X

ಒಬ್ಬ ಪತ್ರಕರ್ತ ಮೋದಿಯ ಸ್ಟಿಂಗ್ ಆಪರೇಶನ್ ಮಾಡಲು ಹೋಗಿ ಏನಾದ ಗೊತ್ತೇ?!

ನರೇಂದ್ರ ಮೋದಿ!!!

ಇದೊಂದು ಹೆಸರಿದೆಯಲ್ಲವಾ?! ಬಹುಷಃ ಜಗತ್ತಿನ ಘಟಾನುಘಟಿ ರಾಜಕೀಯರೆಲ್ಲ ಒಮ್ಮೆ ಸ್ಥಬ್ಧರಾಗುತ್ತಾರೆ! ಹಾಗಂತಹ, ಮೋದಿಯ ಬಗೆಗಿರಿವ
ಭಯವೆಂಬ ಅರ್ಥವಲ್ಲ! ಮೋದಿಯವರ ಬದುಕಿನ ಶೈಲಿಯ ಬಗೆಗಿರುವ ಅಚ್ಚರಿಯದಷ್ಟೇ! ದುರಂತ ನೋಡಿ! ಅಷ್ಟಾದರೂ ಸಹ, ಮೋದಿಯವರಿಗೆ ಭಾರತೀಯರೇ ವಿರೋಧಿಸುತ್ತಾರೆ! ಅಪಪ್ರಚಾರ ಮಾಡಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಪಡುವ ಕೆಲ ಮಾಧ್ಯಮಗಳು, ವಿರೋಧ ಪಕ್ಷಗಳಿಗೆ ಮೋದಿಯವರನ್ನು ವಿರೋಧಿಸಿ ಗೊತ್ತಿದೆಯೇ ವಿನಃ ಮೋದಿಯವರಿಗಿಂತ ಚೆನ್ನಾಗಿ ಬದುಕಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ!

ಯಾಕೆ ಹೇಳುತ್ತಿದ‌್ದೇನೆ ಗೊತ್ತಾ?!

ಇತ್ತೀಚೆಗೆ ಮೋದಿಯ ಉಡುಗೆಗಳ ಬಗ್ಗೆ ತೀರಾ ಎನ್ನುವಷ್ಟು ಚರ್ಚೆಯಾಗುತ್ತಿದೆ! ತಾತ್ವಿಕವಾಗಿ ಗೆಲ್ಲಲಾಗದವನು ಸಹಜವಾಗಿಯೇ ವಸ್ತ್ರದ ಬಗ್ಗೆ ವಾದಕ್ಕಿಳಿಯುವ ಹಾಗೆ ಮೋದಿ ವಿರೋಧಿಗಳಿಗೆ ಮೋದಿಯ ವಸ್ತ್ರವೇ ಕೊನೆಗೇ ಟೀಕೆ ಮಾಡುವುದಕ್ಕುಳಿದಿದ್ದಷ್ಟೇ! ಅದೆಷ್ಟೇ ಟೀಕೆ ಟಿಪ್ಪಣಿಗಳಿದ್ದರೂ ಸಹ, ತಿರುಗಿ ಏನನ್ನೂ ಹೇಳದ ಮೋದಿ ಒಮ್ಮೆ ಅದೊಮ್ಮೆ ಸಂದರ್ಶನದಲ್ಲಿ ಇದೇ ವಿಷಯದ ಬಗ್ಗೆ ಮೌನ ಮುರಿದರು!!

ಮೋದಿಜೀ, ನಿಮ್ಮ ಬದುಕು ಇತರರಿಗೆ ಹೋಲಿಸಿದರೆ ಬಹಳ ವಿಭಿನ್ನವಾಗಿದೆ! ನಿಮ್ಮ ಆಹಾರದಿಂದ, ನಿಮ್ಮ ಉಡುಗೆಯ ತನಕವೂ, ಯೋಚನಾ ಶೈಲಿಯ ತನಕವೂ ಬಹಳ ವಿಭಿನ್ನವಾಗಿದ್ದೀರಿ. ಇದೆಲ್ಲ ಹೇಗೆ ಸಾಧ್ಯವಾಯಿತು?! ನಿಮಗೆ ಇಂತಹ ಸಂಸ್ಕಾರ ಎಲ್ಲಿ ಸಿಕ್ಕಿತು?!”

ಬಹುಷಃ ಮೋದಿ ನಿರ್ಧರಿಸಿದ್ದಿರಬೇಕು! ಮಾತನಾಡಲೇಬೇಕೆಂದು!

ನೋಡಿ, ನೀವೇನೆನೆಲ್ಲ ಇಲ್ಲಿಯತನಕ ನಾನು ಭಿನ್ನ,.ನನ್ನ ಉಡುಗೆ ಭಿನ್ನ ಎಂದೆಲ್ಲ ಹೇಳಿದರೋ ಅದೆಲ್ಲವೂ ಕೂಡ ಒಂದು ಭ್ರಮೆಯಷ್ಟೇ! ಇವತ್ತು, ನಿಮ್ಮ ಕಾರ್ಯಕ್ರಮದ ಮೂಲಕ ನಾನು ಕೆಲ ವಾಸ್ತವಗಳನ್ನು ಜನತೆಗೆ ತಿಳಿಯಪಡಿಸಬೇಕಿದೆ.”

ಒಂದಷ್ಟು ವರ್ಷಗಳ ಹಿಂದೆ, ಬೆಳಗ್ಗೆ 7.30 ಹೊತ್ತಿಗೆ ಒಬ್ಬ ಪತ್ರಕರ್ತ ನನಗೆ ಕರೆ ಮಾಡಿ, ಮೋದಿಜೀ ನಿಮ್ಮನ್ನು ಭೇಟಿಯಾಗಲಿಕ್ಕಿದೆ ಎಂದಾಗ ನಾನು
ಸಹಜವಾಗಿಯೇ 11 ರ ಸುಮಾರಿಗೆ ಬನ್ನಿ ಎಂದೆ. ಆತ ಒಬ್ಬ ಪ್ರಸಿದ್ಧ ಪತ್ರಕರ್ತ! ನಿಮ್ಮ ಗೇಟಿನ ಮುಂದೆಯೇ ನಿಂತಿದ್ದೇನೆ ನಾನು, ಒಳಗೆ ಬರಬಹುದಾ ಎಂದಾಗ
ನನಗೆ ಅಚ್ಚರಿಯಾದರೂ ಹೊರಬಂದು ಸ್ವಾಗತಿಸಿದೆ. ಆ ಪತ್ರಕರ್ತ ಬಂದಾಗ ನಾನು ಕೇಸರೀ ಲುಂಗಿಯನ್ನು ಉಟ್ಟಿದ್ದೆ. ನನ್ನ ಹತ್ತಿರ ಇದ್ದ ಒಂದೇ ಹೊದಿಕೆಯಲ್ಲಿ
ಮಲಗುತ್ತಿದ್ದೆ. ಅವತ್ತೂ ಸಹ, ಆತ ಬಂದಾಗ ನಾನು ಮಾಮೂಲಾಗಿ ಹೊದಿಕೆಯ ಮೇಲೆ ಕುಳಿತೆ. ಸುತ್ತಲೂ ಒಂದಷ್ಟು ಪುಸ್ತಕಗಳು, ದಿನಪತ್ರಿಕೆಗಳಿದ್ದವು. ಜೊತೆಗೆ
ತಾಮ್ರದ ಚೊಂಬಿನಲ್ಲಿ ನೀರು! ಇದ್ದ ಒಂದೇ ಒಂದು ಪ್ಲಾಸ್ಟಿಕ್ ಕುರ್ಚಿಯಲ್ಲಿ ಅವರನ್ನು ಕೂರಲು ಹೇಳಿ, ಚಹಾ ಕುಡಿಯುವಿರೋ ಎಂದಾಗ, ಆತ ತಿರಸ್ಕರಿಸಲಿಲ್ಲ. ಆತನ ಮುಖದಲ್ಲಿ ಅದೆಂತದೋ ಒತ್ತಡವಿತ್ತು! ನಾನು ಎದ್ದು ಹೊರಗಡೆ ಹೋಗಿ ಮಾಮೂಲು ಚಹಾ ಕುಡಿಯುವ ಫುಟ್ ಪಾತಿನ ಅಂಗಡಿಯಲ್ಲಿ ಚಹಾ ತೆಗೆದುಕೊಂಡು ಆ ಪತ್ರಕರ್ತನಿಗೆ ನೀಡಿದೆ. ನಾನು ಆಗ ಆಡಳಿತ ಪಕ್ಷದ ಜವಾಬ್ದಾರಿಯುವ ಜನರಲ್ ಸೆಕ್ರೇಟರಿಯಾಗಿದ್ದೆನಷ್ಟೇ!

“ಆತ ಚಹಾ ಕುಡಿದಾದ ಮೇಲೆ ಕೇಳಿದೆ ಬಂದ ವಿಷಯ ಏನು ಎಂದು! ಆತ ಏನಿಲ್ಲ, ಸುಮ್ಮನೆ ಹೀಗೆ ಬಂದದ್ದು ಎಂದುತ್ತರಿಸಿದಾಗ ನನಗೆ ಅಚ್ಚರಿಯಾಯಿತು. ಮತ್ತೂ ಕೇಳಿದೆ, ಬೆಳಗ್ಗೆ 7.30 ಕ್ಕೇ ಭೇಟಿಯಾಗಬೇಕಾದರೆ ಏನೊಂದಾದರೂ ಇರಬೇಕಲ್ಲವೇ?! ಹೇಳಿ, ಪರವಾಗಿಲ್ಲ ಎಂದು ಒತ್ತಾಯಪೂರ್ವಕವಾಗಿ ನುಡಿದಾಗ ಆತ ಮಾತಿಗಿಳಿದ!”

“ಇಲ್ಲ ಮೋದಿಜೀ, ನನ್ನ ಪತ್ರಿಕೆ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಾಜಕೀಯಕ್ಕೆ ಬಂದಾಗ ಹೇಗೆ ಅವರ ಬದುಕಿನ ಶೈಲಿಯೇ ಬದಲಾಗಿ ಹೋಗುತ್ತದೆ?!’ ಎಂಬುದರ ಬಗ್ಗೆ ಬರೆಯಲು ತೀರ್ಮಾನಿಸಿದೆ. ಆಗ, ಸಂಘದ ಹಿನ್ನೆಲೆಯಿಂದ ಬಂದಂತಹ ಕೆಲವು ಜನರನ್ನಾಯ್ದುಕೊಂಡೆವು. ಅದರಲ್ಲಿ ನೀವು ಇದ್ದಿರಿ! ಅದಕ್ಕೇ, ಸಂದರ್ಶನ ತೆಗೆದುಕೊಳ್ಳುವುದಕ್ಕೆ ಬಂದೆ!”

“ಆ ಪತ್ರಕರ್ತನ ಮುಖದಲ್ಲಿ ಬೆವರಿಳಿಯುತ್ತಿತ್ತು! ಆತ ತೀರಾ ಎನ್ನುವಷ್ಟು ಒತ್ತಡಕ್ಕೊಳಗಾಗಿದ್ದ! ನಾನವನಿಗೆ ಹೇಳಿದೆ.. .’ನೀವು ಈಗ ನನ್ನ ಬದುಕಿನ ಶೈಲಿಯನ್ನು ನೋಡಿದಿರಾ?!’

‘ಅದಕ್ಕಾತ, ನಾವೇನೇನೆಲ್ಲ ನಿಮ್ಮ ಬಗ್ಗೆ ಕೇಳಲ್ಪಟ್ಟೆವೋ,.ಅದ್ಯಾವುದೂ ನಿಜವಲ್ಲ ಎಂಬುದು ಗೊತ್ತಾಗಿಯೇ ನನಗೆ ತಲೆತಿರುಗು ಬಂತು ಮೋದಿಜಿ
ಎಂದುತ್ತರಿಸಿದ!”

” ಆಗ ಹೇಳಿದೆ ನಾನು! ‘ಈ ವಾಸ್ತವವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ! ಬಹುಷಃ ಈ ವಾಸ್ತವವನ್ನು ನಿಮ್ಮ ಪತ್ರಿಕೆ ಪ್ರಕಟಿಸಲಾರದಷ್ಟು ಅಸಹಾಯಕ
ಸ್ಥಿತಿ ತಲುಪಿರಬಹುದು.” ಎಂದಷ್ಟೇ ಹೇಳಿದೆ! ಆ ಪತ್ರಕರ್ತ ಕೈಮುಗಿದು ಹೊರಟ!”

ನೋಡಿ, ನನಗೆ ನಿಜಕ್ಕೂ ಏನಾಗುತ್ತಿದೆಯೆಂಬುದೇ ಗೊತ್ತಿಲ್ಲ! ನಾನು ಸೀದಾಸಾದಾ ಮನುಷ್ಯ! ಒಂದು ಸರಳವಾದ ಮಾಮುಲು ಬೆಲೆಯ ಕನ್ನಡಕ ಧರಿಸುತ್ತೇನೆ. ಆದರೆ, ಉಳಿದವರು ಈ ಸಾಧಾರಣ ಕನ್ನಡಕಕ್ಕೆ ಲಕ್ಷ ಬೆಲೆ ಕಟ್ಟುತ್ತಾರೆ! ಮೋದಿಗೆ ಈಗ ಹೈ ಬ್ರ್ಯಾಂಡ್ ಕನ್ನಡಕವೇ ಬೇಕಿದೆ ಎನ್ನುತ್ತಾರೆ! ನಾನು ಧರಿಸುವುದು ಸಾಧಾರಣ ಬೆಲೆಯ ಖಾದಿ ವಸ್ತ್ರವನ್ನು! ಅದಕ್ಕೂ ಸಹ ಜನ ಕೋಟಿ ಬೆಲೆ ಕಟ್ಟುತ್ತಾರೆ! ಹಾಗಾದರೆ, ನಾವು ಸರಳವಾಗಿರುವುದು ತಪ್ಪು ಎಂಬುವುದನ್ನು ತಿಳಿಸಲು ಜನ ಈ ರೀತಿಯಾಗಿ ಹೇಳುತ್ತಿದ್ದಾರೆಯೇ?! ಅಥವಾ, ಸರಳವಾಗಿರುವುದು ಅಪರಾಧವೇ?! ಇಂತಹ ಸುಳ್ಳುಗಳನ್ನು ಹಬ್ಬಿಸುವ ಜನರ ಬಗ್ಗೆ ನಾನು ಹೆಚ್ಚೇನು ಹೇಳಲಿ?!”

ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರ್ವಾಹಕ ಇನ್ನೂ ಒಂದು ಪ್ರಶ್ನೆ ಕೇಳಿದ!

ಮೋದಿಜೀ, ನಿಮ್ಮ ಬದುಕಿನ ಅತ್ಯಂತ ಸಂತಸದ ಹಾಗು ದುಃಖದ ದಿನಗಳಾವುದು?!”

ಮೋದಿ ಹೇಳಿದರು., “ನಾನು ಇವತ್ತಿನವರೆಗೂ ಕೂಡ ಖುಷಿಯ ದಿನವೆಂಬುದನ್ನು ನೋಡಲೇ ಇಲ್ಲ! ಯಾವತ್ತು ಪ್ರತಿ ಬಡವನಿಗೂ ಬದುಕಲು ಸೂರು ಸಿಗುತ್ತದೆಯೋ, ಯಾವಾಗ ಪ್ರತಿಯೊಬ್ಬರಿಗೂ ವೈದ್ಯಕೀಯ ಸೌಲಭ್ಯಗಳು ಸಿಗುವುದೋ, ಯಾವಾಗ ಪ್ರತಿ ಮಕ್ಕಳಿಗೂ ಸಹ ಶಿಕ್ಷಣ ದೊರಕುವುದೋ, ಯಾವಾಗ ರೈತರಿಗೆ ಆತ್ಮಹತ್ಯೆಯ ಹೊರತಾಗಿ ಬದುಕುವ ಭರವಸೆ ಸಿಗುವಂತಾಗುವುದೋ, ಯಾವಾಗ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ಇಲ್ಲದಂತಾಗುವುದೋ, ಯಾವತ್ತು ನನ್ನ ತಾಯಿ ಭಾರತ ಹೀಗಾಗುವುದೋ, ಅವತ್ತು ಬಹುಷಃ ನಾನು ನನ್ನ ಖುಷಿಯ ದಿನವನ್ನು ಭೇಟಿಯಾಗಬಲ್ಲೆನಷ್ಟೇ!”

ಇನ್ನು ನನ್ನ ಬದುಕಿನ ದುಃಖದ ದಿನಗಳ ಬಗ್ಗೆ ನಾನು ಯೋಚಿಸುವುದಿಲ್ಲ ಹಾಗು ನನ್ನ ಅಮೂಲ್ಯವಾದ ಸಮಯವನ್ನು ಅದಕ್ಕೋಸ್ಕರ ಹಾಳು
ಕೂಡಾ ಮಾಡುವುದಿಲ್ಲ!

ವ್ಹಾ!! ನೋಡಿದಿರಾ?!

ಮೋದಿಯನ್ನು ಹೊಗಳುವುದು ಅತಿಶಯೋಕ್ತಿಯಲ್ಲವೇ ಅಲ್ಲ! ಭಕ್ತ ನೆಂದೆನಿಸಿಕೊಳ್ಳುವುದರಲ್ಲಿ ಹೆಮ್ಮೆ ಪಡುವುದ್ಯಾಕೆ ಎಂದರೆ, ಅದೇ ಕಾರಣಕ್ಕೆ! ಬೇರೆಯವರಾಗಿದ‌್ದರೆ ಬಹುಷಃ ಹಾಗಾಯಿತು, ಇದಾಯಿತು ಎಂಬೆಲ್ಲ ವೈಯುಕ್ತಿಕ ಬದುಕಿನ ಬಗ್ಗೆಯೇ ಯೋಚಿಸುತ್ತಿದ್ದರೇನೋ! ಉಹೂಂ! ಮೋದಿ ಹಾಗಲ್ಲ! ಮತ್ತೂ ನೀವು ಹೇಳಬಹುದು! ಮೋದಿ ನಾಟಕ ಮಾಡುತ್ತಾರೆಂದು! ಅಯ್ಯಾ! ತನ್ನ ವೈಯುಕ್ತಿಕ ಬದುಕನ್ನೇ ತ್ಯಜಿಸಿ ದೇಶ ಮೊದಲೆಂದ ಮೋದಿಯ ಬಗ್ಗೆ ಅಲ್ಪರಿಗೆ ಅರ್ಥವಾಗುವುದಿಲ್ಲವೆಂಬುದು ಎಷ್ಟು ಸತ್ಯವೋ ಅಷ್ಟೇ ಕೂಡ, ಮೋದಿ ದೇಶಕ್ಕೋಸ್ಕರ ಬದುಕುತ್ತಿದ್ದಾರೆ ಹೊರತು, ಸನ್ಮಾನ ಪಡೆಯಲಿಕ್ಕಲ್ಲ ಎಂಬುದೂ
ಅಷ್ಟೇ ಸತ್ಯ!

– ತಪಸ್ವಿ

Editor Postcard Kannada:
Related Post