X

ಇಲಿಯಾಸ್ ಹತ್ಯೆಗೆ ಸ್ಫೋಟಕ ಟ್ವಿಸ್ಟ್.!! ಕಾಂಗ್ರೆಸ್ ಮುಖಂಡರೊಂದಿಗೆ ಗುರುತಿಸಿದ್ದ ಇಲಿಯಾಸ್‍ನನ್ನು ಅಟ್ಟಾಡಿಸಿ ಕೊಂದಿದ್ದು ಹೇಗೆ ಗೊತ್ತೇ?!

ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳನ್ನು ನಿಯಂತ್ರಿಸಲಾಗದ ಕಾಂಗ್ರೆಸ್ ಸರಕಾರ ಇಡೀ ರಾಜ್ಯದಲ್ಲಿ ಶಾಂತಿ ಎಂಬ ಮಾತನ್ನೇ ಮರೆತುಬಿಡುವಂತೆ ಮಾಡಿದೆ.

ದಿನಬೆಳಗಾದರೆ ಕರಾವಳಿ ಭಾಗದಲ್ಲಿ ಒಂದೊಂದೆ ಹೆಣ ಬೀಳುತ್ತಿದೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿರುವುದು ಗೋಚರಿಸುತ್ತಿದೆ.

ಕರಾವಳಿಯ ಭಾಗದಲ್ಲಂತೂ ಧರ್ಮದ ಹೆಸರಿನಲ್ಲಿ ಹಲ್ಲೆ ಹತ್ಯೆಗಳು ನಡೆಯುತ್ತಲೇ ಇದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಮಾತ್ರ ಇನ್ನೂ ನಿದ್ದೆಯಲ್ಲಿರುವುದು ಸರಕಾರದ ಬೇಜವಾಬ್ದಾರಿನವನ್ನು ಎತ್ತಿ ತೋರಿಸುತ್ತಿದೆ.

ಜನವರಿ ೩ರಂದು ಹಿಂದೂ ಸಂಘಟನೆಯ ಕಾರ್ಯಕರ್ತ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ನ‌ ಕೊಲೆ ನಡೆದಿತ್ತು.
ಈ ಕೊಲೆಯಲ್ಲಿ ಮಂಗಳೂರಿನ ನಟೋರಿಯಸ್ ರೌಡಿಗಳೇ ತುಂಬಿರುವ ‘ಟಾರ್ಗೆಟ್ ಗ್ರೂಪ್’ ನ ಕೆಲವರು ಶಾಮೀಲಾಗಿರುವುದು ತನಿಖೆಯ ವೇಳೆ ಕಂಡುಬಂದಿತ್ತು.

‘ಟಾರ್ಗೆಟ್ ಗ್ರೂಪ್’ ಎಂಬ ಸಂಘಟನೆಯ ಮುಖ್ಯಸ್ಥನಾಗಿದ್ದ ಇಲಿಯಾಸ್ ನ ಇಂದು ಕೊಲೆ ನಡೆದಿದೆ.
ಒಂದೇ ಕೋಮಿನ ಗ್ಯಾಂಗ್ ವಾರ್ ನಲ್ಲಿ ಇಲಿಯಾಸ್ ಹತ್ಯೆಯಾಗಿದೆ. ಈ ಇಲಿಯಾಸ್ ಗೂ ಕಾಂಗ್ರೆಸ್ ಗೂ ಹತ್ತಿರದ ಸಂಬಂಧ… ಹೌದು ಮಂಗಳೂರಿನ‌ ಪ್ರಭಾವಿ ಸಚಿವರ ಜೊತೆ ಆಪ್ತನಾಗಿದ್ದ ಇಲಿಯಾಸ್ ಮಂಗಳೂರಿನ ಉಳ್ಳಾಲ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ.

ಯು ಟಿ ಖಾದರ್, ಮೊಯಿದ್ದೀನ್ ಬಾವಾ ರಂತಹ ಕಾಂಗ್ರೆಸ್ ಸಚಿವ ಶಾಸಕರ ಜೊತೆ ನೇರ ಸಂಬಂಧ ಹೊಂದಿದ್ದ ಇಲಿಯಾಸ್ ನಟೋರಿಯಸ್ ರೌಡಿಗಳ ಪಟ್ಟಿಯಲ್ಲಿ ಇದ್ದವನು.

ಸ್ವತಃ ಇಲಿಯಾಸ್ ಯು ಟಿ ಖಾದರ್ ಜೊತೆಗೆ ಊಟ ಮಾಡುತ್ತಿದ್ದ ಫೋಟೋ ಈಗಾಗಲೇ ವೈರಲ್ ಆಗಿದೆ.
ಈ ರೀತಿಯ ನಂಟು ಹೊಂದಿರುವ ಕಾಂಗ್ರೆಸ್ ನ‌ ಸಚಿವರು ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆಗಳಲ್ಲಿ ನೇರವಾಗಿ ಶಾಮೀಲಾಗಿರುವುದು ಕಂಡುಬರುತ್ತಿದೆ.

ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಕೊಲೆ ನಡೆದಾಗ ಪ್ರತಿಕ್ರಿಯೆ ನೀಡಿದ ಸಚಿವ ಯು ಟಿ ಖಾದರ್ ತನಗೂ ಇಲಿಯಾಸ್ ಗೂ ಯಾವುದೇ ರೀತಿಯ ಸಂಬಂಧ ಇಲ್ಲ ಮತ್ತು ಕೊಲೆಗೂ ಇಲಿಯಾಸ್ ಗೂ ಯಾವುದೇ ಸಂಬಂಧ ಇಲ್ಲ ಎಂಬ ವಿಭಿನ್ನ ಹೇಳಿಕೆ ನೀಡುವ ಮೂಲಕ ಅನುಮಾನಗಳಿಗೆ ಮತ್ತಷ್ಟು ಹುರುಪು ತಂದರು.

ಇಂದು ಹತ್ಯೆಯಾದ ಇಲಿಯಾಸ್ ಉಳ್ಳಾಲ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆಯಲ್ಲೇ ಸಚಿವರ ಜೊತೆ ಕಾಣಿಸಿಕೊಂಡಿದ್ದನು. ಯುವಕಾಂಗ್ರೆಸ್ ನ ಅಧ್ಯಕ್ಷ ಮಿಥುನ್ ರೈ ಜೊತೆಗೂ ತೆಗೆಸಿಕೊಂಡಿದ್ದ ಫೋಟೋಗಳು ಕರಾವಳಿಯಾದ್ಯಂತ ವೈರಲ್ ಆಗಿದೆ. ಈ ರೀತಿಯಲ್ಲಿ ಕ್ರಿಮಿನಲ್ ಗಳ ಜೊತೆ ನೇರವಾಗಿ ನಂಟು ಹೊಂದಿರುವ ಕಾಂಗ್ರೆಸ್ ಕರಾವಳಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕೊಲೆಗಳಲ್ಲೂ ಶಾಮೀಲಾಗಿರುವುದು ಸಾಬೀತಾಗುತ್ತಿದೆ…?

ಕಾಟಿಪಳ್ಳದ ದೀಪಕ್ ರಾವ್ ಕೊಲೆ ನಡೆದಾಗ ‘ಟಾರ್ಗೆಟ್ ಗ್ರೂಪ್’ ಗೂ ಕೊಲೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ಸಚಿವ ಯು ಟಿ ಖಾದರ್ ಇದೀಗ ಮಂಗಳೂರಿನ ಜಪ್ಪಿನ ಮೊಗರುವಿನಲ್ಲಿ ನಡೆದ ಟಾರ್ಗೆಟ್ ಗ್ರೂಪ್ ನ ಮುಖ್ಯಸ್ಥ ಇಲಿಯಾಸ್ ಕೊಲೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಟಾರ್ಗೆಟ್ ಗ್ರೂಪ್ ಯಾವುದು ಇದರ ಕೆಲಸವೇನು ಎಂಬೂದನ್ನು ಕೇಂದ್ರ ಸರಕಾರವೇ ತನಿಖೆ ನಡೆಸಲಿ.ಇಂತಹ ಸಂಘಟನೆಗಳು ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ, ಆದ್ದರಿಂದ ಇಂತಹ ಸಂಘಟನೆಗಳನ್ನು ಕೇಂದ್ರ ಸರಕಾರವೇ ಬ್ಯಾನ್ ಮಾಡಲಿ” ಎನ್ನುವ ಮೂಲಕ ಕೈಯಲ್ಲಿ ಅಧಿಕಾರವಿದ್ದರೂ ರಾಜ್ಯದಲ್ಲಿ ಶಾಂತಿ ಕಾಪಾಡಲು ತಮ್ಮಿಂದ ಸಾಧ್ಯವಿಲ್ಲ ಎಂಬೂದನ್ನು ಒಪ್ಪಿಕೊಂಡಿದ್ದಾರೆ…?

ರಾಜ್ಯದಲ್ಲಿ ಏನೇ ಅಹಿತಕರ ಘಟನೆಗಳು ನಡೆದರು ಕೇಂದ್ರ ಸರಕಾರದತ್ತ ಬೊಟ್ಟು ಮಾಡುವ ರಾಜ್ಯ ಕಾಂಗ್ರೆಸ್ ಸರಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿದೇ ಎಂಬೂದೇ ರಾಜ್ಯದ ಜನರ ಪ್ರಶ್ನೆ…ಹಾಡುಹಗಲೇ ಮನೆಗೆ ನುಗ್ಗಿ ಹತ್ಯೆಗೈದ ಒಂದೇ ಕೋಮಿನ ಇನ್ನೊಂದು ತಂಡ ಮತ್ತೆ ಕರಾವಳಿಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ದೀಪಕ್ ರಾವ್ ಕೊಲೆಯಾಗಿ ಹತ್ತು ದಿನಗಳು ಕಳೆಯುತ್ತಿದ್ದಂತೆ ಇದೀಗ ಮತ್ತೊಂದು ಹತ್ಯೆ ನಡೆದಿರುವುದು ಕಾಂಗ್ರೆಸ್ ಸರಕಾರದ ಆಡಳಿತ ವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಎಂಬೂದಕ್ಕೆ ಕನ್ನಡಿ ಹಿಡಿದಂತಾಗಿದೆ…!

ಇಲಿಯಾಸ್ ನ‌ ಹಿನ್ನೆಲೆ ನೋಡಿ ಅವನನ್ನು ಪಕ್ಷಕ್ಕೆ ಸೇರಿಸಲಿಲ್ಲ ಎಂದು ಹೇಳುತ್ತಿರುವ ಸಚಿವ ಯು ಟಿ ಖಾದರ್ ಯಾವ ರೀತಿಯಲ್ಲಿ ಸತ್ಯ ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂದರೆ ಸ್ವತಃ ಇಲಿಯಾಸ್ ಉಳ್ಳಾಲದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆಯಲ್ಲೇ ಕಾಣಿಸಿದ್ದು ಕಾಂಗ್ರೆಸ್ ನ‌ ಜೊತೆ ನೇರವಾದ ಸಂಪರ್ಕ ಹೊಂದಿದ್ದವನು ಎಂದು ಬೆಳಕಿಗೆ ಬಂದಿದೆ.

ಹತ್ಯೆಯಾದ ಇಲಿಯಾಸ್ ಮತ್ತು ಆತನ ಟಾರ್ಗೆಟ್ ಟೀಮ್ ಕದ್ದ ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ ಅದನ್ನು ಮಾರುತ್ತಿದ್ದ. ಮಂಗಳೂರಿನಲ್ಲಿ ಮೆಡಿಕಲ್ ಕಲಿಯುತ್ತಿದ್ದ ದೆಹಲಿ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಕಿಡ್ನಾಪ್ ಮಾಡಿ ಹನಿಟ್ರಾಪ್ ಮಾಡಿ ಸಿಕ್ಕಿಬಿದ್ದಿದ್ದ ಇದೇ ಇಲಿಯಾಸ್. ಮಂಗಳೂರಿನಲ್ಲಿ ಗಾಂಜಾ ಗ್ರೂಪ್ ತಡೆಯಲು ಹೋಗಿದ್ದ ಜುಬೇರ್ ನ ಮೇಲೆ ಕೊಲೆ ಪ್ರಯತ್ನವನ್ನು ಇಲಿಯಾಸ್ ನೇತ್ರತ್ವದ ‘ಟಾರ್ಗೆಟ್ ಗ್ರೂಪ್’ ನಡೆಸಿತ್ತು.

ಇಲಿಯಾಸ್ ನಟೋರಿಯಸ್ ರೌಡಿಯಾಗಿದ್ದು ಈತನಿಗೂ ಕಾಂಗ್ರೆಸ್ ಗೂ ನೇರವಾದ ಸಂಬಂಧ ಇದ್ದಿದ್ದರಿಂದ ಕರಾವಳಿಯಲ್ಲಿ ನಡೆಯುತ್ತಿದ್ದ ಎಲ್ಲಾ ಅಹಿತಕರ ಘಟನೆಗಳ ಹಿಂದೆ ಕಾಂಗ್ರೆಸ್ ನ ಕೈವಾಡವಿರುವುದು ಬಹಿರಂಗಗೊಂಡಿದೆ…!!!??? ಇದೀಗ ಇಲಿಯಾಸ್ ಹತ್ಯೆ ಕರಾವಳಿಯಲ್ಲಿ ಮತ್ತೆ ನೆತ್ತರಿಳಿಸಿದೆ.

  • ಅರ್ಜುನ್
Editor Postcard Kannada:
Related Post