X

ಇಂತಹ ಕೃತ್ಯಗಳನ್ನು ಎಸಗಿದ್ದಕ್ಕೆ ಆರ್.ಎಸ್.ಎಸ್. ಅನ್ನು ಉಗ್ರಗಾಮಿ ಸಂಘಟನೆ ಅಂದರೇ ಸಿದ್ದರಾಮಯ್ಯ?!!

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಭಾರತಾದಾದ್ಯಂತ ಅಸ್ತಿತ್ವವನ್ನು ಹೊಂದಿದೆ. ಎಲ್ಲಾ ಸದಸ್ಯರು ಕುಟುಂಬದ ಒಂದು ಭಾಗವೆಂದು ಬದುಕುತ್ತಾರೆ.. ಎಲ್ಲರನ್ನೂ ಸಮಾನ ಭಾವದಿಂದ ಕಂಡುಕೊಳ್ಳುತ್ತಾರೆ. ಎಲ್ಲಾ ಹಿಂದೂಗಳನ್ನು ತಮ್ಮ ಸಹೋದರ ಸಹೋದರಿಯನ್ನಾಗಿ ಕಾಣುವ ಸಂಸ್ಕಾರ ಪಡೆದಿದೆ ಈ ಆರ್‍ಎಸ್‍ಎಸ್… ಸ್ವಯಂ ಸೇವಕರಿಗೆ, ದೇಶದ ಯಾವುದೇ ಮೂಲೆಯಲ್ಲಿನ ನಮ್ಮ ಬಾಂಧವರಿಗೆ ಯಾವ ರೀತಿಯ ವಿಪತ್ತು ಬಂದರೂ ಒಡನೆಯೇ ಅವರ ಆಸರೆಗೆ ಧಾವಿಸುವುದು ಸಹಜ ಸ್ವಭಾವವಾಗಿದೆ. ಆದರೆ ಸಿದ್ಧರಾಮಯ್ಯನವರು ಮಾತ್ರ ಆರ್‍ಎಸ್‍ಎಸ್ ಉಗ್ರಗಾಮಿ ಸಂಘಟನೆ ಎಂದು ಜರಿದಿರುವುದು ಎಷ್ಟರ ಮಟ್ಟಿಗೆ ಸರಿ?!

ಹೌದು, ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆ ದುರಾಚಾರಿ ಮುಖ್ಯಮಂತ್ರಿ ನಿದ್ದೆರಾಮಯ್ಯರೆ. ಆರ್.ಎಸ್.ಎಸ್ ನಿಮ್ಮ ಪಾಲಿಗೆ ಯಾಕೆ ಉಗ್ರಗಾಮಿ ಸಂಘಟನೆಯಾಗಿ ಕಾಣುತ್ತದೆ ಎಂಬುದನ್ನು ಹೇಳುತ್ತೇನೆ ಸಿದ್ದರಾಮಯ್ಯನವರೇ, ನಿಮ್ಮ ನಿದ್ದೆಯಿಂದ ಒಂಚೂರು ಎದ್ದು, ಈ ಕೆಳಗಿನ ಕೆಲವೇ ಸಾಲುಗಳನ್ನು ಓದಿ.

ಭಾರತದಲ್ಲಿ ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಭಾರತದಲ್ಲಿ ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಎಂದರೆ ಐದು ಮಿಲಿಯನ್ ಕ್ರೀಯಾಶೀಲ ಸದಸ್ಯರು ಹಾಗೂ ದೇಶದೆಲ್ಲೆಡೆ 60 ಸಾವಿರ ಶಾಖೆಗಳಿವೆ. 100ಕ್ಕಿಂತಲೂ ಹೆಚ್ಚು ಅಂಗಸಂಸ್ಥೆಗಳಿವೆ ಹಾಗಾದರೆ ಆರ್‍ಎಸ್‍ಎಸ್‍ನ ಎಷ್ಟರ ಮಟ್ಟಿಗೆ ದೇಶದೆಲ್ಲೆಡೆ ಪ್ರಭಾವ ಬಿದ್ದಿರಬಹುದು. ರಾಷ್ಟ್ರನಿರ್ಮಾಣದ ಗುರಿಯನ್ನು ಹೊತ್ತು ನಿರಂತರ ದೇಶ ಸೇವೆ ಮಾಡುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರೆ?

1934 ರಲ್ಲಿ ಗಾಂಧೀಜಿಯವರಿಂದ 1939ರಲ್ಲಿ ಅಂಬೇಡ್ಕರ್ ಅವರಿಂದ ಜಾತಿನಿರ್ಮೂಲನೆಯ ಕಾರ್ಯದಲ್ಲಿ ಭೇಷ್ ಅನ್ನಿಸಿಕೊಂಡ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?ಇದೆಲ್ಲಾ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಸಿಎಂ ಸಿದ್ದರಾಮಯ್ಯನವರೇ?

ಅಂದು ದೇಶ ವಿಭಜನೆಯ ಸಂದರ್ಭ!! ಜವಹರ್‍ಲಾಲ್ ನೆಹರೂ ಹಾಗು ಕಾಂಗ್ರೆಸ್ಸಿನ ದುರಾಸೆಯಿಂದಾಗಿ ಭಾರತ ಇಬ್ಭಾಗವಾಗುವಂತಾಯಿತು… ನೆಹರೂ ಮತ್ತು ಕಾಂಗ್ರೆಸ್ಸಿನ ದುರಾಸೆಯ ಫಲವಾಗಿ ದೇಶ ವಿಭಜನೆಯಾದ ಕಾಲದಲ್ಲಿ ಪಾಕಿಸ್ತಾನದಿಂದ ಬಂದ ಕೋಟ್ಯಂತರ ನಿರಾಶ್ರಿತರ ರಿಲೀಫ್ ಕ್ಯಾಂಪ್ ನಿರ್ಮಿಸಿದ್ದು ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರೇ.. ಭಾರತ ಇಬ್ಭಾಗವಾದ ಸಮಯದಲ್ಲಿ ಆರ್‍ಎಸ್‍ಎಸ್ ಕೆಲಸದ ಬಗ್ಗೆ ನಿಮಗೆ ತಿಳಿದಿಲ್ಲವೇ? ಗೋವಾ, ದಾದ್ರ, ನಗರ್ ಹವೇಲಿ ವಿಮೋಚನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ನಿದ್ದೆರಾಮಯ್ಯರೆ?

ಆದರೆ, ಹಿಂದೆ ಜವಹರಲಾಲ್ ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆರ್.ಎಸ್.ಎಸ್ ನ್ನು ಕಂಡು ಹುರಿದು ಬೀಳುತ್ತಿದ್ದಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ದ ವಿರುದ್ಧ ವೈಷಮ್ಯವನ್ನು ಕಾರುತ್ತಿದ್ದರು!! ತದನಂತರದ ಸಮಯದಲ್ಲಿ ಅಂದರೆ 1962ರಲ್ಲಿ ಚೀನಾ ಮತ್ತು ಭಾರತದ ನಡುವೆ ಯುದ್ದ ನಡೆದ ಸಂದರ್ಭದಲ್ಲಿ ಭಾರತದಲ್ಲಿದ್ದ ಚೀನಾ ಪ್ರೇರಿತ ಕಮ್ಯುನಿಸ್ಟ್ ಬಳಗವು ಭಾರತೀಯರಿಗೆ ರಕ್ತದಾನ ಮಾಡುವುದನ್ನೇ ನಿಷೇಧಿಸಿತ್ತು!!

ಆದರೆ… ಅದೇ ಸಂದರ್ಭದಲ್ಲಿ ನೆಹರೂರವರಿಂದಲೇ ನಿಷೇಧಿಸಲ್ಪಟ್ಟ ಇದೇ ದೇಶಭಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ದ ಸ್ವಯಂಸೇವಕರು ರಕ್ತದಾನ ಮಾಡಲು ಮುಂದಾಗಿದ್ದಲ್ಲದೇ ಟ್ರಾಫಿಕ್ ಸಿಗ್ನಲ್ ನಲ್ಲಿಯೂ ಅಗಾಧವಾದ ಸೇವೆಯನ್ನೂ ಮಾಡಿದ್ದರು. ಈ ಮೂಲಕ ನೇಶನ್ ಫಸ್ಟ್ ಎಂಬುವುದನ್ನು ಆರ್.ಎಸ್.ಎಸ್ ಕಾರ್ಯಕರ್ತರು ಸಾಬೀತು ಪಡಿಸಿದ್ದರು

1962ರ ಇಂಡೋ ಚೈನಾ ಯುದ್ಧದ ಕಾಲದಲ್ಲಿ ಪ್ರಧಾನ ಮಂತ್ರಿ ನೆಹರು ದೇಶ ರಕ್ಷಣೆಗೆ ಸಹಾಯ ಕೇಳಿದ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ?

ಅದಷ್ಟೇ ಅಲ್ಲದೇ, ಭಾರತ ಮತ್ತು ಚೀನಾದ ನಡುವೆ ನಡೆದ ಯುದ್ದದಲ್ಲಿ ಭಾರತದ ಇಡೀ ಸೇನೆ ಮತ್ತು ಭಾರತೀಯ ಪೆÇಲೀಸರು ಕೂಡ ದೇಶದ ನಿರಾಶ್ರಿತ ಜಾಗಗಳಿಗೆ ತೆರಳಿತ್ತು. ಆ ಸಂದರ್ಭದಲ್ಲಿ ದೇಶವನ್ನು ಕಾಯುವ ಚಟುವಟಿಕೆಯಲ್ಲಿ ಕೆಲಸ ಮಾಡಿದವರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)!! ಈ ಕಾರ್ಯ ವೈಖರಿಯನ್ನು ಮೆಚ್ಚಿದ ನೆಹರೂ 1963ರ ಗಣರಾಜ್ಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ ಪಥಸಂಚಲನ ನಡೆಸಲು ಅವಕಾಶವನ್ನು ಕಲ್ಪಿಸಿ ಆರ್.ಎಸ್.ಎಸ್ ನ್ನು ಹಾಡಿ ಹೊಗಳಿದ್ದರು!! ಹಾಗಾದರೆ 1963ರ ಗಣರಾಜ್ಯ ದಿನದ ಪಥಸಂಚಲದಲ್ಲಿ ಭಾಗವಹಿಸಿದ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರೆ???

1965 ಹಾಗೂ 1971ರ ಯುದ್ಧಕಾಲದಲ್ಲಿ ವಿವಿಧ ರಾಜ್ಯಗಳ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿದ ಹಾಗೂ ದೇಶ ರಕ್ಷಣೆಗೆ ಕಂಕಣ ತೊಟ್ಟ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರೆ???
1971ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ. ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ 3, 1971 ರಂದು ವೈಷಮ್ಯ ಉಂಟಾಗಿತ್ತು… 3 ಡಿಸೆಂಬರ್ 1971 ಮತ್ತು 16 ಡಿಸೆಂಬರ್ 1971 ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು “ಭಾರತ-ಪಾಕಿಸ್ತಾನ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಬಾಂಗ್ಲಾ ವಿಮೋಚನೆಯ ಕಾಲದಲ್ಲಿ ಗಾಯಾಳುಗಳಾದ ಸೈನಿಕರಿಗೆ ರಕ್ತದಾನ ಮಾಡಲು ಮುಂದೆ ಬಂದ ಮೊದಲ ಸಂಸ್ಥೆ ಆರ್.ಎಸ್.ಎಸ್!!! ಹಾಗಾದರೆ ಆರ್‍ಎಸ್‍ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?

27000 ಹೆಚ್ಚು ಏಕಲ ವಿದ್ಯಾಲಯಗಳನ್ನು ಸ್ಥಾಪಿಸಿ ಎಂಟು ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ನಿದ್ದೆರಾಮಯ್ಯರೆ?

ಅಂದು ನಿಮ್ಮದೇ ಪಕ್ಷ ಕಾಂಗ್ರೆಸ್‍ನ ಸದಸ್ಯರು 1984 ರಲ್ಲಿ ಉತ್ತರ ಭಾರತದಲ್ಲಿ ಸಿಖ್ಖರ ನರಮೇಧ ನಡೆಸಿದಾಗ ಸಿಖ್ಖರನ್ನು ರಕ್ಷಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದು ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ….

1984 ಡಿಸೆಂಬರ್ ರಾತ್ರಿ 2,3 ರ ಹೊತ್ತಿಗೆ ಮಧ್ಯಪ್ರದೇಶದ , ಭೂಪಾಲದಲ್ಲಿ ನಡೆದ ಘಟನೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು!! ಹೌದು! ಆ ದಿನ ರಾತ್ರಿ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ಮೆತೈಲ್ ಐಸೋಸೈಯನೇಟ್ ಗ್ಯಾಸ್ ಸೋರಿಕೆಯಾಗಿ ಇಡೀ ಭೂಪಾಲ್ ಹರಡಿತ್ತು ಇದು ಆ ದಿನ ಸಾವಿರಾರು ಜನರನ್ನು ಬಲಿತೆಗೆದುಕೊಂಡು ಬಿಟ್ಟಿತು… ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡರು. ಆ ರಾತ್ರಿ ಇಡೀ ನಗರಕ್ಕೆ ನಗರವೇ ಒಂದಾಗಿತ್ತು.. ಎಲ್ಲರು ಈ ಘಟನೆಯಿಂದ ಭಯಭೀತರಾಗಿದ್ದು, ಪ್ರಾಣ ಉಳಿಸಿಕೊಳ್ಳಲು ಸೆಣಸಾಡ ಬೇಕಾಯಿತು.. ಭೋಪಾಲ ಅನಿಲ ದುರಂತ ನೆನೆಪಿಸಿದರೆ ಸಾಕು ಮೈಯೆಲ್ಲಾ ಜುಮ್ಮೆನ್ನುತ್ತೆ!!  ಆ ಸಮಯದಲ್ಲಿ ನೋವಲ್ಲಿದ್ದವರ ಕಣ್ಣೀರು ಒರೆಸಲು ಮುಂದೆ ಬಂದ ಮೊದಲ ಸಂಸ್ಥೆ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾನಯ್ಯನವರೇ…

ದೇಶದ ಯಾವುದೇ ಮೂಲೆಯಲ್ಲಿ ಪ್ರಾಕೃತಿಕ ದುರಂತಗಳಾದಾಗ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆ ಸಿದ್ದರಾಮಯ್ಯನವರೇ.. ದೇಶಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ, ರಾಮನಾಥ್ ಕೋವಿಂದ್ ಮುಂತಾದ ಅದ್ಭುತ ನಾಯಕರನ್ನು ನೀಡಿದ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ..

ಸಮಾಜದ ಕ್ಷೇಮಾಭಿವೃದ್ಧಿಗೆ ರಾಷ್ಟೋತ್ಥಾನ ಪರಿಷದ್ ನಂತಹ ಸಂಸ್ಥೆಯನ್ನು ಕಟ್ಟಿ, ರಕ್ತನಿಧಿ, ಗೋಶಾಲ, ಪುಸ್ತಕ ಪ್ರಕಟನಾಲಯ ಮುಂತಾದ ಕೆಲಸಗಳನ್ನು ಮಾಡುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ..

ವಿದ್ಯಾಭಾರತಿಯ ಮುಖೇನ 50000ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ.. ಬುಡಕಟ್ಟು ಜನರ ಸಮಗ್ರ ಅಭಿವೃದ್ಧಿಗೆ ಪೂರಕವಾದ ವನವಾಸಿ ಕಲ್ಯಾಣ ಆಶ್ರಮವನ್ನು ಸ್ಥಾಪಿಸಿ ದೇಶದ ಬುಡಕಟ್ಟು ಜನರ ಮಧ್ಯೆ ಕಾರ್ಯನಿರ್ವಹಿಸುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ.. ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‍ನ ಮುಖೇನ ದೇಶದ ವಿದ್ಯಾರ್ಥಿಗಳನ್ನು ಸಂಘಟಿಸಿ ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುತ್ತಿರುವ ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ..

ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಎಂದರೆ ಭಾರತದ ಟಾಪ್ ಮೂರು ಸಾಂವಿಧಾನಿಕ ಹುದ್ದೆಗಳು ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಪ್ರದಾನ ಮಂತ್ರಿಗಳು ಆರ್‍ಎಸ್‍ಎಸ್ ನ ಹೆಮ್ಮೆಯ ಸದಸ್ಯರಾಗಿದ್ದಾರೆ. ಭಾರತದಲ್ಲಿ ಆರ್‍ಎಸ್‍ಎಸ್ ಎಷ್ಟು ಶಕ್ತಿಯುತವಾಗಿದೆ ಎಂದರೆ ಐದು ಮಿಲಿಯನ್ ಕ್ರೀಯಾಶೀಲ ಸದಸ್ಯರು ಹಾಗೂ ದೇಶದೆಲ್ಲೆಡೆ 50 ಸಾವಿರ ಶಾಖೆಗಳಿವೆ. ಹಾಗಾದರೆಆರ್‍ಎಸ್‍ಎಸ್ ನ ಎಷ್ಟರ ಮಟ್ಟಿಗೆ ದೇಶದೆಲ್ಲೆಡೆ ಪ್ರಭಾವ ಬಿದ್ದಿರಬಹುದು. 100ಕ್ಕಿಂತಲೂ ಹೆಚ್ಚು ಅಂಗಸಂಸ್ಥೆಗಳಿವೆ. ಬಿಜೆಪಿ ನ ಹೆಮ್ಮೆಯ ಅಂಗ ಸಂಸ್ಥೆಯಾಗಿದ್ದು, ಬಿಜೆಪಿಯ 70%ರಷ್ಟು ಜನರು ಆರ್‍ಸ್‍ಎಸ್‍ನಿಂದ ಬಂದಿರುವವರು.. ಪ್ರಪಂಚದ ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆ ಆರ್.ಎಸ್.ಎಸ್!! ಇಷ್ಟೆಲ್ಲಾ ಪ್ರಸಿದ್ಧಿ ಹೊಂದಿರುವ ಸಂಸ್ಥೆಯೊಂದಕ್ಕೆ ಉಗ್ರಗಾಮಿ ಸಂಘಟನೆ ಎಂದು ಹೆಸರಿಟ್ಟಿರಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?

30 ಸಾವಿರ ವಿಧ್ಯಾ ಮಂದಿರಗಳು, 3 ಲಕ್ಷ ಉಪಾದ್ಯಾಯರು, 50 ಲಕ್ಷ ವಿದ್ಯಾರ್ಧಿಗಳು, 90 ಲಕ್ಷ ಭಾರತೀಯ ಮಜ್ದೂರ್ ಸಂಘದ ಸದಸ್ಯರು, 50 ಲಕ್ಷ ಎಬಿವಿಪಿ ಸದಸ್ಯರು, 10 ಕೋಟಿ ಬಿಜೆಪಿ ಸದಸ್ಯರು, 500 ಪ್ರಕಾಶನ ಸಂಸ್ಥೆಗಳು, 4000 ಸಾವಿರ ಪೂರ್ಣ ಕಾಲಿಕ ಮತ್ತು 1 ಲಕ್ಷ ಪೂರ್ವ ಸೈನಿಕ ಪರಿಷತ್ತುಗಳಿವೆ. 7 ಲಕ್ಷ ವಿಶ್ವ ಹಿಂದೂ ಪರಿಷತ್ತಿನ ಮತ್ತು ಭಜರಂಗದಳದ ಸದಸ್ಯರು, 13 ರಾಜ್ಯಗಳಲ್ಲಿ ಸರಕಾರ 283 ಸಂಸದರು 1 ಸಾವಿರ ವಿಧಾನ ಸಭಾ ಸದಸ್ಯರು 50 ನ್ಯೂಸ್ ಚಾನಲ್ 2500 ಪತ್ರಕರ್ತರು ಈ ಸಂಘಟನೆಯಲ್ಲಿ ಸೇರಿಕೊಂಡಿವೆ. ಇಷ್ಟು ಅಗಾಧ ಪ್ರಮಾಣದಲ್ಲಿ ಬೆಳೆದಿರುವ ಈ ಸಂಘಕ್ಕೆ ನಿಮ್ಮ ಬಾಯಿಂದ ಇಂತಹ ಮಾತುಗಳೇ ಸಿದ್ದರಾಮಯ್ಯನವರೇ?

ಆರ್‍ಎಸ್‍ಎಸ್ ಬಗ್ಗೆ ಕೆಲವರು ಅಪ ಪ್ರಚಾರ ಹಬ್ಬಿಸಿದರೆ ಕಾರ್ಯಕರ್ತರು ಕಾರಣೀ ಭೂತರಲ್ಲ.. ಸಂಘ ಸಂಬಂಧಿತ ವಿವಿಧ ಸಂಸ್ಥೆಗಳ ಮೂಲಕ ಸ್ವಯಂ ಸೇವಕರು ಕೈಗೊಂಡಿರುವ ಸೇವಾ ಕಾರ್ಯಗಳು ದೇಶದ ಎಲ್ಲಾ ಪ್ರಾಂತ್ಯಗಳಲ್ಲಿ ನಡೆಯುತ್ತಿದೆ.. ದೇಶದೆಲ್ಲೆಡೆ ಏನೇ ಸಮಸ್ಯೆಯಾದರೂ ಆರ್‍ಎಸ್‍ಎಸ್ ಸಹಾಯ ಮಾಡಲು ಮುನ್ನುಗ್ಗುತ್ತದೆ.. ಅನೇಕ ಸಮಸ್ಯೆಗಳಿಂದ ತುಂಬಿದ ಈ ವಿಶಾಲ ದೇಶದಲ್ಲಿ ಈ ಸೇವಾ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಾ ಬಂದಿದೆ.. ಇನ್ನೂ ಬಹಳಷ್ಟು ದೂರ ಸಾಗ ಬೇಕಾಗಿದೆ..

ನಿಮಗೆ ಮತ್ತು ನಿಮ್ಮಂತಹ ದುರಾಡಳಿತ ಮಾಡುವವರಿಗೆ ಕೇಳಲು ಇನ್ನೂ ಬಹಳ ಪ್ರಶ್ನೆಗಳಿವೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಹೇಳುವುದು ಬಹಳಷ್ಟಿದೆ. ಸದ್ಯಕ್ಕೆ ಇಷ್ಟನ್ನು ಓದುವ ಹೊತ್ತಿಗೆ ನಿಮಗೆ ನಿದ್ದೆ ಬಂದಿರುತ್ತದೆ. ಇನ್ನೊಮ್ಮೆ ಎದ್ದಾಗ ತಿಳಿಸಿ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ.

Editor Postcard Kannada:
Related Post