X

ಪಾಕಿಸ್ಥಾನದ ಮೇಲೆ ಅಮೇರಿಕಾ ದಾಳಿ!! ಉಗ್ರರ ಮಾರಣಹೋಮಗೈದ ಜಗತ್ತಿನ ದೊಡ್ಡಣ್ಣ!

ಯಾವಾಗ ಡೊನಾಲ್ಡ್ ಟ್ರಂಪ್ ಎಲ್ಲ ಅಡೆತಡೆಗಳನ್ನ ದಾಟಿ ಜಯಗಳಿಸಿ, ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರೋ, ತಕ್ಷಣವೇ ಭಯೋತ್ಪಾದಕರ ರಾಷ್ಡ್ರವೆಂದೇ ಖ್ಯಾತಿ ಹೊಂದಿರುವ ಪಾಕಿಸ್ಥಾನಕ್ಕೆ, ‘ಏನಾದರೂ ಭಯೋತ್ಪಾದಕರಿಗೆ ರಕ್ಷಣೆ ಕೊಟ್ಟಿರೋ, ಪರಿಣಾಮ ನೆಟ್ಟಗಾಗಲಿಕ್ಕಿಲ್ಲ’ ಎಂದು ಎಚ್ಚರಿಕೆ ನೀಡಿದರೂ ಸಹ ಪಾಕಿಸ್ಥಾನ ಭಂಢ ಧೈರ್ಯಕ್ಕಿಳಿದು ಬಿಟ್ಟಿತು.

ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು ಎನ್ನುವ ಹಾಗೆ, ಅಮೇರಿಕಾ ಈಗ ಪಾಕಿಸ್ಥಾನಕ್ಕೆ ಸರಿಯಾದ ಶಾಸ್ತಿ ಕಲಿಸಿದೆ! ಕೆಲವು ದಿನಗಳ ಹಿಂದಷ್ಟೇ, ಡೊನಾಲ್ಡ್ ಟ್ರಂಪ್, ‘ನಾವು ಮೂರ್ಖರ ಹಾಗೆ ಹದಿನೈದು ವರ್ಷಗಳಿಂದ ಪಾಕಿಸ್ಥಾನಕ್ಕೆ ಹಣಸಹಾಯ ಮಾಡುತ್ತಲೇ ಬಂದಿದ್ದೆವು. ಆದರೆ, ಪ್ರತಿಯಾಗಿ ನಮಗೆ ಸಿಕ್ಕಿದ್ದು ಸುಳ್ಳುಗಳು ಮತ್ತು ಭಯೋತ್ಪಾದನೆ! ಇನ್ನು ಅದಕ್ಕೆ ಅವಕಾಶವಿಲ್ಲ” ಎಂದು ಹೇಳಿದ್ದರಷ್ಟೇ! ಅದಾದ ಸ್ವಲ್ಪ ದಿನಗಳಲ್ಲಿಯೇ, ಯಾವ ಮುನ್ಸೂಚನೆಯನ್ನೂ ಕೊಡದೆ ಅಮೇರಿಕಾ ಪಾಕಿಸ್ಥಾನದ ಭಯೋತ್ಪಾದಕ ಶಿಬಿರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ!\

ಅಮೇರಿಕಾ ಪಾಕಿಸ್ಥಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ ನಾಶಗೊಳಿಸಿದ್ದು ಹೇಗೆ ಗೊತ್ತೇ?!

ಅಮೇರಿಕಾದ ಡ್ರೋನ್ ನಾರ್ತ್ ವೆಸ್ಟರ್ನ್ ಪಾಕಿಸ್ಥಾನದ ಮೇಲೆ ದಾಳಿ ಮಾಡಿದ ಪರಿಣಾಮ ಅಫ್ಘನ್ ತಾಲಿಬಾನ್ ಮತ್ತು ಹಕ್ಕನಿ ನೆಟ್ ವರ್ಕ್ ನ ಎರಡು ಉಗ್ರಗಾಮಿಗಳನ್ನು ಕೊಂದಿದೆ!

ಎರಡು ಮಿಸೈಲ್ ಗಳ ಮೂಲಕ (Federally Administrated Tribal Areas) ದಾಪಾ ಮಾಮಝೋಯ್ ಹಳ್ಳಿಯಲ್ಲಿರುವ ಶಿಬಿರದ ಮನೆಯೊಂದರ ಮೇಲೆ ದಾಳಿಗೈದ ಪರಿಣಾಮ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳಾದ ಅಹ್ಸನ್ ಖೋರಾಯ್ ಮತ್ತು ನಾಸಿರ್ ಮೆಹಮೂದ್ ಸಾವನ್ನಪ್ಪಿದ್ದಾರೆ” ಎಂದು ಪಾಕಿಸ್ಥಾನದ ಇಂಟೆಲಿಜೆನ್ಸ್ ಅಧಿಕಾರಿ ಹೇಳಿದ್ದಾರೆ. ಅದಲ್ಲದೇ, “ಹಕ್ಕನಿ ನೆಟ್ ವರ್ಕ್ ನ ಎರಡು ಉಗ್ರರು ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ.

ವೀಕ್ಷಿಸಿ! ಪಾಕಿಸ್ಥಾನದ ಮೇಲೆ ಅಮೇರಿಕಾ ಡ್ರೋನ್ ದಾಳಿ ನಡೆಸಿದ್ದು ಹೀಗೆ!

ಮೊದಲನೆಯದಾಗಿ, ಡ್ರೋನ್ ದಾಳಿ ಮಾಡಿದ್ದು ಮುಖ್ಯವಾಗಿ ಪಾಕಿಸ್ಥಾನದ ಭಯೋತ್ಪಾದಕ ಶಿಬಿರಗಳನ್ನು ನಾಶಗೊಳಿಸಲು!

ಹಾ! ಡೊನಾಲ್ಡ್ ಟ್ರಂಪ್, ಯಾವಾಗ “‘ನಾವು ಮೂರ್ಖರ ಹಾಗೆ ಹದಿನೈದು ವರ್ಷಗಳಿಂದ ಪಾಕಿಸ್ಥಾನಕ್ಕೆ ಹಣಸಹಾಯ ಮಾಡುತ್ತಲೇ ಬಂದಿದ್ದೆವು. ಆದರೆ, ಪ್ರತಿಯಾಗಿ ನಮಗೆ ಸಿಕ್ಕಿದ್ದು ಸುಳ್ಳುಗಳು ಮತ್ತು ಭಯೋತ್ಪಾದನೆ! ಇನ್ನು ಅದಕ್ಕೆ ಅವಕಾಶವಿಲ್ಲ” ಎಂದಿದ್ದರೋ, ಅವತ್ತೇ ಪಾಕಿಸ್ಥಾನಕ್ಕೆ ಪಾಠ ಕಲಿಸಲು ಯೋಜನೆ ಆರಂಭಿಸಲಾಗಿತ್ತು ಎಂದು ಹೇಳಲಾಗುತ್ತಿದೆ!

ಅಮೇರಿಕಾ ಯಾವತ್ತೂ ಮುಲಾಜು ನೋಡುವುದಿಲ್ಲ! ಅದೇ ಕಾರಣಕ್ಕೆ ಅದು ದೊಡ್ಡಣ್ಣ!

ಅಮೇರಿಕಾದಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮತ್ತು ಸುಸಜ್ಜಿತವಾದ ಸಶಸ್ತ್ರ ಪಡೆ ಯಾವತ್ತಿಗೂ ಬಹುಷಃ ಅಮೇರಿಕಾದ ಘನತೆಗೆ
ತಕ್ಕಂತೆಯೇ ಕೆಲಸ ಮಾಡಿದೆ! 2016 ರಲ್ಲಿಯೂ ಸಹ, ಇದೇ ರೀತಿ ಡ್ರೋನ್ ದಾಳಿ ನಡೆಸಿದ್ದ ಅಮೇರಿಕಾ ತಾಲಿಬಾನ್ ಲೀಡರ್ ಮುಲ್ಲಾಹ್ ಅಕ್ತರ್ ನನ್ನು
ಯಮಸದನಕ್ಕಟ್ಟಿತ್ತು. ಅದೇ ರೀತಿ, ತಾಲಿಬಾನ್ ನ ಬಿನ್ ಲಾಡೆನ್ ನನ್ನೂ ಸಹ ಪಾಕಿಸ್ಥಾನದ ಒಳ ನುಗ್ಗಿಯೇ ಸಂಹರಿಸಿದ್ದ ಅಮೇರಿಕಾ, ಅಂತ್ಯಸಂಸ್ಕಾರಕ್ಕೂ ಅವಕಾಶವಾಗದಂತೆ, ಲಾಡನ್ ಶವವನ್ನು ಸಮುದ್ರದ ಮಧ್ಯದಲ್ಲಿಯೇ ಎಸೆದಿತ್ತು.

ಆದರೂ, ಅಮೇರಿಕಾದ ಸಿಟ್ಟು ತಣ್ಣಗಾಗಿರಲಿಲ್ಲ!

ಅಷ್ಟಕ್ಕೂ.. ಅಮೇರಿಕಾ ಈ ಹಕ್ಕನಿ ನೆಟ್ ವರ್ಕನ್ನು ಗುರಿಯಾಗಿಸಿದ್ದು ಯಾಕೆ?!

ಈ ಹಕ್ಕನಿ ತಂಡವೊಂದು ಅಫ್ಘನ್ ನ ಬಹುದೊಡ್ಡ ತಲೆನೋವು! ಅಫ್ಘಾನಿಸ್ಥಾನದಲ್ಲಿ ಬದುಕಲಿಕ್ಕೇ ಸಾಧ್ಯವಿಲ್ಲದಂತಹ ಸ್ಥಿತಿ ಸೃಷ್ಟಿಸಿದ ಕೀರ್ತಿ ಹಕ್ಕನ್ ಗೆ ಸೇರುತ್ತದೆ! ಅದರಲ್ಲೂ, ಯಾವಾಗ ಅಫ್ಘನ್ ಭಯೋತ್ಪಾದನೆಯನ್ನು ನಾಶಗೊಳಿಸಲು ಅಮೇರಿಕಾದ ಜೊತೆ ಒಪ್ಪಂದ ಮಾಡಿಕೊಂಡಿತೋ, ಅಲ್ಲಿಂದ ಸಿಕ್ಕ ಸಿಕ್ಕಲ್ಲಿ ಗುಂಡಿಕ್ಕುತ್ತಿದೆ ಅಮೇರಿಕಾ!

ಹಕ್ಕನ್ ತಂಡ ಅಫ್ಘಾನಿಸ್ಥಾನದಲ್ಲಿರುವ ಎಲ್ಲದಕ್ಕಿಂತ ಅತಿ ಭಯಂಕರವಾದ ಭಯೋತ್ಪಾದಕ ತಂಡ. ಹಾಗೆಯೇ ಬಿಟ್ಟರೆ, ತಾಲಿಬಾನ್ ಮತ್ತು ಅಲ್ಖೈದಾಕ್ಕಿಂತಲೂ ಅತಿ ಹೆಚ್ಚು ದೊಡ್ಡ ಮಟ್ಟದಲ್ಲಿ ಬೆಳೆಯುಗ ತಾಕತ್ತಿರುವುದು ಹಕ್ಕನಿ ನೆಟ್ ವರ್ಕ್ ಗೆ ಎಂದು ಅಫ್ಘನ್ ವರದಿ ನೀಡಿದೆ.

ಅಫ್ಘನ್ ಸರಕಾರದ ಮೇಲೆ, ಕಾಬೂಲಿನ ರಾಯಭಾರಿ ಕಚೇರಿಯ ಮೇಲೆ, ಅಧಿಕಾರಿಗಳ ಮೇಲೆ, ಅಫ್ಘನ್ ನ ಸಂಸತ್ತಿನ ಮೇಲೆ, ಸಾರ್ವಜನಿಕ ವಲಯದ ಮೇಲೆ, ಮತ್ತು ಅಮೇರಿಕಾದ ಸೇನಾ ಶಿಬಿರಗಳ ಮೇಲೆ ಪದೇ ಪದೇ ಭಯಂಕರವಾಗಿ ದಾಳಿ ಮಾಡುತ್ತಲೇ ಬಂದಿದೆ ಹಕ್ಕನಿ.

ಬಿನ್ ಲಾಡೆನ್ ಗೆ ಪ್ರಮುಖವಾಗಿ ಸಹಕರಿಸಿದ್ದು ಇದೇ ಹಕ್ಕನಿ!

ಯಾವಾಗ ಅಮೇರಿಕಾ ಅಫ್ಘಾನಿಸ್ಥಾನದ ಒಳನುಗ್ಗಿ ಭಯೋತ್ಪಾದಕ ತಾಣಗಳನ್ನು ಬೇಟೆಯಾಡಲು ಪ್ರಾರಂಭಿಸಿತೋ, ಇಡೀ ಹಕ್ಕನಿ ತಂಡ ಪಾಕಿಸ್ಥಾನಕ್ಕೆ
ವಲಸೆ ಹೋಯಿತು! ಅದಲ್ಲದೇ, ಬಿನ್ ಲಾಡನ್ ಸೇರಿ ಜೊತೆ ಜೊತೆಗೆ ಪ್ರಮುಖ ಅಲ್ ಖೈದಾ ನಾಯಕರನ್ನು ಅಡಗುತಾಣಕ್ಕೆ ಸಾಗಿಸಲು ಸಹಾಯ ಮಾಡಿತ್ತು ಹಕ್ಕನಿ ನೆಟ್ ವರ್ಕ್ . ಪಾಕಿಸ್ಥಾನದಲ್ಲಿದ್ದುಕೊಂಡೇ, ಅಮೇರಿಕಾದ ಜೊತೆ ತನ್ನ ಬೇರೆ ಬೇರೆ ದೇಶಗಳ ಭಯೋತ್ಪಾದಕರನ್ನು ಸಂಪರ್ಕಿಸಿ ಪ್ರತಿದಾಳಿಗೂ ಸಜ್ಜು ಮಾಡಿತ್ತು. ವಾಸ್ತವವಾಗಿ, ಹಕ್ಕನಿ ನೆಟ್ವರ್ಕ್ ಹೆಸರಾಗಿರುವುದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ದಾಳಿಗೆ! ಜಗತ್ತಿನ ಬೇರೆ ಬೇರೆ ಉಗ್ರ ಸಂಘಟನೆಗಳಿಗಿಂತಲೂ, ‘ಹೈ ಪ್ರೊಫೈಲ್’ ಸಂಘಟನೆಯಾದ ಹಕ್ಕನಿ ‘ಆತ್ಮಾಹುತಿ ಬಾಂಬರ್ ಗಳನ್ನು ತಯಾರಿಸುವಲ್ಲಿ ನಿಸ್ಸೀಮ! ಇಲ್ಲಿಯವರೆಗೂ, ಜಗತ್ತಿನಲ್ಲಿ ಯಾವ್ಯಾವ ಉಗ್ರಸಂಘಟನೆಯ ಅತಿ ದೊಡ್ಡ ದೊಡ್ಡ ದಾಳಿಯಾಗಿದೆಯೋ, ಅವೆಲ್ಲವನ್ನೂ ನಿರ್ದೇಶಿಸಿದ್ದು ಇದೇ ಹಕ್ಕನಿ ತಂಡ!

ಹಕ್ಕನಿ ತಂಡದ ಸೃಷ್ಟಿಕರ್ತ ಯಾರು ಗೊತ್ತೇ?!

ಜಲಾಲುದ್ದೀನ್ ಹಕ್ಕನಿ! ಅಫ್ಘಾನಿಸ್ಥಾನದ ಮಾಜಿ ಆ್ಯಾಂಟಿ ಸೋವಿಯತ್ ಕಮಾಂಡರ್ ಈತ! ಇವನಡಿಯಲ್ಲಿ ಹಕ್ಕನಿ ನೆಟ್ ವರ್ಕ್ ವೇಗವಾಗಿ ಬೆಳೆಯುತ್ತ ಹೋಯಿತು!

ಈ ಹಕ್ಕನಿಯ ಮೂಲವಿರುವುದು ಪಾಕಿಸ್ಥಾನದ ನಾರ್ತ್ ವೆಸ್ಟ್ ನ fata ದ ಕಣಿವೆಗಳಲ್ಲಿ. ಅತ್ಯಾಧುನಿಕವಾದ ಶಸ್ತ್ರಾಭ್ಯಾಸ, ತರಬೇತಿ ಮತ್ತು ಪ್ರಮುಖ ಕಾರ್ಯತಂತ್ರಗಳು ತಯಾರಾಗುವುದು ಇಲ್ಲಿಯೇ!

ಅದಕ್ಕೇ, ಡೊನಾಲ್ಡ್ ಟ್ರಂಪ್ ಗುಡುಗಿದ್ದು! ನಾವು ಬೇಟೆಯಾಡಬೇಕಿದ್ದ ಅಫ್ಘನ್ ಉಗ್ರರನ್ನು ಪಾಕಿಸ್ಥಾನ ರಕ್ಷಣೆ ಮಾಡಿದೆ ಎಂದು! ಅದಕ್ಕೇ, ಪಾಕಿಸ್ಥಾನವನ್ನು ಮೂಲೆಗುಂಪು ಮಾಡಿದ್ದು ಅಮೇರಿಕಾ! ಇವತ್ತು, ನಡೆದ ದಾಳಿಗೆ ಹಕ್ಕನಿಯ ಪ್ರಮುಖ ತಲೆಗಳು ಉರುಳಿವೆ!

Cheers America!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post