X

ಹಿಂದೂಗಳ ಪ್ರಮಾಣ ಇಳಿಕೆ : ಹಿಂದೂಗಳಿಗಿದು ಎಚ್ಚರಿಕೆಯ ಸಂದೇಶ

ಹಿಂದೂಗಳೇ, ನಾವು ಅಲರ್ಟ್ ಆಗಲೇ ಬೇಕಾದ ಸಮಯ ಬಂದಿದೆ. ಅಂತಹ ಆಘಾತಕಾರಿ ವರದಿಯೊಂದು ಬಹಿರಂಗವಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.

ಪ್ರಧಾನ ಮಂತ್ರಿ ಸಲಹಾ ಮಂಡಳಿ ರಚನೆ ಮಾಡಿದ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿನ ಭಾರತದ ಬಹುಸಂಖ್ಯಾತ ಹಿಂದೂಗಳ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಈ ವರದಿ ಹೇಳುತ್ತಿದೆ.

ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಪ್ರಮಾಣ 7.82% ಗಳಷ್ಟು ಇಳಿಕೆ ಕಂಡಿದೆ. ಹಾಗೆಯೇ ಇಸ್ಲಾಂ ಧರ್ಮೀಯರ ಸಮೀಕ್ಷೆ ಸಹ ಮಾಡಿದ್ದು, ಅವರ ಸಂಖ್ಯೆ ಏರಿಕೆಯಾಗಿರುವುದಾಗಿ ಹೇಳಿದೆ. 43.15% ಗಳಷ್ಟು ಏರಿಕೆಯ ಜನಸಂಖ್ಯೆ ಮುಸಲ್ಮಾನರದ್ದಾಗಿದೆ‌. ಮುಸಲ್ಮಾನೇತರ ಇತರ ಅಲ್ಪಸಂಖ್ಯಾತರ ಪ್ರಮಾಣ 6.58% ಏರಿಕೆ ಕಂಡಿದೆ ಎಂದು ಈ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಹಿಂದೂಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಅಲ್ಪಸಂಖ್ಯಾತರ ಪ್ರಮಾಣ ಅದರಲ್ಲೂ ಬಹು ಮುಖ್ಯವಾಗಿ ಮುಸಲ್ಮಾನರ ಪ್ರಮಾಣ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದು ಕಳವಳಕಾರಿ ಅಂಶ ಎನ್ನುವ ಮಾತುಗಳು ಸಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಜೊತೆಗೆ ಹೀಗೆಯೇ ಮುಂದುವರಿದಲ್ಲಿ ದೇಶದಲ್ಲಿನ ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತರ ಸಾಲಿಗೆ ಸೇರಿದರೂ ಅಚ್ಚರಿ ಪಡಬೇಕಿಲ್ಲ.

ಇದನ್ನು ರಾಜಕೀಯ ಪಕ್ಷಗಳು ಚುನಾವಣಾ ವಿಷಯವಾಗಿಯೂ ಕೈಗೆತ್ತಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಮುಸ್ಲಿಂ ಓಲೈಕೆಯ ಕಾರಣದಿಂದ ಮುಸಲ್ಮಾನರ ಸಂಖ್ಯೆ ಏರಿಕೆಯಾಗುತ್ತಿದೆ. ಜೊತೆಗೆ ಹಿಂದೂಗಳ ಸಂಖ್ಯೆ ಇಳಿಕೆ ಕಾಣುತ್ತಿರುವುದು ಎಂದು ಬಿಜೆಪಿ ಆರೋಪಿಸಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಅಖಂಡ ಭಾರತವನ್ನು ಧರ್ಮದ ಆಧಾರದಲ್ಲಿ ಖಂಡ ತುಂಡವನ್ನಾಗಿಸಿ ಮುಸಲ್ಮಾನರಿಗೆ ಪಾಕಿಸ್ತಾನವನ್ನು ಬಿಟ್ಟು ಕೊಡಲಾಗಿತ್ತು. ಆದರೆ ಇಲ್ಲೇ ಉಳಿದುಕೊಂಡ ಮುಸಲ್ಮಾನರಲ್ಲಿ ಕೆಲವರು ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡುವುದು, ಶತ್ರು ರಾಷ್ಟ್ರ ಪಾಕ್‌ಗೆ ಬೆಂಬಲಿಸುವುದು ಮಾಡುವ ಮೂಲಕ ದೇಶಕ್ಕೆ ಕಂಟಕಪ್ರಾಯರಾಗಿ ಪರಿಣಮಿಸುತ್ತಿದ್ದಾರೆ. ಇದೀಗ ಮುಸಲ್ಮಾನರ ಜನಸಂಖ್ಯೆ ಸಹ ಹೆಚ್ಚುತ್ತಿದ್ದು ಇದು ದೇಶಕ್ಕೆ, ಬಹುಸಂಖ್ಯಾತ ಹಿಂದೂಗಳಿಗೆ ಎಚ್ಚರಿಕೆಯ ಕರಗಂಟೆ ಎನ್ನುವುದು ಬಲ್ಲವರ ಮಾತು.

Post Card Balaga:
Related Post