ಭಾರತ ನೆನಪಾಗುತ್ತದೆ! ಮತ್ತೆ ಮತ್ತೆ ದೇಶದೊಳಗಿನ ಶತ್ರುಗಳ ವಿರುದ್ಧ ರಕ್ತ ಕುದಿಯುತ್ತದೆ!

ಇವತ್ತು, ಭಾರತದ ಕಾಶ್ಮೀರದ ವಿವಾದವೇಕೆ ತಣ್ಣಗಾಗುತ್ತಿಲ್ಲ, ಹಿಂದೂಗಳ ಸಾವೇಕಾಗುತ್ತಿದೆ, NSG ಸದಸ್ಯತ್ವ ಯಾಕೆ ಸಿಗುತ್ತಿಲ್ಲ ವೆಂಬ ಇನ್ನದೆಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ‘ನೆಹರೂ’ ವೇ ಎಂಬುದು ಸ್ಪಷ್ಟವಾಗುತ್ತದೆ! ಭಾರತದ ಅಧಃಪತನದ ಪಿತಾಮಹ ನೆಹರೂ ಎಂದು ನಾನು ಹೇಳಲೇಬೇಕು!

ಇಷ್ಟೆಲ್ಲ ಆದ ಮೇಲೂ ಅಸಹಾಯಕನಾಗಿ ಕೂರುವ ನನಗೆ ಅನ್ನಿಸುವುದೊಂದೇ! ಅಕಸ್ಮಾತ್ Time – Machine ಎಂಬುದರ ಅಸ್ತಿತ್ವವಿದ್ದಿದ್ದರೆ, ನಾನು
ಖಂಡಿತವಾಗಿಯೂ 70 ವರ್ಷಗಳ ಹಿಂದಿನ ಭಾರತಕ್ಕೆ ಹೋಗಿ ಇನ್ಯಾವತ್ತೂ ಇತಿಹಾಸದ ಪುಟಗಳಲಿ ಅಚ್ಚೊತ್ತದಂತೆ ನೆಹರೂ ಹಾಗೂ ಕಾಂಗ್ರೆಸ್ ಎಂಹ ಎರಡರ ಅಸ್ತಿತ್ವವನ್ನೇ ಅಳಿಸುತ್ತಿದ್ದೆ.’

ಹಾಗೇನಾದರೂ ಆಗಿದ್ದರೆ, ನನ್ನ ಭಾರತ ಯಾವತ್ತೂ ಇಂತಹ ಸಾವು ನೋವುಗಳನ್ನು ಅನುಭವಿಸಬೇಕಾಗಿ ಬರುತ್ತಲೇ ಇರಲಿಲ್ಲ!!!!

– ತಪಸ್ವಿ

Editor Postcard Kannada:
Related Post