X

“ಎಂದಿಗಾದರೂ ಬಿಜೆಪಿ ತನ್ನ ನೋಟು ರದ್ದತಿ ಮತ್ತು ಜಿಎಸ್ಟಿ ಎಂಬ ಎರಡು ಐತಿಹಾಸಿಕ ದುರಂತದಿಂದ ಹೊರಬರಲು ಸಾಧ್ಯವಿದೆಯೇ?!” ಎಂದು ಕೇಳಿದವನಿಗೆ ಮೈ ಚಳಿ ಬಿಡಿಸಿತ್ತು ಇವರ ಉತ್ತರ!

ಮೋದಿ ವಿರೋಧಿಗಳೇ ಕೇಳಿ!

ನೋಟು ನಿಷೇಧವಾಗಿ ವರ್ಷ ಕಳೆದು ಹೋಗಿದೆ! ಆದರೂ, ಇನ್ನೂ ನೋಟಿ ನಿಷೇಧದ ಪ್ರಕ್ರಿಯೆ ಬಗ್ಗೆ ನೂರಾರು ಚರ್ಚೆಗಳು ನಡೆಯುತ್ತಲೇ ಇದೆ! ನೋಟು ನಿಷೇಧವಾದ ಸ್ವಲ್ಪದಿನದರಲ್ಲಿಯೇ ಪರಿಚಯಿಸಿದ ಜಿಎಸ್ ಟಿ ತೆರಿಗೆ ಯಿಂದ ಮಾಧ್ಯಮಗಳ ಟಿ ಆರ್ ಪಿ ಯೂ ಹೆಚ್ಚಿತ್ತೆನ್ನುವುದು ನಿಜವಾದರೂ ಕೂಡ, ಭಾರತದ ಇತಿಹಾಸದಲ್ಲಿಯೇ ನೋಟು ನಿಷೇಧ ಹಾಗೂ ಜಿಎಸ್ ಟಿ ತೆರಿಗೆ ಅತಿದೊಡ್ಡ ದುರಂತ’ ಎಂಬುದಾಗಿ ಬಿಂಬಿಸತೊಡಗಿದವು!

ಅದೆಷ್ಟೋ ಆರ್ಥಿಕ ತಜ್ಞರು ಸಮೀಕ್ಷೆಗಿಳಿದು, ಇವೆರಡೂ ನಿರ್ಧಾರಗಳು ದೇಶವನ್ನು ಹತ್ತು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲಿದೆ ಎಂದರೂ, ಯಾವ ಸರಕಾರವೂ ಸಹ ಇಂತಹ ಕೆ‌ಚ್ಚೆದೆಯ ನಿರ್ಧಾರವನ್ನು ತೆಗೆದುಕೊಂಡು ಆಡಳಿತ ನಡೆಸಲು ಧೈರ್ಯ ತೋರದಿದ್ದರೂ ಕೂಡ, ಮೋದಿ ಸರಕಾರ ದೇಶದ ಹಿತಾಸಕ್ತಿಗೆ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಹೊತ್ತ ಗಳಿಗೆಗೆ ಬೆಲೆ ಕೊಡದೇ ಒಂದಷ್ಟು ಸೋ ಕಾಲ್ಡ್ ದೇಶ ಪ್ರಿಯರು ಇನ್ನೂ ಅದೇ ‘ಭಾರತದ ಎರಡು ದೊಡ್ಡ ದುರಂತ’ ಎಂಬುವ ಶೀರ್ಷಿಕೆಗೇ ಅಂಟಿಕೊಂಡು ಕೂತಿರುವುದು ವಿಪರ್ಯಾಸ!

ಸತ್ಯ! ಈ ಎರಡು ನಿರ್ಧಾರಗಳು ಅದೆಷ್ಟೋ ಆರ್ಥಿಕ ತಜ್ಞರನ್ನು ರಾತ್ರಿ ಬೆಳಗಾಗುವುದರೊಳಗೆ ಹುಟ್ಟು ಹಾಕಿತು! ಆದರೂ, ಕೆಲ ಆರ್ಥಿಕ ತಜ್ಞರ ಸಮೀಕ್ಷೆಗಳು ಭಾರತೀಯರಿಗೆ ಬಿಟ್ಟಿ ಮಜಾ ನೀಡಿದ್ದೂ ಸುಳ್ಳಲ್ಲ ಬಿಡಿ! ಮೂರ್ಖತನದ ಪರಮಾವಧಿ ಎನ್ನಿಸುವ ಒಂದಷ್ಟು ತಜ್ಞರ ಪ್ರಶ್ನೆಗೆ ದೇಶಭಕ್ತರು ಸರಿಯಾಗಿ ತಿರುಗೇಟು ನೀಡಿದ್ದರೂ.. ಈ ಪ್ರಶ್ನೆಗೆ ಒಬ್ಬ ವ್ಯಕ್ತಿ ನೀಡಿದ ಉತ್ತರ ಮಾತ್ರ ಜಸ್ಟ್ ಹಿಲರಿಯಸ್!!!

“ಎಂದಿಗಾದರೂ ಬಿಜೆಪಿ ತನ್ನ ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ತೆರಿಗೆ ಯೆಂಬ ಐತಿಹಾಸಿಕ ದುರಂತದಿಂದ ಹೊರಬರಲಿಕ್ಕಾಗುವುದೇ?!”

ಪ್ರಸಿದ್ಧ ಲೇಖಕರಾದ ಅವದೇಶ್ ಸಿಂಗ್ ಉತ್ತರಿಸಿದ್ದು ಹೀಗೆ!

“ಮೂಡಿ ಇನ್ವೆಸ್ಟರ್ಸ್ ಸರ್ವೀಸ್ ಎಂಬ ಅಂತರಾಷ್ಟ್ರೀಯ ಕ್ರೆಡಿಟ್ ಕಂಪೆನಿ 18th ನವೆಂಬರ್ ನಂದು ದೇಶಗಳ ಶ್ರೇಯಾಂಕವನ್ನು ನವೀಕರಿಸಿತು! ಅದರಲ್ಲಿ, ಸಥ ಹದಿನಾಲ್ಕು ವರ್ಷಗಳ ನಂತರ, ಮೋದಿಯ ಆರ್ಥಿಕ ನೀತಿಯಿಂದಾಗಿ, ಭಾರತ Baa3 ಇಂದ Baa2ಗೆ ಶ್ರೇಯಾಂಕವನ್ನು ಪಡೆದುಕೊಂಡಿತು! ಅಂದರೆ, ಭಾರತದ ಅವ್ಯವಸ್ಥೆಯಾದ ಆರ್ಥಿಕ ನೀತಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ‘ಧನಾತ್ಮಕವಾಗಿ ಭದ್ರಗೊಂಡಿತ್ತು!”

ಭಾರತಕ್ಕೆ ಯಾಕೆ ಶ್ರೇಯಾಂಕವನ್ನು ನೀಡಲಾಯಿತು ಎಂಬುದನ್ನು ಸ್ವತಃ ಮೂಡಿಯೇ ಪ್ರಕಟ ಪಡಿಸಿತು!

ಸರಕಾರದಿಂದ ಜಾರಿಗೊಳಿಸಲ್ಪಟ್ಟ ಸುಧಾರಣೆಗಳು, ಸಾಲವನ್ನು ಸ್ಥಿರವಾಗಿಸುವಲ್ಲಿ ಹಾಗೂ ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದು Moody’S ಅಭಿಪ್ರಾಯಪಟ್ಟಿದೆ!

The decision to upgrade the ratings is underpinned by Moody’s expectation that continued progress on economic and institutional reforms will, over time, enhance India’s high growth potential and its large and stable financing base for government debt, and will likely contribute to a gradual decline in the general government debt burden over the medium term. In the meantime, while India’s high debt burden remains a constraint on the country’s credit profile, Moody’s believes that the reforms put in place have reduced the risk of a sharp increase in debt, even in potential downside scenarios.

ಪ್ರಧಾನಿ ಮೋದಿ ಸರಕಾರದ, ಸರಕು ಮತ್ತು ಸೇವೆಗಳ ತೆರಿಗೆ, ಹೊಸ ಹಣಕಾಸು ನೀತಿ, ಬ್ಯಾಂಕಿಂಗ್ ಕ್ಷೇತ್ರದ ಸಾಲದ ಅನುಪಾತಗಳ ನವೀಕರಣ, ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ, ನೇರ ಲಾಭದ ವರ್ಗಾವಣೆ ವ್ಯವಸ್ಥೆಗಳಂತಹ ಸುಧಾರಣೆಗಳು ದೇಶದ ಆರ್ಥಿಕತೆಯಲ್ಲಿರುವ ಅಡಚಣೆಗಳನ್ನು ನಿವಾರಿಸುತ್ತದೆ. ಇತ್ತೀಚೆಗೆ ಪರಿಚಯಿಸಲಾದ GST ತೆರಿಗೆ ಅಂತರ್ ರಾಜ್ಯ ವ್ಯಾಪಾರಗಳಿಗಿರುವ ತಡೆಗಳನ್ನು ನಿವಾರಿಸುವ ಮೂಲಕ ವ್ಯಾಪಾರ
ವಹಿವಾಟುಗಳನ್ನು ಉತ್ತೇಜಿಸುತ್ತದೆ!”

“ಸರಕಾರದ ಸುಧಾರಣೆಗಳೆಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗಲ್ಪಟ್ಟಿವೆ! ವಿಶೇಷವಾಗಿ ಜಿಎಸ್ಟಿ ತೆರಿಗೆ, ನೋಟು ನಿಷೇಧ ಹಾಗೂ ಆಧಾರ್ ಗಳಂತಹ ಸುಧಾರಣೆಗಳು ದೇಶದ ವ್ಯವಸ್ಥೆಯನ್ನು ಅದೆಷ್ಟೋ ಸುಧಾರಿಸಿದೆ. ಮೊದಲ ಮೂರು ವರ್ಷಗಳಲ್ಲಿ ಆರ್ಥಿಕತೆಗೆ ಸ್ವಲ್ಪ ಅಡೆತಡೆಗಳಾಗುವುದಾದರೂ ಸಹ, ತದನಂತರದಲ್ಲಿ ಬೆಳವಣಿಗೆಯಾಗುತ್ತದೆ. ಹೇಳಬೇಕೆಂದರೆ, ಮಾರ್ಚ್ 2018 ರ ಅಂತ್ಯದಲ್ಲಿ ಜಿಡಿಪಿಯ ಬೆಳವಣಿಗೆ ಶೇಕಡಾ 6.7% ರಷ್ಟಾಗಬಹುದು ಎಂಬುದನ್ನು ಅಂದಾಜಿಸಿದರೂ ಸಹ, ಭಾರತದ ಆರ್ಥಿಕತೆಯ ಅಭಿವೃದ್ಧಿ ಶೇಕಡಾ 7.5% ರಷ್ಟು ಖಂಡಿತವಾಗಿಯೂ ಏರಿಕೆಯಾಗುತ್ತದೆ.”

ಅವದೇಶ್ ಸಿಂಗ್ ಹೇಳಿದ್ದರು!

“ಈ ರೀತಿಯಾದ ಬೆಳವಣಿಗೆ ಭಾರತದಲ್ಲಿ ಆಗಿದ್ದು 14 ವರ್ಷಗಳ ನಂತರ! ಹಾಗೂ, ಅಂತರಾಷ್ಟ್ರೀಯ ಪ್ರಸಿದ್ದ ಸಂಸ್ಥೆ ಶ್ರೇಯಾಂಕವನ್ನು ನೀಡಿದ್ದು ಮೋದಿಯ ಆರ್ಥಿಕ ನೀತಿಗೆ ಹಿಡಿದ ಕನ್ನಡಿಯಲ್ಲದೇ ಮತ್ತೇನು?! ಭಾರತದ ಕೆಲವು ಜನರು ಭಾರತದ ಅಭಿವೃದ್ಧಿಯ ಬಗ್ಗೆ ಭರವಸೆ ಇಲ್ಲದೇ ಕುರುಡಾಗಿ ಸಮೀಕ್ಷಾ ವರದಿ ತೋರಿಸುತ್ತಿರಬಹುದಾದರೂ, ಅಂತರಾಷ್ಡ್ರೀಯ ಮಟ್ಟದ ಸಂಸ್ಥೆಗಳೇ ಭರವಸೆಯನ್ನಿಟ್ಟು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬುದಕ್ಕೆ ಮೂಡೀಸ್ ನ ನಡೆಯೇ ಸಾಕ್ಷಿ!”

ಅವದೇಶ್ ಸಿಂಗ್ ‘ಇನ್ನೂ ಉತ್ತಮವಾಗಿ ಈ ಎರಡು ನಿರ್ಧಾರಗಳನ್ನು ಅಳವಡಿಸಬಹುದಿತ್ತು’ ಎಂಬುವುದಕ್ಕೂ ಸಮ್ಮತಿಸಿದ್ದಾರೆ. ಆದರೆ., ಈ
ಎರಡು ನಿರ್ಧಾರಗಳಿಂದ ಇನ್ನೆರಡು ಮೂರು ವರ್ಷಗಳಲ್ಲಿ ಭಾರತಕ್ಕೆ ಉತ್ತಮವಾದ ಫಲಿತಾಂಶ ನೀಡಲಿದೆ ಎಂಬುದನ್ನೂ ಒಪ್ಪಿರುವ ಅವದೇಶ್ ‘ಸುಖಾಸುಮ್ಮನೆ ಮೋದಿಯೊಬ್ಬರೇ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ, ಕಾನೂನಿನಡಿಯಲ್ಲಿ, ತೆರಿಗೆ ಅಧಿಕಾರಿಗಳ ಜೊತೆ ಚರ್ಚಿಸಿ, ಆರ್ಥಿಕ ತಜ್ಞರ ಸಲಹೆಯ ಮೇರೆಗೆ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅದಲ್ಲದೇ, “ನೋಟು ನಿಷೇಧವೊಂದು ದುರಂತವೇ! ಯಾರಿಗೆ ಎಂದರೆ ದೇಶದ್ರೋಹಿಗಳಿಗೆ! ಯಾಕೆಂದರೆ, ನೋಟು ನಿಷೇಧ ಪ್ರಕ್ರಿಯೆಯ ನಂತರ ತೆರಿಗೆ ಕಟ್ಟದೇ ವಂಚಿಸುತ್ತಿದ್ದ ದೊಡ್ಡ ಕುಳಗಳಿಗೆಲ್ಲ ಸರಿಯಾಗಿಯೇ ಪೆಟ್ಟು ಬಿತ್ತು! ಅಕ್ರಮವಾಗಿ ಕೂಡಿಟ್ಟ ಹಣ ಕಸದ ಬುಟ್ಟಿ ಸೇರಿತು. ಕಳ್ಳ ನೋಟುಗಳೆಲ್ಲ ಮೂಲೆ ಸೇರಿದವು! ಕಾಶ್ಮೀರದಲ್ಲಿ ಇದ್ದಕ್ಕಿದ್ದ ಹಾಗೆ ಕಲ್ಲು ತೂರಾಟ ನಿಂತಿತು! ಚುನಾವಣೆಯ ಪ್ರಚಾರಕ್ಕಾಗಿ, ಅಧಿಕಾರಕ್ಕಾಗಿ ಆಮಿಷ ತೋರಲು ಇಟ್ಟಿದ್ದ ಹಣವೂ ಇಲ್ಲದಾಯ್ತು, ಭಯೋತ್ಪಾದಕರಿಗೂ ಕೈ ಕಟ್ಟಿತು, ಅದೆಷ್ಟೋ ಅಕ್ರಮ ಎನ್ ಜಿ ಓ ಗಳು ಬಾಗಿಲು ಮುಚ್ಚಿದವು!”

“ಆದ್ದರಿಂದ, ಬಿಜೆಪಿಯ ಈ ತೀರಾ ಚಾಣಾಕ್ಷವಾದ ನಡೆಯೆಂಬುದು ಎಲ್ಲಿಯವರೆಗೆ ಒಬ್ಬ ಭಾರತೀಯನಿಗೆ ತನ್ನದೇಶದ ಅಭಿವೃದ್ಧಿಯ ಬಗ್ಗೆ ಭರವಸೆ ಇರುತ್ತದೋ, ಅಲ್ಲಿಯವರೆಗೆ ಇವೆರಡೂ ಸಹ ಐತಿಹಾಸಿಕ ದುರಂತಗಳೆನಿಸುವುದಿಲ್ಲ.”

ಇದು.. ಅವದೇಶ್ ಎಂಬುವವರು ಕೊಟ್ಟ ಉತ್ತರ! ಸತ್ಯವೇ ತಾನೆ?! ಭರವಸೆ, ಶ್ರಮ, ರಾಷ್ಟ್ರಭಕ್ತಿ! ಇವು ಮೂರೂ ಇವತ್ತಿನ ಭಾರತಕ್ಕಿರುವ ಅವಶ್ಯಕತೆ!

– ಅಜೇಯ ಶರ್ಮಾ

Editor Postcard Kannada:
Related Post