X

ಭಾರತದಿಂದ ಅತ್ಯಧಿಕ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿ!! ಇದಲ್ಲವೇ ಅಚ್ಛೇ ದಿನ್!!

ಈಗಾಗಲೇ ನರೇಂದ್ರ ಮೋದಿ ಸರಕಾರವು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎಂಬ ಧ್ಯೇಯ ವಾಕ್ಯವನ್ನು ಹಿಡಿದು ದೇಶದಲ್ಲಿ ಯಾವುದೇ ರೀತಿಯ ತಾರತಮ್ಯ ಭಾವನೆ ಇರಬಾರದು ಎಂಬ ನಿಟ್ಟಿನಲ್ಲಿ ಮೋದಿಯವರು ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಪುರುಷರ ಸಹಾಯವಿಲ್ಲದೆ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ಹೋಗುವಂತೆ ಕೆಲವೊಂದು ಸಹಾಯವನ್ನು ಮೋದಿ ಸರಕಾರ ಮಾಡಿದ್ದಲ್ಲದೇ, ಹಜ್ ಯಾತ್ರೆಗೆ ತೆರಳುವ ಯಾತ್ರಿಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿ ಬಹುಸಂಖ್ಯಾತ ಭಾರತೀಯರಿಗೆ ಸಿಹಿಸುದ್ದಿಯನ್ನೇ ನೀಡಿದ್ದರು!! 

ಹೌದು… ಮುಸ್ಲಿಮರು ಹೃದಯಪೂರ್ವಕ ಪ್ರಾರ್ಥನೆ ಸಲ್ಲಿಸಲು ಮೆಕ್ಕಾಗೆ ಪ್ರಯಾಣಿಸುವುದೇ ಹಜ್ ಯಾತ್ರೆ!! ಪ್ರತಿವರ್ಷ ನಡೆಯುವ ಈ ಯಾತ್ರೆಯಲ್ಲಿ ಪ್ರತಿಯೊಬ್ಬ ಸಂಪ್ರದಾಯಿ ಮುಸ್ಲಿಂ ಕೂಡ ಒಮ್ಮೆಯಾದರೂ ತಮ್ಮ ಜೀವನದಲ್ಲಿ ಕೈಗೊಳ್ಳಲೇಬೇಕಾದ ಕರ್ತವ್ಯವಿದು ಎಂಬುದು ಮುಸಲ್ಮಾನರ ನಂಬಿಕೆಯಾಗಿದೆ. ಹಾಗಾಗಿ ಈ ಬಾರಿಯೂ ಹಜ್ ಯಾತ್ರೆಯನ್ನು ಕೈಗೊಂಡಿರುವ ಮುಸಲ್ಮಾನರು ತಮ್ಮ ಪವಿತ್ರ ಕ್ಷೇತ್ರಕ್ಕೆ ಬೇಟಿ ನೀಡಲಿದ್ದು, ಈ ವರ್ಷ ಭಾರತದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಹಜ್ ಯಾತ್ರೆ ಕೈಗೊಳ್ಳುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ.

ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿ ಎ ಸರಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಿಂದಾಗಿ ಇಂದು ಮುಸಲ್ಮಾನ ಸಮುದಾಯದ ಮಹಿಳೆಯರು ತಲಾಖ್ ನಿಷೇಧದಿಂದಾಗಿ ಕೊಂಚ ಮಟ್ಟಿಗೆ ನಿಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ!! ಕೇಂದ್ರ ಸರಕಾರವು ಈಗಾಗಲೇ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆಗೆ ಸಂಬಂಧಿಸಿದಂತೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿದ ಮರು ದಿನವೇ ಸಬ್ಸಿಡಿ ರದ್ದು ಮಾಡುವ ನಿರ್ಣಯವನ್ನು ಘೋಷಿಸಿತ್ತು!!

ಕೇಂದ್ರ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವಾಲಯ ಕಳೆದ ವರ್ಷ ಹಜ್ ಯಾತ್ರೆ ಕೈಗೊಳ್ಳುವ 2018-22 ರ ವರ್ಷದ ನಿಯಮಗಳನ್ನು ರೂಪಿಸಲು ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ 2018ರ ಹಜ್ ಯಾತ್ರೆಯು ಹೊಸ ನಿಯಮಗಳು ರೂಪುಗೊಳ್ಳುತ್ತವೆ. ಈ ಸಮಿತಿಯ ನಿಯಮಗಳು ಉತ್ತಮವಾಗಿದ್ದು, ಪಾರದರ್ಶಕ ಮತ್ತು ಜನಸ್ನೇಹಿಯಾಗಿವೆ. ಅಲ್ಲದೇ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ. ಅಲ್ಲದೇ ಈ ನಿಯಮಗಳು ಅಲ್ಪ ಸಂಖ್ಯಾತರ ಘನತೆ ಹಾಗೂ ಮನಃಪೂರ್ವಕವಾಗಿ ಅಧಿಕಾರ ನೀಡುವುದು ಸಮಿತಿ ನೀತಿ ಭಾಗವಾಗಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಪಷ್ಟಪಡಿಸಿದ್ದರು!!

ಹಾಗಾಗಿ ಈ ಬಾರಿ ಭಾರತದಿಂದ ದಾಖಲೆಯ ಸಂಖ್ಯೆಯಲ್ಲಿ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ!! ಅಷ್ಟೇ ಅಲ್ಲದೇ, ಇವರಲ್ಲಿ ಮಹಿಳೆಯರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಈ ಬಾರಿ ಸಬ್ಸಿಡಿ ಇಲ್ಲದೆಯೂ ಮತ್ತು ಸೌದಿ ಅರೇಬಿಯಾ ವಿವಿಧ ತೆರಿಗೆಗಳನ್ನು ವಿಧಿಸಿದರೂ ಹಜ್ ಹೊರಡುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದರೆ ಇದಲ್ಲವೇ ಅಚ್ಛೇ ದಿನ್!!

ಹೌದು… ಈ ವರ್ಷ ಸುಮಾರು 1,75,025 ಮುಸ್ಲಿಮರು ಭಾರತದಿಂದ ಹಜ್ ಗೆ ತೆರಳುತ್ತಿದ್ದು, ಇದರಲ್ಲಿ ಶೇ. 47ರಷ್ಟು ಮಹಿಳೆಯರಿದ್ದಾರೆ. ಅಷ್ಟೇ ಅಲ್ಲದೇ, ಈ ವರ್ಷ ಇದೇ ಮೊದಲ ಬಾರಿಗೆ ಮಹಿಳೆಯರು ಪುರುಷನಿಲ್ಲದೆ ಹಜ್ ಯಾತ್ರೆ ಮಾಡುವ ಅವಕಾಶ ದೊರೆತಿದೆ. ಸುಮಾರು 1308 ಮಹಿಳೆಯರು ಪುರುಷನಿಲ್ಲದೆ ಏಕಾಂಗಿಯಾಗಿ ಹಜ್ ಯಾತ್ರೆಗೆ ಹೊರಡಲು ಸಿದ್ದರಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ, ಈಗಾಗಲೇ ಸೌದಿ ಸರಕಾರದ ಜೊತೆಗಿರುವ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿರುವುದೇ ಹೆಮ್ಮೆಯ ವಿಚಾರ!! ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ.

ಒಟ್ಟಿನಲ್ಲಿ, 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿದ್ದು, ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿಯೂ ಕೇಂದ್ರ ಸರಕಾರ ತಿಳಿಸಿದೆ!! ಆದರೆ ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಭಾರತೀಯರು ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ಪ್ರಸ್ತುತ ಮೋದಿ ಸರಕಾರದ ಅವಧಿಯಲ್ಲಿ ಸಹಾಯಧನ ರದ್ದಾಗಿದ್ದರೂ ಕೂಡ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದರೆ ನಿಜಕ್ಕೂ ಕೂಡ ಹೆಮ್ಮೆ ಎಂದೆನಿಸುತ್ತದೆ!!

ಮೂಲ:
https://www.indiatoday.in/

– ಅಲೋಖಾ

Editor Postcard Kannada:
Related Post