X

ಆರ್‍ಎಸ್‍ಎಸ್‍ನವರು ಉಗ್ರಗಾಮಿಗಳು ಎಂದ ಸಿದ್ದರಾಮಯ್ಯ ಹಿಂದೂಗಳ ಆಕ್ರೋಷಕ್ಕೆ ಉಲ್ಟಾ ಹೊಡೆದದ್ಯಾಕೆ..?!

“ಆರ್‍ಎಸ್‍ಎಸ್ ನವರು, ಬಜರಂಗದಳದವರು, ಭಾರತೀಯ ಜನತಾ ಪಕ್ಷದವರು ಉಗ್ರಗಾಮಿಗಳು. ಅವರನ್ನು ರಾಜ್ಯದಲ್ಲಿ ಮೊದಲು ನಿಷೇಧಿಸಬೇಕು. ಪಿಎಫ್‍ಐ ಮೇಲೆ ಯಾವುದೇ ಅಂತಹ ಪ್ರಕರಣಗಳಿಲ್ಲ. ಅದನ್ನು ನಿಷೇಧಿಸುವ ಅಗತ್ಯ ಕಾಣುವುದಿಲ್ಲ”…

ಇದು ನಿನ್ನೆ ಚಾಮರಾಜ ನಗರದಲ್ಲಿ ಸಂಘಪರಿವಾರದ ವಿರುದ್ಧ ಕರ್ಣಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಹೊಲಸು ಬಾಯಿ ಹರಿಬಿಟ್ಟ ಪರಿ. ನಿನ್ನೆ ಚಾಮರಾಜನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಘಪರಿವಾರದ ವಿರುದ್ಧ ವಾಚಾಮಗೋಚರವಾಗಿ ನಿಂದನೆ ಮಾಡಿದ್ದರು. ಜಗತ್ತಿನ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷವನ್ನು ಉಗ್ರಗಾಮಿಗಳು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಾಪಕ ಆಕ್ರೋಷ ವ್ಯಕ್ತವಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ ನಾಯಕರು, ಬಜರಂಗ ದಳದ ಪ್ರಮುಖರು ಸೇರಿದಂತೆ ಅನೇಕ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯರ ಉಗ್ರಗಾಮಿ ಮಾತುಗಳನ್ನು ಖಂಡಿಸಿ ಪ್ರತಿಭಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಮುಖ್ಯಮಂತ್ರಿಗಳು ಹೇಳಿದ್ದು ತಪ್ಪು ಎಂದ ಜೆಡಿಎಸ್ ನಾಯಕ ವಿಶ್ವನಾಥ್..!!!

ಮುಖ್ಯಮಂತ್ರಿ ಸಿದ್ದರಾಮಯ್ಯರ ಉಗ್ರಗಾಮಿ ಪದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಂಘಪರಿವಾರದ ನಾಯಕರು ಮಾತ್ರವಲ್ಲದೆ ಜಾತ್ಯಾತೀತ ಜನತಾ ದಳದ ನಾಯಕರಾದ ಮಾಜಿ ಸಂಸದ ಹೆಚ್.ವಿಶ್ವನಾಥ್ ಕೂಡಾ ಖಂಡಿಸಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲು ತಮ್ಮ ಸ್ಥಾನವನ್ನು ಅರ್ಥ ಮಡಿಕೊಳ್ಳಬೇಕು. ಬಾಯಿಗೆ ಬಂದ ಹಾಗೆ ,ಮಾತನಾಡುವುದು ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಸಂಘಪರಿವಾರದ ಬಗ್ಗೆ ಉಗ್ರಗಾಮಿ ಪದ ಬಳಕೆ ಸರಿಯಲ್ಲ” ಎಂದು ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ ಮೀರ್ ಸಾಧಿಕ್ ಅಂತ ಹೆಸರಿಡಲಿ-ಸೊಗಡು ಶಿವಣ್ಣ…

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಷಗೊಂಡಿರುವ ಭಾರತೀಯ ಜನತಾ ಪಕ್ಷದ ನಾಯಕ ಸೊಗಡು ಶಿವಣ್ಣ ಮುಖ್ಯಮಂತ್ರಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. “ಮುಖ್ಯಮಂತ್ರಿಗಳ ಹೆಸರಿನಲ್ಲಿ ರಾಮನಿರುವುದು ರಾಮನಿಗೆ ಮಾಡಿದ ಅವಮಾನ. ಇಂತಹ ವ್ಯಕ್ತಿಗೆ ಅವರ ತಂದೆ ತಾಯಿ ರಾಮನ ಹೆಸರು ಇಟ್ಟಿರುವುದು ದುರಾದೃಷ್ಟಕರ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರನ್ನು ಮೀರ್ ಸಾಧಿಕ್ ಎಂದು ಬದಲಾಯಿಸಿಕೊಳ್ಳಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬುವುದು ಜಗತ್ತಿನ ಅತಿ ದೊಡ್ಡ ಸ್ವಯಂ ಸೇವಾ ಸಂಘ. ಅದನ್ನು ನಿಷೇಧ ಮಾಡುವ ತಾಕತ್ತು ಮುಖ್ಯಮಂತ್ರಿಗಳಿಗೆ ಇದೆಯೇ? ತಾಕತ್ತಿದ್ದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಸಿದ್ದರಾಮಯ್ಯ ನಿಷೇಧ ಮಾಡಲಿ ನೋಡೋಣ” ಎಂದು ಸವಾಲು ಹಾಕಿದ್ದರು.

ಉಲ್ಟಾ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ..!!!

ನಿಸ್ಸಂಶಯವೇ ಇಲ್ಲ. ಪಕ್ಷ ಬೇದ ಮರೆತ ಹಿಂದೂಗಳೆಲ್ಲರೂ ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ತೀವ್ರವಾಗಿಯೇ ಖಂಡಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಷರಷಃ ಕಂಗಾಲಾಗಿ ಹೋಗಿದ್ದರು. ಮಾಧ್ಯಮಗಳಲ್ಲಿ ರಾಜಕೀಯ ನಾಯಕರು ಹಾಗೂ ಸಾಮಾಜಿಕ ಹೋರಾಟಗಾರರ ಆಕ್ರೋಷ ಮುಖ್ಯಮಂತ್ರಿಗಳ ಅಹಂಕಾರವನ್ನು ಕಡಿಮೆ ಮಾಡುವಂತೆ ಮಾಡಿತ್ತು. ಹೀಗಾಗಿ ಇಂದು ಮುಖ್ಯಮಂತ್ರಿಗಳು ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.

ಇಂದು ಮಲೆ ಮಾದೇಶ್ವರನ ಸನ್ನಿಧಾನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾನು ಉಗ್ರಗಾಮಿ ಪದವನ್ನು ಬಳಕೆ ಮಾಡೇ ಇಲ್ಲ. ನಾನು ಹೇಳಿದ್ದು ಭಾರತೀಯ ಜನತಾ ಪಕ್ಷದವರು ಉಗ್ರವಾದಿಗಳು ಎಂದು. ಆರ್‍ಎಸ್‍ಎಸ್ ನ ಬಗ್ಗೆ ನಾನು ಮಾತನಾಡೇ ಇಲ್ಲ. ನಾನು ಹಾಗೆ ಹೇಳಲೇ ಇಲ್ಲ. ಉಗ್ರಗಾಮಿ ಎಂಬ ಪದವನ್ನು ಬಳಕೆ ಮಾಡೇ ಇಲ್ಲ” ಎಂದು ಉತ್ತರಿಸಿದ್ದಾರೆ.

ಈವರೆಗೂ ಹಿಂದೂಗಳ ವಿರುದ್ದ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅದೇ ಹಿಂದೂಗಳ ಬಗ್ಗೆ ರಾಜಕೀಯ ಓಲೈಕೆಗಾಗಿ ಮೃದು ಧೋರಣೆ ಅನುಸರಿಸುತ್ತಿದ್ದಾರೆಯೇ ಎನ್ನುವ ಸೂಚನೆ ವ್ಯಕ್ತವಾಗುತ್ತಿದೆ. ಈವರೆಗೂ ದೇವಸ್ಥಾನಗಳ ಮುಖ ನೋಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಮಾತ್ರವಲ್ಲದೆ “ನನ್ನ ಹೆಸರಲ್ಲೂ ರಾಮನಿದ್ದಾನೆ, ನಾನೂ ಹಿಂದೂನೆ” ಎನ್ನುವ ಮೂಲಕ ಹಿಂದುತ್ವದ ಜಪ ಮಾಡಲು ಆರಂಭಿಸಿದ್ದಾರೆ. ಗುಜರಾತ್‍ನಲ್ಲಿ ಟೆಂಪಲ್ ರನ್ ಆರಂಭಿಸಿದ್ದ ರಾಹುಲ್ ಗಾಂಧಿ ಅದೇ ಪ್ರಯೋಗವನ್ನೂ ಕರ್ಣಾಟಕದಲ್ಲೂ ಮಾಡಲು ಸೂಚನೆ ನೀಡಿದ್ದರು. ಅದನ್ನೇ ಬಂಡವಾಳವಾಗಿ ಉಳಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನಾನೂ ಹಿಂದು ಎಂದು ದೇವಸ್ಥಾನಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

-ಸುನಿಲ್ ಪಣಪಿಲ

Editor Postcard Kannada:
Related Post