X

ಮಹದಾಯಿ ವಿಚಾರದಲ್ಲಿ, ಕರ್ನಾಟಕದಲ್ಲಿ ಮೊಸಳೆ ಕಣ್ಣೀರು ಹಾಕಿ ಗೋವಾ ಕಾಂಗ್ರೆಸ್ ಅನ್ನು ಛೂ ಬಿಡುತ್ತಿರುವ ಸಿದ್ಧರಾಮಯ್ಯ!

ಮಹದಾಯಿಯ ಕಿಚ್ಚು ಇವತ್ತು ನಿನ್ನೆಯದೇನಲ್ಲ! ಯಾವುದೋ ಒಂದಷ್ಟ ಹುಡುಗರು ನಡೆಸುವ ಆವೇಶದ ಕೆಲವೇ ಘಂಟೆಗಳಲ್ಲಿ ಮುಗಿದುಬಿಡುವಂತಹ ಪ್ರತಿಭಟನೆಯೂ ಅಲ್ಲ! ಬದಲಿಗೆ, ಬದುಕು ಕಟ್ಟಿಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಬಿದ್ದು, ಅನ್ನ ಕೊಡಲೇಬೇಕಾಗಿರುವ ಕರ್ತವ್ಯಕ್ಕೆ ಹೂಂ ಗುಟ್ಟು ಬೆಳೆದು ನಿಂತ ಪೈರಿಗೆ ನೀರು ಕೊಡಿ ಎಂಬುದಷ್ಟೇ! ಕುಡಿಯಲೂ ನೀರಿಲ್ಲವೆಂಬ ಸ್ಥಿತಿಯಲ್ಲಿರುವ ಜನಗಳಿಗೆ ಮೂಲಭೂತ ಸೌಕರ್ಯಗಳನ್ನೊದಗಿಸಿ ಕೊಡಿ ಎಂಬುದಷ್ಟೇ! ಒಬ್ಬ ಸಾಮಾನ್ಯ ರೈತ, ರಾಜಕೀಯದಿಂದ ಹೊರಗೆ ನಿಂತು, ನನಗೆ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಕೇಳುವ ಹಕ್ಕದು

ಬಿಡಿ! ಎಷ್ಟೇ ರೈತವರ್ಗದವನು, ಶ್ರೀ ಸಾಮಾನ್ಯನಾಗಿಯೇ ಉಳಿದು ಈ ಹೋರಾಟ ನಡೆಸಬೇಕೆಂದು ಕೊಂಡನೋ, ಅದಕ್ಕೆ ತಕ್ಕನಾಗಿ ರಾಜಕೀಯ ಪಕ್ಷಗಳೂ ಸಹ ತಾನೂ ಸಾಮಾನ್ಯನೆಂಬ ರಾಜಕೀಯ ಮಾಡಿ,.ಕೊನೆಗೂ ಸಾಮಾನ್ಯನಾಗಿದ್ದವನ ತಲೆಯಲ್ಲಿ ರಾಜಕೀಯದ ಅಫೀಮು ತುಂಬಿಸಿ ಪ್ರಚಾರ ಕೊಟ್ಟು, ಹೋರಾಟದ ಧ್ಯೇಯವೇ ಮರೆತು ಹೋಗುವಂತಹ ಸ್ಥಿತಿಗೆ ತಲುಪಿತಷ್ಟೆ!

ಆಗಿದ್ದಾಯಿತು! ಇನ್ನೊಂದು ಸಲ ಪ್ರಯತ್ನ ಮಾಡೋಣ!

ಹೀಗೆಂದುಕೊಂಡಿದ್ದು ಬಿಜೆಪಿ! ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕಿಂತ, ಬೇಸಿಗೆ ಹತ್ತಿರ ಬರುತ್ತಿದೆಯೆಂಬ ಎಚ್ಚರವಿದ್ದದ್ದು ಬಿಜೆಪಿಗೆ!
ಅಷ್ಟರೊಳಗೆ ಏನಾದರೂ ಮಾಡಿದರೆ, ಕರ್ನಾಟಕದ ಜನರಿಗೆ ತಿನ್ನಲು ಅನ್ನ ವಿರುತ್ತದೆಯೆಂಬುದರ ಮಟ್ಟಿಗೆ ಮಾತ್ರ ಯೋಚಿಸಿ ” ಎಂದು ಕರ್ನಾಟಕದ ಮುಖ್ಯ ಮಂತ್ರಿಯ ಹತ್ತಿರ ಈಗಲ್ಲ, ಈ ಕಳೆದ ವರ್ಷಗಳಿಂದಲೂ ಚರ್ಚಿಸುತ್ತಲೇ ಬಂದ ಬಿಜೆಪಿಯ ಯಾವ ಯೋಚನೆಗಳೂ ಪಥ್ಯವಾಗಲಿಲ್ಲ ಕಾಂಗಿಗಳಿಗೆ!

ಕೊನೆಗೆ ಬಿಜೆಪಿಯೇ ನಿರ್ಧಾರ ಮಾಡಿ, ಸ್ವತಃ ತಾನೇ ಕಣಕ್ಕಿಳಿಯಿತು! ತನ್ನದೇ ಪಕ್ಷದ ಸರಕಾರವಿದೆಯೆಂಬ ಸಲಿಗೆಯಿಂದ ಗೋವಾ ಮುಖ್ಯಮಂತ್ರಿ ಯಾದ ಮನೋಹರ್ ಪರಿಕ್ಕರ್ ಹತ್ತಿರ ಸಂಧಾನಕ್ಕಿಳಿಯಿತು! ‘ಕರ್ನಾಟಕದ ಸಿಎಂ ಮಾತನಾಡಲಿ’ ಎಂದರು ಪರಿಕ್ಕಾರ್! ಮಹದಾಯಿ ವಿಚಾರದಲ್ಲಿ ಮಾತುಕಥೆಗೆ ಸಿದ್ದವೆಂದು ಹೇಳಿದ ಪರಿಕ್ಕರ್ ರವರ ಪತ್ರ ತೆಗೆದುಕೊಂಡು ಬಂದರು ಕರ್ನಾಟಕದ ಬಿಜೆಪಿ ನಾಯಕರು! ಇನ್ನೇನು,ಸರಿಯಾಗುತ್ತದೆನ್ನುವ ಹೊತ್ತಿಗೆ, ರೈತ ಸಮಾಜ ಯಾರದ್ದೋ ಮಾತು ಕೇಳಿ ರಾತ್ರಿಯೊಳಗೆ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಿತು!

ಆದರೆ, .. ಅಲ್ಲಿಯೇ ತಪ್ಪಿದ್ದು ರೈತ ಸಮಾಜ!

ಯಾರ ಮೇಲೆ ಘೋಷಣೆ ಕೂಗಬೇಕಿತ್ತೋ, ಯಾವ ಪಕ್ಷವನ್ನು ವಿರೋಧಿಸಬೇಕಿತ್ತೋ, ಅದನ್ನು ವಿರೋಧಿಸದೇ ಬಿಜೆಪಿಗೆ ವಿರೋಧಿಸಿದ ಪರಿಣಾಮ ಗೋವಾದ ಬಿಜೆಪಿ ಸರಕಾರಕ್ಕೂ ಅಸಮಾಧಾನವಾಗಿ ಹೋಯಿತು! ಇತ್ತ, ಸಿಎಮ್ ಗೋವಾದ ಪರಿಕ್ಕರ್ ಸಂಧಾನಕ್ಕೆ ಪತ್ರ ಬರೆಯಲೆಂದು ಕೂತರು! ವ್ಹಾ! ನೀರು ಬೇಕಿದ್ದದ್ದು ಕರ್ನಾಟಕಕ್ಕೆ! ಸಂಧಾನಕ್ಕಿಳಿಯಬೇಕಾಗಿರುವುದು ಗೋವಾ!

ಮೊದಲನೆಯದಾಗಿ, ಕಾಂಗ್ರೆಸ್ ಗೇ ಇಷ್ಟವಿಲ್ಲ!

ಹಾ! ಈ ಹಿಂದೆ ಮಹದಾಯಿ ವಿಚಾರವಾಗಿ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಬಿಡಲು ಕೊಡುವುದಿಲ್ಲ ಎಂದು ಹೇಳಿದ್ದು ಇದೇ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ! ಮೇಜು ಕುಟ್ಟಿ ಶಪಥ ಮಾಡಿದಂತೆಯೇ ನಡೆಯಿತೂ ಸಹ! ಈಗ, ಸ್ವತಃ ಪರಿಕ್ಕರ್ ಸಂಧಾನಕ್ಕೊಪ್ಪಿದ್ದರೂ, ಕರ್ನಾಟಕ ಬಿಜೆಪಿ ತಯಾರಾಗಿದ್ದರೂ, ಕಾಂಗ್ರೆಸ್ ಮತ್ತದೇ ಕೊಳಕು ಬುದ್ದಿ ತೋರಿಸುತ್ತಿದೆ!

ಇತ್ತ ಸಿದ್ಧರಾಮಯ್ಯ ಮಹದಾಯಿ ವಿಚಾರವಾಗಿ ಏನೂ ಗೊತ್ತಿಲ್ಲದಂತೆ ಸುಮ್ಮನೇ ಕೂತಿದ್ದರೆ, ಅತ್ತ ಗೋವಾ ಕಾಂಗ್ರೆಸ್ ‘ಮಹದಾಯಿ ವಿಚಾರವಾಗಿ ಕರ್ನಾಟಕದ ಜೊತೆ ಯಾವುದೇ ಮಾತುಕಥೆ ನಡೆಸಬಾರದು’ ಎಂದು ಮನೋಹರ್ ಸರಕಾರಕ್ಕೆ ಬಲವಾಗಿ ಆಗ್ರಹಿಸುತ್ತಿದೆ! ಅಧಿವೇಶನದಲ್ಲಿ ಸರಕಾರಕ್ಕೆ ಒತ್ತಡ ಹೇರಲು ಬುಧವಾರ ನಡೆದ ಪಕ್ಷದ ಸಭೆಯಲ್ಲಿ ನಿರ್ಣಯಿಸಿದೆ!

ಮಾಜಿ ಸಿಎಂ ‘ಪ್ರತಾಪ್ ಸಿಂಹ ರಾಣೆ’ ‘ನಾನು ಈ ವಿಷಯವಾಗಿ ಯಾವ ಪತ್ರವನ್ನೂ ಬರೆದಿಲ್ಲ, ಗೋವಾದ ಹಿತ ನಮ್ಮ ಗುರಿ, ರಾಜಕೀಯವಲ್ಲ, ಕರ್ನಾಟಕಕ್ಕೆ ಹನಿ ನೀರು ಬಿಡಲೂ ನಮ್ಮ ಒಪ್ಪಿಗೆಯಿಲ್ಲ.’ ಎಂದು ಸಭೆಯಲ್ಲಿ ಹೇಳಿದ್ದಾರೆ!

ಕಾಂಗ್ರೆಸ್ ಎಂಬ ವಿಷಪೂರಿತ ಜಂತುವಿಗೆ ಮಹದಾಯಿ ಇತ್ಯರ್ಥವಾಗಿ ಹೋದರೆ, ಕೊನೆಗೆ ಭರವಸೆ ನೀಡಲು ಯಾವ ವಿಷಯವೂ ಇರುವುದಿಲ್ಲ ಎಂಬ ಅರಿವಿದೆ! ಅದಲ್ಲದೇ, ಪರಿಕ್ಕಾರ್ ಏನಾದರೂ, ನ್ಯಾಯಯುತವಾಗಿಯೇ ಸಮಸ್ಯೆ ಬಗೆ ಹರಿಸಿಬಿಟ್ಟರೆ, ಇದರ ಅಷ್ಟೂ ಕ್ರೆಡಿಟ್ಟುಗಳು ಬಿಜೆಪಿಗೆನ್ನುವುದು ಗೊತ್ತಿದೆ! ಕಾಂಗ್ರೆಸ್ ಗೆ ಮಹದಾಯಿ ಬೇಕಿಲ್ಲ! ರೈತರ ಕಷ್ಟಗಳೂ ಬೇಕಿಲ್ಲ! ಬೇಕಿರುವುದು ಒಂದೇ! ಮತಗಳು!

ಅಷ್ಟಕ್ಕೂ ಪರಿಕ್ಕಾರ್ ಹೇಳಿದ್ದೇನು ಗೊತ್ತಾ?!

ಗೋವಾದಲ್ಲಿ 52 ಕಿ.ಮೀ, ಕರ್ನಾಟಕದಲ್ಲಿ 35 ಕಿ.ಮೀ ಮತ್ತು ಮಹರಾಷ್ಟ್ರದಲ್ಲಿ 16 ಕಿ.ಮೀ ಹರಿಯುವ ಮಹದಾಯಿ ನೀರನ್ನು ಮೂರೂ ರಾಜ್ಯಗಳೂ
ಹಂಚಿಕೊಳ್ಳುವುದು ಅನಿವಾರ್ಯ ಎಂದು ಗೋವಾ ಸಿಎಂ ಒಪ್ಪಿದ್ದಾರೆ! ನ್ಯಾಯ ಮಂಡಳಿಯ ತೀರ್ಪು ಬಾರದೇ, ಕರ್ನಾಟಕಕ್ಕೆ ನೀರು ಸಿಗುವುದಿಲ್ಲ ಎಂದು ಭಾವಿಸಿದ್ದರೆ ಮೂರ್ಖತನ!” ಎಂದಿದ್ದರೂ, ಕಾಂಗಿಗಳಾಟಕ್ಕೆ ರೈತರೂ ಕುಣಿಯುತ್ತಿರುವುದು ನೋಡಿದರೆ ನಿಜಕ್ಕೂ ಅಚ್ಚರಿಯೇ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post