X

ಯುದ್ದಕ್ಕೆ ಸಹಾಯ ಮಾಡಿದ್ರೆ ಅದು ಆವಾಗಾಯಿತು… ಇವಾಗ ಕಾಲನೇ ಬೇರೆ, ಪಾಕಿಸ್ತಾನದ ತಲೆಗೆ ಬಡಿದ ಟ್ರಂಪ್!!

ಈಗಾಗಲೇ ಪಾಕಿಸ್ತಾನವೂ ತನ್ನೆಲ್ಲ ನೋವಿಗೆ ಭಾರತವೇ ಕಾರಣ ಎಂದು ಹೇಳಿದ್ದಲ್ಲದೇ, ಭಾರತದ ರಾಜತಾಂತ್ರಿಕ ಯಶಸ್ಸಿನಿಂದಾಗಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಗೌರವ ಕಳೆದುಕೊಂಡಿದೆ ಎನ್ನುವುದನ್ನು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಹೇಳಿದ್ದರು. ಆದರೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ತೀವ್ರ ವಾಗ್ದಂಡನೆ ಗುರಿಯಾಗಿದ್ದ ಉಗ್ರ ಪೆÇೀಷಕ ಪಾಕಿಸ್ತಾನಕ್ಕೆ ಈಗ ಅದರ ಬಿಸಿ ಇನ್ನಷ್ಟು ಹೆಚ್ಚಿದಂತಾಗಿದೆ.

ಹೌದು.. ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬರೀ ಸುಳ್ಳಿನ ಕಂತೆಗಳನ್ನು ಹೇಳುತ್ತಲೇ ಬಂದಿರುವ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಸ್ಥಗಿತಗೊಳಿಸಿದ್ದ ಅಮೆರಿಕ ಈಗ ಸುಮಾರು 7288 ಕೋಟಿ ರೂಪಾಯಿ ಸೇನಾ ನೆರವು ಹಾಗೂ ಮಿಲಿಟರಿ ಉಪಕರಣಗಳ ಪೂರೈಕೆಯನ್ನು ಬಂದ್ ಮಾಡಿದೆ. ಇದಕ್ಕೆ ಪಾಕ್ ವಿದೇಶಾಂಗ ಸಚಿವಾಲಯ, ”ವಾಸ್ತವ ಅರಿಯದೇ ಕೈಗೊಂಡ ಅವಸರದ ಏಕಪಕ್ಷೀಯ ನಿರ್ಧಾರ,” ಎಂದು ಟೀಕಿಸಿದೆ.

ಆದರೆ ನಿನ್ನೆಯಷ್ಟೇ, ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮೆರಿಕ ವಾಪಸ್ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ, ಅಮೆರಿಕ ನೆರವಿಲ್ಲದಿದ್ದರೂ ನಾವು ನಮ್ಮ ಅಸ್ತಿತ್ವ ಕಾಯ್ದುಕೊಳ್ಳಬಲ್ಲೆವು ಎಂದು ಹೇಳಿತ್ತು. ಈ ಬಗ್ಗೆ ಪಾಕಿಸ್ತಾನ ಮೂಲದ ಜಿಯೋ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು, ಅಮೆರಿಕ ನೆರವಿನ ಹೊರತಾಗಿಯೂ ಪಾಕಿಸ್ತಾನ ತನ್ನ ಅಸ್ತಿತ್ವ ಕಾಯ್ದುಕೊಳ್ಳಲಿದೆ.

ಅಷ್ಟೇ ಅಲ್ಲದೇ, ಇಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಪಾಕಿಸ್ತಾನ ಇಂತಹ ಪರಿಸ್ಥಿತಿ ಎದುರಿಸಿತ್ತು. ನಮ್ಮ ಕಠಿಣ ಸಂದರ್ಭಗಳಲ್ಲಿ ಅವರು (ಅಮೆರಿಕ) ಎಂದೂ ನಮ್ಮ ಕೈ ಹಿಡಿದಿಲ್ಲ. ನಿರ್ಣಾಯಕ ಕಠಿಣ ಸಂದರ್ಭಗಳಲ್ಲಿ ನಮಗೆ ದ್ರೋಹ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಆದರೆ ಇದೀಗ, ಹೊಸ ವರ್ಷದ ದಿನದಂದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ತೀವ್ರ ವಾಗ್ದಂಡನೆ ಗುರಿಯಾಗಿದ್ದ ಉಗ್ರ ಪೆÇೀಷಕ ಪಾಕಿಸ್ತಾನಕ್ಕೆ ಈಗ ಅದರ ಬಿಸಿ ಹೆಚ್ಚಾಗಿದ್ದಲ್ಲದೇ, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವ ಸಮುದಾಯದಲ್ಲಿ ಆರ್ಥಿಕವಾಗಿ ಏಕಾಂಗಿಗೊಳಿಸುವ ಮೂಲಕ ಭಯೋತ್ಪಾದನೆ ಪಿಡುಗಿಗೆ ಕಡಿವಾಣ ಹಾಕಬೇಕೆಂಬ ಭಾರತದ ಧ್ವನಿಗೆ ಅಮೆರಿಕದ ಈ ಕ್ರಮದಿಂದ ಬಲಬಂದಂತಾಗಿರುವುದು ಹೆಮ್ಮೆಯ ವಿಚಾರ!!

ಅಷ್ಟೇ ಅಲ್ಲದೇ, ‘ಆಪ್ಘನ್ ತಾಲಿಬಾನ್’, ‘ಹಕ್ಕಾನಿ ನೆಟ್‍ವರ್ಕ್’ ನಂತಹ ಹಲವು ಉಗ್ರ ಸಂಘಟನೆಗಳಿಗೆ ಪಾಕ್ ಆಶ್ರಯ ನೀಡುತ್ತಿದ್ದು, ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಿರುವ ಅಮೆರಿಕ, ಈಗ 7,288 ಕೋಟಿ ರೂ. ಸೇನಾ ನೆರವನ್ನು ಸ್ಥಗಿತಗೊಳಿಸಿದೆ. ಇದಲ್ಲದೇ ‘ಒಕ್ಕೂಟದ ಬೆಂಬಲ ನಿಧಿ’ಯಡಿ ಪಾಕ್‍ಗೆ 2017ರಲ್ಲಿ ನೀಡಲಾಗಿದ್ದ 5,700 ಕೋಟಿ ರೂ. ಹಣವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಹೀಥರ್ ನೌರೆಟ್ ವಾಷಿಂಗ್ಟನ್‍ನಲ್ಲಿ ಹೇಳಿದರು.

ಹೊಸ ವರ್ಷದಂದು ಟ್ರಂಪ್ ಅವರು, ”ಪಾಕ್ ಉಗ್ರರ ಸ್ವರ್ಗವಾಗಿದೆ. ಕಳೆದ 15 ವರ್ಷಗಳಿಂದ ಉಗ್ರರ ದಮನ ಕಾರ್ಯಾಚರಣೆ ನೆರವಿಗೆ ಅಮೆರಿಕ ನೀಡಿದ್ದ 2.1ಲಕ್ಷ ಕೋಟಿ ರೂಪಾಯಿ ನೆರವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಭಯೋತ್ಪಾದಕರನ್ನು ಪೆÇೀಷಿಸಿಕೊಂಡು ಬರುವ ಮೂಲಕ ಕಪಟತನ ಪ್ರದರ್ಶಿಸಿದೆ. ಇನ್ಮುಂದೆ ಇದು ಸಾಧ್ಯವಿಲ್ಲ,” ಎಂದು ಎಚ್ಚರಿಸಿದ್ದರು.

ಆದರೆ, ಈಗಾಗಲೇ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಅಮೆರಿಕದ ದಿಟ್ಟ ಕ್ರಮಗಳಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ನೆರೆಯ ಚೀನಾ ಬೆಂಬಲ ನೀಡಿದೆ. ಆಫ್ಘನ್ ತಾಲಿಬಾನ್, ಹಕ್ಕಾನಿ ನೆಟ್‍ವರ್ಕ್ ಸೇರಿದಂತೆ ಎಲ್ಲ ಉಗ್ರರನ್ನು ಬಗ್ಗುಬಡಿಯುವಲ್ಲಿ ಪಾಕಿಸ್ತಾನ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಅದನ್ನು ವಿಶ್ವಸಮುದಾಯ ಗುರುತಿಸಬೇಕು ಎಂದು ಚೀನಾ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿರುದ್ಧ ತಿರುಗಿ ಬೀಳಲು ಭಾರತದ ‘ಸುಳ್ಳು ಪ್ರತಿಪಾದನೆಗಳೇ’ ಕಾರಣ. ಭಾರತ ಹೇಳಿ ಕೊಟ್ಟಿರುವುದನ್ನೇ ನಂಬಿರುವ ಅಮೆರಿಕ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅಷ್ಟೇ ಅಲ್ಲದೇ, ಆ ಎರಡೂ ದೇಶಗಳು ಪರಸ್ಪರ ಕೈಜೋಡಿಸಿದ್ದು, ಇದೇ ಕಾರಣಕ್ಕೆ ಅಮೆರಿಕ ಈಗ ಭಾರತದ ಭಾಷೆಯಲ್ಲಿ ಮಾತನಾಡುತ್ತಿದೆ. ಅಮೆರಿಕ ಮತ್ತು ಭಾರತ ಈ ಪ್ರಾಂತ್ಯದಲ್ಲಿ ಸಮಾನ ಹಿತಾಸಕ್ತಿಗಳನ್ನು ಹೊಂದಿದ್ದು, ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಖ್ವಾಜಾ ಆಸಿಫ್ ಕಿಡಿಕಾರಿದ್ದರು.

ಮಾಧ್ಯಮಗಳೊಂದಿಗೆ ಮಾತ್ರವಲ್ಲದೇ… ಅಮೆರಿಕ ಸರ್ಕಾರದ ನಿಲುವು ಪ್ರಕಟವಾದ ಬೆನ್ನಲ್ಲೇ ನಡೆದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲೂ ಆಸಿಫ್ ಇದೇ ರೀತಿಯ ಹೇಳಿಕೆ ನೀಡಿದ್ದು, ಹೊಸ ವರ್ಷದ ಮೊದಲ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಲು ಈ ಸಭೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ್ದ ಖ್ವಾಜಾ ಆಸಿಫ್, ‘ಜಗತ್ತು ಬಹಳ ವಿಶಾಲವಾಗಿದೆ. ಅಮೆರಿಕವೇನೂ ನಮಗೆ ಊಟ ಹಾಕುತ್ತಿಲ್ಲ, ಅವರು ನಮ್ಮ ಆಗಸವನ್ನು ಉಚಿತವಾಗಿ ಬಳಸಿಕೊಂಡಿದ್ದಾರೆ. ಹಿಂದಿನ ಆಡಳಿತಗಾರರು ಅಮೆರಿಕ ಹಿತ ಬಲಪಡಿಸುವುದಕ್ಕಾಗಿ ನಮ್ಮ ನೆಲ ಮತ್ತು ಹಿತಾಸಕ್ತಿಗಳನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಸಹಕರಿಸುತ್ತಿರುವುದಕ್ಕಾಗಿ ಅಮೆರಿಕ 900 ಕೋಟಿ ಡಾಲರ್‍ಗಳನ್ನು ಪಾಕಿಸ್ತಾನಕ್ಕೆ ನೀಡಬೇಕಿದೆ ಎಂದೂ ಸಚಿವ ಆಸಿಫ್ ಹೇಳಿದ್ದರು.

ಇನ್ನು ಈ ಹಿಂದೆ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಟ್ವೀಟ್ ವಿಚಾರ ಹೊರ ಬೀಳುತ್ತಿದ್ದಂತೆಯೇ ಅಮೆರಿಕ ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿದ್ದ 22.5 ಕೋಟಿ ಡಾಲರ್ ನೆರವನ್ನು ಅಮೆರಿಕ ತಡೆಹಿಡಿದಿತ್ತು. ಅಲ್ಲದೆ ಪಾಕಿಸ್ತಾನಕ್ಕೆ ನೀಡಬೇಕಿದ್ದ ಒಟ್ಟು 110 ಕೋಟಿ ಡಾಲರ್ ಮಿಲಿಟರಿ ನೆರವನ್ನು ಕೂಡ ಸ್ಥಗಿತಗೊಳಿಸಿತ್ತು. ತಾನು ನೀಡುತ್ತಿರುವ ಆರ್ಥಿಕ ನೆರವನ್ನು ಪಾಕಿಸ್ತಾನ ಉಗ್ರರ ಪೆÇೀಷಣೆಗೆ ಬಳಸುತ್ತಿದೆ ಎಂದು ಅಮೆರಿಕ ದೂಷಿಸಿದೆ.

ಆದರೆ ಇದೀಗ ಅಮೇರಿಕವು ಪಾಕಿಸ್ತಾನಕ್ಕೆ ಉಗ್ರ ಶಿಕ್ಷೆಯನ್ನು ನೀಡಿದ್ದಲ್ಲದೇ, ಇದರೊಂದಿಗೆ 7,288 ಕೋಟಿ ರೂಪಾಯಿ ಸೇನಾ ನೆರವನ್ನು ಸ್ಥಗಿತಗೊಳಿಸಿದೆ. ಇದಲ್ಲದೇ ‘ಒಕ್ಕೂಟದ ಬೆಂಬಲ ನಿಧಿ’ಯಡಿ ಪಾಕ್‍ಗೆ 2017ರಲ್ಲಿ ನೀಡಲಾಗಿದ್ದ 5,700 ಕೋಟಿ ರೂ. ಹಣವನ್ನೂ ಸ್ಥಗಿತಗೊಳಿಸಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

– ಅಲೋಖಾ

Editor Postcard Kannada:
Related Post