X

ಅಮಿತ್ ಶಾ ಗೆ ಟಾಂಗ್ ಕೊಡಲು ಹೋಗಿ ಪೇಚಿಗೆ ಸಿಲುಕಿದ ಸಿದ್ಧರಾಮಯ್ಯ !!

ಮೊದಲನೆಯದಾಗಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಂದೊಡನೆ ನೆನಪಾಗುವ ಹೆಸರೇ ನಿದ್ರಾಮಯ್ಯ ಎನ್ನುವಂತಹ ಸ್ಥಿತಿಗೆ ತಮ್ಮ ತಾ ತಂದುಕೊಂಡಿರುವ ಸಿದ್ಧರಾಮಯ್ಯನವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಒತ್ತಡ ಹೆಚ್ಚಾಗಿ ನಿದ್ರೆ ಬಿಟ್ಟಿದ್ದರಿಂದ, ಸಾಮಾನ್ಯ ಪ್ರಜ್ಞೆಯನ್ನೂ ಮರೆತಿದ್ದಾರೆ ಎಂಬುದಕ್ಜೆ ಪದೇ ಪದೇ ಸಾಕ್ಷಿಗಳು ಲಭ್ಯವಾಗುತ್ತಿದೆ!

ಮೈಸೂರಿನ ಮಲೆ ಮಹದೇಶ್ವರ ದಲ್ಲಿ ಭಾಷಣಕ್ಕಿಳಿದ ಸಿದ್ಧರಾಮಯ್ಯರವರು ಅಮಿತ್ ಶಾ ರಿಗೆ ಟಾಂಗು ಕೊಡಲು ಹೋಗಿದ್ದಾರಷ್ಟೇ! ತಮ್ಮದೊಂದೇ ಒಂದು ಪ್ರಶ್ನೆಯಿಂದ ಅಮಿತ್ ಷಾ ರಿಗೆ ತಕ್ಜ ಶಾಸ್ತಿ ಮಾಡುತ್ತೇನೆಂದು ಹೊರಟ ಸಿದ್ಧರಾಮಯ್ಯ ಅಯ್ಯೋ! ತಮಗೆ ತಾವೇ ತಕ್ಕ ಶಾಸ್ತಿ ಮಾಡಿಕೊಂಡಿದ್ದಾರೆ!

“ಅಮಿತ್ ಷಾ ಯಾರು?! ಹಣಕಾಸು ಲೆಕ್ಕ ಕೇಳಲು ಅವರೇನು ಹಣಕಾಸು ಮಂತ್ರಿಯೇ?! ಬೇಕಾದರೆ ಅರುಣ್ ಜೇಟ್ಲಿ ಕೇಳಲಿ, ಲೆಕ್ಕ ಕೇಳಲು ಅಮಿತ್ ಷಾ ಯಾರು?! ಸಂಸದನಾ?! ಮಂತ್ರಿಯಾ?!”

ಪ್ರಶ್ನೆ ಕೇಳಿಬಿಟ್ಟೆ! ಇನ್ನು ಅಮಿತ್ ಷಾ ಬಾಯಿ ಮುಚ್ಚಿತೆನ್ನುವಾಗಲೇ ಓಹೋ! ಸಿದ್ಧರಾಮಯ್ಯರವರಿಗೆ ರಾಜಕೀಯ ಜ್ಞಾನ ಎಷ್ಟಿದೆ ನೋಡ್ರಪಾ ಎಂದು ಶ್ರೀಸಾಮಾನ್ಯನೂ ಬಾಯಿ ಬಡಿದುಕೊಂಡು ನಗಲು ಪ್ರಾರಂಭಿಸಿದ್ದಾನೆ!

ಅಲ್ಲ ರೀ! ಮೊನ್ನೆಯಷ್ಟೇ ಗುಜರಾತ್ ರಾಜ್ಯ ಸಭಾದಿಂದ ಸದಸ್ಯನಾಗಿ ಆಯ್ಕೆಯಾಗಿರುವ ಅಮಿತ್ ಷಾ ರ ಸ್ಥಾನವೂ ಗೊತ್ತಿಲ್ಲದೇ ಎಗರಾಡಿದ
ಸಿದ್ಧರಾಮಯ್ಯರವರಿಗೆ ರಾಜಕೀಯ ಪ್ರಜ್ಞೆ ಎನ್ನುವುದಾದರೂ ಇದೆಯಾ?!

ಬರೀ ಮಾತಿನಲ್ಲೇ ಮನೆ ಕಟ್ಟುವ ಸಿದ್ಧರಾಮಯ್ಯರಿಗೆ ಯಾರ್ಯಾರು ಯಾವ ಸ್ಥಾನದಲ್ಲಿದ್ದಾರೆ, ಅವರವರ ಜವಾಬ್ದಾರಿಗಳೇನಿದೆ ಎಂದು ಅರಿಯದೇ ಬೇಕಾ ಬಿಟ್ಟಿ ಮಾತನಾಡುವ ಸಿದ್ಧರಾಮಯ್ಯರವರು ಮೊದಲು ಸಂಸ್ಕಾರ ಕಲಿಯಬೇಕಿದೆ!

ವಿಪಕ್ಷಗಳ ಬಗ್ಗೆ ಅರಿವು ಬಿಡಿ! ಇಂದಿರಾ ಗಾಂಧಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸತ್ತದ್ದು ಸೋನಿಯಾ ಗಾಂಧಿ ಎಂದಿದ್ದ ಇದೇ ಸಿದ್ಧರಾಮಯ್ಯ, ಮೊನ್ನೆ ಮೊನ್ನೆಯಷ್ಟೇ ರಾಜೀವ್ ಗಾಂಧಿಯ ಬದಲು ರಾಹುಲ್ ಗಾಂಧಿಯನ್ನು ಸಾಯಿಸಿದ್ದರು! ಪಾಪ! ಆತ ನೋಡಿದರೆ 47 ರ ಹದಿಹರೆಯದ ಯುವಕ! ಬದುಕು ಇನ್ನೂ ಇರಬೇಕಾದರೆ ಸಿದ್ಧರಾಮಯ್ಯರೇ ಶ್ರದ್ಧಾಂಜಲಿ ಪಟ ಹಾಕಲಿಕ್ಕೆ ತಯಾರಾಗಿದ್ದರು!

ಏನ್ ಕರ್ಮಾ ರೀ ಇದು?! ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ವರ್ತಿಸುವವನು ಇನ್ನೂ ನಮಗೆ ಮುಖ್ಯಮಂತ್ರಿಯಾಗಿರಬೇಕೇ?! ಛೇ!

ಕ್ಷಣಕ್ಷಣಕ್ಕೂ ಸಿದ್ಧರಾಮಯ್ಯರವರ ವಿವಾದ!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿದ್ದರಾಮಯ್ಯ ಸಂಘದವರನ್ನು ಉಗ್ರವಾದಿಗಳು ಎಂದಿದ್ದು, ಉಗ್ರಗಾಮಿಗಳು ರೀ ಎಂದಿದ್ದು, ಎಂದೆಲ್ಲ ಕ್ಷಣಕ್ಕೊಮ್ಮೆ ತಮ್ಮ ಬಣ್ಣ ಬದಲಾಯಿಸುತ್ತಿದ್ದಾರಷ್ಟೇ! ಕೇವಲ ಅದೊಂದೇ ಅಲ್ಲ, ಪಿಎಫ್ ಐ ನಿಷೇಧದ ವಿಚಾರದಲ್ಲಿ ತಾನೊಬ್ಬ ಹಿಂದೂ ವಿರೋಧಿಯಷ್ಟೇ ಅಲ್ಲ, ಬದಲಾಗಿ ರಾಷ್ಟ್ರ ವಿರೋಧಿಯೂ ಹೌದು ಎಂಬುದನ್ನು ಸಾಬೀತು ಪಡಿಸಲು ಹೊರಟಿರುವ ಸಿದ್ಧರಾಮಯ್ಯ ನಿಜಕ್ಕೂ ತಮ್ಮ ಮಿತಿ ಮೀರುತ್ತಿದ್ದಾರೆ ಅಷ್ಟೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post