X

ಕಾಂಗ್ರೆಸ್ ಮತ್ತು ಉಗ್ರರಿಗಿದೆಯಾ ಸಂಬಂಧ?

ಕಾಂಗ್ರೆಸ್ ನಾಯಕರ ಉಗ್ರ ಪ್ರೇಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತಿನಲ್ಲೇ ಏಟು ನೀಡಿದ್ದಾರೆ.

ಮುಂಬೈ ದಾಳಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆ ದಾಳಿಗೆ ಸಂಬಂಧಿಸಿದ ಹಾಗೆ ಬಂಧನಕ್ಕೆ ಒಳಗಾದ, ಗಲ್ಲು ಶಿಕ್ಷೆಗೆ ಗುರಿಯಾದ ಕಸಬ್ ಪರ ಹೇಳಿಕೆ ನೀಡಿದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಚಿವಾರ್‌ಗೆ ಪಿ ಎಂ ಮೋದಿ ಟಾಂಗ್ ನೀಡಿದ್ದಾರೆ.

ಮುಂಬೈ ದಾಳಿ ಸಂದರ್ಭದಲ್ಲಿ ಹುತಾತ್ಮರಾದ ಎಸ್‌ಐಟಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಉಗ್ರ ಕಸಬ್‌ನ ಬಂದೂಕಿನಿಂದ ಹಾರಿದ ಗುಂಡುಗಳು ಹತ್ಯೆ ಮಾಡಿಲ್ಲ. ಬದಲಾಗಿ ಅವರ ಜೊತೆಗಿದ್ದ ರಕ್ಷಣಾ ಅಧಿಕಾರಿಗಳ ಬಂದೂಕಿನ ಗುಂಡುಗಳೇ ಸಾವಿಗೆ ಕಾರಣ ಎನ್ನುವ ಮೂಲಕ ವಡೆಟ್ಟಿವಾರ್ ವಿವಾದ ಸೃಷ್ಟಿ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ತಿರುಗೇಟು ನೀಡಿರುವುದಾಗಿದೆ.

ಅಂದು ಮುಂಬೈ ದಾಳಿ ನಡೆಸಿದ ಹತ್ತು ಮಂದಿ ಉಗ್ರರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಇದೆ ಎನ್ನುವ ಸಂದೇಹ ಮೂಡುತ್ತಿದೆ. ದೇಶದ ಜನರೂ ಸಹ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಉಗ್ರರನ್ನು ಪ್ರಧಾನಿ ನಿವಾಸಕ್ಕೆ ಕರೆದು ರಾಜ ಮರ್ಯಾದೆ ನೀಡುತ್ತಿದ್ದರು. ಜೊತೆಗೆ ದೆಹಲಿಯ ಬಟ್ಲಾ ಹೌಸ್ ಎನ್‌ಕೌಂಟರ್‌ಗೆ ಕಾಂಗ್ರೆಸ್ ನಾಯಕರೊಬ್ಬರು (ಸೋನಿಯಾ ಗಾಂಧಿ) ವಿಷಾದ ಸಹ ವ್ಯಕ್ತಪಡಿಸಿದ್ದರು ಎಂದು ಅವರು ಕಿಡಿ ಕಾರಿದ್ದಾರೆ.

ಪ್ರಸ್ತುತ ನಾನು ಭಯೋತ್ಪಾದಕರಿಗೆ ಅಡ್ಡಲಾಗಿ ಕಲ್ಲಿನ ಹಾಗೆ ನಿಂತಿದ್ದೇನೆ. ಕಾಂಗ್ರೆಸ್ ಪಕ್ಷದವರಿಗೆ ಉಗ್ರರ ಜೊತೆಗಿನ ಸಂಬಂಧ ಮೇಳೈಸಲಿ ಎನ್ನುವ ಆಸೆಯೇ?, ಬಹಳ ಮುಖ್ಯವಾಗಿ ಕಾಂಗ್ರೆಸ್‌ನ ಬಿ ಟೀಂ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಪಾಕಿಸ್ತಾನದಲ್ಲಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ, ಇಂಡಿ ಒಕ್ಕೂಟ ವೋಟ್ ಜಿಹಾದ್ ನಡೆಸಬೇಕು ಎಂಬ ಹೇಳಿಕೆ ನೀಡುತ್ತಿದೆ. ಜನರಿಗೆ ವೋಟ್ ಜಿಹಾದ್ ಮುಖ್ಯವೋ, ರಾಮ ರಾಜ್ಯ ಮುಖ್ಯವೋ ಎಂದು ಜನತೆಯೇ ನಿರ್ಧಾರ ಮಾಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

Post Card Balaga:
Related Post