X

ಕರ್ನಾಟಕದ ಈ ಸಂಸದನನ್ನು ಪ್ರಧಾನಿ ಮೋದಿ ಬಾಯ್ತುಂಬ ಹೊಗಳಿದ್ದು ಯಾಕೆ ಗೊತ್ತಾ..? ಆ ಸಂಸದ ಥಾಂಕ್ಯೂ ಮೋದೀಜಿ ಅಂದಿದ್ಯಾಕೆ?!

ಪ್ರಧಾನಿ ನರೇಂದ್ರ ಮೋದಿ. ವಿಭಿನ್ನ ಚಟುವಟಿಕೆಗಳಿಂದಲೇ ಹೆಸರುವಾಸಿಯಾಗಿರುವ ಓರ್ವ ಕ್ರಿಯಾಶೀಲ ವ್ಯಕ್ತಿ. ಇವರ ವ್ಯಕ್ತಿತ್ವವೇ ಡಿಫರೆಂಟ್. ಮೋದಿ ಉಡುವ ಉಡುಗೆ ಸಹಿತ ಅವರ ಹಾವಾ ಭಾವ, ಜೀವನ ಶೈಲಿ, ಮಾತನಾಡುವ ರೀತಿ, ಅವರ ಕಾರ್ಯಕ್ರಮಗಳು, ಸಮಯ ಪ್ರಜ್ನೆ, ಶಿಸ್ತು, ವಿದೇಶಿ ನೀತಿ ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಮೊಟ್ಟ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾಗಿ, ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುವಾಗ, ಸಂಸತ್ತಿನ ಪ್ರವೇಶದ ಮೆಟ್ಟಿಲಿಗೆ ಅಡ್ಡ ಬಿದ್ದು, ಕೈಮುಗಿದು ಪ್ರವೇಶ ಮಾಡಿದಂತಹ ಅತ್ಯಂತ ಅಪರೂಪದ ವ್ಯಕ್ತಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ.

ನಂತರ ನಡೆದದ್ದೇ ಇತಿಹಾಸ. ಜಗತ್ತಿನಲ್ಲೇ ಧೈತ್ಯ ದೇಶವಾದ ಭಾರತವನ್ನು ಸಮರ್ಥವಾಗಿ ಆಳಿದ ಮೋದಿ, ಕಳೆಗುಂದಿದ್ದ ಭಾರತವನ್ನು, ಮತ್ತೆ ಜಗತ್ತು ಎಂಬ ಪರ್ವತದ ತುತ್ತ ತುದಿಯಲ್ಲಿ ಕೊಂಡು ಹೋಗಿ ನಿಲ್ಲಿಸಿದ್ದರು. ವೀಸಾ ನೀಡೋದಿಲ್ಲ ಎಂದಿದ್ದ ಅಮೇರಿಕಾ ಕೂಡಾ ಮೋದಿ ಮೋಡಿಗೆ ತಲೆ ಬಾಗಿ “ವೀಸಾ ಮಾತ್ರವಲ್ಲ ತನ್ನ ದೇಶವೇ ನಿಮಗಾಗಿ ತುದಿಗಾಲಲ್ಲಿ ನಿಂತಿದೆ, ನಮ್ಮ ದೇಶಕ್ಕೆ ಬನ್ನಿ” ಎಂದು ಪ್ರೀತಿಯ ಆಹ್ವಾನ ನೀಡಿತ್ತು. ಮಾತ್ರವಲ್ಲದೆ ಆ ದೇಶ ಮೋದಿಗೆ ನೀಡಿದ್ದ ಆ ಗೌರವವನ್ನು ಯಾರೂ ಎಂದೂ ಮರೆಯುವಂತಿಲ್ಲ. ಮೋದಿಗಾಗಿ ಸಾವಿರಾರು ಮೋದಿ ಅಭಿಮಾನಿಗಳನ್ನು ಒಟ್ಟು ಸೇರಿಸಿ ಬೃಹತ್ ಸಮಾವೇಶವನ್ನೇ ಮಾಡಿತ್ತು. ಇದನ್ನು ಆಸ್ಟ್ರೇಲಿಯಾ ಕೂಡಾ ನಕಲಿ ಮಾಡಿ ನಾವೂ ಅಮೇರಿಕಾಕ್ಕಿಂತ ಏನೂ ಕಡಿಮೆಯಲ್ಲಿಲ್ಲ ಎಂದು ಸಾಭೀತುಪಡಿಸಿತ್ತು. ಮೋದಿಗಾಗಿ ವಿಶ್ವದ ವಿವಿಧ ರಾಷ್ಟ್ರಗಳು ಪೈಪೋಟಿಗೆ ಇಳಿದಿತ್ತು. ಮೋದಿ ವಿಶ್ವನಾಯಕರಾದರು.

ಜನತೆಯನ್ನು ಗುರುತಿಸುವ ಮೋದಿ…

ಮೋದಿಯ ವಿಭಿನ್ನ ಶೈಲಿಯಲ್ಲಿ ಇದೂ ಒಂದು. ಮೋದಿಗೆ ಯಾರಾದರೂ ಒಂದು ಪತ್ರ ಬರೆದರೆ, ಆ ಪತ್ರ ಮೋದಿಗೆ ಇಷ್ಟವಾದರೆ ಅದನ್ನು ಸಾರ್ವಜನಿಕ ಭಾಷಣದಲ್ಲಿ ಅವರ ಹೆಸರೆತ್ತಿ ಕರೆದು ಅವರನ್ನು ಪ್ರೋತ್ಸಾಹಿಸುತ್ತಾರೆ. ಮೋದಿ ಹೆಸರೆತ್ತಿದರೆಂದರೆ ಬಿಡಿ, ಅಷ್ಟು ಸಾಕು ಅಲ್ವೇ. ಸಂತೋಷ ನೂರ್ಮಡಿಯಾಗುತ್ತೆ. ಓರ್ವ ದೇಶದ ಪ್ರಧಾನಿಯ ಬಾಯಲ್ಲಿ ನಮ್ಮ ಹೆಸರು ಬರುವುದೆಂದರೆ ಸುಮ್ನೇನಾ… ಅದೂ ಮೋದಿ ಬಾಯಲ್ಲಿ. ಇತ್ತೀಚೆಗೆ ಕರ್ನಾಟಕದ ರಾಜ್ಯ ಕಾರ್ಯದರ್ಶಿಯಾದ ರತ್ನ ಪ್ರಭಾ ಎಂಬವರನ್ನು ಮೋದಿ ಕಾರ್ಯಕ್ರಮವೊಂದರಲ್ಲಿ ಹಾಡಿ ಹೊಗಳಿದ್ದರು. ಆವರೆಗೂ ರತ್ನ ಪ್ರಭಾ ಯಾರು ಅಂತಾನೇ ಗೊತ್ತಿಲ್ಲದ ಜನರಿಗೆ ಅಂದು ದೇಶದಲ್ಲೇ ಸುದ್ಧಿಯಾದರು. ಮೋದಿಯ ವಿಭಿನ್ನ ಶೈಲಿಯ ನೀತಿಗಳಲ್ಲಿ ಇದೂ ಒಂದು. ಇಂತಹ ಮಾತುಗಳಿಂದ ಅವರ ಕೆಲಸಗಳನ್ನು ಮತ್ತಷ್ಟು ಉತ್ತೇಜನ ಸಿಗುವುದೂ ಅಷ್ಟೇ ಸತ್ಯ.

ಬೀದರ್ ಸಂಸದನನ್ನು ಹಾಡಿ ಹೊಗಳಿದ ಮೋದಿ…

ಬಿಡಿ. ತನ್ನದೇ ಪಕ್ಷದ ಸಂಸದನನ್ನು ಹೊಗಳಿದ್ದಾರೆ, ಅದ್ರಲ್ಲೇನು ವಿಶೇಷ ಅಂತೀರಾ. ಮೊದಲೇ ಹೇಳಿದ ಹಾಗೆ ಮೋದಿ ತುಂಬಾನೆ ಡಿಫರೆಂಟ್. ಎಲ್ಲರನ್ನೂ ಹಾಗೆಲ್ಲ ಹೊಗಳೋ ಬುದ್ಧಿ ಮೋದೀಜಿಗಿಲ್ಲ. ಆ ಕಾರಣಕ್ಕಾಗಿಯೇ ಮೋದಿಯ ಬಾಯಿಂದ ಹೆಸರು ಬಂದರೆ ಸಾಕು ಅವರು ಬೀಗತೊಡಗಿಕೊಳ್ಳುವುದು.

ಈಗ ಮೋದಿ ಎತ್ತಿದ ಹೆಸರು ಕರ್ನಾಟಕದ ಬೀದರ್ ಜಿಲ್ಲೆಯ ಸಂಸದರದ್ದು. ರಾಷ್ಟ್ರೀಯ ಸುದ್ಧಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಬೀದರ್ ಕ್ಷೇತ್ರದ ಸಂಸದ ಭಗವಂತ್ ಖೂಬಾರವರನ್ನು ಹಾಡಿ ಹೊಗಳಿದ್ದಾರೆ. ಸಂಸದರು ಮಾಡಿದ ಸಾಧನೆಯನ್ನು ಮೋದಿ ರಾಷ್ಟ್ರೀಯ ಸುದ್ಧಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಬೀದರ್‍ನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸುರಿದ ಅಕಾಲಿಕ ಭಾರೀ ಮಳೆಗೆ ರೈತರು ಬೆಳೆದಿದ್ದ ಬೆಲೆಗಳು ಹಾನಿಗೀಡಾಗಿತ್ತು. ಆಗ ಧಿಕ್ಕು ತೋಚದಂತಾಗಿದ್ದ ರೈತರ ನೆರವಿಗೆ ಬಂದಿದ್ದು ಸಂಸದ ಭಗವಂತ್ ಖೂಬಾ. ಈ ಬಗ್ಗೆ ರಾಷ್ಟ್ರೀಯ ಸುದ್ಧಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸದ ಭಗವಂತ ಖೂಬಾರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಮೋದಿ ಈ ಸಂಸದರನ್ನು ಹಾಡಿ ಹೊಗಳಿದ್ದು ಇದೇ ಕಾರಣಕ್ಕಾಗಿ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕವಾಗಿ ಜಾರಿಗೊಳಿಸುವುದರಲ್ಲಿ ಬೀದರ್ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. ರೈತರು ತಾವು ಬೆಳೆದಿರುವ ಬೆಳೆಗಳು ಪ್ರಕೃತಿ ವಿಕೋಪ ಸಂಭವಿಸಿ ನಾಶವಾದರೆ ಈ ಯೋಜನೆಯ ಮೂಲಕ ಅದರ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯನ್ನು ಬೀದರ್ ಜಿಲ್ಲೆಯ ಜನತೆ ಸಮರ್ಪಕವಾಗಿ ಜಾರಿಗೊಳಿಸಿದ್ದು ದೇಶದಲ್ಲೇ ನಂಬರ್ ವನ್ ಸ್ಥಾನಕ್ಕೇರಿದೆ. ಈ ಸಾಧನೆಗೆ ಅಲ್ಲಿನ ಸಂಸದ ಭಗವಂತ್ ಖೂಬಾ ಪ್ರಮುಖ ಕಾರಣವಾಗಿದ್ದಾರೆ.

ಮೋದಿ ಹೇಳಿದ್ದಿಷ್ಟು..,

” ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ. ಕೆಲ ತಿಂಗಳ ಹಿಂದೆ ನಾನು ಕರ್ನಾಟಕಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ಒಬ್ಬ ಸಂಸದ ಈ ಯೋಜನೆಯ ವಿಚಾರವಾಗಿ ಬಹಳ ಸಕ್ರಿಯರಾಗಿದ್ದಾರೆ. ಅಲ್ಲಿ ಈ ಯೋಜನೆಯ ಪ್ರಯೋಜನಗಳನ್ನು ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳೆ ಹಾನಿಯಾಗಿದ್ದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸುಮಾರು 100ರಿಂದ 125 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ಅಲ್ಲಿನ ರೈತರಿಗೆ ಅವರು ತಲುಪಿಸಿದ್ದಾರೆ”…

ಇದು ಮೋದಿ ರಾಷ್ಟ್ರೀಯ ಸುದ್ಧಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನೀಡಿದ ಮಾಹಿತಿ.

“ನಮೋ” ಎಂದ “ಭಗವಂತ”…!

ಮೋದಿ ಸಂದರ್ಶನದಲ್ಲಿ ತನ್ನ ಹೆಸರು ಹೇಳಿದ್ದರಿಂದ ಫುಲ್ ಖುಷ್ ಆಗಿರುವ ಬೀದರ್ ಕ್ಷೇತ್ರದ ಸಂಸದ ಪ್ರಧಾನಿಗೆ ನಮೋ ಎಂದಿದ್ದಾರೆ. “ಮೋದೀಜಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ತಾನು ಮಾಡಿದ್ದ ಈ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಈ ಹಿಂದೆ ಬೀದರ್‍ಗೆ ಬಂದಿದ್ದ ಸಂದರ್ಭದಲ್ಲೂ ಈ ಸಾಧನೆಯನ್ನು ಉಲ್ಲೇಖಿಸಿ ಬೇಶ್ ಅಂದಿದ್ದರು. ಫಸಲ್ ಭೀಮಾ ಯೋಜನೆಗೆ ಜಿಲ್ಲೆಯಲ್ಲಿ ಹೆಚ್ಚಿನ ರೈತರು ನೊಂದಣಿ ಮಾಡಿಸಿದ್ದರು. ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿದ್ದವು. ಹೀಗಾಗಿ ಅವರೆಲ್ಲಾ ನಷ್ಟವನ್ನು ಅನುಭವಿಸಿದ್ದರು. ನಾನು ಅವರೊಂದಿಗೆ ಕೈಜೋಡಿಸಿ ಪ್ರತಿಯೊಬ್ಬರೂ ಪ್ರಧಾನ ಮಂತ್ರಿಯವರ ಫಸಲ್ ಭೀಮಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದ್ದೆ. ಹೀಗಾಗಿ ಸುಮಾರು ಒಂದೂವರೆ ಲಕ್ಷ ಜನರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳಾದರು. ಒಟ್ಟು 125 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನಮ್ಮ ಬೀದರ್ ಜಿಲ್ಲೆಯಲ್ಲಿ ಪಡೆಯುವಂತೆ ಆಗಿತ್ತು. ಸಂಪೂರ್ಣವಾಗಿ ನಮ್ಮ ಜಿಲ್ಲೆಯ ಜನತೆ ಇದರ ಫಲಾನುಭವಿಗಳಾಗಿದ್ದರು. ಈಗ ಈ ಸಾಧನೆಯನ್ನು ಪ್ರಧಾನಿ ಮೋದಿಯವರು ಸ್ಮರಿಸಿ ಪ್ರಶಂಸೆ ವ್ಯಕ್ತ ಪಡಿಸಿರುವುದು ನನಗೆ ಸಂತಸ ತಂದಿದೆ” ಎಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

“ಕೇಂದ್ರದ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸುವುದಕ್ಕೆ ಮೊದಲು ಆದ್ಯತೆ ನೀಡಿದ್ದೇನೆ. ಇದರಲ್ಲಿ ರೈತರು, ಜನರು ಹಾಗೂ ಅಧಿಕಾರಿಗಳ ಶ್ರಮವೂ ಇದೆ. ನನ್ನ ಕೆಲಸ ಪ್ರಧಾನಿ ಮೋದಿ ಗುರುತಿಸಿರುವುದರಿಂದ ಭವಿಷ್ಯದಲ್ಲಿ ಇನ್ನೂ ಉತ್ತಮ ಕೆಲಸಗಳನ್ನು ಮಾಡುವಲ್ಲಿ ಪ್ರೇರಣೆಯಾಗಿದೆ” ಎಂದೂ ಹೇಳಿದ್ದಾರೆ.

ಬೀದರ್ ವನ್ ನಂಬರ್…

ಸಧ್ಯ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಜಾರಿಗೊಳಿಸುವುದರಲ್ಲಿ ಬೀದರ್ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. ರೈತರು ತಾವು ಬೆಳೆದಿರುವ ಬೆಳೆಗಳು ಪ್ರಕೃತಿ ವಿಕೋಪ ಸಂಭವಿಸಿ ನಾಶವಾದರೆ ಈ ಯೋಜನೆಯ ಮೂಲಕ ಅದರ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯನ್ನು ಬೀದರ್ ಜಿಲ್ಲೆಯ ಜನತೆ ಸಮರ್ಪಕವಾಗಿ ಜಾರಿಗೊಳಿಸಿದ್ದು ದೇಶದಲ್ಲೇ ನಂಬರ್ ವನ್ ಸ್ಥಾನಕ್ಕೇರಿದೆ.

ಒಟ್ಟಿನಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಸಾಧನೆಯನ್ನು ಮೋದಿ ಕೊಂಡಾಡಿದ್ದು, ಸ್ವತಃ ಭಗವಂತ ಖೂಬಾ ಮಾತ್ರವಲ್ಲದೆ ರಾಜ್ಯದ ಇತರೆ ಸಂಸದರಿಗೂ ಇದು ಪ್ರೇರಣೆಯಾಗಿದೆ. ಮೋದಿ ಮತ್ತೊಮ್ಮೆ ತಮ್ಮ ವಿಭಿನ್ನ ಶೈಲಿಯನ್ನು ಕರ್ನಾಟಕದ ಸಂಸದರ ಮೇಲೆ ಪ್ರಯೋಗಿಸಿದ್ದು ಕರ್ನಾಟಕದ ಜನತೆ ಫುಲ್ ಖುಷ್ ಆಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Editor Postcard Kannada:
Related Post