X

ಸಂಸತ್ತಿನಲ್ಲಿ ಮೇಜು ಕುಟ್ಟುತ್ತ ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುತ್ತಿದ್ದ ಕಾಂಗ್ರೆಸ್, ಕಮ್ಯುನಿಸ್ಟ್ ಸಂಸದರು ಜಾರ್ಜ್ ಫರ್ನಾಂಡಿಸ್ ರವರ ‘ಆ’ ಮಾತನ್ನ ಕೇಳಿದಾಕ್ಷಣ ಯಾಕೆ ಗರಬಡಿದವರಂತೆ ಬಾಯಿ ಮುಚ್ಚಿದ್ದರು?

ಅದು 1998 ರ ಸಮಯ, ಲೋಕಸಭೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹಾಗು ಎನ್.ಡಿ.ಎ ಮೈತ್ರಿಕೂಟ ದೊಡ್ಡ ಮೈತ್ರಕೂಟವಾಗಿ ಹೊರಹೊಮ್ಮಿತ್ತು, ಅಟಲ್ ಬಿಹಾರಿ ವಾಜಪೇಯಿಯವರನ್ನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರು.

ಸಂಸತ್ತಿನಲ್ಲಿ ವಿಶ್ವಾಸಮತದ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಬಿಜೆಪಿಗಿಂತ ಕಡಿಮೆ ಸಂಖ್ಯೆಯ ಸಂಸದರನ್ನ ಹೊಂದಿದ್ದ ಕಾಂಗ್ರೆಸ್ ತನ್ನ ಕೈಯಿಂದ ಅಧಿಕಾರ ತಪ್ಪಿಹೋಯಿತೆಂಬ ಕಾರಣಕ್ಕೆ ಚಡಪಡಾಯಿಸುತ್ತ ವಿರೋಧ ಪಕ್ಷದಲ್ಲಿ ಕೂತಿತ್ತು.

ಹೇಗಾದರೂ ಮಾಡಿ ಸಂಸತ್ತಿನಲ್ಲಿ ಬಿಜೆಪಿಯನ್ನ, ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದ ವಿರುದ್ಧ ದಂಗೆಯೆಬ್ಬಿಸಬೇಕಂತ ಕಾಂಗ್ರೆಸ್ ಹಾಗು ಕಮ್ಯುನಿಸ್ಟ್ ಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲವನ್ನೆಬ್ಬಿಸಿಬಿಟ್ಟರು. ಕಾಂಗ್ರೆಸ್ ಹಾಗು ಕಮ್ಯುನಿಸ್ಟ್ ಎರಡೂ ಪಕ್ಷದ ಸಂಸದರು ಜೊತೆ ಜೊತೆಗೇ ಕೂತು ಎನ್.ಡಿ.ಎ ಸರ್ಕಾರದ ವಿರುದ್ಧ ತೀಕ್ಷ್ಣವಾದ ದಾಳಿಯನ್ನ ಮಾಡುತ್ತ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ತಮ್ಮ ವಾಕ್ಪ್ರಹಾರವನ್ನ ಮುಂದುವರೆಸಿದ್ದರು.

ಕಾಂಗ್ರೆಸ್ಸಿನ ಸಂಸದನೊಬ್ಬ ತನ್ನ ಮಾತುಗಳನ್ನ ಮುಂದಿಟ್ಟರೆ ಕಮ್ಯುನಿಸ್ಟ್ ಸಂಸದರು ಮೇಜನ್ನ ಕುಟ್ಟುತ್ತ ಸಂಭ್ರಮಿಸಿದರೆ ಕಮ್ಯುನಿಸ್ಟ್ ಸಂಸದ ಮಾತನ್ನ ಮುಂದುವರೆಸಿದರೆ ಕಾಂಗ್ರೆಸ್ ಸಂಸದರು ಮೇಜನ್ನ ಕುಟ್ಟುತ್ತ ಒಬ್ಬರನ್ನೊಬ್ಬರಿಗೆ ತಮ್ಮ ಬೆಂಬಲ ಸೂಚಿಸುತ್ತ ವಿಕೃತ ಖುಷಿಯನ್ನ ಅನುಭವಿಸುತ್ತಿದ್ದರು.

ಇವರ ಪ್ರಶ್ನೆಗಳಿಗೆ ಖಾರವಾಗಿ ಉತ್ತರಿಸಲು ಎನ್.ಡಿ.ಎ ಮುಂದಾದಾಗ ಕಾಂಗ್ರೆಸ್ಸನ್ನ ಸಮರ್ಥಿಸುತ್ತ ಕಮ್ಯುನಿಸ್ಟ್ ಸಂಸದರು ಮುಂದಾದರೆ ಕಮ್ಯುನಿಸ್ಟ್ ಸಂಸದರ ಬೆಂಬಲಕ್ಕೆ ಕಾಂಗ್ರೆಸ್ ಮುಂದಾಗುತ್ತಿತ್ತು.

ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವನ್ನ ಕೋಮುವಾದಿ ಸರ್ಕಾರವೆಂದು ಬಿಂಬಿಸಿ ಎನ್.ಡಿ.ಎ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸೋ ಕಾಲ್ಡ್ ಸೆಕ್ಯೂಲರ್ ಪಾರ್ಟಿಗಳೆಲ್ಲವೂ ಒಂದಾಗಿಬಿಟ್ಟಿದ್ದವು.

ಈ ಸಂದರ್ಭದಲ್ಲಿ ಸರಕಾರದ ಪರವಾಗಿ ಅದ್ಭುತ ವಾಗ್ಮಿ, ಸಂಘಟನಾ ಚತುರ, ಅಪ್ರತಿಮ ದೇಶಭಕ್ತ ಜಾರ್ಜ್ ಫರ್ನಾಂಡಿಸ್ ಬ್ಯಾಟಿಂಗ್ ಮಾಡಲು ಮುಂದಾಗುತ್ತ ಅವರು ಹೇಳ್ತಾರೆ “ಅಧ್ಯಕ್ಷ ಮಹೋದಯರೇ, ನಾನು ನಿಮಗೆ ದೇಶದ ಮಹತ್ವದ ಈ ಕಾಂಗ್ರೆಸ್ ಎಂಬ ಸಂಘಟನೆಯ ಬಗ್ಗೆಯ ಕೆಲ ವಿಚಾರಗಳನ್ನ ತಿಳಿಸಲು ಇಚ್ಛಿಸುತ್ತೇನೆ” ಎಂದು ಒಂದು ತೆಳ್ಳಗಿನ ಸಣ್ಣ ಪುಸ್ತಕವೊಂದನ್ನ ತೆಗೆದು ಓದಲು ಶುರು ಮಾಡಿದರು

“ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಚಿಲುಮೆಯ ಬುಗ್ಗೆ …(ಕಾಂಗ್ರೆಸ್ ಸಂಸದರಿಂದ ಭಾರೀ ಆಕ್ಷೇಪ)…ಬ್ರಿಟಿಷರು ಈ ದೇಶವನ್ನ ಬಿಟ್ಟು ಹೋದಮೇಲೆ ಅವರ ಜಾಗವನ್ನ ಕಾಂಗ್ರೆಸ್ ತುಂಬಿದೆ, ಹತ್ರತ್ರ 50 ವರ್ಷಗಳವರೆಗೆ ಅತ್ಯಾಧುನಿಕ ಭ್ರಷ್ಟಾಚಾರದ ರೆಕಾರ್ಡ್ ಗಳನ್ನ ಸೃಷ್ಟಿಸಿದೆ..(ಕಾಂಗ್ರೆಸ್ ಸಂಸದರಿಂದ ಮತ್ತೆ ಕೋಲಾಹಲ) ಕಾಂಗ್ರೆಸ್ಸಿನ ಅನೇಕ ಮಂತ್ರಿಗಳು ಮುಂಡ್ರಾ ಹಗರಣ, ಚುರ್ಹಾತ್ ಲಾಟರಿ ಹಗರಣ, ಬೊಫೋರ್ಸ್ ಹಗರಣ, ಸುಖರಾಮ್ ಹಗರಣ, ಹರ್ಷದ್ ಮೆಹತಾ ಹಗರಣ, JMM ಕಿಕ್ ಬ್ಯಾಕ್ ಹಗರಣ, ಹವಾಲಾ ಹಗರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ದೇಶದಲ್ಲಿನ ಸಾಂವಿಧಾನಿಕವಾಗಿರುವ ಪ್ರತಿಯೊಂದು ಇನ್ಸ್ಟಿಟ್ಯೂಶನ್ ಗಳಲ್ಲೂ ಕಾಂಗ್ರೆಸ್ ವ್ಯಾಪಕ ಭ್ರಷ್ಟಾಚಾರ ಮಾಡಿದೆ”

ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಹಾಗು ಕಮ್ಯುನಿಸ್ಟ್ ಪಕ್ಷದ ಸಂಸದರು ಲೋಕಸಭಾ ಸ್ಪೀಕರ್ ರನ್ನ ಪ್ರಶ್ನಿಸುತ್ತ “ಸ್ಪೀಕರ್ ಸರ್! ದಯವಿಟ್ಟು ಮಾನ್ಯ ಸಂಸದರು ಹೇಳುತ್ತಿರೋ ವಿಷಯಗಳಿಗೆ ಮೊದಲು ಯಾವ ಆಧಾರದ ಮೇಲೆ ಈ ವಿಷ್ಯಗಳನ್ನ ಪ್ರಸ್ತಾಪ ಮಾಡ್ತಿದಾರೆ? ಮೊದಲು ಅದರ source ಕೊಡೋಕೆ ಹೇಳಿ, ಅಲ್ಲೀವರೆಗೂ ಇವರನ್ನ ಅದ್ಯಾವುದೋ ಪುಸ್ತಕದಲ್ಲಿನ ವಿಷಯವನ್ನ ಓದೋಕೆ ನಾವು ಬಿಡಲ್ಲ”

ಇದಕ್ಕೆ ಜಾರ್ಜ್ ಫರ್ನಾಂಡಿಸ್ ಹೇಳ್ತಾರೆ “ದಯವಿಟ್ಟು ಅಸಹಿಷ್ಣುಗಳಾಗಬೇಡಿ. ಖಂಡಿತವಾಗಿಯೂ ಆ source ನ ಬಗ್ಗೆ ನಾ ಹೇಳ್ತೀನಿ. ಮೊದಲು ಈ ಪುಸ್ತಕದಲ್ಲಿನ ವಿಷಯವನ್ನಾದರೂ ಓದೋಕೆ ಬಿಡಿ”

ಜಾರ್ಜ್ ಮುಂದೆ ಆ ಪುಸ್ತಕ ಓದುತ್ತ “ಕಾಂಗ್ರೆಸ್ಸಿನ ಸೆಲ್ಯೂಲರಿಸಂ ಕೂಡ ರಂಗುರಂಗಿನ ಆಟವಾಗಿದೆಯಷ್ಟೆ. ಕಾಂಗ್ರೆಸ್ಸಿ ಗೂಂಡಾಗಳು ದಂಗೆಗಳಲ್ಲಿ ಭಾಗಿಯಾಗಿದಾರೆ, ದೆಹಲಿಯ ಬೀದಿಗಳಲ್ಲಿ 3000 ಸಿಖ್ಖರ ಮಾರಣಹೋಮ ನಡೆಸಿದ್ದಾಗ ರಾಜೀವ್ ಗಾಂಧಿ ಬಾಯಿ ಮುಚ್ಚಿ ಕೂತಿದ್ದರು”

ಇದರಿಂದ ಮತ್ತೆ ಕೆರಳಿದ ಕಾಂಗ್ರೆಸ್ ಕಮ್ಯುನಿಸ್ಟ್ ಸಂಸದರಿಂದ ಮತ್ತೆ ಭಾರೀ ಆಕ್ಷೇಪ ವ್ಯಕ್ತವಾಗುತ್ತೆ

ಜಾರ್ಜ್ ಹೇಳ್ತಾರೆ, “ಎರಡು ನಿಮಿಷ ಸಮಯ ಕೊಡಿ ಮಾರಾಯ್ರೆ ನಿಮಗೆ ಈ ವಿಷಯಗಳ source ಖಂಡಿತ reveal ಮಾಡ್ತೇನೆ”

ಮತ್ತೆ ತಮ್ಮ ಕೈಲಿದ್ದ ಪುಸ್ತಕವನ್ನ ಓದುತ್ತ “ಸ್ಪೀಕರ್ ಸರ್, ಇತಿಹಾಸದಲ್ಲಿ ಇಡೀಜಗತ್ತಿನ ಯಾವ ದೇಶವೂ ಭ್ರಷ್ಟಾಚಾರ ಮಾಡುತ್ತ ದೇಶವನ್ನ ಸಮೃಧ್ಧಿಗೊಳಿಸಿಲ್ಲ. ಕಾಂಗ್ರೆಸ್ ಈ ಇಬ್ಬಗೆ ನೀತಿಯಿಂದ ದಶಕಗಳವರೆಗೆ ಆಡಳಿತ ನಡೆಸಿದೆ. ಕಾಂಗ್ರೆಸ್ಸಿನ ಉಳಿವು ದೇಶ ವಿಕಾಸಕ್ಕೆ ಮಾರಕವಾಗಿದೆ. ಆದ್ದರಿಂದ ದೇಶದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನ ದೇಶದಿಂದ ಕಿತ್ತೆಸೆಯಬೇಕಾಗಿದೆ”

ಕಾಂಗ್ರೆಸ್ ಹಾಗು ಕಮ್ಯುನಿಸ್ಟರಿಂದ ಹೇಳತೀರದ ರಾದ್ಧಾಂತ ಶುರುವಾಗಿಬಿಟ್ಟಿತು “ಸ್ಪೀಕರ್ ಸರ್, ಈ ರೀತಿಯಾಗಿ ಯಾವ ಆಧಾರದ ಮೇಲೆ ಜಾರ್ಜ್ ಫರ್ನಾಂಡಿಸ್ ಈ ಮಾತುಗಳನ್ನ ಹೇಳ್ತಿದಾರೆ ಅಂತ ಕೇಳಿಕೊಂಡು ಕೂರೋಕೆ ನಾವು ತಯಾರಿಲ್ಲ, ಇವರನ್ನ ಹೀಗೇ ಆಧಾರರಹಿತವಾಗಿ ಮಾತಾಡೋಕೆ ನಾವು ಬಿಡಲ್ಲ. ಮೊದಲು ಇವರು ಓದುತ್ತಿರೋ ಆ ಪುಸ್ತಕದ source ನ್ನ ನೀಡಿ ತಮ್ಮ ಮಾತು ಮುಂದುವರೆಸಲಿ”

“Ok, Ok” ಎಂದು ಜಾರ್ಜ್ ಹೇಳುತ್ತ, “ಓದಲು ಇನ್ನೂ ಬಹಳ ವಿಷಯ ಈ ಪುಸ್ತಕದಲ್ಲಿದೆ, ಆದರೆ ಕಾಂಗ್ರೆಸ್ ಹಾಗು ಸಿ.ಪಿ.ಎಂ ನ ನನ್ನ ಸ್ನೇಹಿತ ಹತಾಶೆಯನ್ನ ನೋಡಿಯಾದರೂ ಯಾವ ಪುಸ್ತಕವನ್ನ ನಾನು ಓದುತ್ತಿದ್ದೇನೆ ಅನ್ನೋದನ್ನ ಹೇಳಿಬಿಡ್ತೇನೆ…

…ನಾನು ಇಷ್ಟ್ಹೊತ್ತು ಓದಿದ್ದು CPM ಪಕ್ಷವೇ ಲೋಕಸಭಾ ಚುನಾವಣೆಗೂ ಮುನ್ನ ಬಿಡುಗಡೆ ಮಾಡಿದ್ದ ಅವರದೇ ಪಕ್ಷದ ಘೋಷಣಾಪತ್ರ(manifesto)”

ಅದುವರೆಗೂ ಕಾಂಗ್ರೆಸ್ ಕಮ್ಯುನಿಸ್ಟ್ ಹಾಗು ಸೆಕ್ಯೂಲರ್ ಪಕ್ಷಗಳ ಚೀರಾಟ ಹಾರಾಟಗಳಿಂದ ರಣಾಂಗಣವಾಗಿದ್ದ ಸಂಸತ್ತಿನಲ್ಲಿ ಸ್ಮಶಾನ ಮೌನ ಆವರಿಸಿಬಿಟ್ಟಿತ್ತು!!!

ಕಾಂಗ್ರೆಸ್ ಹಾಗು ಕಮ್ಯುನಿಸ್ಟ್ ಸಂಸದರು ಇಂಗು ತಿಂದ ಮಂಗರಂತೆ ಒಬ್ಬರನ್ನೊಬ್ಬರ ಮುಖ ನೋಡುತ್ತ ಕುಳಿತುಬಿಟ್ಟರು.

ಜಾರ್ಜ್ ಫರ್ನಾಂಡಿಸ್ ಘರ್ಜಿಸುತ್ತ, “ಯಾಕೆ ಏನಾಯ್ತು? ಹಾವು ಕಡೀತಾ? ಯಾಕೆ ನಿಮ್ಮ ಬಾಯಿ ಬಂದಾಗಿಬಿಟ್ಟವು? ಇಷ್ಟೊತ್ತಿನವರೆಗೆ we want to know the source, we want to know the source. ಆ ಸೋರ್ಸ್ ನ ಹೆಸರು ಕೇಳಿದ ತಕ್ಷಣ ಲಕ್ವಾ ಹೊಡೆದುಬಿಟ್ಟಿತೋ ಹೇಗೋ? ನಿಮ್ಮ ಬಗ್ಗೆ ನಿಮಗೇ ನಾಚಿಯಾಗುತ್ತಿದೆಯಲ್ಲ? ಆಗಲೇಬೇಕು!!

ಎಡಪಕ್ಷದ ನನ್ನ ಮಿತ್ರರೇ!! ನೀವು ನಿಮ್ಮ ಪಕ್ಷವೇ ಸಿದ್ಧಪಡಿಸಿದ ಮ್ಯಾನಿಫೆಸ್ಟೋವನ್ನ ಓದಿಲ್ಲದೆ ಬಂದಿದ್ದೀರಲ್ಲ, ನಿಮ್ಮ ಬಗ್ಗೆ ನಿಮಗೇ ನಾಚಿಕೆಯಾಗಬೇಕು.
ಸೆಕ್ಯೂಲರಸಿಮ್ಮನಿನ ಹೆಸರಿನಲ್ಲಿ ಕಾಂಗ್ರೆಸ್ಸಿನ ಜೊತೆ ಕೈ ಜೋಡಿಸಿರುವ ನೀವುಗಳು ಭ್ರಷ್ಟಾಚಾರದ ಎಲ್ಲಾ ರೆಕಾರ್ಡ್ ಗಳನ್ನೂ ಮುರಿದು ನಿಂತಿದೀರ.

ಈಗಲಾದರೂ ನೀವು ನಿಮ್ಮ ಪಕ್ಷದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ನಿಮ್ಮ ಪಕ್ಷ ಇವತ್ತಲ್ಲದಿದ್ದರೂ ಆದಷ್ಟು ಬೇಗ ಇತಿಹಾಸದ ಪುಟಗಳಲ್ಲಿ ಸೇರಿಬಿಡುತ್ತೆ”

ಜಾರ್ಜ್ ಮಾತು ಆರಂಭಿಸಿದ್ದಾಗ ಸಂಸತ್ತನ್ನ ವೆಜಿಟೆಬಲ್ ಮಾರ್ಕೆಟ್ ಮಾಡಿದ್ದ ಕಾಂಗ್ರೆಸ್ ಹಾಗು ಸಿಪಿಎಂ ಪಕ್ಷಗಳು ಈಗ ಅಕ್ಷರಶಃ ಸ್ತಬ್ಧವಾಗಿಬಿಟ್ಟಿದ್ದವು.

ಈ ಒಂದು ಸನ್ನಿವೇಶ ಲೋಕಸಭೆಯ ಇತಿಹಾಸದಲ್ಲಿ ಕಾಂಗ್ರೇಸ್ ಹಾಗು CPM ಪಕ್ಷವನ್ನ ಹೀನಾಯವಾಗಿ ಮುಖಭಂಗಗೊಳಿಸಿದ್ದ ಐತಿಹಾಸಿಕ ಸನ್ನಿವೇಶವಾಗಿದೆ ಎಂದರೆ ತಪ್ಪಾಗಲಾರದು.

30 ವರ್ಷಗಳ ಹಿಂದೆಯೇ ಜಾರ್ಜ್ ಫರ್ನಾಂಡಿಸ್ ಇಷ್ಟು ಉಗಿದು ಇವರನ್ನ expose ಮಾಡಿದ್ದರೂ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ಹಾಗು ಸೋ ಕಾಲ್ಡ್ ಸೆಕ್ಯೂಲರ್ ಪಕ್ಷಗಳು ಇನ್ನೂ ಬುದ್ಧಿ ಕಲಿತಿಲ್ಲವಲ್ಲ ಹಾಗಾಗಿಯೇ ಈ ಪಕ್ಷಗಳ ಅಸ್ತಿತ್ವವೇ ಜಾರ್ಜ್ ಫರ್ನಾಂಡಿಸ್ ರವರು ಅಂದು ಹೇಳಿದ ಇವತ್ತು ಇವರ ಪಕ್ಷಗಳ ಭವಿಷ್ಯ ಡೋಲಾಯಮಾನದ ಸ್ಥಿತಿಯಲ್ಲಿವೆ.

ಪ್ರತಿಯೊಂದು ಚುನಾವಣೆಯಲ್ಲೂ ಮೋದಿ ಮೋದಿ ಮೋದಿ ಅಂತ ಬೊಬ್ಬಿರಿಯೋ ಈ ಪಕ್ಷಗಳನ್ನ ಮತದಾರ ತಕ್ಕ ಪಾಠ ಕಲಿಸಿ ವಿರೋಧಪಕ್ಷದಲ್ಲೂ ಕೂರೋಕೆ ಆಗದ ರೀತಿಯ ಹೀನಾಯ ಸ್ಥಿತಿಗೆ ತಳ್ಳಿದ್ದಾನೆ.

ಕಾಂಗ್ರೆಸ್ ಮುಕ್ತ್ ಭಾರತ್ ಆಗುವುದಷ್ಟೇ ಅಲ್ಲ ಈ ದೇಶ ಸೋ ಕಾಲ್ಡ್ ಸೆಕ್ಯೂಲರ್ ಹಾಗು ಕಮ್ಯುನಿಸ್ಟ್ ಸಿದ್ಧಾಂತದ ಪಕ್ಷ ಮುಕ್ತವಾದರೆ ಮಾತ್ರ ಉದ್ಧಾರವಾಗೋದು

– Vinod Hindu Nationalist

Editor Postcard Kannada:
Related Post