X

ಕಾಪಿ ಕ್ಯಾಟ್ ಸಿದ್ದರಾಮಯ್ಯ ಪ್ರಧಾನಿ ಮೋದಿಯ ಎಷ್ಟೋ ಯೋಜನೆಗಳನ್ನು ಹೆಸರು ಬದಲಾಯಿಸಿ ತನ್ನದೆಂದು ಬೊಗಳೆ ಬಿಟ್ಟಿದ್ದು ಹೇಗೆ ಗೊತ್ತೇ?

ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ಭಾರೀ ಅಂತರದಲ್ಲಿ ಸೋಲನ್ನು ಅನುಭವಿಸಲಿರುವುದು ಸ್ಪಷ್ಟವಾಗಿದೆ. ಆದರೆ ಸಿದ್ದರಾಮಯ್ಯನ ಇತ್ತೀಚಿನ ಯೋಜನೆಗಳನ್ನು ಗಮನಿಸಿದರೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‍ಗೆ ಕರ್ನಾಟಕದಲ್ಲಿ ಅಷ್ಟೊಂದು ಸುಲಭದ ಸೋಲು ಸಾಧ್ಯವಿಲ್ಲ ಎಂದು ಕೆಲವರ ಅಭಿಪ್ರಾಯ. ಕಾಂಗ್ರೆಸ್‍ಗೆ ಕ್ಲೀನ್ ಸ್ವೀಪ್ ಸೋಲು ಪಡೆಯದೆ ಭಾರೀ ಪೈಪೋಟಿ ನೀಡಲಿದೆ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಕರ್ನಾಟಕದ ಜನತೆಯನ್ನು ಉದ್ದೇಶಿಸಿಕೊಂಡು ಒಳ್ಳೊಳ್ಳೆ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಸಿದ್ದರಾಮಯ್ಯ ಸರಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಪಡೆಯಲಿದೆ ಎಂದು ಕೆಲವರು ಪುಂಗಿ ಊದುತ್ತಿದ್ದಾರೆ.

ಯಾರೇ ಏನೇ ಪುಂಗಿ ಊದಲಿ… ಆದರೆ ನಮ್ಮೊಳಗಿನ ಸತ್ಯ ಏನೆಂದು ನಮಗೆ ಗೊತ್ತಿಲ್ಲವೇ?

ಸಿದ್ದರಾಮಯ್ಯನ ಯಾವುದೇ ಯೋಜನೆಯೇ ಇರಲಿ. ಅದ ಫಲಾನುಭವಿಗಳು ಹೆಚ್ಚಾಗಿ ಅಲ್ಪಸಂಖ್ಯಾತರೇ ಇರುವುದು. ಇದೊಂದು ವಿಷಯವಾದರೆ ಮತ್ತೊಂದು ಅಸಲಿ ವಿಷಯ ನಿಮ್ಮೆಲ್ಲರನ್ನೂ ದಂಗುಬಡಿಸಬಹುದು.

ಸಿದ್ದರಾಮಯ್ಯ ಇದೆಲ್ಲಾ ತನ್ನ ಯೋಜನೆ ಎಂದು ಯಾವುದನ್ನೆಲ್ಲಾ ಬಿಂಬಿಸುತ್ತಾರೋ ಅದೆಲ್ಲಾ ಕೇಂದ್ರ ಸರಕಾರದ ನಕಲು. ಇನ್ನೊಂದು ಅಚ್ಚರಿದಾಯಕ ಅಘಾತಕಾರಿ ವಿಷಯವೆಂದರೆ ಕೇಂದ್ರ ಸರಕಾರದ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುವ ಸೌಲಭ್ಯವನ್ನು ಅದು ತನ್ನದೆಂದು ಸುಳ್ಳು ಹೇಳುವುದು. ಇದೆಲ್ಲಾ ಯಾವುದು ಎಂದು ದಾಖಲೆ ಇಟ್ಟು ನಿಮ್ಮ ಮುಂದಿಡುತ್ತೇವೆ. ನರೇಂದ್ರ ಮೋದಿಯವರ ಯೋಜನೆಯನ್ನು ತಿರುಚಿ ಅದಕ್ಕೆ ಇನ್ನೊಂದು ಹೆಸರಿಟ್ಟು ಅದನ್ನು ತನ್ನ ಯೋಜನೆ ಎಂದು ಬಿಂಬಿಸುತ್ತಾ ಬರುತ್ತಿದೆ ಸಿದ್ದರಾಮಯ್ಯ ಸರಕಾರ. ಈ ವಿಷಯದಲ್ಲಿ ಕರ್ನಾಟಕ ಸರಕಾರಕ್ಕೆ ಖಂಡಿತಾ ನಾಚಿಗೆಯಾಗಲೇಬೇಕು.

ಸಿದ್ದರಾಮಯ್ಯ ಸರಕಾರ ಮೋದಿ ಸರಕಾರದ ಯಾವೆಲ್ಲಾ ಯೋಜನೆಗಳನ್ನು ಕಾಪಿ ಮಾಡಿದೆ ಗೊತ್ತೇ?

1. ಕೇಂದ್ರದ ಯೋಜನೆ

ಉಜಾಲ ಯೋಜನೆ:

ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಪ್ರತೀ ಮನೆಗಳಿಗೆ ಪರಿಣಾಮಕಾರಿ ಶಕ್ತಿಯ ಪೂರೈಕೆ ಮಾಡುವುದು ಇದರ ಉದ್ದೇಶ. ಕಾಂಗ್ರೆಸ್‍ನಿಂದ ದಶಕಗಳ ಕಾಲ ಕಡೆಗಣಿಸಲ್ಪಟ್ಟ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮಾಡುವುದಲ್ಲದೆ ಎಲ್‍ಇಡಿ ಬಲ್ಬ್‍ಗಳನ್ನು ಒದಗಿಸುವುದು ಇದರ ಉದ್ದೇಶ. ಈ ಯೋಜನೆಯಿಂದ ದೇಶದ ಬಹುಪಾಲು ಜನರಿಗೆ ಉಪÀಕಾರಿಯಾಯಿತು.

ಸಿದ್ದರಾಮಯ್ಯನ ನಕಲು ಆವೃತ್ತಿ

ಹೊಸ ಬೆಳಕು:

ಕರ್ನಾಟಕ ಸರಕಾರದ ಹೊಸಬೆಳಕು ಯೋಜನೆ ಕೇಂದ್ರ ಸರಕಾರದ ಉಜಾಲ ಸ್ಕೀಮ್‍ನ ಸಂಪೂರ್ಣ ನಕಲು ಆವೃತ್ತಿ. ಉಜಾಲ ಯೋಜನೆಗೆ ಬಂದ ಅನುದಾನವನ್ನು ಹೈಜ್ಯಾಕ್ ಮಾಡಿದ ಸಿದ್ದರಾಮಯ್ಯ ಸರಕಾರ ಅದೇ ಹಣದಿಂದ ಸಿಗುವ ಎಲ್‍ಇಡಿ ಬಲ್ಪ್, ವಿದ್ಯುತ್ ವಿಸ್ತರಣೆಯನ್ನು ಹೊಸ ಬೆಳಕು ಯೋಜನೆಯ ಮೂಲಕ ಜನರಿಗೆ ವಿತರಿಸಿತು. ಕೇಂದ್ರದ ದುಡ್ಡು, ಯೋಜನೆ, ಕರ್ನಾಟಕ ಸರಕಾರದ ಹೊಸಬೆಳಕು ಯೋಜನೆಯಡಿಯಲ್ಲಿ ವಿತಣೆ… ಹೊಸಬೆಳಕು ಯೋಜನೆಯಲ್ಲಿ ಕರ್ನಾಟಕ ಸಬ್ಸಿಡಿ ಕೊಡುವುದು ಕೇಂದ್ರದ ಹಣದಿಂದ. ಕರ್ನಾಟಕ ಸರಕಾರ ಕೇಂದ್ರದ ಯೋಜನೆಯಿಂದ, ಹೊಸಬೆಳಕು ಹೆಸರಲ್ಲಿ ಕರ್ನಾಟಕದ ಜನರನ್ನು ಮೋಸ ಮಾಡಿ ಕೆಟ್ಟ ರಾಜಕೀಯ ಮಾಡುತ್ತಿದೆ.

2. ಕೇಂದ್ರದ ಯೋಜನೆ

ಉಜ್ವಲ ಸ್ಕೀಮ್:

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಕಾರ ಬಡತನ ರೇಖೆ (ಬಿಪಿಎಲ್)ಗಿಂತ ಕಳೆಗಿನ ಕುಟುಂಬಗಳ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಹಿಂದಿನ ಈ ಮಹಿಳೆಯರು ಸಾಂಪ್ರದಾಯಿಕ ಜೇಡಿಮಣ್ಣಿನ ಸ್ಟೌವ್ ಬಳಸಿ ಬೇಯಿಸುತ್ತಿದ್ದರು. ಇದರಿಂದ ಅವರ ಕಣ್ಣುಗಳು ಮತ್ತು ಶ್ವಾಸಕೋಶಗಳಿಗೆ ಕಿರಿಕಿರಿಯನ್ನು ಉಂಟುಮಾಡುವ ಹೊಗೆಯನ್ನು ಉಸಿರಾಡುವಂತೆ ಮಾಡಬೇಕಾಗಿತ್ತು. ಈ ಯೋಜನೆಯ ಮೂಲಕ ಮಹಿಳೆಯರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಲು ಈ ಯೋಜನೆ ನೆರವಾಗಿದೆ.

ಸಿದ್ದರಾಮಯ್ಯನ ನಕಲು ಆವೃತ್ತಿ

ಅನಿಲ ಭಾಗ್ಯ:

ಕೇಂದ್ರದ ಉಜ್ವಲ ಯೋಜನೆಯಡಿ ಆಯ್ಕೆ ಮಾಡಿದ ಅರ್ಹ ಕುಟುಂಬಗಳಿಗೆ ರಾಜ್ಯದ ಅನಿಲ ಭಾಗ್ಯ ಯೋಜನೆಯ ಮೂಲಕ ಎಲ್ಪಿಜಿ ಗ್ಯಾಸ್ ಸಂಪರ್ಕ ಹಾಗೂ ಗ್ಯಾಸ್‍ಒಲೆಯನ್ನು ಒದಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಕೆಲವು ಕಡೆ ಉಜ್ವಲ ಯೋಜನೆ ಸಿಗದ ಫಲಾನುಭವಿಗಳಿಗೆ ಅನಿಲಭಾಗ್ಯದ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಲಾಗುತ್ತದೆ. ಉಜ್ವಲ ಯೋಜನೆಗೂ ಅನಿಲಭಾಗ್ಯ ಯೋಜನೆಗೂ ಕೆಲವಷ್ಟೇ ವ್ಯತ್ಯಾಸಗಳಿದ್ದು, ಗ್ಯಾಸ್ ಒಲೆಯೊಂದನ್ನು ಕೊಡುವುದು ಬಿಟ್ಟರೆ ಉಳಿದಂತೆ ಎಲ್ಲವೂ ಸೇಮ್ ಟು ಸೇಮ್. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೋದಿ ಸರಕಾರದ ಕಲ್ಪನೆಯನ್ನು ನಕಲುಗೊಳಿಸಿ ತಾನೊಬ್ಬ ಬಡವರ ಬಂಧು ಎಂದು ಆದರ್ಶವಾದಿಯಂತೆ ಮಾತಾಡುವುದನ್ನು ನೋಡಿದಾಗ ನಗು ಬರುತ್ತದೆ.

ಕೇಂದ್ರದ ಯೋಜನೆ

ದಿ ಭಾರತ್ ನೆಟ್ ಪ್ರಾಜೆಕ್ಟ್

ಇದೊಂದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಇದರ ಪ್ರಕಾರ 150,000 ಪಂಚಾಯತ್‍ಗಳಿಗೆ ಬ್ರಾಡ್‍ಬ್ಯಾಂಡ್ , ವೈಫೈ ಕಲ್ಪಿಸಿ ಇಂಟೆರ್ನೆಟ್ ಸೌಲಭ್ಯ ಒದಗಿಸುವುದು. 2019ರ ಒಳಗಡೆ ಎಲ್ಲಾ ಪಂಚಾಯತ್‍ಗಳು ಇಂಟೆರ್ನೆಟ್ ಸೌಲಭ್ಯ ಪಡೆಯಲಿದೆ. ಕರ್ನಾಟಕದ 4828 ಪಂಚಾಯತ್‍ಗಳು ಭಾರತ್ ನೆಟ್ ಪ್ರಾಜೆಕ್ಟ್ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದುಕೊಂಡಿದೆ.

ಸಿದ್ದರಾಮಯ್ಯನವರ ನಕಲು ಆವೃತ್ತಿ:

ಕರ್ನಾಟಕ ಸರಕಾರ ಕಳೆದ ನವೆಂಬರ್ 15ರಂದು ಎಲ್ಲಾ ಗ್ರಾಮ ಪಂಚಾಯತ್‍ಗಳಿಗೆ ಇಂಟೆರ್ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಅನಾವರಣಗೊಳಿಸಿತು. ಕರ್ನಾಟಕದ ಎಲ್ಲಾ 2500 ಗ್ರಾಮ ಪಂಚಾಯತ್‍ಗಳಲ್ಲಿ ವೈಫೈ ಇನ್‍ಸ್ಟಾಲ್ ಮಾಡಲು ಉದ್ದೇಶಿಸಲಾಗಿದೆ.
ಕೇಂದ್ರದ ಯೋಜನೆಯನ್ನೇ ತನ್ನ ಸ್ವಂತ ಯೋಜನೆಯೆಂದು ಬಿಂಬಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಆದರೆ ಇದನ್ನು ಕೇಳಿದ ಐಟಿ ಅಧಿಕಾರಿಗಳು ಸಿದ್ದರಾಮಯ್ಯನ ವರಸೆಯನ್ನು ತಳ್ಳಿ ಹಾಕಿದ್ದಾರೆ. ಐಟಿ ಅಧಿಕಾರಿಗಳ ಪ್ರಕಾರ ರಾಜ್ಯ ಶೇ.90 ಪಂಚಾಯತ್‍ಗಳು ಭಾರತ್‍ನೆಟ್ ಪ್ರೋಗ್ರಾಮ್‍ನಲ್ಲಿ ಒಳಪಟ್ಟಿದೆ. ಉಳಿದ ಪಂಚಾಯತ್‍ಗಳಿಗೆ ವೈಫೈ ಕಲ್ಪಿಸುವುದು ಅಷ್ಟೊಂದು ದೊಡ್ಡ ಸವಾಲಿನ ಕೆಲಸವಲ್ಲ. ಕೇಂದ್ರದ ಯೋಜನೆಯನ್ನೇ ತನ್ನ ಯೋಜನೆಯೊಂದು ಬಿಂಬಿಸುವ ಸಿದ್ದರಾಮಯ್ಯ ಸರಕಾರದ ಮತ್ತೊಂದು ನಾಟಕ ಬಯಲಾಯಿತು.

ತನ್ನ ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಋಣಿಯಾಗಿರಲೇಬೇಕು!!!

ಸಿದ್ದರಾಮಯ್ಯ ಒಬ್ಬರು `ಕಾಪಿಕ್ಯಾಟ್’ ಎಂದು ಕರೆಯಬಹುದು. ಯಾಕೆಂದರೆ ಕೇಂದ್ರ ಸರಕಾರದ ಯೋಜನೆಯನ್ನು ಹೈಜಾಕ್ ಮಾಡುವುದು ಹೇಗೆ ಎಂದು ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ಇದಕ್ಕೆ ಅನ್ನಭಾಗ್ಯ ಯೋಜನೆ ಸೂಕ್ತ ಉದಾಹರಣೆ. ಅನ್ನ ಭಾಗ್ಯ ಯೋಜನೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ಪಡೆಯುವ ಹೆಸರು ಬೇರೆ ಯಾವ ಯೋಜನೆಯಲ್ಲೂ ಸಿಗದು.

ಸಿದ್ದರಾಮಯ್ಯ ತನ್ನ ಗದ್ದೆಯಲ್ಲೇ ಅಕ್ಕಿಬೆಳೆದು ಅದನ್ನು ತಾನೇ ಗೋಣಿಯಲ್ಲಿ ತುಂಬಿಸಿ ಬಡವರ ಮನೆಗೆ ತಾನೇ ಹೊತ್ತುಕೊಂಡು ಕೊಡುತ್ತಿದ್ದಾರೆ ಎನ್ನುವ ರೇಂಜಿಗೆ ಅನ್ನಭಾಗ್ಯ ಯೋಜನೆಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಆದರೆ ಯೋಜನೆಗೆ ಕೇಂದ್ರ ಸರಕಾರದ ಗರಿಷ್ಠ ಅನುದಾನ ಇದೆ ಎಂದು ಎಲ್ಲೂ ಕೂಡಾ ಬಾಯಿಬಿಡುವುದಿಲ್ಲ. ಕೇಂದ್ರ ಸರಕಾರ 1,65,000 ಮೆಟ್ರಿಕ್ ಟನ್ ಅಕ್ಕಿಯನ್ನು ಕೆಜಿಗೆ 32ರಂತೆ ಖರೀದಿಸಿ ಅದನ್ನು ಮೂರು ರೂ ದರದಲ್ಲಿ ರಾಜ್ಯ ಸರಕಾರಕ್ಕೆ ಕೊಡುತ್ತದೆ. ಅಂದರೆ ಒಂದು ಕೆಜಿ ಅಕ್ಕಿಗೆ ಕೇಂದ್ರ ಸರಕಾರ 29 ರೂ. ಖರ್ಚು ಮಾಡಿದರೆ ರಾಜ್ಯ ಸರಕಾರ ಖರ್ಚು ಮಾಡುವುದು ಬರೇ 3 ರೂ. ಅದರ ಜೊತೆಗೆ ಕೇಂದ್ರ ಸರಕಾರ 65,000 ಗೋಧಿಯನ್ನು ಕೆ.ಜಿಯೊಂದಕ್ಕೆ 22 ರೂ.ಗೆ ಖರೀದಿಸಿ ಅದನ್ನು ರಾಜ್ಯ ಸರಕಾರಕ್ಕೆ 2 ರೂ ದರದಲ್ಲಿ ವಿತರಿಸುತ್ತದೆ.

ಆದರೆ ಸಿದ್ದರಾಮಯ್ಯ ಮಾತ್ರ ಹೇಳುವುದು ಬೇರೆಯೇ…

ಮೊದಲನೆಯದಾಗಿ ಕೇಂದ್ರ ಸರಕಾರದ ಯೋಜನೆಯನ್ನು ತನ್ನ ಯೋಜನೆಯೆಂದು ಬಿಂಬಿಸುವುದು, ಮತ್ತೊಂದು ಕೇಂದ್ರ ಸರಕಾರದ ಅನುದಾನವನ್ನು ಕಡೆಗಣಿಸಿ ಎಲ್ಲವೂ ತಾನೇ ಕೊಟ್ಟದ್ದು ಎಂದು ಹೇಳಿ ಮೋದಿ ಸರಕಾರವನ್ನು ಜನತೆಯಿಂದ ದೂರ ಮಾಡಲು ನೋಡುವುದು.

ಕರ್ನಾಟಕವನ್ನು ಬೆಳೆಸಲು ತಾನು ನಾನಾ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಸಿದ್ದರಾಮಯ್ಯ ಬೋಂಗು ಬಿಟ್ಟಿದ್ದೇ ಬಂದಿದೆ. ಇದರ ಹೊರತು ಏನೂ ಕೆಲಸ ಮಾಡಿಲ್ಲ. ಇದರ ಬದಲು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇಂದು ಕರ್ನಾಟಕದ ಜನತೆ ಚೆನ್ನಾಗಿ ಊಟ ಮಾಡಲು ಕೇಂದ್ರ ಸರಕಾರವೇ ಕಾರಣ ಎನ್ನುವ ಸತ್ಯವನ್ನು ಸಿದ್ದರಾಮಯ್ಯ ಎಲ್ಲೂ ಬಾಯಿಬಿಡುವುದಿಲ್ಲ. ಅದನ್ನು ಬಿಟ್ಟು ಕೇಂದ್ರದ ಯೋಜನೆಯನ್ನು ಯಥಾಪ್ರತಿ ನಕಲು ಮಾಡಿ ಅದನ್ನು ಇನ್ನೊಂದು ಹೆಸರಲ್ಲಿ ಜನತೆಗೆ ಕೊಟ್ಟು ಷಹಬ್ಬಾಸ್‍ಗಿರಿ ಪಡೆಯಲು ನೋಡುತ್ತಿದ್ದಾರೆ. ಕೇಂದ್ರ ಸರಕಾರದ ಅನುದಾನವಿದ್ದರೆ ಅದನ್ನು ಅಲ್ಲಿಯೇ ಮುಚ್ಚಿಟ್ಟು ಅದಕ್ಕೊಂದು ಬೇರೆಯೇ ಹೆಸರು ಕೊಟ್ಟು ಜನರನ್ನು ಮೂರ್ಖರನ್ನಾಗಿ ಮಾಡಲು ನೋಡುತ್ತಿದ್ದಾರೆ.

ಜನರು ಈ ಬಗ್ಗೆ ಅರ್ಥ ಮಾಡಿಕೊಳ್ಳದಿದ್ದರೆ ರಾಜ್ಯದ ಕಾಂಗ್ರೆಸ್ ಸರಕಾರ ಇನ್ನಷ್ಟು ದಿನ ಇದೇ ರೀತಿ ಜನರನ್ನು ಮೋಸ ಮಾಡುತ್ತಲೇ ಸಾಗುತ್ತದೆ…

-postcard team

Editor Postcard Kannada:
Related Post