X

ದಲಿತರನ್ನು ಓಟು ಬ್ಯಾಂಕ್ ಮಾಡಿದ್ದ ಕಾಂಗ್ರೆಸ್ಸಿಗರ ಎದೆ ನಡುಗಿಸುವಂತೆ ಮಾಡಿದೆ ಮೋದಿಯ ಈ ಹೊಸ ಯೋಜನೆ!!

ದಲಿತರು ಹಾಗೂ ಮಹಿಳೆಯರನ್ನು ಉದ್ಯಮಪತಿಗಳನ್ನಾಗಿ ಮಾಡಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು “ಸ್ಟ್ಯಾಂಡ್ ಅಪ್ ಇಂಡಿಯಾ” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ!!

ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಜನ್ಮದಿನದಂದು ನೋಯ್ಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳ ಉದ್ಯಮಶೀಲರನ್ನು ಉತ್ತೇಜಿಸುವ ಯೋಜನೆ ಇದಾಗಿದೆ. ಈ ಯೋಜನೆಯಡಿ, ದೇಶಾದ್ಯಂತ ಇರುವ 1.25 ಲಕ್ಷ ಬ್ಯಾಂಕ್ ಶಾಖೆಗಳು ಕನಿಷ್ಠ ಒಬ್ಬ ದಲಿತ ಹಾಗೂ ಒಬ್ಬ ಮಹಿಳೆಗೆ ಉದ್ಯಮ ಆರಂಭಿಸಲು 1 ಕೋಟಿ ರೂ.ವರೆಗೂ ಕಡ್ಡಾಯವಾಗಿ ಸಾಲ ನೀಡಬೇಕಾಗುತ್ತದೆ.

ದೇಶದ ಅಭಿವೃದ್ಧಿ ಜೊತೆಗೆ ಹೊಸ ಶೈಲಿಯ ಉದ್ಯಮ ಶುರು ಮಾಡುವ ಕಂಪನಿಗಳಿಗೆ ಪೆÇೀತ್ಸಾಹ ನೀಡುವುದು ಹಾಗೂ ಹೊಸ ಉದ್ಯೋಗ ಸೃಷ್ಟಿಸುವ ಸಲುವಾಗಿ ಕೇಂದ್ರ ಸರ್ಕಾರ “ಸ್ಟಾಂಡ್ ಅಪ್ ಇಂಡಿಯಾ” ಯೋಜನೆ ಜಾರಿಗೆ ತಂದಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಮೋದಿ, “ಎಲ್ಲರಿಗೂ ಉದ್ಯೋಗ ದೊರಕಿಸಿಕೊಡಲು ಸರಕಾರದಿಂದ ಸಾಧ್ಯವಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳನ್ನೇ ಉದ್ಯೋಗ ಸೃಷ್ಟಿಕರ್ತರನ್ನಾಗಿ ಮಾಡಲು ಸರಕಾರ ಯೋಜನೆ ತಂದಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದ ಜನರ ಜೀವನವನ್ನೇ ಈ ಯೋಜನೆ ಬದಲಿಸುತ್ತದೆ” ಎಂದು ಹೇಳಿದ್ದಾರೆ.

ಸ್ಟಾಂಡ್ ಅಪ್ ಇಂಡಿಯಾ ಯೋಜನೆ 2.5 ಲಕ್ಷ ಉದ್ಯಮಿಗಳ ಸೃಷ್ಟಿಗೆ ನೆರವಾಗಲಿದ್ದು, 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಸಾಲ ಸಿಗಲಿದೆ. ಪ್ರತಿಯೊಬ್ಬ ಭಾರತೀಯರನ್ನೂ ಸಬಲೀಕರಣಗೊಳಿಸಿ, ಅವರು ತಮ್ಮ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದೇ ಯೋಜನೆ ಉದ್ದೇಶ ಎಂದು ತಿಳಿಸಿದ್ದಾರೆ.

ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಪ್ರದಾನಿ ನರೇಂದ್ರ ಮೋದಿ ಏಪ್ರಿಲ್ 5ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಾಲನೆ ನೀಡಿದ್ದ ಮೋದಿ ಪ್ರತ್ಯೇಕ ವೆಬ್ ಪೆÇೀರ್ಟಲ್ ಗೂ ಕೂಡ ಚಾಲನೆ ನೀಡಲಿದ್ದಾರೆ. ಇನ್ನು 2015ರ ಆಗಸ್ಟ್ 15ರಂದು ಪ್ರದಾನಿ ಮೋದಿ “ಸ್ಟಾರ್ಟ್ ಅಪ್ ಇಂಡಿಯಾ: ಸ್ಟ್ಯಾಂಡ್ ಅಪ್ ಇಂಡಿಯಾ” ಯೋಜನೆ ಘೋಷಿಸಿದ್ದಲ್ಲದೇ ಇತ್ತೀಚೆಗಷ್ಟೇ ಸ್ಟಾರ್ಟ್ ಅಪ್ ಯೋಜನೆಗೆ ಚಾಲನೆ ನೀಡಲಾಗಿತ್ತು.

ಎಸ್ಸಿ, ಎಸ್ಟಿ ಜನರು, ಮಹಿಳೆಯರನ್ನು ಉದ್ಯಮಪತಿಗಳನ್ನಾಗಿ ಮಾಡುವ ಉದ್ದೇಶವನ್ನು ಸ್ಟಾಂಡ್ ಅಪ್ ಇಂಡಿಯಾ ಯೋಜನೆ ಹೊಂದಿದೆ. ಇದರಡಿ, ದೇಶಾದ್ಯಂತ ಇರುವ 1.25 ಲಕ್ಷ ಬ್ಯಾಂಕ್ ಶಾಖೆಗಳು ಕನಿಷ್ಠ ಒಬ್ಬ ದಲಿತ ಹಾಗೂ ಒಬ್ಬ ಮಹಿಳೆಗೆ ಕಡ್ಡಾಯವಾಗಿ 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಖಾತ್ರಿ ರಹಿತ ಸಾಲ ಸೌಲಭ್ಯ ಒದಗಿಸಬೇಕಾಗುತ್ತದೆ. ಇದರಿಂದಾಗಿ ಕನಿಷ್ಠ 2.50 ಲಕ್ಷ ಮಂದಿಗೆ ಸಾಲ ಸಿಗುವುದು ಖಚಿತವಾಗಲಿದೆ.


ಸ್ಟಾರ್ಟ್ ಅಪ್ ಇಂಡಿಯಾ ವಿಶೇಷತೆ ಏನು ಗೊತ್ತೇ?

ಹೊಸ ಶೈಲಿಯ ಉದ್ಯಮ ಆರಂಭಿಸುವ ಕಂಪನಿಗಳನ್ನು “ಸ್ಟಾರ್ಟ್ ಅಪ್’ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಹೊಸದಾಗಿ ಉದ್ಯಮ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಂಡುವುದರ ಜೊತೆಗೆ ಯುವಕರಲ್ಲಿ ಉದ್ಯಮಶೀಲತೆ ಬೆಳೆಸಿ ಅವರಿಗೆ ಪೆÇೀತ್ಸಾಹ ನೀಡಿದೆ. ಆ ನಂತರ ತರಬೇತಿಗೊಂಡ ಯುವಕರಿಗೆ ಸರ್ಕಾರವೇ ಬ್ಯಾಂಕ್ ಮುಖಾಂತರ ಸಾಲ ನೀಡುವುದು, ಜೊತೆಗೆ ಇಂಥ ಕಂಪನಿಗೆ ಸರ್ಕಾರದಿಂದ ರಿಯಾಯಿತಿ ನೀಡಲು ಚಿಂತನೆ ನಡೆಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ವಿಶೇಷ ಸಾಲ ಸೌಲಭ್ಯ ನೀಡಿ ಪೆÇೀತ್ಸಾಹ ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಉದ್ಯಮಿಗಳಿಗೆ ಮತ್ತು ಉಚಿತ ತರಬೇತಿ ನೀಡುವುದು. ಅಷ್ಟೇ ಅಲ್ಲದೆ ಇಡೀ ದೇಶದ ತುಂಬ ಔದ್ಯಮಿಕ ಸ್ನೇಹಿ ತೆರಿಗೆ ಪದ್ಧತಿ ಅಳವಡಿಸುವುದು ಅಳವಡಿಸಿವುದು ಹಾಗೂ ಕೇಂದ್ರ ಬಜೆಟ್ ನಲ್ಲಿ ಪ್ರತ್ಯೇಕ ನಿಧಿ ಮೀಸಲಿಡುವುದು ಈ ಯೋಜನೆ ಪ್ರಮುಖ ಅಂಶಗಳಾಗಿವೆ.

ಇನ್ನು ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆ ಮುಖ್ಯ ಉದ್ದೇಶ ಹೊಸ ಹೊಸ ಉದ್ಯಮ ಸ್ಥಾಪನೆ ಮಾಡುವುದರ ಜೊತೆಗೆ ಯುವ ಸಮುದಾಯವನ್ನು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳವುದಾಗಿದೆ. ಹೀಗಾಗಿ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ. ಒಟ್ಟಿನಲ್ಲಿ ಭಾರತದ ಪ್ರತಿ ಹಳ್ಳಿಯೂ ಕೂಡ ವಿಶ್ವಮಟ್ಟದಲ್ಲಿ ಬೆಳೆಯಬೇಕು. ದೇಶದ ಪ್ರತಿಯೊಬ್ಬ ಯುವಕನೂ ಕೂಡ ಸ್ವಂತ ಉದ್ಯೋಗ ಆರಂಭಿಸಬೇಕು ಎನ್ನುವ ಮಹಾದಾಸೆಯೊಂದಿಗೆ ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆ ಜಾರಿಗೆ ಬಂದಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬುಡಕಟ್ಟು ಜನರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಪೆÇ್ರೀತ್ಸಾಹಿಸುವ ಪ್ರಮುಖ ಉದ್ದೇಶದಿಂದ ಸ್ಟ್ಯಾಂಡ್‍ಅಪ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿ ಫಲಾನುಭಿವಿಗಳಿಗೆ (ಉದ್ಯಮಿ) ಕನಿಷ್ಟ 10 ಲಕ್ಷ ರೂಪಾಯಿಯಿಂದ ಗರಿಷ್ಟ 1 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಷೆಡ್ಯೂಲ್ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‍ಗಳ ಮೂಲಕವೂ ಸೌಲಭ್ಯ ಒದಗಿಸಲಾಗುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಯೋಜನೆಯ ಪ್ರಮುಖ ಅಂಶಗಳು:

* ಯಾವುದೇ ನೂತನ ಉದ್ಯಮ ಸ್ಥಾಪನೆಗೆ ಕಾರ್ಮಿಕ ಬಂಡವಾಳ ಸೇರಿದಂತೆ ಕನಿಷ್ಟ 10 ಲಕ್ಷ ರೂ.ಗರಿಷ್ಟ 1 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ.
* ಡೆಬಿಟ್ ಕಾರ್ಡ್ (ರೂಪೇ) ಶ್ರಮಿಕ ಬಂಡವಾಳ ತೆಗೆದುಕೊಳ್ಳಬಹುದು.
* ಸಾಲದಾರರ ಸಾಲ ವಿವರಗಳನ್ನು ನಿರ್ವಹಿಸುವುದು.
* ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಮೂಲಕ ಯೋಜನೆಯ ಮೂಲ ನಿಧಿಯದ 10 ಸಾವಿರ ಕೋಟಿ ರೂಪಾಯಿಯನ್ನು ಉದ್ಯಮಗಳಿಗೆ ಮರುಪೂರೈಕೆ ಮಾಡುವುದು.
* ಎನ್‍ಸಿಜಿಟಿಸಿ(National Credit Guarantee Trustee Company Ltd) ಮೂಲಕ ಸಾಲ ಖಾತರಿಗಾಗಿ 5 ಸಾವಿರ ಕೋಟಿ ರೂ. ಮೂಲ ಧನ ಸಂಗ್ರಹಿಸುವುದು.
* ಸಾಲಗಾರರಿಗೆ ಸಾಲಪೂರ್ವ ತರಬೇತಿ, ಮಾರ್ಕೆಟಿಂಗ್ ಮೊದಲಾದ ಸಮಗ್ರ ಸಹಾಯ ನೀಡುವುದು.
* ಆನ್ ಲೈನ್ ರಿಜಿಸ್ಟ್ರೇಶನ್ ಹಾಗೂ ವಿವಿಧ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆನ್‍ಲೈನ್ ಪೆÇೀರ್ಟಲ್‍ಗೆ ಚಾಲನೆ.
* ಯೋಜನೆಯ ಒಟ್ಟಾರೆ ಉದ್ದೇಶ ಕೃಷಿಯೇತರ ವಲಯದ ಎಸ್ಸಿ, ಎಸ್ಟಿ ವರ್ಗದ ಜನರು ಹಾಗೂ ಮಹಿಳೆಯರಿಗೆ ಬ್ಯಾಂಕ್ ಸಾಲ ಒದಗಿಸುವುದು. ಈಗಾಗಲೇ ಪ್ರಚಲಿತದಲ್ಲಿರುವ ವಿವಿಧ ಇಲಾಖೆಗಳ ನಡುವೆ ಒಪ್ಪಂದ ಮಾಡಿಕೊಳ್ಳುವುದು.

ಸಂಪರ್ಕ ಕೇಂದ್ರಗಳು:

ಯೋಜನೆಯು ಎಸ್‍ಐಡಿಬಿಐ ಮತ್ತು ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಡಿಐಸಿಸಿಐ) ಹಾಗೂ ವಿವಿಧ ಕ್ಷೇತ್ರಗಳ ಸಂಘ ಸಂಸ್ಥೆಗಳು ಸ್ಟ್ಯಾಂಡ್ ಅಪ್ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊಂದಲಿವೆ. ಎಸ್ ಐಡಿಬಿಐ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಟ್ಯಾಂಡ್‍ಅಪ್ ಸಂಪರ್ಕ ಕೇಂದ್ರ ಗಳನ್ನು ತೆರೆಯಲಿದ್ದು, ಯೋಜನೆಯ ಸಮರ್ಥ ಅನುಷ್ಟಾನಕ್ಕೆ ಶ್ರಮವಹಿಸಲಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಭಾರತೀಯ ಮೈಕ್ರೋ ಕ್ರೆಡಿಟ್ (ಎಸ್ ಯುಸಿಸಿ) ಮೂಲಕ 5100 ಇ-ರಿಕ್ಷ ವಿತರಣೆ ಮಾಡಲಾಗುವುದು. ಇದರ ಜತೆಗೆ ಜನಧನ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ, ಅಟಲ್ ಪೆನ್ಶನ್ ಮೊದಲಾದ ಯೋಜನೆಗಳ ಫಲಾನುಭವಿಗಳಿಗೂ ಯೋಜನೆಗಳ ಸೌಲಭ್ಯ ವಿತರಿಸಲಾಗುವುದು.

ಸ್ಟ್ಯಾಂಡ್ ಅಪ್ ಯೋಜನೆ ಅಂಗವಾಗಿ ಸೈಕಲ್ ರಿಕ್ಷ ಓಡಿಸುತ್ತಿದ್ದವರಿಗೆ ಅವರ ಆರ್ಥಿಕ ಮಟ್ಟ ಹೆಚ್ಚಿಸಲು ಇ-ರಿಕ್ಷಾ ವಿತರಿಸಲಾಗುತ್ತದೆ. ಮೊದಲ ಹಂತವಾಗಿ ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾಪೆರ್Çರೇಶನ್ (ಎನ್.ಎಸ್.ಡಿ.ಸಿ) ಇ-ರಿಕ್ಷಾ ಚಾಲನೆ ಬಗ್ಗೆ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸುತ್ತಿದೆ. ಈಗಾಗಲೇ 150 ಮಹಿಳಾ ರಿಕ್ಷಾ ಚಾಲಕರಿಗೆ ತರಬೇತಿ ನೀಡಲಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಗ್ರಾಹಕರು ಓಲಾ ಕ್ಯಾಬ್ ಮೊಬೈಲ್ ಆಪ್ ಮೂಲಕವೂ ಇ-ರಿಕ್ಷ ಸೇವೆ ಬುಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ, ಇದಕ್ಕಾಗಿ ಆನ್‍ಲೈನ್ ಮೂಲಕವೂ ಪಾವತಿ ಮಾಡಬಹುದಾಗಿದೆ.

ದಲಿತರು ಕೆಲಸಕ್ಕಾಗಿ ಬೇರೊಬ್ಬರ ಬಳಿ ಹೋಗಬಾರದು, ಉದ್ಯಮ ಆರಂಭಿಸಿ ಸ್ವಂತ ಕಾಲ ಮೇಲೆ ನಿಲ್ಲುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾಂಡ್ ಅಪ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಿಂದಾಗಿ ಉದ್ಯಮಿಯಾಗಲು ಬಯಸುವ ದಲಿತರಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ಒದಗಿಸಲಾಗುತ್ತದೆ. ಇದಕ್ಕೆ ಪ್ರಧಾನ ಮಂತ್ರಿಯವರೇ ಭದ್ರತೆ ನೀಡುವುದಾಗಿ ಘೋಷಿಸಿದ್ದು, ಸರ್ಕಾರದ ಇಂಥಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ!!

– ಅಲೋಖಾ

Editor Postcard Kannada:
Related Post