X

ಭಾರತ ಸ್ವತಂತ್ರ್ಯ ರಾಷ್ಟ್ರವೇ?! ಇನ್ನೂ ಸಿಕ್ಕಿಲ್ಲ ನಿಜವಾದ ಸ್ವಾತಂತ್ರ್ಯ…!

ಹಲವು ಕಡೆ ಫಲಕಗಳನ್ನು ಈಗಾಗಲೇ ನೇತುಹಾಕಿದ್ದಾರೆ. “India Celebrating 70 years of Independence…”. ಇದನ್ನು ನೋಡಿದಾಗಲೆಲ್ಲ ಆಶ್ಚರ್ಯವಾಗುತ್ತದೆ. ಅರೇ.. ಇಷ್ಟು ಬೇಗ ಭಾರತಕ್ಕೆ ಸ್ವಾತಂತ್ರ್ಯ‌ ಲಭಿಸಿ 70 ವರ್ಷಗಳಾಯಿತಾ?? ಗುಲಾಮಗಿರಿಯನ್ನುವುದು ಹೊರಟು ಹೋಗಿ ಅರ್ಧ ಶತಮಾನಕ್ಕಿಂತಲೂ ಜಾಸ್ತಿಯಾಯಿತೇ?? ಹಾಗಾದರೆ ಬ್ರಿಟಿಷರು ತಯಾರಿಸಿದ ಯೋಜನೆಗಳು ಇನ್ನೂ ಭಾರತದಲ್ಲೇಕಿವೆ?? ಅವುಗಳನ್ನೇ ಯಾಕೆ ನಾವು ಪಾಲಿಸುತ್ತಿದ್ದೇವೆ??

ಅನೇಕ ಜನರು ಈ ವಿಚಾರದ ಕುರಿತಾಗಿ ಗಮನಿಸಿರಲಿಕ್ಕಿಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ಮುಂಚೆ ಒಂದು ಕಾನೂನನ್ನು ಸಿದ್ಧಪಡಿಸಿಯೇ ತೆರಳಿದ್ದರು. ಬಹುಶ: ಅವರು ಭಾರತಕ್ಕೆ ವಾಪಾಸು ಆಗಮಿಸುವ ಚಿಂತನೆ ಮಾಡಿಯೇ ಇಂತಹ ಒಂದು ಕಾನೂನನ್ನು ಭಾರತದಲ್ಲಿ ಜಾರಿಗೊಳಿಸಿದ್ದಾರೋ ಅರಿಯದು. ಆದರೆ ಅದಕ್ಕೆ ಒಂದು ಸಿದ್ಧತೆಯನ್ನು‌ ಮಾಡಿಯೇ ಅವರು ತೆರಳಿದ್ದರು. ಅದುವೇ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಚ್ 1947…! ಹೌದು. ಇಂತಹದ್ದೊಂದು ಕಾನೂನ್ನು ಜಾರಿಗೆ‌ತಂದವರು ಕುತಂತ್ರಿ ಬ್ರಿಟಿಷರು.

1945ರ ಜುಲೈ ಮೂರನೇ ತಾರೀಖಿನಂದು ಲಂಡನ್ನಿನ ಹೌಸ್ ಆಫ್ ಪಾರ್ಲಿಮೆಂಟಿನಲ್ಲಿ ಅಂಗೀಕರಿಸಲಾದ ಈ ಕಾನೂನನ್ನು ಆಗಸ್ಟ್ 14, 1947 ರ ಮಧ್ಯರಾತ್ರಿಯಿಂದ‌ ಭಾರತದಲ್ಲಿ ಜಾರಿಗೊಳಿಸಲಾಯಿತು. ಈ ಕಾನೂನನ್ನು ಅಷ್ಟಾಗಿ ವಿವರಿಸುವುದಕ್ಕೂ ಒಂದು ಬಲವಾದ ಕಾರಣವಿದೆ. ಇದೇ ಕಾನೂನು ಪಕ್ಕದಲ್ಲಿರುವ ಪಾಕಿಸ್ತಾನ ನಮ್ಮ ಮೇಲೆ ಮೂರು ಬಾರಿ ಆಕ್ರಮಣ ಮಾಡುವುದಕ್ಕೆ ಮುನ್ನುಡಿಯಾಯಿತು, ಅದೇ ಕಾನೂನು ಸುಂದರವಾದ‌ ಕಾಶ್ಮೀರವನ್ನು ಕುರೂಪಿಯನ್ನಾಗಿಸಿತು. ಇದೇ ಕಾನೂನು ಭಾರತದ ಸಾವಿರಾರು ದೇಶಭಕ್ತರ ಕನಸುಗಳನ್ನು ಹಿಮಾಲಯದ‌ ಬುಡದಲ್ಲಿ ಮುಚ್ಚಿಹಾಕಿತು. ಹೌದು.. ಇದೇ ಕಾನೂನು ಇವತ್ತಿನ ಈ ಕ್ಷಣದವರೆಗೂ ಜಾರಿಯಲ್ಲಿದೆ.

ಬ್ರಿಟಿಷರು ತೆರಳುವ ಮುನ್ನ ತಮ್ಮ ಚಿನ್ನದಂತ‌ ಕಾನೂನಾದ ‘ವಿಭಜಿಸಿ-ಆಳು’ ನೀತಿಯನ್ನು ವ್ಯಯಸ್ಥಿತವಾಗಿ ನಮ್ಮ ಮೇಲೆ ಪ್ರಯೋಗಿಸಿದ್ದರು. ಆ ಅಸ್ತ್ರವೇ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್….!!

ಈ ಕಾನೂನಲ್ಲಿ ಅಷ್ಟು ವಿರೋಧ ಮಾಡುವ ವಿಚಾರಗಳೇನಿವೆಯೆಂಬ ಪ್ರಶ್ನೆ ನಮ್ಮನ್ನು ಕಾಡಬಹುದು. ಇವೆ. ಹತ್ತಾರು ಗೋಜಲು ಗೋಜಲಾದ ಸಂಗತಿಗಳು ಅದರಲ್ಲಿ ಅಡಕವಾಗಿವೆ. ಮೌಂಟ್ ಬ್ಯಾಟೆನ್ ಬೀಸಿದ ಬಲೆಗೆ ಭಾರತದ‌ ಎರಡು ಬಹಳ ದೊಡ್ಡ‌ ಪಕ್ಷಗಳು ಬಿದ್ದಿದ್ದವು. ಅವರು ಹೇಳಿದ ಸರ್ವ ವಿಚಾರಕ್ಕೂ ಸುಮ್ಮನೆ ತಲೆಯಾಡಿಸಿದವು, ಮರುಪ್ರಶ್ನಿಸದೆ.. ಯಾಕೆಂದರೆ ಅವೆರಡಕ್ಕೂ‌ ದೇಶದ ಹಿತ ಪ್ರಮುಖವೆನಿಸಲಿಲ್ಲ ,ಬದಲಾಗಿ ಅಧಿಕಾರ, ಆಡಳಿತವೇ ಮುಖ್ಯವಾಗಿತ್ತು. ಅದರಂತೆಯೇ ಇಂಡಿಯನ್ ಇಂಡಿಪೆಂಡೆನ್ಸ್‌ ಎಂಬ ಕಾನೂನು ಅಧಿಕೃತವಾಗಿ ನಮ್ಮ ಸಂವಿಧಾನಕ್ಕೆ ಸೇರ್ಪಡೆಯಾಯಿತು.

ಅದರಲ್ಲಿ ನಮೂದಿಸಲಾಗಿರುವ ಪ್ರಮುಖ‌ ವಿಚಾರವೆಂದರೆ : ಭಾರತ‌ ಮತ್ತು ಪಾಕಿಸ್ತಾನಗಳೆರಡೂ ಸ್ವತಂತ್ರ ರಾಷ್ಟ್ರಗಳಾಗಿರದೇ ಎರಡು ಡೊಮಿನಿಯನ್ ರಾಜ್ಯಗಳಾಗಿರುವುದು!!! ಪ್ರಪಂಚದ ಯಾವುದೇ ಶಬ್ದಕೋಶವನ್ನು ತೆರೆದು ನೋಡಿ. ಡೋಮಿನಿಯನ್ ಸ್ಟೇಟ್ಸ್ ಎಂದರೆ ರಾಜ ಪ್ರಭುತ್ವದ ಎರಡು ಸ್ವತಂತ್ರ ರಾಜ್ಯಗಳೆಂಬ ಅರ್ಥವನ್ನು ಕೊಡುತ್ತವೆ. ಅದರರ್ಥ ಬಹಳ ಸುಲಭ.. ಆ ನಿಯಮದ‌ ಪ್ರಕಾರ, ನಾವು ಇವತ್ತಿಗೂ ಲಂಡನ್ ನ ಎರಡು ‘ಚಿಕ್ಕ ರಾಜ್ಯ’ಗಳಾಗಿ ಉಳಿದಿದ್ದೇವೆ.

ಅವರ ನಿಯಮಗಳಲ್ಲಿ ಇನ್ನೊಂದು ವಿಚಾರವನ್ನೂ ನಮೂದಿಸಲಾಗಿದೆ. ಸ್ವತಂತ್ರ ಭಾರತದಲ್ಲಿರುವ ಸ್ವತಂತ್ರ ರಾಜರುಗಳು ಇಷ್ಟವಾದರೆ ಭಾರತಕ್ಕೆ ತಮ್ಮ ಪ್ರಾಂತ್ಯವನ್ನು ಸೇರಿಸಬಹುದು, ಇಲ್ಲವಾದರೆ ಪಾಕಿಸ್ತಾನಕ್ಕೂ ಸೇರಿಕೊಳ್ಳಬಹುದು. ಎರಡೂ ಬೇಡವಾದರೆ ತಮ್ಮಷ್ಟಕ್ಕೆ ತಾವೇ ಸ್ವತಂತ್ರವಾಗಿಯೂ ಉಳಿಯಬಹುದು.

ಆದ‌ ಕಾರಣವೇ ಜಮ್ಮು-ಕಾಶ್ಮೀರದ ರಾಜನಾಗಿದ್ದ ಹರಿಸಿಂಗ್ ಯಾವ ರಾಷ್ಟ್ರಕ್ಕೂ ಸೇರದೆ ಸ್ವತಂತ್ರವಾಗಿ ಆಳುತ್ತಿದ್ದ. ಈ ಅವಕಾಶವನ್ನು‌ ಉಪಯೋಗಿಸಿದ ಪಾಕಿಸ್ತಾನ ಜಮ್ಮು ಕಾಶ್ಮೀರದ‌ಮೇಲೆ ದಾಳಿ ಮಾಡಿತು. ಹರಿಸಿಂಗ್ ಎಷ್ಟಾದರೂ ಸಣ್ಣ ಪ್ರಾಂತ್ಯದ ರಾಜನಾಗಿದ್ದ. ಹಾಗಾಗಿ ಅವನ ಸೇನೆ ಮೂರೇ ದಿನದಲ್ಲಿ ಶರಣಾಗಿತ್ತು. ಅದೇ ಸಮಯಕ್ಕೆ ಆಗಿನ ಗೃಹಮಂತ್ರಿಯಾಗಿದ್ದ ಸರ್ದಾರ್ ಪಟೇಲರಿಗೆ ರಾಜಾ ಹರಿಸಿಂಗ್ ರಿಂದ ಮೌಖಿಕ ಸಂದೇಶವೋಂದು ಬಂದಿತ್ತು.

” ನಾವೀಗ ಕಷ್ಟದಲ್ಲಿದ್ದೇವೆ. ನಮ್ಮನ್ನು ರಕ್ಷಿಸಿ. ಎಷ್ಟಾದರೂ ನಾವು ನಿಮ್ಮವರು. ಕಾಶ್ಮೀರವು ನಿಮ್ಮದೇ..!” ಪಟೇಲರು ಒಪ್ಪಲಿಲ್ಲ. “ಇದೆಲ್ಲಾ ಬೇಕಾಗಿಲ್ಲ. ಬೇಕಾದರೆ ನಿಮ್ಮನ್ನು ರಕ್ಷಿಸಬಲ್ಲೆ. ಆದರೆ ಮುಂದೆ ಭಾರತದೊಂದಿಗೆ ನೀವು ಸೇರುತ್ತೀರೆಂದು ಹೇಗೆ ನಂಬಲಿ? ಅದಕ್ಕಾಗಿ ಲಿಖಿತವಾಗಿ ಬರೆದು ಸಹಿ ಮಾಡಿ” ಹಾಗೆಂದು ಹೇಳಿದರು ಪಟೇಲರು. ಹರಿಸಿಂಗ್ ಒಪ್ಪಿ ಹಾಗೇ ನಡೆದ. ನಂತರ ಭಾರತೀಯ ‌ಸೇನೆ ಪಾಪಿಗಳನ್ನು ಓಡಿಸಿ ಕಾಶ್ಮೀರವನ್ನು ಸ್ವತಂತ್ರವಾಗಿಸಿತು. ಅಷ್ಟೇ ಅಲ್ಲದೆ ಹರಿಸಿಂಗ್ ರ ಆಶಯದಂತೆ ವಿಶೇಷ ಕಾನೂನನ್ನೂ ಜಾರಿಗೊಳಿಸಲಾಯಿತು. ಒಂದೇ ರಾಷ್ಟ್ರದಲ್ಲಿ ಎರಡು ದೇಶ ನಿರ್ಮಾಣವಾದುದು ನಮ್ಮ ದು:ಸ್ಥಿತಿಯಲ್ಲವೇ? ಒಂದೇ ದೇಶ, ಆದರೆ ಎರಡು ಕಾನೂನು, ಎರಡು ಧ್ವಜ.. ಛೇ..

ಇಷ್ಟೆಲ್ಲಾ ಅನಾಹುತಗಳಾಗಲು ಕಾರಣವೇನು ಗೊತ್ತೇ?? ಅದೇ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್. ಭಾರತದ ನಾಯಕರು ಮನಸ್ಸು ಮಾಡಿದ್ದರೆ 1962 ರಲ್ಲಿ ಟಿಬೇಟ್ ಅನ್ನು , 1947 ರಲ್ಲಿ ನೇಪಾಳ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನೂ ಭಾರತದೊಡನೆ ವಿಲೀನಗೊಳಿಸಿ ಮತ್ತೆ‌ ಅಖಂಡ ಭಾರತವನ್ನು ನಿರ್ಮಿಸಬಹುದಿತ್ತು. ಆದರೆ ನಮ್ಮ ದುರಾದೃಷ್ಟ.. ಹಾಗಾಗಲೇ ಇಲ್ಲ.

ಇಷ್ಟೆಲ್ಲಾ‌ ಅಪದ್ಧವಾದರೂ ಇಂತಹ ಕಾನೂನು ಜಾರಿಯಲ್ಲಿರುವುದು ಎಷ್ಟು ಸರಿ? ಸ್ವತಂತ್ರ ಲಭಿಸುವ ಸಂದರ್ಭದಲ್ಲಿ ಆಚರಿಸುವ‌ ಸಂಭ್ರಮದಲ್ಲಿ ಇದೆಲ್ಲವನ್ನೂ ಯೋಚಿಸಲೂ ಸಮಯವಿರಲಿಲ್ಲ.. ನೂರೆಂಟು ಸಮಸ್ಯೆಗಳಿದ್ದವು. ಯುದ್ಧ ಭೀತಿಯಿತ್ತು. ದೇಶ ಕಟ್ಟುವ ಸಡಗರವಿತ್ತು. ಸರಿ. ಆದರೆ ಇವತ್ತು..?? ನಾಯಕರು ಯೋಚಿಸಬೇಕಾಗಿದೆ..

 

ಒಪ್ಪೋಣ.. ಭಾರತ ಹಾಗೂ ಪಾಕಿಸ್ತಾನಕ್ಕೆ ಸ್ವತಂತ್ರ ಕಾನೂನನ್ನು ರಚಿಸುವ ಅಧಿಕಾರವಿದೆ.. ಆದರೆ ಸಂವಿಧಾನದ ಪ್ರಕಾರ ನಾವು ಬ್ರಿಟನ್ ರಾಣಿಯ ಆಳ್ವಿಕೆಯಲ್ಲಿರುವ ಸ್ವತಂತ್ರ ದೇಶ. ಅದರ್ಥ ನಾವು ಸ್ವತಂತ್ರವಾದರೂ ಗುಲಾಮರೆಂದಲ್ಲವೇ?? ನಿಜವಾದ ಸ್ವಾತಂತ್ರ್ಯ ಲಭಿಸುವ ನಿಟ್ಟಿನಲ್ಲಿ ನಾವು- ನಮ್ಮ ನಾಯಕರು‌ ಚಿಂತಿಸಬೇಕಾಗಿದೆ.

– ವಸಿಷ್ಠ

Editor Postcard Kannada:
Related Post