X

ಮೋದಿ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಜನೌಷಧಿ ಮಾತ್ರವಲ್ಲ ಈ ಯೋಜನೆಯ ಬಗ್ಗೆಯೂ ತಿಳಿಸಿ..

ಕೇಂದ್ರ ಸರಕಾರ ಅದೆಷ್ಟೋ ಉನ್ನತ ಯೋಜನೆಗಳನ್ನು ಹೊರತಂದಿದ್ದಲ್ಲದೇ, ಆರೋಗ್ಯ ಕ್ಷೇತ್ರದಲ್ಲಿ ಕೂಡ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ!! ಹೃದ್ರೋಗಿಗಳಿಗೆ ಮಾತ್ರವಲ್ಲದೇ ಇನ್ನಿತರ ರೋಗಗಳಿಗೆ ಅಗತ್ಯವಾದ ಸ್ಟೆಂಟ್ ದರಗಳನ್ನು ಇಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದ್ದು, ಇದರಿಂದಾಗಿ ಸ್ಟೆಂಟ್‍ಗಳ ಬೆಲೆ ತೀವ್ರ ಇಳಿಕೆಯಾಗಿದ್ದಲ್ಲದೇ ಬಡ ರೋಗಿಗಳಿಗೆ ವರದಾನವಾಗಿದೆ.

ಹೌದು… ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ತಡೆ ಉಂಟಾದಾಗ ಅದನ್ನು ಸರಿಪಡಿಸಿ ರಕ್ತ ಸರಾಗವಾಗಿ ಸಾಗುವಂತೆ ಮಾಡುವ ನಾಳಾಕೃತಿಯ ರಚನೆಯಾಗಿರುವ ಸ್ಟೆಂಟ್‍ಗೆ ಆಸ್ಪತ್ರೆಗಳು ಮತ್ತು ಔಷಧ ಕಂಪನಿಗಳು ಬಾರಿ ಮೊತ್ತವನ್ನು ವಸೂಲಿ ಮಾಡುತ್ತಿದ್ದವು. ಈ ಹಿಂದೆ ”ಸ್ಟೆಂಟ್‍ಗಳಿಗೆ ವಿಪರೀತ ದರ ವಿಧಿಸುವ ಪೀಡೆಯನ್ನು ನಿವಾರಿಸಲು ನಾವು ಬಯಸಿದ್ದೇವೆ. ಸ್ಟೆಂಟ್ ವಿನ್ಯಾಸ, ನಿರ್ಮಾಣ, ಮಾರಾಟ ಸೇರಿದಂತೆ ನಾನಾ ವಿಭಾಗಗಳನ್ನು ಅತ್ಯಂತ ಜಾಗರೂಕವಾಗಿ ಅಧ್ಯಯನ ನಡೆಸಿದ ಬಳಿಕ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್‍ಪಿಪಿಎ) ಗರಿಷ್ಠ ದರ ಮಿತಿಯನ್ನು ನಿಗದಿಪಡಿಸಿದೆ,” ಎಂದು ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಸ್ಟೆಂಟ್ ಅಂದರೇನು?

ಸ್ಟೆಂಟ್ ಅಂದರೆ ಅತ್ಯಂತ ಸಣ್ಣದಾದ, ಹಿಗ್ಗುವ ಪುಟಾಣಿ ಟ್ಯೂಬ್. ಇದು ಜಾಲರಿಯಂತೆ ಇರುತ್ತದೆ. ಹೃದಯ ರಕ್ತನಾಳದಲ್ಲಿ ತಡೆ ಉಂಟಾದರೆ ಅವುಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಪ್ಲೇಕ್ ಎಂಬ ಜಿಡ್ಡಿನ ರೀತಿಯ ಸಂರಚನೆ ಹೃದಯ ರಕ್ತನಾಳದ ಒಳಗೆ ಬೆಳೆದಿದ್ದರೆ ಆಗ ಪ್ರಮುಖ ರಕ್ತನಾಳದಲ್ಲಿ ಸರಾಗ ರಕ್ತ ಸಂಚಾರಕ್ಕೆ ತಡೆಯಾಗುತ್ತದೆ. ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದಲೂ ಪ್ರಮುಖ ರಕ್ತನಾಳದಲ್ಲಿ ತಡೆಯಾಗಬಹುದು.

ಈ ಸಂದರ್ಭ ವ್ಯಕ್ತಿಗೆ ಎದೆನೋವು, ಹೃದಯಸ್ತಂಭನ, ಹೃದಯದ ಕಾಯಿಲೆಗೆ ಕಾರಣವಾಗುತ್ತದೆ. ಪ್ರಮುಖವಾಗಿ ರಕ್ತನಾಳವನ್ನು ಸರಾಗವಾಗಿಸಲು ಈ ಸ್ಟೆಂಟ್‍ಗಳ ಬಳಕೆಯಾಗುತ್ತದೆ ಇಂತಹ ಸ್ಟೆಂಟ್ ಗಳಿಗೆ ಕರೋನರಿ ಸ್ಟೆಂಟ್ಸ್ ಎಂದು ಕರೆಯುತ್ತಾರೆ. ಇದು ಲೋಹದಿಂದ ಮಾಡಿದ್ದು, ಒಂದು ಸಾಮಾನ್ಯ (ಬಿಎಮ್‍ಎಸ್) ಸ್ಟೆಂಟ್ ಆದರೆ ಇನ್ನೊಂದು ಔಷಧ ಹೊರಸೂಸುವ (ಡ್ರಗ್ ಇಲ್ಯೂಟಿಂಗ್) ಸ್ಟೆಂಟ್. ಈ ಸ್ಟೆಂಟ್ ನಿಧಾನವಾಗಿ ರಕ್ತನಾಳದಲ್ಲಿ ಔಷಧವನ್ನು ಹೊರಸೂಸಿ ತಡೆಯನ್ನು ತೆರವುಗೊಳಿಸುತ್ತದೆ. ಇಂತಹ ಕರೋನರಿ ಸ್ಟೆಂಟ್‍ಗಳನ್ನು ಹೃದಯ ರಕ್ತನಾಳದಲ್ಲಿ ಕೂರಿಸುವ ಪ್ರಕ್ರಿಯೆಗೆ “ಆ್ಯಂಜಿಯೋಪ್ಲಾಸ್ಟಿ’ ಎಂದು ಹೆಸರು.

ಹೃದಯದ ಶಸ್ತ್ರಚಿಕಿತ್ಸೆಗಳಲ್ಲಿ ಬಳಸುವ “ಕೊರೊನರಿ ಸ್ಟೆಂಟ್‍ಗಳ” ದರವನ್ನು ಕೇಂದ್ರ ಸರ್ಕಾರ ಶೇ. 85ರಷ್ಟು ಇಳಿಕೆ ಮಾಡಿದ್ದು, ಲೋಹದ ಸ್ಟೆಂಟ್‍ಗಳಿಗೆ 7,260 ಹಾಗೂ ಔಷಧ ರವಾನೆ ಮಾಡಲು ಬಳಸುವ ಸ್ಟೆಂಟ್‍ಗಳಿಗೆ 29,600 ನಿಗದಿಗೊಳಿಸಲಾಗಿದೆ. ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ (ಎನ್‍ಪಿಪಿಎ) ಹೊರಡಿಸಿರುವ ಸೂಚನೆಯಲ್ಲಿ ಈ ಪರಿಷ್ಕೃತ ದರ ಪ್ರಕಟಿಸಲಾಗಿದೆ.

ಸರಕಾರವೂ ಹೃದಯದ ಸ್ಟೆಂಟ್‍ಗಳನ್ನು ಅಗತ್ಯದ ಔಷಧಗಳ ರಾಷ್ಟ್ರೀಯ ಪಟ್ಟಿಗೆ ಸೇರಿಸಿದ್ದು, ದೇಶದಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಿರುವುದು ಮತ್ತು ಹೆಚ್ಚಿನ ವೈದ್ಯರು ಸ್ಟೆಂಟ್ ಅಳವಡಿಕೆಗೆ ಸೂಚನೆ ನೀಡುತ್ತಿರುವುದು ಇದಕ್ಕೆ ಕಾರಣ. ದರ ಕಡಿಮೆ ಮಾಡಿರುವುದರಿಂದ ಒಂದು ಸ್ಟೆಂಟ್‍ನ ದರದಲ್ಲಿ ಸರಾಸರಿ 80ರಿಂದ 90 ಸಾವಿರ ರೂ. ಉಳಿತಾಯವಾಗಲಿದ್ದು, ಒಟ್ಟಾರೆಯಾಗಿ 4,450 ಕೋಟಿ ರೂ. ಪರಿಹಾರ ಸಿಕ್ಕಿದಂತಾಗುತ್ತದೆ. ಸ್ಟೆಂಟ್‍ಗಳ ಉತ್ಪಾದನೆ ವೆಚ್ಚ ಕಡಿಮೆ ಇರುವುದರಿಂದ ಉದ್ಯಮದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ!!

ಉತ್ಪಾದನೆ ವೆಚ್ಚ ಬರೀ ಅಗ್ಗ…………..!!

ಸಾಮಾನ್ಯ ಲೋಹದ ಸ್ಟೆಂಟ್ 5,415 ರೂ.
ಔಷಧ ಪಸರಿಸುವ ಸ್ಟೆಂಟ್ 16,198 ರೂ.
ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆ ಸೇರಿ)
ಮಾದರಿ ಹಿಂದಿನ ಬೆಲೆ ಮುಂದೆ
ಸಾಮಾನ್ಯ ಸ್ಟೆಂಟ್ 45,000 7,623
ಔಷಧೀಯ ಸ್ಟೆಂಟ್ 1.21 ಲಕ್ಷ 31,080
ಹಳೆ ಸ್ಟೆಂಟ್‍ಗೂ ಹೊಸ ದರ ಅನ್ವಯ

* ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಟೆಂಟ್‍ಗಳಿಗೂ ಹೊಸ ದರವೇ ಅನ್ವಯಿಸುತ್ತದೆ. ಅದರ ಎಂಆರ್‍ಪಿಯನ್ನು ಬದಲಿಸಿ ಮಾರಬೇಕು ಎಂದು ಸೂಚಿಸಲಾಗಿದೆ.
* ಒಂದೊಮ್ಮೆ ಹೆಚ್ಚು ದರ ವಸೂಲಿ ಮಾಡಿದರೆ ಶೇ. 15ರಷ್ಟು ಬಡ್ಡಿ ಜತೆ ಹೆಚ್ಚುವರಿ ದರವನ್ನು ವಾಪಸು ಪಡೆಯಲು ಅವಕಾಶವಿದೆ.
* ಆದರೆ, ಕ್ರಿಮಿನಲ್ ಕೇಸು ದಾಖಲಿಸುವ ಅವಕಾಶ ಸದ್ಯದ ಕಾನೂನಿನಲ್ಲಿ ಇಲ್ಲ.
* ಹೊಸ ದರ ಪಟ್ಟಿಯಿಂದ ಭಾರತದಲ್ಲೇ ತಯಾರಿಸಿದ ಸ್ಟೆಂಟ್‍ಗಳ ಬೇಡಿಕೆ ಹೆಚ್ಚಲಿದೆ, ವಿದೇಶಿ ಕಂಪನಿಗಳ ಆಟಾಟೋಪ ನಿಲ್ಲಲಿದೆ.

ರಾಷ್ಟ್ರೀಯ ಔಷಧಿ ಪ್ರಾಧಿಕಾರವು(ಎನ್‍ಪಿಪಿಎ) ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆ ಮಾಡಿದೆ. ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು. ದರ ನಿಗದಿ ಉಲ್ಲಂಘಿಸುವ ಆಸ್ಪತ್ರೆಗಳು, ವೈದ್ಯರ ವಿರುದ್ಧ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಹೃದಯದ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡಿದ ಬಳಿಕ ಕಸಿಗೆ ಬಳಸುವ ಉಪಕರಣದ ಬೆಲೆಯನ್ನು ಇಳಿಕೆ ಮಾಡಲಾಗಿದ್ದು, ಇಳಿಕೆ ಮಾಡಿದ್ದರಿಂದ 1,500 ಕೋಟಿ ರೂ. ಉಳಿಕೆಯಾಗಲಿದ್ದು, ಅಂದಾಜು 1.5 ಲಕ್ಷ ಮಂದಿಗೆ ಸಹಕಾರಿಯಾಗಲಿದೆ.

ಯಾವುದಕ್ಕೆ ಎಷ್ಟು?

ಮೊಣಕಾಲಿನ ಕಸಿ ಉಪಕರಣದ ಬೆಲೆಯನ್ನು 54,720 ರೂ.ಗೆ ಇಳಿಕೆಯಾಗಿದ್ದು, ಈ ಹಿಂದೆ ಇವುಗಳ ಬೆಲೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ.ಇತ್ತು. ಇನ್ನು ಟೈಟಾನಿಯಂ ಅಕ್ಸಿಡೈಸ್ಡ್ ಝಿಂಕೋನಿಯಂ ಉಪಕರಣಕ್ಕೆ 2.50 ಲಕ್ಷ ರೂ. ನಿಂದ 4.50 ಲಕ್ಷ ರೂ. ವೆಚ್ಚವಾಗುತಿತ್ತು. ಈಗ 76, 600 ರೂ. ನಿಗದಿಯಾಗಿದೆ.

ಬ್ರೈನ್ ಟ್ಯೂಮರ್, ಕ್ಯಾನ್ಸರ್ ರೋಗಚ ಚಿಕಿತ್ಸೆಗೆ ಬಳಸುವ ವಿಶೇಷ ಕಸಿ ಉಪಕರಣಕ್ಕೆ 1,13,950 ರೂಪಾಯಿ ನಿಗದಿಯಾಗಿದೆ. ಸದ್ಯ ಇವುಗಳ ಮಾರುಕಟ್ಟೆ ಬೆಲೆ 2.75 ಲಕ್ಷದಿಂದ 6 ಲಕ್ಷ ರೂಪಾಯಿ ಇತ್ತು. ಕೋಬಾಲ್ಟ್ ಕ್ರೋಮಿಯಂ ಮೊಣಕಾಲು ಕಸಿ ಉಪಕರಣಕ್ಕೆ 54,720 ರೂಪಾಯಿ ನಿಗದಿಯಾಗಿದ್ದು, ಈ ಹಿಂದೆ 1,58,324 ರೂ. ಇತ್ತು. ಇನ್ನು ಕೇಂದ್ರ ಸರ್ಕಾರ ಹೃದಯಕ್ಕೆ ಅಳವಡಿಸುವ ಕೊರೊನರಿ ಸ್ಟೆಂಟ್‍ಗಳ ದರವನ್ನು ಶೇ.80ರಷ್ಟು ಇಳಿದಿದ್ದು, ಇದರಿಂದಾಗಿ 45,000 ರೂ. ಬೆಲೆಗೆ ಮಾರಾಟವಾಗುತ್ತಿದ್ದ ಸ್ಟೆಂಟ್ ಬೆಲೆ 29,600 ರೂ.ಗೆ ಇಳಿಕೆಯಾಗಿದೆ!!


ಸ್ಟೆಂಟ್‍ಗಳನ್ನು ಕೂರಿಸೋದು ಹೇಗೆ?

ಹೃದಯದ ಪ್ರಮುಖ ರಕ್ತನಾಳಗಳಲ್ಲಿನ ತಡೆಗಳನ್ನು ಕಂಡುಹಿಡಿದ ಬಳಿಕ ವೈದ್ಯರು ಹೃದಯಕ್ಕೆ ಸಾಗುವ ಪ್ರಮುಖ ರಕ್ತನಾಳ (ಕುತ್ತಿಗೆ, ಭುಜ ಇತ್ಯಾದಿ) ಮೂಲಕವಾಗಿ ಪುಟ್ಟ ಟ್ಯೂಬ್ ಅನ್ನು ಹಾಯಿಸುತ್ತಾರೆ. ಇದಕ್ಕೆ ಕ್ಯಾಥರ್ ಎಂದು ಹೆಸರು. ಹೊರಭಾಗದಲ್ಲಿ ಹಿಗ್ಗುವ ಸ್ಟೆಂಟ್ ಮತ್ತು ಸ್ಟೆಂಟ್ ಹಿಗ್ಗಿಸಲು ಅನುಕೂಲವಾದ ಪುಟ್ಟ ಬಲೂನ್ ಇರುತ್ತದೆ. ರಕ್ತನಾಳಕ್ಕೆ ತಡೆಯಾದ ಜಾಗವನ್ನು ಎಕ್ಸ್‍ರೇಯಿಂದ ಗುರುತಿಸಿ ನಿರ್ದಿಷ್ಟ ಜಾಗದಲ್ಲಿ ಅದನ್ನು ಹಿಗ್ಗಿಸಲಾಗುತ್ತದೆ. ಈ ಮೂಲಕ ರಕ್ತನಾಳದಲ್ಲಿನ ತಡೆಯನ್ನು ಬದಿಗೆ ಸರಿಸಿ, ಸರಾಗ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೊಂದು ಅತ್ಯಾಧುನಿಕ ವಿಧಾನದಲ್ಲಿ ಸ್ಟೆಂಟ್‍ಗಳನ್ನು ಬಳಸಿ ರಕ್ತನಾಳದೊಳಗಿನ ಜಿಡ್ಡನ್ನು ತೆಗೆಯಲಾಗುತ್ತದೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ರಕ್ತನಾಳ ಬಂದ್ ಆಗಿದ್ದಲ್ಲಿ ಸ್ಟೆಂಟ್ ಅಳವಡಿಕೆ ಬಳಿಕ ರಕ್ತ ಹೆಪ್ಪುಗಟ್ಟದಂತೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆ.

ಕೇಂದ್ರ ಸರ್ಕಾರ ಮಾಡಿದ್ದೇನು?

ಕೇಂದ್ರ ಸರ್ಕಾರ ಇದೀಗ ಸ್ಟೆಂಟ್‍ಗಳ ಬೆಲೆ ಮೇಲೆ ಮಿತಿ ಹೇರಿದೆ. ಅಂದರೆ ಯಾವುದೇ ರೀತಿಯ ಸ್ಟೆಂಟ್‍ಗಳನ್ನು (ವಿದೇಶದಿಂದ ಆಮದು ಮಾಡಿದ ಸ್ಟೆಂಟ್ ಆಗಿದ್ದರೂ ಕೂಡ) 29,600 ಸಾವಿರ ರೂ. ಮೇಲ್ಪಟ್ಟು (ಡ್ರಗ್ ಇಲ್ಯೂಟಿಂಗ್ ಸ್ಟೆಂಟ್) ಮಾರಾಟ ಮಾಡುವಂತಿಲ್ಲ. ಬಿಎಂಎಸ್ ಸ್ಟೆಂಟ್‍ಗಳ ಬೆಲೆಯನ್ನು ಕೇಂದ್ರ ಸರ್ಕಾರ ಗರಿಷ್ಠ 7,260 ರೂ. ಎಂದು ನಿಗದಿ ಮಾಡಿದ್ದು, ಡ್ರಗ್ ಇಲ್ಯೂಟಿಂಗ್ ಸ್ಟೆಂಟ್ ಬೆಲೆಯನ್ನು ಗರಿಷ್ಠ 29,600 ಎಂದು ನಿಗದಿ ಪಡಿಸಿದೆ. ಅಂದರೆ ಅವುಗಳ ಬೆಲೆಯಲ್ಲಿ ಶೇ.40ರಷ್ಟು ಕಡಿತ. ಈ ಮೊದಲು ಎರಡೂ ರೀತಿಯ ಸ್ಟೆಂಟ್‍ಗಳ ಬೆಲೆ 25 ಸಾವಿರ ರೂ.ಗಳಿಂದ 1.50 ಲಕ್ಷ ರೂ. ವರೆಗೆ ಇತ್ತು. ಸದ್ಯ ವ್ಯಾಟ್, ಸ್ಥಳೀಯ ತೆರಿಗೆಯನ್ನು ಸೇರಿಸಿ ಹೊಸ ಬೆಲೆ ಅನ್ವಯಿಸಲಾಗಿದೆ.
ಸ್ಟೆಂಟ್‍ಗಳ ಬೆಲೆ ಮೇಲೆ ಮಿತಿಗೆ ಕಾರಣವೇನು?

ಭಾರತದ ಸ್ಟೆಂಟ್ ಮಾರುಕಟ್ಟೆ ಸುಮಾರು 33 ಕೋಟಿ ರೂ. ಮೌಲ್ಯದ್ದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಹೃದಯದ ಕರೋನರಿ ರಕ್ತನಾಳಗಳ ಕಾಯಿಲೆ (ಸಿಎಡಿ) ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದ ಸ್ಟೆಂಟ್‍ಗಳ ಬೇಡಿಕೆ ಹಿಂದೆಂದಿಗಿಂತ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಮುಖ್ಯ ಆರೋಗ್ಯ ಸಮಸ್ಯೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೆಂಟ್‍ಗಳ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು ಎಂಬುದು ತಜ್ಞರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೆಂಟ್ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಸ್ಟೆಂಟ್‍ಗಳ ಅಗತ್ಯ ಹೆಚ್ಚಿದ್ದರಿಂದ ಅವುಗಳನ್ನು ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಬಡ ರೋಗಿಗಿಳಿಗೆ ಆ?ಯಂಜಿಯೋಪ್ಲಾಸ್ಟಿ ಕೈಗೆಟುಕದ ಸಂಗತಿಯಾಗಿತ್ತು.


ಸ್ಟೆಂಟ್ ಬೆಲೆ ಇಳಿಕೆ ಹೇಗೆ?

2016 ಜುಲೈಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸ್ಟೆಂಟ್‍ಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‍ಎಲ್‍ಇಎಮ್ 2015)ಗೆ ಸೇರಿಸಿತ್ತು.ಇದರಿಂದ ಔಷಧ ಬೆಲೆ ನಿಯಂತ್ರಣ ಆದೇಶ ಅನ್ವಯ ಕೇಂದ್ರ ಸರ್ಕಾರ ಸ್ಟೆಂಟ್‍ಗಳ ಬೆಲೆ ಮೇಲೆ ಮಿತಿಯನು ಹೇರಬಹುದಾಗಿದೆ. ಅಗತ್ಯವಸ್ತುಗಳ ಕಾಯ್ದೆ ಅಡಿ ಇವುಗಳೂ ಬರುವುದರಿಂದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸ್ಟೆಂಟ್‍ಗಳನ್ನು ಒದಗಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ರಾಷ್ಟ್ರೀಯ ಫಾರ್ಮಾಸುÂಟಿಕಲ್ ಬೆಲೆ ನೀತಿ 2012ರ ಅನ್ವಯ ಶೇ.40ರಷ್ಟು ಬೆಲೆ ಇಳಿಕೆಗೆ ನಿರ್ಧರಿಸಲಾಗಿದೆ.

ಹೃದಯ ಶಸ್ತ್ರಚಿಕಿತ್ಸೆಯಲ್ಲಿ ದುಬಾರಿ ಎನಿಸುವ ಸ್ಟೆಂಟ್ ನ ಬೆಲೆಗೆ ಮಿತಿ ಹೇರಿದ್ದ ಸರಕಾರ, ತದನಂತರ 15 ಬಗೆಯ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಯ ಗರಿಷ್ಠ ಮಿತಿಯನ್ನು ನಿಗದಿಗೊಳಿಸಿದೆ. ಈ ಬಗ್ಗೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು ಆದೇಶ ಹೊರಡಿಸಿದ್ದು, ಈ ಮೂಲಕ ಕೃತಕ ಮಂಡಿಚಿಪ್ಪುಗಳ ಬೆಲೆ ಮಾರುಕಟ್ಟೆಯಲ್ಲಿ ಶೇ 60 ಕ್ಕಿಂತಲೂ ಅಗ್ಗವಾಗಲಿದೆ. ಇನ್ನು ಮುಂದೆ 4,090 ರೂಪಾಯಿಯಿಂದ 62,770 ರುಪಾಯಿಗೆ ಉಪಕರಣವು ಸಿಗಲಿವೆ ಎನ್ನುವುದು ಖುಷಿಯ ವಿಚಾರವಾಗಿದೆ.

ದುಬಾರಿ ಎನಿಸುವ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಗಳ ಮೇಲೂ ನಿಯಂತ್ರಣ ಹೇರಿದ್ದು, ಭಾರತದಲ್ಲಿ ಪ್ರತಿವರ್ಷ ಸರಾಸರಿ 1.2 ಲಕ್ಷ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಇದೀಗ ಬೆಲೆಗೆ ಮಿತಿ ವಿಧಿಸಿರುವುದರಿಂದ 1,500 ಕೋಟಿ ರೂಪಾಯಿಯಷ್ಟು ಮೊತ್ತ ಉಳಿತಾಯವಾಗಲಿದೆ. ಇನ್ನು ಹೃದಯ ಚಿಕಿತ್ಸೆಯ ಸ್ಟೆಂಟ್ ಉಪಕರಣದ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದ್ದ ಆಸ್ಪತ್ರೆಗಳು, ಔಷಧ ಮಳಿಗೆ ಹಾಗೂ ಕಾರ್ಡಿಯಾಕ್ ಕೇಂದ್ರಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಸ್ಟೆಂಟ್ ಉಪಕರಣಕ್ಕೆ ಹೆಚ್ಚಿನ ಹಣ ವಸೂಲಿಗಿಳಿದ ಕೇಂದ್ರಗಳ ಪರವಾನಗಿ ರದ್ದಾಗುವ ಜತೆಗೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ!!

45 ಸಾವಿರ ರೂ.ಗೆ ಸಿಗುತ್ತಿದ್ದ ಬಿಎಂಎಸ್ ಸ್ಟೆಂಟ್ ಇದೀಗ 7,600 ರೂ.ಗೆ ಸಿಗುತ್ತಿದ್ದು, 1.21 ಲಕ್ಷಕ್ಕೆ ಮಾರುತ್ತಿದ್ದ ಡಿಇಎಸ್ ಸ್ಟೆಂಟ್ ಗಳನ್ನು 31 ಸಾವಿರ ರೂ.ಗೆ ಇಳಿಸಲಾಗಿದೆ. ದೇಶದಲ್ಲಿ ಪ್ರತಿವರ್ಷ 5 ಲಕ್ಷಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ನೀಡಿ ಸ್ಟೆಂಟ್ ಅಳವಡಿಕೆ ಮಾಡಲಾಗುತ್ತಿದೆ. ಹೀಗಾಗಿ, ಜೀವರಕ್ಷಕವಾದ ಸ್ಟೆಂಟ್ ಗಳ ಬೆಲೆ ಗಮನಾರ್ಹವಾಗಿ ಕಡಿಮೆ ಆಗಿರುವುದರಿಂದ ರೋಗಿಗಳಿಗೆ ಅನುಕೂಲವಾಗಲಿರುವುದಂತೂ ಖಂಡಿತಾ!!
– ಅಲೋಖಾ

Editor Postcard Kannada:
Related Post