X

ಬ್ರೇಕಿಂಗ್ !! ಸಿಡಿದೆದ್ದ ಜೆಡಿಎಸ್ ಮುಖಂಡ ಬಿಜೆಪಿ ಗೆ ಜಂಪ್..!! ಕೈಕೊಟ್ಟರಂತೆ ಕುಮಾರಣ್ಣ.!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಲಸೆ ಕಾರ್ಯಕ್ರಮವೂ ಬಹಳ ಜೋರಾಗಿಯೇ ನಡೆಯುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗುತ್ತಿದ್ದಂತೆ ಪಕ್ಷ ತೊರೆಯುವ ನಾಯಕರ ಸಂಖ್ಯೆಯೂ ಹೆಚ್ಚುತ್ತಿದೆ. ಈಗಾಗಲೇ ಕಾಂಗ್ರೆಸ್ ನಿಂದ ಹಲವಾರು ಸಚಿವರು ಮತ್ತು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಇದೀಗ ಜೆಡಿಎಸ್ ಗೂ ಪಕ್ಷಾಂತರ ಪರ್ವದ ಬಿಸಿ ತಟ್ಟಿದೆ. ಸಿದ್ದರಾಮಯ್ಯನವರ ಆಡಳಿತಕ್ಕೆ ಅಸಮಧಾನಗೊಂಡು ನಾಯಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದರೆ, ಇತ್ತ ಕುಮಾರಸ್ವಾಮಿ ಮತ್ತು ದೇವೇಗೌಡರ ರಾಜಕೀಯ ನಾಟಕಕ್ಕೆ ಬೇಸತ್ತ ಜೆಡಿಎಸ್ ನಾಯಕರೂ ಕೂಡ ಪಕ್ಷ ಬಿಟ್ಟು ತೆರಳುತ್ತಿದ್ದಾರೆ.!

ಈಗಾಗಲೇ ಜೆಡಿಎಸ್ ನ ಪ್ರಭಾವಿ ನಾಯಕರಾದ ನಡೆದ ರಾಜ್ಯ ಸಭಾ ಚುನಾವಣೆಯಲ್ಲೂ ಸೋತು ನಿರಾಶೆಯಾಗಿದ್ದ ಜೆಡಿಎಸ್ ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಈವರೆಗೆ ಜೆಡಿಎಸ್ ವಿರುದ್ಧ ಬಂಡಾಯ ಸಾರಿದ್ದ ಪಕ್ಷದ ಪ್ರಭಾವಿ ನಾಯಕರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸ್ಪೀಕರ್ ಕೆ ಬಿ ಕೋಳೀವಾಡ ಗೆ ರಾಜೀನಾಮೆ ಪತ್ರ ಸಲ್ಲಿಸಿದ ಜೆಡಿಎಸ್ ನ ಎಚ್.ಸಿ ಬಾಲಕೃಷ್ಣ , ಅಖಂಡ ಶ್ರೀನಿವಾಸ್ ಮೂರ್ತಿ, ಇಕ್ಬಾಲ್ ಅನ್ಸಾರಿ , ಭೀಮಾನಾಯ್ಕ್ ಪಕ್ಷದಿಂದ ಹೊರ ಬಿದ್ದಿದ್ದರು.!

ಜೆಡಿಎಸ್ ಮೇಯರ್ ಪಕ್ಷಕ್ಕೆ ಗುಡ್ ಬೈ..!

ಜೆಡಿಎಸ್ ನಲ್ಲಿ ಇರುವುದೇ ಬೆರಳೆಣಿಕೆಯಷ್ಟು ನಾಯಕರು. ಅದರಲ್ಲೂ ಒಂದೊಂದೇ ವಿಕೆಟ್ ಉರುಳುತ್ತಿದ್ದು ಜೆಡಿಎಸ್ ಗೆ ಭಾರೀ ತಲೆನೋವಾಗಿದೆ. ರಾಜ್ಯದಲ್ಲಿ ಕಿಂಗ್ ಮೇಕರ್ ಆಗಲು ಪ್ರಯತ್ನಿಸುತ್ತಿದ್ದ ಜೆಡಿಎಸ್ ಗೆ ಇದೀಗ ತನ್ನ ಪಕ್ಷದ ಮುಖಂಡರೇ ಕೈ ಕೊಡುತ್ತಿರುವುದು ಮನುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವಂತಾಗಿದೆ. ಜೆಡಿಎಸ್ ನ ಮೇಯರ್ ಸಂದೇಶ್ ಸ್ವಾಮಿ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು , ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ಕೂಡಾ ಕಿಡಿಕಾರಿದ್ದು , ಪಕ್ಷ ಬಿಡುವವರು ಯಾರನ್ನೂ ತಡೆಯುವುದಿಲ್ಲ. ಹೋಗುವವರು ಧಾರಾಳವಾಗಿ ಹೋಗಬಹುದು ಎಂದಿದ್ದಾರೆ.

ಚುನಾವಣಾ ಹೊಸ್ತಿಲಲ್ಲೇ ಪಕ್ಷಾಂತರ ಪರ್ವ ಜೋರಾಗಿದ್ದು , ಕಾಂಗ್ರೆಸ್ ಮತ್ತು ಜೆಡಿಎಸ್ ನ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅದೇ ಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.!

source: tv9

–ಅರ್ಜುನ್

 

Editor Postcard Kannada:
Related Post