X

ಭಾರತದ ಅಭಿವೃದ್ಧಿ‌ಯೇ ಜನಸೇವಕನ ಕನಸು


2012 ರಿಂದೀಚೆಗೆ ಭಾರತ ವಿಶ್ವಕ್ಕೆ ಅತ್ಯಂತ ಪ್ರಿಯ ರಾಷ್ಟ್ರ ಎಂದೆನಿಸಿದೆ. ಕಾರಣ ಆ ವರೆಗೆ ಭಾರತ ಒಂದು ಬಡ ರಾಷ್ಟ್ರ. ಭಾರತದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂದು ವಿಶ್ವ ಅಂದುಕೊಂಡಿತ್ತು. ಆದರೆ ಭಾರತದ ಆಡಳಿತ ಚುಕ್ಕಾಣಿ ಧೀಮಂತ ನಾಯಕ ಪ್ರಧಾನಿ ಮೋದಿ ಅವರ ಕೈ ಸೇರಿದ ಬಳಿಕ ಇಡೀ ದೇಶದ ಬಗ್ಗೆ ವಿಶ್ವಕ್ಕೆ ಆ ವರೆಗಿದ್ದ ಅಭಿಪ್ರಾಯ‌ವೇ ಬದಲಾಗಿ ಹೋಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೇವಲ ವಿಶ್ವಕ್ಕೆ ಭಾರತದ ಶಕ್ತಿ ಅರಿವಾಗಿದ್ದಲ್ಲ. ಬದಲಾಗಿ ಭಾರತದಲ್ಲೇ ಇದ್ದುಕೊಂಡು, ಭಾರತದ ಬಗ್ಗೆ ಕೀಳರಿಮೆ ಹೊಂದಿದ್ದವರಿಗೂ ಅತ್ಯಾಶ್ಚರ್ಯ ಎಂಬ ರೀತಿಯಲ್ಲಿ ವಿಶ್ವದಲ್ಲೇ ಭಾರತ ಬಹು ಬೇಡಿಕೆಯ ರಾಷ್ಟ್ರವಾಗಿ ಬದಲಾಯಿತು. ಹೌದು ಇಂದು ಇಡೀ ಪ್ರಪಂಚಕ್ಕೆ ಒಂದರ್ಥದಲ್ಲಿ ಹಿಂದೂಸ್ಥಾನ ಆಪತ್ಬಾಂಧವನಾಗಿ ಆಪ್ತವಾಗಿದೆ. ಇದಕ್ಕೆ ಸಾಕ್ಷಿ ,ಕೊರೋನಾ‌ದಂತಹ ಕಠಿಣ ಸಂದರ್ಭದಲ್ಲಿ‌ಯೂ ನಮ್ಮ ದೇಶದ ಜನರ ಜೊತೆಗೆ, ಇಡೀ ವಿಶ್ವದ ಆರೋಗ್ಯ ಕಾಳಜಿಯನ್ನು ಭಾರತ ವಹಿಸಿಕೊಂಡದ್ದು. ಭಾರತೀಯರು ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆ ಮುಂದಿಡುವಂತೆ ಮಾಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ದ ವಿವಿಧ ಯೋಜನೆಗಳು ಎಂದರೆ ಅತಿಶಯವಾಗಲಾರದು.

ಭಾರತದ ಅಭಿವೃದ್ಧಿ ಪ್ರಧಾನಿ ಮೋದಿ ಕನಸು

ಪ್ರಧಾನಿ ಮೋದಿ ಅವರ ಆಡಳಿತ ವೈಖರಿಯೇ ಹಾಗೆ. ಭಾರತ ಭಾರತೀಯರದ್ದು ಎಂಬಂತೆ, ತಾವೊಬ್ಬ ‘ಚೌಕೀದಾರ’ ಎಂಬಂತೆ ಕೆಲಸ ಮಾಡುತ್ತಲೆ ಭಾರತದ ಮಕ್ಕಳು, ಯುವಕರು, ಮುದುಕರೆನ್ನದೆ, ಪುರುಷರು, ಮಹಿಳೆಯರೆನ್ನದೆ ಎಲ್ಲರಿಗೂ ‘ನಾಯಕನೆಂದರೆ ಹೀಗೆಯೇ ಇರಬೇಕು’ ಎನ್ನುವ ಭಾವನೆ ಹುಟ್ಟಿಸಿದವರು. ನಿಮ್ಮ ಮಕ್ಕಳು ಯಾರಂತಾಗಬೇಕು ಎಂದು ಹೆತ್ತವರನ್ನು ಪ್ರಶ್ನೆ ಮಾಡಿದಾಗೆಲ್ಲಾ, ಅವರಲ್ಲಿ ಹಲವರು ನಮಗೆ ಪ್ರಧಾನಿ ಮೋದಿ ಅವರಂತಹ ಮಕ್ಕಳು ಜನಿಸಬೇಕು ಎಂಬ ಭಾವನೆಯನ್ನು ತಮ್ಮ ಜೀವನ, ಜೀವನ ಶೈಲಿಯ ಮೂಲಕವೇ ಸೃಜಿಸುವಂತೆ ಮಾಡಿದವರು.

ಇಂದು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರುವತ್ತ ಎಲ್ಲಾ ಪ್ರಯತ್ನ‌ಗಳು ನಡೆಯುತ್ತಿದೆ ಎಂದಾದರೆ ಅದರ ಹಿಂದಿನ ಶಕ್ತಿ ‘ಪ್ರಧಾನಿ ನರೇಂದ್ರ ಮೋದಿ’ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೋದಿ ಓರ್ವ ಜನಪ್ರಿಯ ವ್ಯಕ್ತಿ ಶಕ್ತಿ‌ಯಾಗಿದ್ದಾರೆ ಎಂಬುದಕ್ಕೆ ಅವರು ಭೇಟಿ ನೀಡುವಲ್ಲೆಲ್ಲಾ ಅವರನ್ನು ನೋಡಲು ಸೇರುವ ಜನಸಮೂಹವೇ ಸಾಕ್ಷಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೋದಿ ಆಡಳಿತದಲ್ಲಿ ಭಾರತ ಹೀಗೆ ಬದಲಾಯ್ತು

ಕುಟುಂಬ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿದ್ದ ಭಾರತ ನಗುವಂತಾಗಿದ್ದು ಮೋದಿ ಎನ್ನುವ ಮ್ಯಾಜಿಕ್‌ನಿಂದ. ಮೋದಿ ಅಧಿಕಾರಕ್ಕೇರಿದ ನಂತರ ದೇಶದ ಬಡ ಜನರಿಗೂ ಬ್ಯಾಂಕ್ ಖಾತೆ ಬಂತು, ಮನೆ ಮನೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ‌ಗಳ ನಿರ್ಮಾಣ, ಅರ್ಹರಿಗೆ ಸೂರು ಭಾಗ್ಯ, ಕೃಷಿಕರ ಅಭಿವೃದ್ಧಿ‌ಗೆ ನಾನಾ ಯೋಜನೆಗಳು, ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳು, ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಯೋಜನೆಗಳು, ಉಜ್ವಲ ಯೋಜನೆ, ಒನ್ ನೇಷನ್ – ಒನ್ ರೇಷನ್ ಯೋಜನೆ, ಸ್ವ ಉದ್ಯಮದ ಕನಸು ಹೊತ್ತವರಿಗೆ ಸಾಲ ಸೌಲಭ್ಯ, ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ನೆರವಾಗಲು ಸಾಲ ಸೌಲಭ್ಯ, ಆರೋಗ್ಯ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ, ದೇಶೀಯ ವಸ್ತು‌ಗಳ ತಯಾರಿಕೆಗೆ ಉತ್ತೇಜನ, ಯುವಜನರಿಗೆ ಉದ್ಯಮಿಗಳಾಗಲು ಪೂರಕ ನೆರವು, ಸ್ಟಾರ್ಟ್ ಅಪ್‌ಗಳಿಗೆ ಬೆಂಬಲ, ಬಹಳ ವಿಶೇಷ‌ವಾಗಿ ದೇಶವನ್ನು ಕಾಯುವ ಯೋಧರಿಗೆ ಸಿಗಬೇಕಾದ ನೈಜ ಗೌರವವನ್ನು ತಂದು ಕೊಡಲು ಶ್ರಮಿಸಿದ, ಇವೆಲ್ಲವುಗಳಿಗಾಗಿ ಯೋಜನೆಗಳನ್ನು ರೂಪಿಸಿದ ಏಕೈಕ ವ್ಯಕ್ತಿ ಮೋದಿ ಎನ್ನುವುದು ನಿಸ್ಸಂದೇಹ. ಇನ್ನು ಮೋದಿ ನೇತೃತ್ವದ ಸರ್ಕಾರ ಆಡಳಿತ ಹಿಡಿದ ಬಳಿಕ ದೇಶದ ಸಾರ್ವಜನಿಕ ಸಂಪರ್ಕ ವಲಯ, ರಸ್ತೆ, ರೈಲ್ವೆ, ವಿಮಾನ ಸೇವೆಗಳಲ್ಲಿ‌ಯೂ ಅದ್ಭುತ ಬೆಳವಣಿಗೆಗಳು ಮೋದಿ ಅವರ ಅಭಿವೃದ್ಧಿ ಪರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

ಜತೆಗೆ ಕಾಶ್ಮೀರ‌ವನ್ನು ಭಾರತದ ಒಂದು ಭಾಗವೇ ಎಂಬುದನ್ನು ಮನವರಿಕೆ ಮಾಡಿಸಿದ ಆರ್ಟಿಕಲ್ 370 ರದ್ದತಿಯೂ ಮೋದಿ ಒಬ್ಬರು ಭರವಸೆಯ ನಾಯಕ. ಭಾರತವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಹೆಚ್ಚಿನ ಭಾರತೀಯರು ಅರಿತಿದ್ದಾರೆ. ಹಾಗೆಯೇ ಹಲವು ಜನರು ಅವರನ್ನು ಮಾದರಿ ಎಂಬುದಾಗಿ ನಂಬಿದ್ದಾರೆ. ಅವರ ನಂಬಿಕೆ‌ಯನ್ನು ಪ್ರತಿ ಬಾರಿಯೂ ಗೆಲ್ಲಿಸುವ ಕೆಲಸ ನೆಚ್ಚಿನ ಜನ ನಾಯಕನಿಂದಾಗುತ್ತಿದೆ ಎನ್ನುವುದು ಸತ್ಯ.

ಬೆಂಗಳೂರಲ್ಲಿಂದು ಮೋದಿ ಮೋಡಿ

ಅಭಿವೃದ್ಧಿ ಹಾದಿಯಲ್ಲಿ ನಿಂತು ನಿಂತು ಸಾಗುವ ಸಂದರ್ಭ ಅಂತ್ಯವಾಗಿದೆ. ಇನ್ನೇನಿದ್ದರೂ ಅಭಿವೃದ್ಧಿ ಪಥದಲ್ಲಿ ಮಿಂಚಿನ ನಾಗಾಲೋಟ ಭಾರತದ್ದಾಗಲಿದೆ ಎಂಬುದು ಪ್ರಧಾನಿ ಮೋದಿ ಅವರ ಮನದಾಳದ ಮಾತು. ಈ ಮಾತುಗಳನ್ನು ಅವರು ಬೆಂಗಳೂರಿನ‌ಲ್ಲಿಂದು ನಗರದ ನಿರ್ಮಾತೃ ಕೆಂಪೇಗೌಡ‌ರ ಪ್ರತಿಮೆ ಅನಾವರಣ ಮಾಡಿದ ಸಂದರ್ಭದಲ್ಲಿ ನುಡಿದಿದ್ದಾರೆ. ಹಾಗೆಯೇ ಬೆಂಗಳೂರಿಗೆ ವಂದೇ ಭಾರತ್ ರೈಲು ಸೇವೆಗೂ ಚಾಲನೆ ನೀಡಿದ್ದಾರೆ. ಈ ರೈಲು ಸ್ವದೇಶಿ ನಿರ್ಮಿತವಾಗಿದ್ದು, ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಕರ್ನಾಟಕ‌ದ ಜನತೆಗೆ ಪರಿಚಯಿಸುವ ಕಾರ್ಯ ಮಾಡಲಿದೆ. ಹಾಗೆಯೇ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಸಹ ಲೋಕಾರ್ಪಣೆ ಮಾಡಿದ್ದು, ಇದು ಭಾರತವನ್ನು ವಿಶ್ವಕ್ಕೆ ಸಂಪರ್ಕ ಮಾಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಹೀಗೆ ದೇಶದ ಪ್ರತಿಯೊಂದು ರಾಜ್ಯ, ರಾಜ್ಯದ ಹಳ್ಳಿ ಹಳ್ಳಿಗಳಿಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ತಲುಪುವಂತಾಗಿದ್ದು, ತಳ ಮಟ್ಟದಿಂದಲೇ ಭಾರತವನ್ನು ಶಕ್ತಿಯುತ ರಾಷ್ಟ್ರವಾಗಿ ನಿರ್ಮಾಣ ಮಾಡುವಲ್ಲಿ ಮೋದಿ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಧುನಿಕ ಮತ್ತು ಆಧ್ಯಾತ್ಮ ಗಳೆಯಡರಲ್ಲಿಯೂ ಭಾರತ ಇಂದು ಅಮೋಘವಾಗಿ ಮಿಂಚುವಂತಾಗಿದೆ. ಇದಕ್ಕೆ ಮತ್ತೊಂದು ದಾಖಲೆ ರಾಮ ಮಂದಿರ ನಿರ್ಮಾಣ.

ಇಂದು ವಿವಿಧ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿ‌ಯಲ್ಲಿ ಪ್ರಗತಿ ಸಾಧಿಸಿದೆ. ಅಂದು ಮಹಾತ್ಮ‌ರು ಕಂಡ ಕನಸುಗಳಿಗೆ ಜೀವ ತುಂಬುವ ಕೆಲಸವನ್ನು ಮೋದಿ ಎಂಬ ಸಂತ ಮಾಡುತ್ತಿದ್ದಾರೆ. ಸಾಮಾಜಿಕ ಸಮಾನತೆಯ ಕನಸುಗಳಿಗೂ ಮೋದಿ ಜೀವ ತುಂಬುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
Post Card Balaga:
Related Post