X

ಭಾರತದ ಪ್ರಧಾನಿ ಈಗ ಜಗತ್ ನಾಯಕ! ಅಮೇರಿಕಾ, ರಶ್ಯಾ, ಚೀನಾದ ಅಧ್ಯಕ್ಷರು ಮತ್ತು ಪೋಪ್ ಫ್ರಾನ್ಸಿಸ್ ರನ್ನು ಸೋಲಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಈಗ ಜಗತ್ತಿನ ಹಾಟ್ ಫೇವರಿಟ್ ನಾಯಕನಾಗಿ ಮಿಂಚಿದ್ದಾರೆ! +8 ನೆಟ್ ಸ್ಕೋರ್ ಇದ್ದಂತಹ ಬೇರೆ ರಾಷ್ಟ್ರದ ನಾಯಕರನ್ನು ಹಿಂದಿಕ್ಕಿರುವ ಪ್ರಧಾನಿ ಮೋದಿ ಈಗ ಜಗತ‌್ತಿನ ನಂ.1 ನಾಯಕನಾಗುವ ಕಡೆಗೆ ದಾಪುಗಾಲಿಡುತ್ತಿದ್ದಾರೆ! Gallup International Association (GIA) ಮತ್ತು International Collaborative ಸಮೀಕ್ಷೆಯೊಂದು ಭಾರತದ ಪ್ರಧಾನಿ ಮತ್ತು ರಶ್ಯಾದ ಪ್ರಧಾನಿಯ ಬಗ್ಗೆ ಜನರಲ್ಲಿ ಬಹಳ ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿದೆ ಎಂದು ತಿಳಿಸಿದೆ!

ಸಮೀಕ್ಷೆಯೊಂದು ಪ್ರಧಾನಿ ಮೋದಿಗೆ ಮೂರನೇ ಸ್ಥಾನ ನೀಡಿದ್ದರೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ಸ್ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ!
ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡಿದ್ದ ಅಮೇರಿಕಾದ ಪ್ರಸ್ತುತ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮೇಲೆ ಜನ ಅಷ್ಟೇನೂ ಒಳ್ಳೆಯ ಭಾವನೆ ಹೊಂದಿಲ್ಲವಾದರೆ, ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಇದೇ ಸಮೀಕ್ಷೆಯಲ್ಲಿ ನಂ.1 ಸ್ಥಾನವನ್ನು ಗಿಟ್ಟಿಸಿದ್ದರು!

ಈ ವರದಿ ಅಕ್ಟೋಬರ್ – ಡಿಸೆಂಬರ್ 2017ರಲ್ಲಿ ನಡೆಸಿದ ಸಮೀಕ್ಷೆಯಾಧಾರದ ಮೇಲೆ ಶ್ರೇಯಾಂಕಗಳನ್ನು ಕೊಟ್ಟಿದೆ! 55 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆ ಇದಾಗಿದೆ!

ಭಾರತಕ್ಕೆ ನಿಜಕ್ಕೂ ಇದು ಹೆಮ್ಮೆಯ ವಿಷಯ! ಇಷ್ಟು ವರ್ಷಗಳ ಕಾಲವೂ ಭಾರತವೆಂದರೆ ಹಾವಾಡಿಗರ ದೇಶವೆನ್ನುತ್ತಿದ್ದ ಜಗತ್ತು, ಇವತ್ತು ಮತ್ತದೇ ಹಾವಾಡಿಗರ ದೇಶದ ಕಡೆಗೆ ಮುಖ ಮಾಡಿದೆ! ಮತ್ತದೇ ‘ವಿಶ್ವಗುರು ಭಾರತ’ ವಾಗಲಿರುವ ದೇಶದ ಪ್ರಧಾನಿಯ ಬಗ್ಗೆ ಮೆಚ್ಚುಗೆ ತೋರುತ್ತಲಿದೆಯೆಂದರೆ ?! ಕಾರಣ ಮತ್ತದೇ ಪರಿಶ್ರಮ! ಪ್ರಾಮಾಣಿಕತೆ! ಸಿದ್ಧಾಂತ! ಮತ್ತದೇ ಮೋದಿ! ದಂತಕಥೆಯಾಗಲು ಹೊರಟಿರುವ ಭಾರತದ ಇತಿಹಾಸ ಹೆಮ್ಮೆಯಿಂದ ಅಚ್ಚೊತ್ತುವಂತಹ ಪ್ರಧಾನಿ ಮೋದಿ!

ಮೋದಿ ಸಮೀಕ್ಷೆಯ ಮೂರನೇ ಸ್ಥಾನಕ್ಕೆ ಏರಿದ್ದರೆ, ರಶ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ +3 ನೆಟ್ ಸ್ಕೋರ್ ಮೂಲಕ 6 ನೇ ಸ್ಥಾನಕ್ಕೆ ಏರಿದ್ದಾರೆ! ಕಳೆದ 2015 ರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ 15 ನೇ ಸ್ಥಾನದಲ್ಲಿದ್ದರು! ಸ್ವತಃ GIA ‘ ಇಷ್ಟು ವರ್ಷಗಳಲಿ ಭಾರತದ ಪ್ರಧಾನಿ ಟಾಪ್ 5 ಒಳಗೆ ಬಂದಿರುವುದು ‘ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೇ, ‘ನಂ 1 ಸ್ಥಾನ ಗಿಟ್ಟಿಸಲು ಬಹಳ ದೂರವಿಲ್ಲ’ ಎಂದೂ ಅಭಿಪ್ರಾಯಪಟ್ಟಿದೆ!

ಮೋದಿಗೆ ಹೊರದೇಶದಲ್ಲಿಯೂ ಅಭಿಮಾನಿಗಳಿದ್ದಾರೆ ಎಂದು ಕೇಳಿದ‌್ದೇವಷ್ಟೇ! ಆದರೆ, ವಿಯೆಟ್ನಾಮ್, ಫಿಜಿ, ಅಫ್ಘಾನಿಸ್ಥಾನ್ ದೇಶಗಳು ಮೋದಿಯ ಕಟ್ಟರ್ ಅಭಿಮಾನಿಗಳೆಂದು ವರದಿಯಲ್ಲಿ ತಿಳಿದು ಬಂದಿದೆ!

ಭಾರತೀಯರ ಹಾಟ್ ಫೇವರಿಟ್ ಯಾರು ಗೊತ್ತಾ?!

ಅಚ್ಚರಿಯ ವಿಷಯವೇನೆಂದರೆ, ಭಾರತದಿಂದ ಅತಿ ಹೆಚ್ವು ಮತ ಹೋಗಿರುವುದು ಡೊನಾಲ್ಡ್ ಟ್ರಂಪ್ ಗೆ! ಅಮೇರಿಕಾದ ಅಧ್ಯಕ್ಷ ‘ಮೋದಿ’ ಎಂದಿದ್ದಕ್ಕೆ ಮತಗಳು ಬಿತ್ತೋ, ಅಥವಾ, ಇನ್ನೇನೋ ! ಒಟ್ಟಾರೆಯಾಗಿ, ಭಾರತದಿಂದ ಟ್ರಂಪ್ ಗೆ ಮತಗಳು ಜಾಸ್ತಿ ಹೋಗಿವೆ!

ಎರಡನೆಯ ಸ್ಥಾನವನ್ನು ಭಾರತೀಯರು ರಶ್ಯನ್ ಅಧ್ಯಕ್ಷರಾದ ಪುಟಿನ್ ಗೆ ನೀಡಿದ್ದರೆ, ಭಾರತದ ಪ್ರಧಾನಿ ಮೋದಿಗೆ ಭಾರತೀಯರು 10 ನೇ ಸ್ಥಾನಕ್ಕೆ ನಿಲ್ಲಿಸಿದ್ದಾರೆ!

ಭಾರತೀಯರು ಟ್ವಿಟ್ಟರ್ ಗಳಲ್ಲಿ, ಫೇಸ್ ಬುಕ್ ಗಳಲ್ಲಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದು, ಹಬ್ಬದಂತೆ ಆಚರಿಸಿದ್ದಾರೆ! ಬಿಡಿ! ಮೋದಿ ವಿರೋಧಿಗಳು , ಸಿಕ್ಯುಲರ್ ಗಳು ಇದು ಮುಂಬರುವ ಚುನಾವಣೆಗೆ ಸ್ಟಂಟ್ ಎನ್ನಬಹುದೇನೋ! ಆದರೂ, ಮೋದಿ ಮೋದಿಯೇ!

ಇಷ್ಟಲ್ಲದೇ, ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ‘Noted’ ಆಗಿರುವುರಲ್ಲಿ ಮೋದಿಗೆ ಎರಡನೇ ಸ್ಥಾನ! ಸತತವಾಗಿ ಪ್ರಧಾನಿ ಮೋದಿಯನ್ನು ಹಿಂಬಾಲಿಸುವವರು
ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದ್ದಾರೆಂದು ಸಮೀಕ್ಷೆ ವರದಿ ನೀಡಿದೆ! ಈ ಗೆಲುವಿನಲ್ಲಿ ಕ ಅತಿರೇಕವೆನ್ನುವಷ್ಟು ಮೋದಿಯ ಟ್ವಿಟ್ಟರ್ ಖಾತೆ ಜಾಲಾಡುವ ಮೋದಿ ವಿರೋಧಿಗಳಿಗೆ ಈ ಗೆಲುವು ಸಲ್ಲಬೇಕಷ್ಟೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post