X

ಪಿ ಎಂ ಮೋದಿ ಮಾತಿನೇಟಿಗೆ ಕಾಂಗ್ರೆಸ್‌ನ ಪಿತ್ರೋಡಾ ಗಡಗಡ!

ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಯಾವುದೋ ಜನ್ಮದ, ಜನ್ಮಜನ್ಮಾಂತರದ ನಂಟು ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಕೈ ನಾಯಕರು ದೇಶದ, ಧರ್ಮದ ವಿಚಾರದಲ್ಲಿ, ಬಹುಸಂಖ್ಯಾತರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

ಸದ್ಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೊಡಾ ಅವರ ಸರದಿ. ಸದ್ಯ ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದು, ಚರ್ಮದ ಆಧಾರದಲ್ಲಿ ಜನರನ್ನು ನಿಂದನೆ ಮಾಡುವುದನ್ನು ಇಲ್ಲಿನ ಜನರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಚರ್ಮದ ಬಣ್ಣದ ಮೇಲೆ ನನ್ನ ದೇಶದ ಜನರನ್ನು ನಿಂದನೆ ಮಾಡುವುದನ್ನು ನನ್ನ ಜನರು ಸಹಿಸುವುದಿಲ್ಲ. ಮೋದಿ ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಹಳಷ್ಟು ಖ್ಯಾತಿಯನ್ನು ಹೊಂದಿರುವ, ಆದಿವಾಸಿ ಜನಾಂಗದ ಮಗಳು. ನಾನು ಅವರ ಬಗ್ಗೆ ತುಂಬಾ ಯೋಚಿಸುತ್ತಿದ್ದೇನೆ. ಅವರನ್ನು ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸುತ್ತಿದೆ ಎಂದು ಯೋಚಿಸುತ್ತಿದ್ದೇನೆ. ಆದರೆ ಅದಕ್ಕೆ ಕರಣ ನನಗೆ ಈಗ ತಿಳಿಯಿತು. ಅಮೆರಿಕಾದಲ್ಲಿ ಶೆಹಜಾದಾನ ತತ್ವಶಾಸ್ತ್ರದ ಮಾರ್ಗದರ್ಶಿಯಾಗಿರುವ ಚಿಕ್ಕಪ್ಪ ಇದ್ದಾನೆ. ಕ್ರಿಕೆಟ್ ‌ನಲ್ಲಿ ಮೂರನೇ ಅಂಪೈರ್‌ನ ಹಾಗೆ ಪಿತ್ರೋಡಾ. ರಾಹುಲ್ ಆತನಿಂದ ಸಲಹೆ ಪಡೆಯುತ್ತಾರೆ ಎಂದು ಗೇಲಿ ಮಾಡಿದ್ದಾರೆ.

ತತ್ವಜ್ಞಾನಿ ಚಿಕ್ಕಪ್ಪ ‘ಕಪ್ಪು ಬಣ್ಣದ ಚರ್ಮ ಹೊಂದಿರುವವರು ಆಫ್ರಿಕಾದವರು ಎಂದು ಹೇಳಿದರು. ಇದರ ಅರ್ಥ ನೀವು ಅವರ ಚರ್ಮದ ಬಣ್ಣದ ಆಧಾರದ ಮೇಲೆ ದೇಶದ ಜನರನ್ನು ನಿಂದನೆ ಮಾಡುತ್ತೀರಿ. ನಮ್ಮ ಚರ್ಮದ ಬಣ್ಣ ಹೇಗೆಯೇ ಇರಲಿ, ನಾವು ಶ್ರೀಕೃಷ್ಣನನ್ನು ಪೂಜೆ ಮಾಡುವವರು ಎಂದು ಟಾಂಗ್ ನೀಡಿದ್ದಾರೆ.

Post Card Balaga:
Related Post