X

ಶಿವನ ಕಣ್ಣೀರಿನಿಂದ ಉದ್ಭವಿಸಿದ ಪಾಕ್ ನ ಈ ಪುಣ್ಯ ತೀರ್ಥಕ್ಷೇತ್ರದಿಂದ ಅಡ್ವಾಣಿಯವರಿಗೆ ಪ್ರತೀವರ್ಷವೂ ತೀರ್ಥವನ್ನು ಕಳಿಹಿಸಿ ಕೊಡಲಾಗುತ್ತದೆಯಂತೆ, ಯಾಕೆ ಗೊತ್ತೇ??

ಭಾರತದ ಕಟ್ಟಾ ವಿರೋಧಿ ರಾಷ್ಟ್ರವೆಂದೇ ಬಿಂಬಿತವಾಗಿರುವ ಪಾಕಿಸ್ತಾನದಲ್ಲಿ ಹಿಂದೂಗಳ ಆರಾಧ್ಯ ದೇವರನ್ನು ತನ್ನ ನೆಲದಲ್ಲಿ ಪೂಜಿಸುತ್ತಿದೆ ಎಂದರೆ ಅದಕ್ಕಿಂತಲೂ ದೊಡ್ಡಪರಾಮಾಶ್ಚರ್ಯ ಇನ್ನೊಂದಿಲ್ಲ!! ಆದರೆ ಪಾಕಿಸ್ತಾನದಲ್ಲಿರೋ ಈ ದೇವಾಲಯವು ಬಿಜೆಪಿಯ ಭೀಷ್ಮ ಎಂದೆನಿಸಿರುವ ಎಲ್.ಕೆ.ಅಡ್ವಾಣಿ ಅವರಿಗೆ ಬಲು ಪ್ರಿಯವಾದಂತಹ ದೇವಾಲಯವಂತೆ.

ಹೌದು… ಪಾಕಿಸ್ತಾನ ಬಹುತೇಕ ಮುಸ್ಲಿಂ ಸಮುದಾಯವೇ ನೆಲೆಸಿರೋ ನೆಲವಾಗಿದ್ದು, ಸ್ವತಂತ್ರ್ಯ ಬಂದಾಗಿನಿಂದ ಹಿಡಿದು ಇಲ್ಲಿಯವರೆಗೆ ಭಾರತದ ಜೊತೆಗೆ ಹಗೆತನ ಸಾಧಿಸಿಕೊಂಡು ಬರುತ್ತಲೇ ಇರುವ ಕಡು ವೈರಿ ರಾಷ್ಟ್ರ. ಇಂತಹ ಶತ್ರುರಾಷ್ಟ್ರದಲ್ಲಿ ಹಿಂದುಗಳ ಪವಿತ್ರವಾದ ಒಂದು ಪೌರಾಣಿಕ ಕ್ಷೇತ್ರ ಇದೆ ಎಂದರೆ ನಂಬಲಾಗದು. ಆದರೆ ಅದನ್ನು ನಂಬಲೇ ಬೇಕು!! ಯಾಕೆಂದರೆ ಪಾಕಿಸ್ತಾನದಲ್ಲಿರುವ ಈ ದೇಗುಲವು ಹಿಂದೂ ದೇವರು ನೆಲೆಸಿರೋ ಪರಮ ಪುಣ್ಯವಾದ ಕ್ಷೇತ್ರವೆಂದೆನಿಸಿಕೊಂಡಿದೆ.

ಹಾಗಾದರೆ, ವೈರಿ ರಾಷ್ಟ್ರದಲ್ಲಿರೋ ಹಿಂದೂಗಳ ಪರಮ ಪವಿತ್ರವಾದ ಪುಣ್ಯ ಕ್ಷೇತ್ರವಾದರೂ ಯಾವುದು? ಅಷ್ಟೇ ಅಲ್ಲದೇ ಈ ಐತಿಹಾಸಿಕ ಹಿಂದೂ ಪುಣ್ಯಕ್ಷೇತ್ರದಿಂದ, ಎಲ್.ಕೆ.ಅಡ್ವಾಣಿಗೆ ಪವಿತ್ರ ಕುಂಡದ ತೀರ್ಥವು ಪ್ರತೀವರ್ಷವೂ ಕೂಡ ಸ್ವತಃ ಪಾಕಿಸ್ತಾನ ಸರ್ಕಾರವೇ ಕಳಿಸಿಕೊಡುತ್ತಾರಂತೆ. ಹಾಗಾದರೆ ಅಡ್ವಾಣಿಯನ್ನೂ ತನ್ನತ್ತ ಸೆಳೆದಿರುವ ಆ ತೀರ್ಥ ಕ್ಷೇತ್ರದ ಇತಿಹಾಸವಾದರೂ ಏನು ಗೊತ್ತೇ?

ಜಗತ್ತನ್ನೇ ನಿಬ್ಬೆರಗಾಗಿಸುವಂಥ ಶಕ್ತಿ ಆ ತೀರ್ಥ ಕ್ಷೇತ್ರಕ್ಕೆ ಇದೆಯಂತೆ!! ನಮ್ಮ ಮೇಲೆ ಹಗೆತನ ಸಾಧಿಸ್ತಿರೋ ವೈರಿ ರಾಷ್ಟ್ರದಲ್ಲೇ, ಒಂದು ಪರಮ ಪುಣ್ಯವಾದ ಹಿಂದೂ ದೇವರ ತೀರ್ಥ ಕ್ಷೇತ್ರ ಇದೆ ಎಂದರೆ ನಂಬಲಸಾಧ್ಯ!! ಆದರೆ ಆ ತೀರ್ಥ ಕ್ಷೇತ್ರವು ಇತಿಹಾಸ ಪುರಾಣಗಳಲ್ಲಿ ಉಲ್ಲೇಖವಾಗಿರೋ ಶಕ್ತಿಯುತ ಪುಣ್ಯ ಕ್ಷೇತ್ರವಾಗಿ ಬಿಂಬಿತವಾಗಿರೋದು ಮಾತ್ರ ಅಕ್ಷರಶಃ ನಿಜ. ಹಾಗಾಗಿ, ಪಾಕ್ ನೆಲದಲ್ಲಿರೋ ಹಿಂದೂಗಳ ಆ ಪವಿತ್ರ ತೀರ್ಥ ಕ್ಷೇತ್ರ ಎಂದು ಬಿಂಬಿತವಾಗಿರುವ ಕ್ಷೇತ್ರ ಬೇರಾವುದೂ ಅಲ್ಲ. ಅದೇ… ಸಾಕ್ಷಾತ್ ಶಿವನು ನೆಲೆಸಿರೋ “ಕಟಾಸ್ ರಾಜ್” ಅನ್ನೋ ಪುಣ್ಯ ಕ್ಷೇತ್ರ!!

ಪಾಕಿಸ್ತಾನದ ಚಕ್ವಾಲ್ ಜಿಲ್ಲೆಯಲ್ಲಿರೋ ಈ ಕಟಾಸ್ ರಾಜ್ ಕ್ಷೇತ್ರವು, ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಈ ಕಟಾಸ್ ರಾಜ್ ದೇಗುಲದ ಮುಂದೆ ಇರೋ ಪವಿತ್ರವಾದ ಕುಂಡದ ತೀರ್ಥ ತುಂಬಾನೇ ಶಕ್ತಿಯುತವಾಗಿದೆಯಲ್ಲದೇ, ಜಗತ್ತಿನಲ್ಲಿರೋ ಎರಡನೇ ಪುಣ್ಯ ತೀರ್ಥ ಕ್ಷೇತ್ರವಾಗಿ ಹೊರಹೊಮ್ಮಿದೆ. ಆ ಪವಿತ್ರ ತೀರ್ಥ ಕ್ಷೇತ್ರದಲ್ಲಿರೋ ಅದ್ಭುತವಾದ ಶಕ್ತಿಗಳು ಅನೇಕ ಪವಾಡಗಳನ್ನು ಸೃಷ್ಟಿಸುತ್ತದೆಯಲ್ಲದೇ, ಕುಂಡದಲ್ಲಿರೋ ನೀರನ್ನು ಕುಡಿದ್ರೆ, ಮೋಕ್ಷ ಸಿಗುತ್ತಂತೆ!! ಅಷ್ಟೇ ಅಲ್ಲದೇ, ಮಕ್ಕಳಾಗದವರಿಗೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆಯೂ ಇದೆ!!

ಎಲ್ಲಾ ಪಾಪ ಕರ್ಮಗಳು ಕಳೆಯುವ ಈ ಪುಣ್ಯ ತೀರ್ಥ ಕ್ಷೇತ್ರದ ಕುಂಡದಲ್ಲಿ ಮಿಂದೆದ್ದವರು ಹಲವು ಖಾಯಿಲೆಗಳಿಂದ ಗುಣಮುಖವಾಗಬಲ್ಲರು ಎನ್ನುವ ಪ್ರತೀತಿಯೂ ಇದೆ!! ಕಟಾಸ್ ರಾಜ್ ನಲ್ಲಿರೋ ಈ ಕುಂಡಕ್ಕೆ ಇಷ್ಟೋಂದು ಶಕ್ತಿ ಹೇಗೆ ಬಂತು..? ಅದ್ರಲ್ಲೂ ಪಾಕಿಸ್ತಾನದಂಥ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇವರು ನೆಲೆಸಿದ ರೀತಿಯಾದ್ರೂ ಹೇಗೆ ಅನ್ನೋ ಹಲವು ಅಚ್ಚರಿಯ ಪ್ರಶ್ನೆಗಳು ಕಾಡೋದು ಸಹಜ!! ಅದಕ್ಕೆಲ್ಲಾ ಉತ್ತರ ಇತಿಹಾಸದ ಪುಟಗಳಲ್ಲಿದೆ. ಅಸಲಿಗೆ ಪಾಕಿಸ್ತಾನದ ನೆಲದಲ್ಲಿರೋ ಕಟಾಸ್ ರಾಜ್ ತೀರ್ಥ ಕ್ಷೇತ್ರದ ಈ ಕುಂಡವು ಸಾಕ್ಷಾತ್ ಶಿವನಿಂದಲೇ ಸೃಷ್ಟಿಯಾದ ಪೌರಾಣಿಕ ಕುಂಡವಾಗಿದೆ!!

ಕಟಾಸ್ ರಾಜ್ ತೀರ್ಥ ಕ್ಷೇತ್ರವು ಸೃಷ್ಟಿಯದ ಬಗೆ ಹೇಗೆ??

ಹೌದು… ಶಿವ ಪುರಾಣದ ಪ್ರಕಾರ ಇದು ಸಾಕ್ಷಾತ್ ಶಿವನ ಕಣ್ಣೀರಿಂದ ಸೃಷ್ಟಿಯಾದ ಪವಿತ್ರ ಕುಂಡ. ಪರಶಿವನ ಪತ್ನಿ ಪಾರ್ವತಿ ಅಗ್ನಿಕುಂಡಕ್ಕೆ ಜಿಗಿದು ಸ್ವರ್ಗಸ್ಥಳಾದಾಗ, ಶಿವನಿಗೆ ತಡೆದುಕೊಳ್ಳೋಕೆ ಆಗದಂಥ ದುಃಖವು ಉಮ್ಮಳಿಸುತ್ತದೆಯಂತೆ. ಅದೇ ನೋವಲ್ಲಿ ಪರಮೇಶ್ವರನು ಜೋರಾಗಿ ಕಣ್ಣೀರು ಸುರಿಸಿದಾಗ ಎರಡು ಕಣ್ಣಿಂದ ಹರಿದ ಕಣ್ಣೀರು ಎರಡು ಸ್ಥಳಗಳಲ್ಲಿ ಬಿದ್ದು ಕುಂಡವಾಗುತ್ತದೆಯಂತೆ. ಅದರಲ್ಲಿ ಒಂದು ಕುಂಡ ಭಾರತದ ಅಜ್ಮೀರ್ ನಲ್ಲಿರೋ ಪುಷ್ಕರ್ ನಲ್ಲಿದ್ದರೆ, ಮತ್ತೊಂದು ಕಣ್ಣಿನಿಂದ ಹರಿದ ನೀರೇ ಪಾಕಿಸ್ತಾನದ “ಕಟಾಸ್ ರಾಜ್”ನಲ್ಲಿ ಸೃಷ್ಟಿಯಾದ ಈ ಪವಿತ್ರವಾದ ಕುಂಡ.

ಇನ್ನು ಮಹಾಭಾರತದ ಪಾಂಡವರು ತಮ್ಮ 14 ವರ್ಷಗಳ ವನವಾಸದಲ್ಲಿ, 4 ವರ್ಷಗಳನ್ನು ಇದೇ ಜಾಗದಲ್ಲಿ ಕಳೆದಿದ್ರು ಅಂತನೂ ಹೇಳಲಾಗುತ್ತದೆ. ಅಷ್ಟೇ ಅಲ್ಲದೇ, ಈ ಕುಂಡದ ತೀರ್ಥವೇ ಅವರ ದಾಹ ನೀಗಿಸಿತ್ತು ಅಂತ ಪುರಾಣಗಳು ಹೇಳುತ್ತವೆ. ಈ ಕಲಿಯುಗದಲ್ಲಿ ಈ ತೀರ್ಥ ಕ್ಷೇತ್ರದಲ್ಲಿನ ನೀರು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ. ಹಾಗಾಗಿ ಹರಕೆ ಹೊತ್ತು ಬರುವ ಭಕ್ತರು ಈ ಕುಂಡದ ಪವಿತ್ರ ನೀರಿನಲ್ಲಿ ಮಿಂದೆದ್ದರೆ, ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಆದರೆ ಈ “ಕಟಾಸ್ ರಾಜ್” ತೀರ್ಥ ಕ್ಷೇತ್ರದ ಮಹತ್ವವನ್ನು ತಿಳಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ. ಯಾಕೆಂದರೆ, ಈ ಕಟಾಸ್ ರಾಜ್ ತೀರ್ಥ ಕ್ಷೇತ್ರವು, “ತನಗೆ ಬೇಕು ಅಂದವರನ್ನು ಎಷ್ಟೇ ದೂರ ಇದ್ರೂ ಕರೆಸಿಕೊಳ್ಳುತ್ತದೆಯಂತೆ”. ಹಾಗಾಗಿ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿಯವರನ್ನೂ ತನ್ನತ್ತ ಕರೆಸಿಕೊಂಡಿದೆ ಈ ಕ್ಷೇತ್ರ. ವೈರಿ ರಾಷ್ಟ್ರದಲ್ಲಿರೋ ಆ ಪವಿತ್ರ ಕ್ಷೇತ್ರಕ್ಕೆ ಕಾಲಿಡಬೇಕು ಅಂದ್ರೆ, ಅದೃಷ್ಠ ಇರಬೇಕು. ಜೊತೆಗೆ ಆ ದೇವರ ಅನುಗ್ರಹಾನೂ ಇರಬೇಕು ಎನ್ನುವುದು ಮಾತ್ರ ನಿಜ!!
ಶಿವರಾತ್ರಿ ದಿನಗಳಲ್ಲಿ ಕೇವಲ 200 ಮಂದಿಗೆ ಪ್ರವೇಶ!! ಅಲ್ಲಿಗೆ ಹೋಗುವುದಾದರೂ ಹೇಗೆ ಗೊತ್ತೇ!!

ಆದರೆ, ಪಾಕಿಸ್ತಾನದ ನೆಲದಲ್ಲಿರೋ, ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರವನ್ನು ದರ್ಶನ ಮಾಡ್ಬೇಕು ಅಂದ್ರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ, ಹಿಂದೂ ತೀರ್ಥಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ಭಾರತ ಸರ್ಕಾರವೇ ಪ್ರತಿ ವರ್ಷದ ಶಿವರಾತ್ರಿ ದಿನಗಳಲ್ಲಿ 200 ಮಂದಿಯನ್ನು ಇಲ್ಲಿಗೆ ಸುರಕ್ಷಿತವಾಗಿ ಕಳಿಸೋ ವ್ಯವಸ್ಥೆ ಮಾಡುತ್ತದೆ. ಹಾಗಾಗಿ ಕಟಾಸ್ ರಾಜ್ ತೀರ್ಥ ಕ್ಷೇತ್ರಕ್ಕೆ ಬರಬೇಕು ಅಂತ ಅನ್ಕೊಂಡಿರೋರೆಲ್ಲಾ, ಮೊದಲು ದೆಹಲಿಯಲ್ಲಿ ಒಟ್ಟಿಗೆ ಸೇರಬೇಕು..

ತದನಂತರ ಅಲ್ಲಿಂದ ಟ್ರೈನ್ ನ ಮೂಲಕ ಅಮೃತಸರಕ್ಕೆ ಬರಬೇಕಾಗುತ್ತದೆ. ಅಲ್ಲಿ ಸ್ವರ್ಣ ಮಂದಿರದಂತೆ ಕಂಗೊಳಿಸುವ ಅಮೃತಸರದ ದುರ್ಗಯಾನಾ ಮಂದಿರಕ್ಕೆ ತಲುಪಬೇಕು. ಅಲ್ಲಿಂದಲೇ ಕಟಾಸ್ ರಾಜ್ ಯಾತ್ರೆ ಶುರುವಾಗೋದು!! ದುರ್ಗಾಮಾತೆಯ ದರ್ಶನ ಪಡೆದ ನಂತರ, ವಿಶ್ವಮಾತಾ ಮಂದಿರಕ್ಕೆ ಹೋಗ ಬೇಕು. ತದನಂತರ ಗುಹೆಯಂಥ ದೇಗುಲದಲ್ಲಿ ಬಗ್ಗಿಕೊಂಡೇ ಹೋಗಬೇಕಾಗುತ್ತದೆ. ಈ ದೇಗುಲದಲ್ಲಿ ಶಿವ, ಬ್ರಹ್ಮ, ಸೇರಿದಂತೆ ಎಲ್ಲಾ ದೇವತೆಗಳು ಇಲ್ಲಿ ನೆಲೆಸಿರುವಂತಹ ಸ್ಥಳಗಳನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಈ ದೇಗುಲದೊಳಗೆ ಕಾಲಿಟ್ಟರೆ ಸಾಕು ನರನಾಡಿಗಳಲ್ಲೂ ಭಕ್ತಿರಸ ಉಕ್ಕಿ ಹರಿಯುವುದಂತೂ ಖಂಡಿತಾ…

ಇನ್ನು ಇಲ್ಲಿರೋ ಪವಿತ್ರವಾದ ಕುಂಡದಲ್ಲಿ ಮುಳುಗೆದ್ದವರು, ಸಕಲ ಪಾಪಗಳಿಂದ ಮುಕ್ತರಾಗ್ತಾರೆ ಅನ್ನೋ ನಂಬಿಕೆ ಇದೆ. ವಿಶ್ವಮಾತೆಯ ದರ್ಶನದ ಪಡೆದ ನಂತರ, ಪವಿತ್ರ ಸರೋವರದ ನಡುವೆ ಇರೋ ಸ್ವರ್ಣ ಮಂದಿರದ ಕಡೆಗೆ ಹೆಜ್ಜೆ ಹಾಕಲಾಗುತ್ತದೆ. ಇಲ್ಲಿ ಶ್ರೀರಾಮನ ಶ್ರೀಮತಿ ಸೀತಾಮಾತೆ ಈ ಕುಂಡದಲ್ಲಿ ಒಮ್ಮೆ ಸ್ನಾನ ಮಾಡಿದ್ಳು ಅಂತ ಕೂಡ ಕತೆ ಇದೆ. ಸ್ವರ್ಣಮಂದಿರದಿಂದಾಗಿ, ರಾತ್ರಿ ಸಮಯದಲ್ಲಿ ಈ ಸರೋವರಾ ಕೂಡ ಚಿನ್ನದಂತೆ ಕಂಗೊಳಿಸುತ್ತದೆಯಂತೆ!! ಇಲ್ಲಿನ ಗುರುದ್ವಾರದಲ್ಲಿ ಪೂಜೆ ಮುಗಿಸಿದ ನಂತರ ಕಟಾಸ್ ರಾಜ್ ಗೆ ಜೈಕಾರ ಹಾಕಿಕೊಂಡು, ಯಾತ್ರೆ ಶುರುಮಾಡ್ತಾರೆ. ಅಲ್ಲಿಂದ ನೇರವಾಗಿ ಬರೋದು ಅಟಾರಿ ರೈಲ್ವೇ ಸ್ಟೇಷನ್‍ಗೆ..

ಇದು ಭಾರತ ಮತ್ತು ಪಾಕಿಸ್ತಾನವನ್ನು ಜೋಡಿಸುವ ಏಕೈಕ ರೈಲು ನಿಲ್ದಾಣವಾಗಿರೋದರಿಂದ ಇಲ್ಲಿಂದ ವಾಘಾ ಬಾರ್ಡರ್ 2 ಕಿಮಿ ಅಷ್ಟೇ.. ಹಾಗಾಗಿ ಭಾರತದ ರೂಪಾಯಿಯ£ನ್ನು ಪಾಕಿಸ್ತಾನದ ಕರೆನ್ಸಿಗೆ ಬದಲಾಯಿಸಿಕೊಂಡು, ದೇವರ ಜಪ ಮಾಡ್ತಾ ರೈಲು ಹತ್ತುತ್ತಾರೆ. ಇನ್ನು ಲಾಹೋರ್ ಗೆ ಬರೋ ಭಾರತದ ಯಾತ್ರಾರ್ಥಿಗಳಿಗೆ ಇಲ್ಲಿನ ಗುರುದ್ವಾರದಲ್ಲಿ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿರುತ್ತೆ. ಇಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು, ಕಟಾಸ್ ರಾಜ್ ಮತ್ತು ಭೋಲೆನಾಥನನಿಗೆ ಜೈ ಕಾರ ಹಾಕಿಕೊಂಡು ಬಸ್ಸಿನಲ್ಲಿ ಮುಂದಿನ ಯಾತ್ರೆ ಶುರು ಮಾಡ್ತಾರೆ.

 

ಬೆಟ್ಟ ಗುಡ್ಡಗಳ ನಡುವಿನ ಸುದೀರ್ಘ ಪಯಣದ ನಂತರ, ಕಟಾಸ್ ರಾಜ್ ಗೆ ತಲುಪುತ್ತಾರೆ. ಇಲ್ಲಿಗೆ ಬರೋ ಹಿಂದೂ ಭಕ್ತರನ್ನು ಸ್ವಾಗತಿಸೋದಕ್ಕೆ, ಪಾಕಿಸ್ತಾನವೇ ಸಜ್ಜಾಗಿ ನಿಂತಿರುತ್ತದೆಯಲ್ಲದೇ, ಯಾತ್ರಾರ್ಥಿಗಳಿಗೆ ಇರೋದಕ್ಕೆ ಬೇಕಾದ ವ್ಯವಸ್ಥೆಯನ್ನೂ ಕೂಡ ಮಾಡಿಕೊಡುತ್ತೆ ಪಾಕಿಸ್ತಾನ!! ತಾವು ತಂಗಿರೋ ಪ್ರದೇಶದಿಂದ ಹಾಗೆ ದೂರಕ್ಕೆ ಕಣ್ಣು ಹಾಯಿಸಿದರೆ, ಕಣ್ಮುಂದೆನೇ ಕಾಣುತ್ತೆ ಕಟಾಸ್ ರಾಜ್ ದೇಗುಲ. ಅದರ ಪಕ್ಕದಲ್ಲೇ ಕಾಣುತ್ತದೆ, ಸಾಕ್ಷಾತ್ ಶಿವನೇ ಸೃಷ್ಟಿಸಿದ ಪವಿತ್ರ ಪುಣ್ಯವಾದ ಕುಂಡ!!

ಆದರೆ ಇಲ್ಲಿನ ವಿಶೇಷವೇನೆಂದರೆ, ಈ ಕುಂಡದಲ್ಲಿ ಸ್ನಾನವಾದ ನಂತರಾನೇ ದೇಗುಲವನ್ನು ಪ್ರವೇಶಿಸಬೇಕು ಎನ್ನುವುದೇ ಇಲ್ಲಿನ ನಿಯಮ!! ಇನ್ನು ಈ ದೇವಾಲಯ ಒಟ್ಟು 7 ಮಂದಿರಗಳ ಒಂದು ಸಮ್ಮಿಲನವಾಗಿದೆ. ಹಾಗಾಗಿ ಕ್ರಿ.ಪೂ 650 ರಿಂದ 950 ರ ಕಾಲದಲ್ಲಿ ಈ ದೇಗುಲದ ನಿರ್ಮಾಣವಾಗಿದೆ ಅಂತ ಅಂದಾಜಿಸಲಾಗಿದರೂ ಕೂಡ ಈ ದೇವಾಲಯವೂ 2500 ವರ್ಷಗಳಿಗಿಂತಲೂ ಹಳೆಯ ಕಾಲದ ದೇವಸ್ಥಾನ ಎಂದು ಹೇಳಲಾಗುತ್ತದೆ!!

ದೇವಾಲಯದ ನಿರ್ಮಾಣ ಹೇಗಿದೆ ಗೊತ್ತೇ??

ಪಾಕಿಸ್ತಾನದಲ್ಲಿರೋ ಈ ದೇಗುಲವನ್ನು ಚೌಕಾಕಾರವಾಗಿ ಕಟ್ಟಲಾಗಿದೆ. ಈ ದೇವಾಲಯದ ಪೂರ್ವದ ದಿಕ್ಕಿನಲ್ಲಿ ಪ್ರವೇಶ ದ್ವಾರ ಇದ್ದು, ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ. ಮಂದಿರದೊಳಗೆ ಬಂದ ಭಕ್ತರು, ಮೊದಲಿಗೆ ಬಿಲ್ವಪತ್ರೆಯನ್ನಿಟ್ಟು, ಶಿವಲಿಂಗಕ್ಕೆ ಪೂಜೆ ಸಲ್ಲಿಸ್ತಾರೆ. ತದನಂತರ ಹೂವು, ಹಣ್ಣುಗಳನ್ನು ಶಿವನಿಗೆ ಸಮರ್ಪಿಸಿ, ಪಾವನರಾಗುತ್ತಾರೆ. ಇನ್ನು ಇಲ್ಲಿಗೆ ಬರೋ ಕೆಲವರು, ಶಿವನ ಭಜನೆ ಮಾಡ್ತಾ, ಶಿವನಾಮಸ್ಮರಣೆಯಲ್ಲಿ ಮುಳುಗಿಬಿಡ್ತಾರೆ.

ಶಿವನ ದರ್ಶನವಾದ ನಂತರ ಭಾರತದ ಹಿಂದೂ ಯಾತ್ರಾರ್ಥಿಗಳ ಜೊತೆಗೆ ಪಾಕಿಸ್ತಾನ ಸರ್ಕಾರವು ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ. ಪಾಕಿಸ್ತಾನದ ಮಂತ್ರಿಗಳು, ಹಿರಿಯ ಅಧಿಕಾರಿಗಳು ಅಲ್ಲಿಗೆ ಬಂದು, ಯಾತ್ರಿಕರ ಜೊತೆ ಸಂವಾದ ನಡೆಸ್ತಾರೆ. ಈ ದೇಗುಲದ ಬಗ್ಗೆ ಜೀರ್ಣೋದ್ಧಾರದ ಬಗ್ಗೆ ಚರ್ಚೆ ನಡೆಸ್ತಾರೆ. ನಂತರ ಭಾರತದ ಯಾತ್ರಾರ್ಥಿಗಳಿಗೆ ಅತಿಥಿ ಸತ್ಕಾರ ನೀಡಿ, ಅಲ್ಲಿಂದ ಬೀಳ್ಕೊಡಲಾಗುತ್ತದೆ.

ಇಂತಹ ಐತಿಹಾಸಿಕ ಹಿಂದೂ ಪುಣ್ಯಕ್ಷೇತ್ರದಿಂದ, ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಪವಿತ್ರ ಕುಂಡದ ತೀರ್ಥವು ಪ್ರತೀವರ್ಷವೂ ಕೂಡ ಸ್ವತಃ ಪಾಕಿಸ್ತಾನ ಸರ್ಕಾರಾವೇ ಅದನ್ನು ಅಡ್ವಾಣಿಯವರಿಗೆ ಕಳಿಸಿಕೊಡುತ್ತಾರಂತೆ!! ಹಾಗಾದರೆ ಆ ದೇಗುಲಕ್ಕೂ ಅಡ್ವಾಣಿಗೂ ಇರೋ ಆ ಅನುಬಂಧವಾದರೂ ಏನು? ಪಾಕಿಸ್ತಾನ ಸರ್ಕಾರಾನೇ ಮುತುವರ್ಜಿ ವಹಿಸಿ ಆ ಪವಿತ್ರ ಕುಂಡದ ತೀರ್ಥ ಕಳಿಸುತ್ತೆ ಅಂದ್ರೆ, ಅದರ ಹಿಂದಿರೋ ಮರ್ಮವೇನು ಗೊತ್ತೇ?

ಪಾಕಿಸ್ತಾನದಲ್ಲಿರೋ ದೇಗುಲಕ್ಕೆ ಅಡ್ವಾಣಿಯಿಂದ ಜೀರ್ಣೋದ್ದಾರ…………

ನಿಜ… ಪಾಕ್ ನೆಲದ ದೇಗುಲದ ಜೀರ್ಣೋದ್ದಾರಕ್ಕೆ ಪಣ ತೊಟ್ಟ ವ್ಯಕ್ತಿ ಬೇರೆ ಯಾರೂ ಅಲ್ಲ. ಅದು ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ!! ಭಾರತ ಮತ್ತು ಪಾಕಿಸ್ತಾನ 1947 ರಲ್ಲಿ ಇಬ್ಭಾಗವಾದಾಗ, ಹಿಂದೂಸ್ತಾನಕ್ಕೆ ಸೇರಿದ್ದ ಈ ಕಟಾಸ್ ರಾಜ್ ದೇಗುಲ ಪಾಕ್ ಪಾಲಾಯ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತುಂಬಾನೇ ಹಳಸಿ ಹೋಗಿತ್ತು. ಇದರಿಂದಾಗಿ ಈ ಪವಿತ್ರ ತೀರ್ಥಕ್ಷೇತ್ರಕ್ಕೆ ಹೋಗಿ ಶಿವನ ದರ್ಶನ ಪಡೀಬೇಕು, ಈ ಕುಂಡದಲ್ಲಿ ಮಿಂದೇಳಬೇಕು ಅನ್ನೋ ಭಕ್ತರ ಆಸೆ ಕೇವಲ ಆಸೆಯಾಗಿಯೇ ಉಳಿದು ಬಿಟ್ತು.

ಆದರೆ, 2004 ರಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪಾಕಿಸ್ತಾನದ ಜೊತೆ ಬಾಂಧವ್ಯ ವೃದ್ಧಿಗಾಗಿ ಪ್ರಯತ್ನಿಸಿದ್ದರು. ಇದಕ್ಕೆ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಷ್ಟೇ ಅಲ್ಲದೇ, ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಈ ಕಟಾಸ್ ರಾಜ್ ದೇಗುಲದ ಜೀರ್ಣೋದ್ದಾರಕ್ಕೂ ಅಡಿಪಾಯ ಹಾಕಿದ್ದರು. ಇದೇ ವೇಳೆ ಭಾರತದ ಯಾತ್ರಾರ್ಥಿಗಳಿಗೂ ಈ ಪುಣ್ಯಕ್ಷೇತ್ರ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಯಿತು. ಇನ್ನು 2005 ರಲ್ಲಿ ಸ್ವತಃ ಎಲ್.ಕೆ ಅಡ್ವಾಣಿನೇ ಈ ತೀರ್ಥ ಕ್ಷೇತ್ರಕ್ಕೆ ಬಂದು, ಈ ಕುಂಡದಲ್ಲಿ ಮಿಂದೆದ್ದಿದ್ದರು.

ಅಂದಿನಿಂದ ಪಾಕಿಸ್ತಾನದ ನೆಲದಲ್ಲಿರೋ, ಈ ಹಿಂದೂ ತೀರ್ಥಕ್ಷೇತ್ರದ ಅಭಿವೃದ್ಧಿಗೆ ಪಾಕ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. 2 ಕೋಟಿ ರೂಪಾಯಿಯಲ್ಲಿ ಶಿವಲಿಂಗಕ್ಕೆ ಮತ್ತೆ ಐತಿಹಾಸಿಕ ಮೆರುಗು ನೀಡಿದೆ. 2006-07 ರಲ್ಲಿ ಈ ದೇಗುಲದ ಜೀರ್ಣೋದ್ದಾರಕ್ಕೆ ಪಾಕ್ ಸರ್ಕಾರ ನೀಡಿದ ಮೊತ್ತ, ಬರೋಬ್ಬರಿ 8 ಕೋಟಿ. ಇನ್ನು ಈ ಕಟಾಸ್ ರಾಜ್ ಪುಣ್ಯಕ್ಷೇತ್ರದ ಜೀರ್ಣೋದ್ದಾರವಾಗಿದ್ದು ಅಡ್ವಾಣಿಯಿಂದ.. ಭಾರತದ ಹಿಂದೂ ಭಕ್ತರಿಗೆ ಈ ತೀರ್ಥ ಕ್ಷೇತ್ರ ಬಾಗಿಲು ತೆಗೆದಿದ್ದು ಅಡ್ವಾಣಿಯಿಂದ.. ಆಧುನಿಕ ಯುಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಾವೈಕ್ಯತೆಯ ಕುರುಹಾಗಿ ಈ ಕಟಾಸ್ ರಾಜ್ ತಲೆ ಎತ್ತಿದ್ದು ಎಲ್.ಕೆ ಅಡ್ವಾಣಿಯಿಂದ. ಇದೇ ಕಾರಣಕ್ಕಾಗಿ ಪ್ರತಿ ವರ್ಷ ತಪ್ಪದೇ ಈ ಪವಿತ್ರ ಕುಂಡದ ತೀರ್ಥವನ್ನು ಅಡ್ವಾಣಿಯವರಿಗೆ ಕಳಿಸಿಕೊಡುತ್ತೆ ಪಾಕಿಸ್ತಾನದ ಸರ್ಕಾರ!!

ಅದೇನೇ ಇರಲಿ.. ಶತ್ರುಗಳ ನಾಡಿನಲ್ಲಿ ಪವಿತ್ರವಾದ ಹಿಂದೂ ದೇವಾಲಯ ಇನ್ನೂ ಕೂಡ ಜೀವಂತವಾಗಿರೋದೇ ಅಚ್ಚರಿಯ ಸಂಗತಿ. ಇದರ ಜೊತೆಗೆ ಮುಸಲ್ಮಾನ ರಾಷ್ಟ್ರವಾದ ಪಾಕ್ ಸರ್ಕಾರವೇ ಆ ತೀರ್ಥ ಕ್ಷೇತ್ರದ ಜೀರ್ಣೋದ್ಧಾರಕ್ಕೆ ನಿಂತಿರೋದು ಇನ್ನೊಂದು ಅಚ್ಚರಿಗೆ ಕಾರಣ!!

– ಅಲೋಖಾ

Editor Postcard Kannada:
Related Post